MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಉಪ್ಪಿಟ್ಟಿಗೆ ಇದೊಂದಿಷ್ಟು ಪದಾರ್ಥ ಸೇರಿಸಿದರೆ ಅದರ ರುಚಿಯೇ ಬೇರೆ, ಮಕ್ಕಳಿಗೂ ಇಷ್ಟ

ಉಪ್ಪಿಟ್ಟಿಗೆ ಇದೊಂದಿಷ್ಟು ಪದಾರ್ಥ ಸೇರಿಸಿದರೆ ಅದರ ರುಚಿಯೇ ಬೇರೆ, ಮಕ್ಕಳಿಗೂ ಇಷ್ಟ

How to make delicious Upma: ಬೆಳಗಿನ ಉಪಾಹಾರವಾಗಿ ಉಪ್ಪಿಟ್ಟು ಮಾಡುವಾಗ ಉದುರು ಉದುರಾಗಿ ರುಚಿಯಾಗಿ ಮಾಡುವ ವಿಧಾನ ಇಲ್ಲಿ ತಿಳಿಸಲಾಗಿದೆ. ಮಕ್ಕಳಿಗಾಗಿ ಉಪ್ಪಿಟ್ಟು ಮಾಡುತ್ತಿದ್ದರೆ ಹೀಗೆ ಮಾಡಿ..

2 Min read
Author : Ravi Janekal
Published : Oct 07 2026, 12:35 PM IST
Share this Photo Gallery
  • FB
  • TW
  • Linkdin
  • Whatsapp
17
ಬೆಳಗಿನ ತಿಂಡಿಗೆ ಉಪ್ಪಿಟ್ಟು ಅಂದ್ರೆ ಹೀಗಿರಬೇಕು
Image Credit : Youtube

ಬೆಳಗಿನ ತಿಂಡಿಗೆ ಉಪ್ಪಿಟ್ಟು ಅಂದ್ರೆ ಹೀಗಿರಬೇಕು

ಬೆಂಗಳೂರಿನಂತಹ ಗಡಿಬಿಡಿ ಸಿಟಿಯಲ್ಲಿ ವಾಸಿಸುವವರಿಗೆ ಬೆಳಗಿನ ತಿಂಡಿಯದ್ದೇ ಚಿಂತೆ. ಮಕ್ಕಳನ್ನ ಶಾಲೆಗಳಿಗೆ ರೆಡಿ ಮಾಡಬೇಕು, ತಾವೂ ಆಫೀಸ್‌ಗೆ ಹೊರಡಬೇಕು ಇಂಥ ಗಡಿಬಿಡಿಯಲ್ಲಿ ಬೇಗ ಮಾಡಬಹುದಾದ ತಿಂಡಿ ಎಂದರೆ ಉಪ್ಪಿಟ್ಟು.

ಇದನ್ನೂ ಓದಿ: ಬಾಯಲ್ಲಿಟ್ಟರೆ ಕರಗುವ ಗರಿಗರಿ ಪಡ್ಡು ಮಾಡೋದು ಹೇಗೆ? ಇಲ್ಲಿದೆ ಹೊಸ ರೆಸಿಪಿ! ಇಂದೇ ಟ್ರೈ ಮಾಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಉಪ್ಪಿಟ್ಟು ಮಾಡುವ ಸರಿಯಾದ ವಿಧಾನ
Image Credit : Social Media

ಉಪ್ಪಿಟ್ಟು ಮಾಡುವ ಸರಿಯಾದ ವಿಧಾನ

ಹೌದು ಆಫೀಸ್ ಕಚೇರಿ ಅಂತಾ ಹೊರಡುವ ಮಹಿಳೆಯರ ಬೆಳಗಿನ ತಿಂಡಿ ಎಂದರೆ ಉಪ್ಪಿಟ್ಟು. ಹೇಳಿಕೇಳಿ ಬೆಳಗಿನ ವೇಳೆ ಅವಸರದಲ್ಲಿ ಉಪ್ಪಿಟ್ಟು ರೆಡಿ ಮಾಡಬೇಕಾಗಿರುವುದರಿಂದ ದಿನವೂ ಒಂದೇ ರುಚಿ, ಒಂದೇ ರೀತಿ ಹದವಾಗಿ ಬೆಂದಿರುವುದಿಲ್ಲ. ಕೆಲವುಸಲ ಬೆಂದ ಐದು ನಿಮಿಷದಲ್ಲೇ ಗಟ್ಟಿಯಾಗಿರುತ್ತೆ. ಇನ್ನೊಮ್ಮೆ ಉದುರುದುರು ಆಗಿರುತ್ತೆ. ಇದೇ ಕಾರಣಕ್ಕೆ ಮಕ್ಕಳಿಗೆ ಉಪ್ಪಿಟ್ಟು ಇಷ್ಟವಾಗದೆ ಇರಬಹುದು. ಹೀಗಾಗಿ ಬೆಳಗಿನ ಬ್ಯುಸಿ ಸಮಯದಲ್ಲೂ ಬಾಯಲ್ಲಿ ನೀರೂರಿಸುವಂತೆ, ನೋಡಿದರೆ ತಕ್ಷಣ ಮಕ್ಕಳಿಗೆ ಆಸೆಯಾಗುವಂತೆ ಹೇಗೆ ತಯಾರಿಸಬಹುದು ಎಂಬುದುನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Almonds: ದಿನಕ್ಕೆ 22 ಬಾದಾಮಿ ಏಕೆ ತಿನ್ನಬೇಕು? ವಿಶ್ವದಲ್ಲಿ ಅತಿ ಹೆಚ್ಚು ಬೆಳೆಯುವ, ತಿನ್ನುವ ದೇಶ ಯಾವುದು? ಇಲ್ಲಿದೆ ಉತ್ತರ

Related Articles

Related image1
ಉಪ್ಪಿಟ್ಟು ರವೆ Vs ಇಡ್ಲಿ ರವೆ: ಇವೆರಡರ ನಡುವಿನ ಅಸಲಿ ವ್ಯತ್ಯಾಸವೇನು?
Related image2
Rice vs Upma: ತೂಕ ಇಳಿಕೆಗೆ ಬೆಳಗಿನ ಉಪಾಹಾರ ಯಾವುದು ಉತ್ತಮ?
37
ಉಪ್ಪಿಟ್ಟು ಮಾಡುವುದು ಒಂದು ಕಲೆ!
Image Credit : Social Media

ಉಪ್ಪಿಟ್ಟು ಮಾಡುವುದು ಒಂದು ಕಲೆ!

ದಕ್ಷಿಣ ಭಾರತ ಶೈಲಿಯ ಉಪ್ಪಿಟ್ಟು ತುಂಬಾ ರುಚಿಕರವಾದುದ್ದು, ಇದಕ್ಕೆ ಕಾರಣ ಉಪ್ಪಿಟ್ಟಿಗೆ ಬಳಸುವ ತರಕಾರಿಗಳು. ಹೆಚ್ಚಿನ ಸಾಮಗ್ರಿಗಳೇನು ಬೇಕಾಗುವುದಿಲ್ಲ. ಉಪ್ಪಿಟ್ಟು ರವೆ ಮನೆಯಲ್ಲೇ ಸ್ಟಾಕ್ ಇರುತ್ತದೆ. ತರಕಾರಿ ಮಸಾಲೆಗಳಿದ್ದರೆ ಸಾಕು ಕೆಲವೇ ನಿಮಿಷಗಳಲ್ಲಿ ಉಪ್ಪಿಟ್ಟು ರೆಡಿಯಾಗುತ್ತದೆ. ರವೆಯನ್ನು ಹುರಿದು, ತರಕಾರಿ, ಮಸಾಲೆ ಪದಾರ್ಥಗಳನ್ನ ಸೇರಿಸಿ, ಉದುರು ಉದುರಾಗುವರೆಗೆ ಬೇಯಿಸಿದರೆ ಉಪ್ಪಿಟ್ಟು ರೆಡಿ. ಇದು ಪೌಷ್ಠಿಕ, ಅಷ್ಟೆ ಅಲ್ಲ ಬೆಳಗಿನ ವೇಳೆ ಹೊಟ್ಟೆ ತುಂಬಿಸುವ ಉಪಾಹಾರ. ನಿಮಗೆ ಇಷ್ಟ ಬಂದ ಬಣ್ಣ, ರುಚಿಯಲ್ಲೂ ತಯಾರಿಸಬಹುದಾದ ತಿಂಡಿ ಉಪ್ಪಿಟ್ಟು.

ಇದನ್ನೂ ಓದಿ: Achari Chicken Recipe: ವಿಶಿಷ್ಟ ರುಚಿಯ ಚಿಕನ್ ಸವಿಬೇಕು ಅನಿಸಿದ್ರೆ ಇದನ್ನ ಟ್ರೈ ಮಾಡಿ, ಇಲ್ಲಿದೆ ರೆಸಿಪಿ

47
ರುಚಿ ರುಚಿಯಾದ ಉಪ್ಪಿಟ್ಟು ಮಾಡುವುದು ಹೇಗೆ?
Image Credit : Social Media

ರುಚಿ ರುಚಿಯಾದ ಉಪ್ಪಿಟ್ಟು ಮಾಡುವುದು ಹೇಗೆ?

ಮೊದಲಿಗೆ ಉಪ್ಪಿಟ್ಟು ರುಚಿಯಾಗಿರಬೇಕು ಎಂದರೆ ಒಳ್ಳೆಯ ಗುಣಮಟ್ಟದ ರವೆಯನ್ನೇ ಖರೀದಿಸಬೇಕು. ಅಂಗಡಿಗಳಲ್ಲಿ ಬೆಲೆ ಕಡಿಮೆ ಇದ್ದಷ್ಟು ಕಳಪೆ ಗುಣಮಟ್ಟದ ರವೆ ಸಿಗುತ್ತದೆ. ಹಣ ಕಡಿಮೆ ಎಂದು ಅಂತಹ ರವೆಯನ್ನ ಖರೀದಿಸಿದರೆ ಉಪ್ಪಿಟ್ಟು ರುಚಿಯಾಗಿದ್ದೀತು ಹೇಗೆ? ಹೀಗಾಗಿ ಉತ್ತಮ ಗುಣಮಟ್ಟದ ರವೆ ಖರೀದಿಸಿ.

ಉಪ್ಪಿಟ್ಟು ತಯಾರುವ ಮುನ್ನ ರವೆಯನ್ನು ಸಣ್ಣ ಹುರಿಯಲ್ಲಿ ಬಾಣಲೆಗೆ ಹಾಕಿ ಕೆಲವು ನಿಮಿಷಗಳವರೆಗೆ ಹುರಿಯಿರಿ. ಎಣ್ಣೆ ತುಪ್ಪ ಹಾಕಬೇಡಿ, ಕೇವಲ ರವೆಯನ್ನಷ್ಟೇ ಹುರಿಯಿರಿ ಕೆಲವು ನಿಮಿಷಗಳ ನಂತರ ಘಮ ಬರುತ್ತದೆ ರವೆಯ ಬಣ್ಣ ಬದಲಾಗುವವರೆಗೆ ಹುರಿಯುವ ಅಗತ್ಯವಿಲ್ಲ. ರವೆಯನ್ನು ಮೊದಲೇ ಹುರಿಯುವುದರಿಂದ ಅದು ಅಂಟಂಟಾಗುವುದು ತಪ್ಪುತ್ತದೆ. ಅಲ್ಲದೆ ಉಪ್ಪಿಟ್ಟು ಹದವಾಗಿ, ಸರಿಯಾಗಿ ಬೇಯುತ್ತದೆ.

ಇದನ್ನೂ ಓದಿ: ಚಿಕನ್‌ಗೆ ಮೊಸರು ಹಾಕೋದು ಯಾಕೆ

57
ಉಪ್ಪಿಟ್ಟಿಗೆ ರುಚಿ ಹೆಚ್ಚಿಸಲು ಏನೇನು ಬೇಕು?
Image Credit : Social Media

ಉಪ್ಪಿಟ್ಟಿಗೆ ರುಚಿ ಹೆಚ್ಚಿಸಲು ಏನೇನು ಬೇಕು?

ಈಗ ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವಿದ್ದರೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಬಿಸಿಯಾಗುತ್ತಿದ್ದಂತೆ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಅಥವಾ ಹಸಿರು ಬಟಾಣಿ, ಮೆಣಸಿನಕಾಯಿ,ಶುಂಠಿ, ಕರಿಬೇವು ಹಾಕಿ ಒಗ್ಗರಣೆ ರೆಡಿ ಮಾಡಿಕೊಳ್ಳಿ. ಇದರೊಂದಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನ ಸೇರಿಸಿ, ಅದು ಮೃದುವಾಗುವವರೆಗೂ ಬೇಯಿಸಿ.

67
ಮಕ್ಕಳಿಗೆ ಉಪ್ಪಿಟ್ಟು ಮಾಡುವಾಗ ಈ ತಪ್ಪು ಮಾಡಬೇಡಿ
Image Credit : Social Media

ಮಕ್ಕಳಿಗೆ ಉಪ್ಪಿಟ್ಟು ಮಾಡುವಾಗ ಈ ತಪ್ಪು ಮಾಡಬೇಡಿ

ಒಂದು ವೇಳೆ ನೀವು ಮಕ್ಕಳಿಗೆ ಉಪ್ಪಿಟ್ಟು ಮಾಡುತ್ತಿದ್ದರೆ ಹಸಿರು ಮೆಣಸಿನಕಾಯಿಯನ್ನು ಕಡಿಮೆ ಬಳಸಿ. ಒಮ್ಮೆ ಖಾರ ಜಾಸ್ತಿ ಆದರೆ ಮಕ್ಕಳು ಉಪ್ಪಿಟ್ಟಿನ ಸಹವಾಸವೇ ಬೇಡ ಅನ್ನಬಹುದು. ಖಾರ ಕಮ್ಮಿ ಇರಲಿ, ರುಚಿ ಹೆಚ್ಚಿಸಲು, ಪೋಷಕಾಂಶಗಳಿಗಾಗಿ ಕ್ಯಾರೆಟ್, ಬಟಾಣಿ ಮತ್ತು ಕ್ಯಾಪ್ಸಿಕಂನಂತಹ ಸಣ್ಣಗೆ ಹೆಚ್ಚಿದ ತರಕಾರಿಗಳನ್ನು ಸಹ ನೀವು ಸೇರಿಸಬಹುದು.

77
ಉಪ್ಪಿಟ್ಟು ಮಾಡುವಾಗ ಈ ತಪ್ಪು ಮಾಡಬೇಡಿ
Image Credit : Asianet News

ಉಪ್ಪಿಟ್ಟು ಮಾಡುವಾಗ ಈ ತಪ್ಪು ಮಾಡಬೇಡಿ

ಉಪ್ಪಿಟ್ಟು ತಯಾರಿಸುವ ಅತ್ಯಂತ ಮುಖ್ಯವಾದ ಹಂತವೆಂದರೆ ನೀರು-ರವೆ ಸರಿಯಾದ ಪ್ರಮಾಣದಲ್ಲಿ ಹಾಕುವುದು. ಮೃದುವಾದ ಉಪ್ಪಿಟ್ಟು ತಯಾರಿಸಬೇಕೆಂದರೆ ಒಂದು ಕಪ್ ರವೆಗೆ ಸುಮಾರು ಎರಡು ಕಪ್ ಅಥವಾ ಮೂರು ಕಪ್ ನೀರನ್ನ ಬಳಸುವುದರಿಂದ ಉಪ್ಪಿಟ್ಟು ಉದುರು ಉದುರು ಆಗುತ್ತದೆ. ಒಂದು ವೇಳೆ ನಿಮಗೆ ಇನ್ನೂ ಜಿಗುಟಾದ ರೀತಿ ಉಪ್ಪಿಟ್ಟು ಬೇಕಿದ್ದರೆ ಸ್ವಲ್ಪ ಹೆಚ್ಚು ನೀರು ಸೇರಿಸಬಹುದು.

ಮೇಲೆ ಹೇಳಿದಂತೆ ಎಲ್ಲ ಸೇರಿಸಿ ಒಗ್ಗರಣೆ ಸಿದ್ಧಪಡಿಸಿಕೊಂಡ ನಂತರ ನೀರು ಮತ್ತು ರವೆ ಸೇರಿಸಿ ಕುದಿಯಲು ಬಿಡಿ. ಈ ವೇಳೆ ನಿರಂತರವಾಗಿ ರವೆಯನ್ನು ಕಲಕುತ್ತಲೇ ಇರಿ. ಹೀಗೆ ಮಾಡುವುದರಿಂದ ಉಪ್ಪಿಟ್ಟು ಗಂಟು ಕಟ್ಟಿದ ರೀತಿ ಅಥವಾ ಉಂಡೆಯಾಗುವುದನ್ನು ತಪ್ಪಿಸಬಹುದು.ಹುದು.

ಈಗ ಉಪ್ಪಿಟ್ಟು ರೆಡಿಯಾದ ಬಳಿಕ ಇನ್ನಷ್ಟು ರುಚಿ ಹೆಚ್ಚಿಸಲು ತುಪ್ಪ ಬಳಸುವುದು ಉತ್ತಮ. ಮಕ್ಕಳಿಗೆ ಆಕರ್ಷಕವಾಗಿ ಕಾಣುವಂತೆ ಮಾಡಲು, ಹಸಿರು ಸೊಪ್ಪು, ಕ್ಯಾರೆಟ್, ಬಟಾಣಿ ಗೋಡಂಬಿ ಸೇರಿಸುವುದರಿಂದ ಮಕ್ಕಳು ಕೂಡ ತಿನ್ನಲು ಇಷ್ಟಪಡ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಅಡುಗೆಮನೆ ಸಲಹೆಗಳು
ಆಹಾರ
ರೆಸಿಪಿ
 

Latest Videos
Recommended Stories
Recommended image1
Death Cap: ಈ ಅಣಬೆಯ ಒಂದು ಸಣ್ಣ ತುಂಡು ತಿಂದ್ರೆ ಸಾಕು, ಸಾವು ಗ್ಯಾರಂಟಿ! ಆದ್ರೆ ಇದು ಅದೇ ಅಂತ ತಿಳಿಯೋದು ಹೇಗೆ? ನೋಡಿ..
Recommended image2
ಫ್ರಿಡ್ಜ್‌ನಲ್ಲಿ ಇಡದಿದ್ರೂ ಮೊಸರು ಹುಳಿಯಾಗಲ್ಲ, ಅಜ್ಜಿ ಕಾಲದ ಸಿಂಪಲ್ ಟ್ರಿಕ್!
Recommended image3
ಗ್ಯಾಸ್ಟ್ರಿಕ್ ಸಮಸ್ಯೆನಾ? ಉದ್ದಿನ ವಡೆಗಿಂತಲೂ ಆರೋಗ್ಯಕರವಾದ ಗರಿಗರಿ ಹೆಸರುಬೇಳೆ ವಡೆ ಮಾಡುವ ಸುಲಭ ವಿಧಾನ
Related Stories
Recommended image1
ಉಪ್ಪಿಟ್ಟು ರವೆ Vs ಇಡ್ಲಿ ರವೆ: ಇವೆರಡರ ನಡುವಿನ ಅಸಲಿ ವ್ಯತ್ಯಾಸವೇನು?
Recommended image2
Rice vs Upma: ತೂಕ ಇಳಿಕೆಗೆ ಬೆಳಗಿನ ಉಪಾಹಾರ ಯಾವುದು ಉತ್ತಮ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved