- Home
- Life
- Kitchen
- ದುಬಾರಿ ಕುಂಡ ಬೇಡ, 1-2 ಲೀಟರ್‌ನ ಪ್ಲಾಸ್ಟಿಕ್ ಬಾಟಲಿ ಇದ್ರೆ ಸಾಕು.. ಮನೆಯಲ್ಲೇ ತಾಜಾ ಬೆಳ್ಳುಳ್ಳಿ ಬೆಳಿಬೋದು
ದುಬಾರಿ ಕುಂಡ ಬೇಡ, 1-2 ಲೀಟರ್‌ನ ಪ್ಲಾಸ್ಟಿಕ್ ಬಾಟಲಿ ಇದ್ರೆ ಸಾಕು.. ಮನೆಯಲ್ಲೇ ತಾಜಾ ಬೆಳ್ಳುಳ್ಳಿ ಬೆಳಿಬೋದು
Grow garlic at home: ಹಳೆಯ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಕಡಿಮೆ ಜಾಗದಲ್ಲಿ ತಾಜಾ ಬೆಳ್ಳುಳ್ಳಿ (Garlic) ಮತ್ತು ಬೆಳ್ಳುಳ್ಳಿ ಎಲೆಗಳನ್ನು (Garlic Greens) ಹೇಗೆ ಬೆಳೆಸಬಹುದು ಎಂಬ ವಿವರ ಇಲ್ಲಿದೆ. ಇದು ಅಪಾರ್ಟ್‌ಮೆಂಟ್ ಮತ್ತು ಬಾಲ್ಕನಿ ಗಾರ್ಡನ್ ಹೊಂದಿರುವವರಿಗೆ ತುಂಬಾ ಉಪಯುಕ್ತ.

ದುಬಾರಿಯಾದ ಬೆಳ್ಳುಳ್ಳಿ
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಆಕಾಶ ಮುಟ್ಟುತ್ತಿದೆ. ಇಂತಹ ಸಮಯದಲ್ಲಿ ನಮಗೆ ಬೇಕಾದ ಬೆಳ್ಳುಳ್ಳಿಯನ್ನು ನಾವೇ ಬೆಳೆಸಿಕೊಂಡರೆ ಹಣ ಉಳಿತಾಯವಾಗುವುದಲ್ಲದೆ, ರಾಸಾಯನಿಕ ಮುಕ್ತ ಆಹಾರವೂ ಸಿಗುತ್ತದೆ. ಇದಕ್ಕಾಗಿ ದುಬಾರಿ ಕುಂಡಗಳ ಅಗತ್ಯವಿಲ್ಲ, ಕೇವಲ 1 ಅಥವಾ 2 ಲೀಟರ್‌ನ ಪ್ಲಾಸ್ಟಿಕ್ ಬಾಟಲಿಗಳಿದ್ದರೆ ಸಾಕು.
ಬೇಕಾಗುವ ಸಾಮಗ್ರಿಗಳು
1 ಅಥವಾ 2 ಲೀಟರ್‌ನ ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಮಣ್ಣು, ಗೊಬ್ಬರ ಮತ್ತು ದಪ್ಪ ಗಾತ್ರದ ಬೆಳ್ಳುಳ್ಳಿ ಎಸಳುಗಳು.
ಮೇಲ್ಭಾಗವನ್ನು ಕತ್ತರಿಸಿ
ಪ್ಲಾಸ್ಟಿಕ್ ಬಾಟಲಿಯನ್ನು ಸ್ವಚ್ಛಗೊಳಿಸಿ ಅದರ ಮೇಲ್ಭಾಗವನ್ನು (ಮುಚ್ಚಳ ಇರುವ ಕಡೆ) ಕತ್ತರಿಸಿ. ಬಾಟಲಿಯ ತಳಭಾಗದಲ್ಲಿ ಮತ್ತು ಸುತ್ತಲೂ ಸಣ್ಣ ರಂಧ್ರಗಳನ್ನು ಮಾಡಿ.
ಈಗ ಮಣ್ಣಿನಲ್ಲಿ ನೆಡಿ
ಬಾಟಲಿಗೆ ಮಣ್ಣು ಮತ್ತು ಗೊಬ್ಬರದ ಮಿಶ್ರಣವನ್ನು ತುಂಬಿಸಿ. ಮಣ್ಣು ಅತಿ ಗಟ್ಟಿಯಾಗಿರದೆ ಹಗುರವಾಗಿರಲಿ. ಬೆಳ್ಳುಳ್ಳಿ ಎಸಳಿನ ಚೂಪಾದ ತುದಿ ಮೇಲಿರುವಂತೆ ನೋಡಿ 1-2 ಸೆಂಟಿಮೀಟರ್ ಆಳದಲ್ಲಿ ಫೋಟೋದಲ್ಲಿ ತೋರಿಸಿರುವಂತೆ ಮಣ್ಣಿನಲ್ಲಿ ನೆಡಿ.
ನೀರು ಮತ್ತು ಬಿಸಿಲು
ನೆಟ್ಟ ನಂತರ ಸ್ವಲ್ಪ ನೀರು ಚಿಮುಕಿಸಿ. ಈ ಬಾಟಲಿಯನ್ನು ದಿನಕ್ಕೆ ಕನಿಷ್ಠ 4-6 ಗಂಟೆ ಬಿಸಿಲು ಬೀಳುವ ಜಾಗದಲ್ಲಿ (ಬಾಲ್ಕನಿ ಅಥವಾ ಕಿಟಕಿ ಹತ್ತಿರ) ಇಡಿ. ಮಣ್ಣು ಒಣಗಿದಾಗ ಮಾತ್ರ ನೀರು ಹಾಕಿ, ಅತಿಯಾದ ನೀರು ಬೆಳ್ಳುಳ್ಳಿ ಕೊಳೆಯಲು ಕಾರಣವಾಗಬಹುದು. ಕೆಲವು ವಾರಗಳಲ್ಲಿ ಎಲೆಗಳು ಬೆಳೆಯುತ್ತವೆ. ಇವು 6 ಇಂಚು ಬೆಳೆದಾಗ ಕತ್ತರಿಸಿ ಅಡುಗೆ ಅಥವಾ ಚಟ್ನಿಗಳಿಗೆ ಬಳಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೆಳ್ಳುಳ್ಳಿ ಗಡ್ಡೆಗಳು
ಸುಮಾರು 4-5 ತಿಂಗಳ ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಆರಂಭಿಸಿದಾಗ ಬೆಳ್ಳುಳ್ಳಿ ಗಡ್ಡೆಗಳು ಸಿದ್ಧವಾಗಿವೆ ಎಂದು ಅರ್ಥ. ಆಗ ಅವುಗಳನ್ನು ಜಾಗರೂಕತೆಯಿಂದ ಹೊರತೆಗೆದು ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿ.
ಹೀಗೆ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಮತ್ತು ಗಾರ್ಡನಿಂಗ್ ಸೇರಿ ನಿಮ್ಮ ಅಡುಗೆ ಮನೆಯ ಅಗತ್ಯವನ್ನು ಪೂರೈಸುವುದಲ್ಲದೆ ಪರಿಸರಕ್ಕೂ ಪೂರಕವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

