Kannada

ಅತ್ಯಂತ ಸುಲಭವಾದ ದಾರಿ

ಖರ್ಚಿಲ್ಲದೆ ಹೊಸ ಗಿಡಗಳನ್ನು ಬೆಳೆಸಲು ಕಡ್ಡಿ ಅಥವಾ ಕಾಂಡವನ್ನು ಕತ್ತರಿಸಿ ನೆಡುವುದು ಅತ್ಯಂತ ಸುಲಭವಾದ ದಾರಿ. ಆರೋಗ್ಯಕರವಾದ ಗಿಡದ ಒಂದು ಸಣ್ಣ ಕಡ್ಡಿ ತುಂಡು ಸಿಕ್ರೆ ಸಾಕು ಹೊಸ ಗಿಡವನ್ನು ಸಿದ್ಧಪಡಿಸಬಹುದು. 

Kannada

ಹೂವಿನ ಗಿಡವಾದ್ರೆ

ಗುಲಾಬಿ, ದಾಸವಾಳ, ಮಲ್ಲಿಗೆ, ದುಂಡು ಮಲ್ಲಿಗೆ, ಡಾಲಿಯಾ ಮತ್ತು ಬೋಗನ್ ವಿಲ್ಲಾದಂತಹ ಹೂ ಗಿಡಗಳನ್ನು ಕಾಂಡದ ಮೂಲಕ ಸುಲಭವಾಗಿ ಬೆಳೆಸಬಹುದು.

Image credits: Storyblocks
Kannada

ಬಳ್ಳಿ ಗಿಡಗಳಾದ್ರೆ

ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್, ಟರ್ಟಲ್ ವೈನ್ ಮತ್ತು ಮಾನ್‌ಸ್ಟೆರಾದಂತಹ ಗಿಡಗಳನ್ನು ಈ ವಿಧಾನದಲ್ಲಿ ಬೆಳೆಸಬಹುದು.

Image credits: Getty
Kannada

ಗಿಡ ನೆಡುವ ಸರಿಯಾದ ವಿಧಾನ

ನೆನಪಿಡಿ..ಗಿಡ 4-6 ಇಂಚು (ಅಂಗೈ ಉದ್ದಕ್ಕಿಂತ ಸ್ವಲ್ಪ ಜಾಸ್ತಿ)ಉದ್ದವಿರಬೇಕು. 2-3 ಗಂಟುಗಳಿರುವ ಆರೋಗ್ಯಕರ ಕೊಂಬೆಯನ್ನು ಆರಿಸಿ.

Image credits: Instagram
Kannada

ಕತ್ತರಿಸುವ ರೀತಿ

ಕೊಂಬೆಯ ಕೆಳಭಾಗದ ಎಲೆಗಳನ್ನು ತೆಗೆದುಹಾಕಿ. ಕಡ್ಡಿಯನ್ನು ಅಡ್ಡಲಾಗಿ ಕತ್ತರಿಸುವ ಬದಲು, ಒಂದು ಬದಿಗೆ ಓರೆಯಾಗಿ (Cross) ಕತ್ತರಿಸಿ.

Image credits: Instagram
Kannada

ನೆಡುವುದು

ಈ ಕತ್ತರಿಸಿದ ಕೊಂಬೆಯನ್ನು ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ನೆಟ್ಟು, ನೆರಳಿರುವ ಜಾಗದಲ್ಲಿ ಇಡಿ.

Image credits: Instagram
Kannada

ಜಾಗ್ರತೆ

ಮಣ್ಣು ಯಾವಾಗಲೂ ತೇವವಾಗಿರಲಿ, ಆದರೆ ಅತಿಯಾಗಿ ನೀರು ಹಾಕಬೇಡಿ. ಸಾಮಾನ್ಯವಾಗಿ 10-20 ದಿನಗಳಲ್ಲಿ ಬೇರುಗಳು ಬರಲಾರಂಭಿಸುತ್ತವೆ ಮತ್ತು 3-4 ವಾರಗಳಲ್ಲಿ ಹೊಸ ಗಿಡ ಸಿದ್ಧವಾಗುತ್ತದೆ.

Image credits: Instagram

ಬೇಸಿಗೆಯಲ್ಲಿ ಕೂಲ್ ಆಗಿ ಕಾಣಬೇಕಾ? ಟ್ರೈ ಮಾಡಿ ಕೊರಿಯನ್ ಶರ್ಟ್ ಡಿಸೈನ್ಸ್!

ಕೈಗಳಿಗೆ ಪ್ರೀಮಿಯಂ ಲುಕ್: ಟ್ರೆಂಡಿಂಗ್‌ನಲ್ಲಿವೆ ಈ 7 ಪ್ಲಾಟಿನಂ ಬ್ರೇಸ್ಲೆಟ್‌ಗಳು!

ಜಿಡ್ಡಿನಿಂದ ಅಂಟಂಟಾದ ಅಡುಗೆ ಮನೆ ಮಸಿ ಬಟ್ಟೆ ಹೀಗೆ ಕ್ಲೀನ್ ಮಾಡಿ

ಮಕ್ಕಳಿಗೆ ಭೀಮ ಬಲ, ಚಾಣಕ್ಯನ ಚುರುಕು ಬುದ್ಧಿ ಬೇಕಾ? ಪ್ರತಿದಿನ 1 ಚಮಚ ತುಪ್ಪ ಕೊಡಿ