MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನಲ್ಲಿಯಲ್ಲಿ ಸರಿಯಾಗಿ ನೀರು ಬರ್ತಿಲ್ವಾ? ವಾಟರ್‌ ಟ್ಯಾಂಕ್‌ ಗೆ ಅಡುಗೆ ಮನೆಯಲ್ಲಿರುವ ಈ ವಸ್ತು ಹಾಕಿ

ನಲ್ಲಿಯಲ್ಲಿ ಸರಿಯಾಗಿ ನೀರು ಬರ್ತಿಲ್ವಾ? ವಾಟರ್‌ ಟ್ಯಾಂಕ್‌ ಗೆ ಅಡುಗೆ ಮನೆಯಲ್ಲಿರುವ ಈ ವಸ್ತು ಹಾಕಿ

ಮನೆಯ ನಲ್ಲಿಯ ನೀರು ನಿಧಾನವಾಗಿ ಬರ್ತಿದ್ರೆ ಕೆಲವರು ನಲ್ಲಿ ಬದಲಿಸ್ತಾರೆ. ಮತ್ತೊಂದಿಷ್ಟು ಮಂದಿ ಏರ್ ಕಟ್ಟಿಕೊಂಡಿರ್ಬೇಕು ಅಂತ ನಿರ್ಲಕ್ಷ್ಯ ಮಾಡ್ತಾರೆ. ಕೆಲ ಬಾರಿ ನಲ್ಲಿ ನೀರು ನಿಧಾನವಾಗಿ ಬರಲು ಟ್ಯಾಪ್ ಬದಲು ನೀರಿನ ಟ್ಯಾಂಕ್ ಕಾರಣವಾಗಿರುತ್ತೆ. 

2 Min read
Author : Roopa Hegde
Published : Jun 03 2026, 08:55 PM IST
Share this Photo Gallery
  • FB
  • TW
  • Linkdin
  • Whatsapp
16
ನಲ್ಲಿ ನೀರು ನಿಧಾನವಾಗಲು ಕಾರಣ
Image Credit : Asianet News

ನಲ್ಲಿ ನೀರು ನಿಧಾನವಾಗಲು ಕಾರಣ

ಮನೆಯಲ್ಲಿರುವ ಟ್ಯಾಂಕ್ ಕ್ಲೀನ್ ಮಾಡೋದು ಅಪರೂಪ. ಕೆಲವರು ವರ್ಷಕ್ಕೊಮ್ಮೆ ಮಾಡಿದ್ರೆ ಮತ್ತೆ ಕೆಲವರು ಎರಡು – ಮೂರು ವರ್ಷವಾದ್ರೂ ಟ್ಯಾಂಕ್ ಸುದ್ದಿಗೆ ಹೋಗೋದಿಲ್ಲ. ಇದ್ರಿಂದ ನೀರಿನ ಟ್ಯಾಂಕ್ ನಲ್ಲಿ ಕೊಳಕು, ಪಾಚಿ ಕಟ್ಟಿಕೊಳ್ಳುತ್ತದೆ. ಟ್ಯಾಂಕ್ ನಲ್ಲಿರುವ ಕೆಸರು, ಪೈಪ್ಲೈನ್ಗಳು ಮತ್ತು ಔಟ್ಲೆಟ್ಗಳ ಮೇಲೆ ಪರಿಣಾಮ ಬೀರುತ್ತದೆ. ಸರಳ ಟಿಪ್ಸ್ ಮೂಲಕ ನೀವು ಈ ಸಮಸ್ಯೆಗೆ ಪರಿಹಾರ ಕಂಡ್ಕೊಳ್ಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಟ್ಯಾಂಕ್ ಸ್ವಚ್ಛತೆ
Image Credit : Asianet News

ಟ್ಯಾಂಕ್ ಸ್ವಚ್ಛತೆ

ನೀರಿನ ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಒಳ್ಳೆಯ ಹವ್ಯಾಸ. ಇದು ನೀರನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಪೈಪ್ಲೈನ್ಗೆ ಕೊಳಕು ಪ್ರವೇಶಿಸೋದಿಲ್ಲ. ಟ್ಯಾಂಕ್ ಗೋಡೆಗಳ ಮೇಲೆ ಪಾಚಿ, ಕೊಳಕು ಮತ್ತು ಖನಿಜಗಳ ಪದರ ಸಂಗ್ರಹವಾದ್ರೆ ಅದು ನೀರಿನ ಗುಣಮಟ್ಟ ಕಡಿಮೆ ಮಾಡುತ್ತದೆ. ಹಾಗಾಗಿ ಟ್ಯಾಂಕ್ ಕ್ಲೀನಿಂಗ್ ಬಹಳ ಮುಖ್ಯ.

Related Articles

Related image1
Dupatta Reuse: ಹಳೆ ದುಪಟ್ಟಾಗಳಿಂದ ಡಿಸೈನರ್ ಬ್ಲೌಸ್! ಕಡಿಮೆ ಖರ್ಚಲ್ಲಿ ಹೊಸ ಲುಕ್
Related image2
ಮೂಲೆ ಮೂಲೆಯಲ್ಲಿ ಈ ಸಿಪ್ಪೆ ಇಡಿ ಸಾಕು.. ಮನೆನೂ ಕ್ಲೀನ್, ಹಲ್ಲಿಗಳೂ ಬರಲ್ಲ!
36
ಟ್ಯಾಂಕ್ ಹೇಗೆ ಸ್ವಚ್ಛಗೊಳಿಸುವುದು?
Image Credit : Asianet News

ಟ್ಯಾಂಕ್ ಹೇಗೆ ಸ್ವಚ್ಛಗೊಳಿಸುವುದು?

ಮನೆಯಲ್ಲಿ ದೊಡ್ಡ ಟ್ಯಾಂಕ್ ಇರುತ್ತೆ. ಅದನ್ನು ಕ್ಲೀನ್ ಮಾಡೋದು ಕಷ್ಟದ ಕೆಲ್ಸ. ಅದ್ರಲ್ಲಿರುವ ನೀರನ್ನು ಸಂಪೂರ್ಣವಾಗಿ ತೆಗೆಯೋದು ಕಷ್ಟ. ಟ್ಯಾಂಕ್ ನಲ್ಲಿ ಸ್ವಲ್ಪ ನೀರಿರುವಾಗ್ಲೇ ನೀವು ಅದನ್ನು ಕ್ಲೀನ್ ಮಾಡಬಹುದು. ಅದಕ್ಕೆ ಬಿಳಿ ವಿನೆಗರ್ ಅಗತ್ಯವಿದೆ. ಒಂದು ಕಪ್ ಬಿಳಿ ವಿನೆಗರ್ ತೆಗೆದುಕೊಂಡ್ರೆ ಮೂರು ಕಪ್ ನೀರನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಬ್ರಷ್ ಬಳಸಿ ಟ್ಯಾಂಕ್ ಗೋಡೆಗಳ ಮೇಲಿನ ಕೊಳಕು, ಪಾಚಿ ಸ್ವಚ್ಛಗೊಳಿಸಿ.

46
ಬಿಳಿ ವಿನೆಗರ್
Image Credit : Asianet News

ಬಿಳಿ ವಿನೆಗರ್

ಬಿಳಿ ವಿನೆಗರ್ನ ಸೌಮ್ಯ ಆಮ್ಲೀಯ ಗುಣ, ವಾಟರ್ ಟ್ಯಾಂಕ್ ಬಿಗಿಯಾಗಿ ಹಿಡಿದ ಕೊಳಕನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಟ್ಯಾಂಕ್ ಗೋಡೆಗಳಿಂದ ಮತ್ತು ಔಟ್ಲೆಟ್ ಸುತ್ತಲೂ ಇರುವ ಕೊಳೆಯನ್ನು ತೆಗೆಯುತ್ತದೆ. ಇದ್ರಿಂದ ನೀರಿನ ಹರಿವು ಸುಧಾರಿಸುತ್ತದೆ.

56
ಅಡಿಗೆ ಸೋಡಾದ ಬಳಕೆ
Image Credit : Asianet News

ಅಡಿಗೆ ಸೋಡಾದ ಬಳಕೆ

ನೀರಿನ ಟ್ಯಾಂಕ್ ಕ್ಲೀನ್ ಮಾಡೋದ್ರಲ್ಲಿ ಅಡಿಗೆ ಸೋಡಾವನ್ನು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಗೋಡೆಗಳಿಂದ ಗ್ರೀಸ್ ಮತ್ತು ಕೊಳೆಯನ್ನು ತೆಗೆದುಹಾಕಲು ಅಡಿಗೆ ಸೋಡಾ ಮತ್ತು ನೀರಿನ ಪೇಸ್ಟ್ ಬಳಸಬಹುದು. ಆದಾಗ್ಯೂ, ಯಾವುದೇ ಶೇಷ ಉಳಿಯದಂತೆ ಖಚಿತಪಡಿಸಿಕೊಳ್ಳಲು ಸ್ವಚ್ಛಗೊಳಿಸಿದ ನಂತರ ಮೇಲ್ಮೈಯನ್ನು ಸಂಪೂರ್ಣವಾಗಿ ತೊಳೆಯುವುದು ಮುಖ್ಯ.

66
ಸ್ವಚ್ಛಗೊಳಿಸುವ ಸಮಯದಲ್ಲಿ ಎಚ್ಚರಿಕೆ
Image Credit : Asianet News

ಸ್ವಚ್ಛಗೊಳಿಸುವ ಸಮಯದಲ್ಲಿ ಎಚ್ಚರಿಕೆ

ಶುಚಿಗೊಳಿಸುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಗಳು ಸಹ ಅಗತ್ಯ. ಮೊದಲನೆಯದಾಗಿ, ನೀರಿನ ಒಳಹರಿವಿನ ಸರಬರಾಜನ್ನು ಆಫ್ ಮಾಡಿ. ಕೈಗೆ ಗ್ಲೌಸ್ ಬಳಸಿ. ಕಠಿಣ ರಾಸಾಯನಿಕಗಳನ್ನು ನೇರವಾಗಿ ಟ್ಯಾಂಕ್ಗೆ ಸುರಿಯುವುದನ್ನು ತಪ್ಪಿಸಿ. ಆರೋಗ್ಯಕ್ಕೆ ಉತ್ತಮವಾದ ವಸ್ತುಗಳನ್ನು ಬಳಸಿ. ಟ್ಯಾಂಕ್ ಸ್ವಚ್ಛವಾದ್ಮೇಲೆ ಕೊಳಕು ನೀರು ಹೊರಗೆ ಹೋಗುವಂತೆ ನೋಡಿಕೊಳ್ಳಿ. ಕೊಳಕು ನೀರು ಕ್ಲೀನ್ ಆದ್ಮೇಲೆ ಶುದ್ಧ ನೀರನ್ನು ಟ್ಯಾಂಕ್ ಗೆ ತುಂಬಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜೀವನಶೈಲಿ
ಮಹಿಳೆಯರು
Latest Videos
Recommended Stories
Recommended image1
Amruthadhaare ಯಾರೂ ಊಹಿಸದ ಟ್ವಿಸ್ಟ್​: ಮಿಂಚು ಹುಡುಕಿ ಬಂದ ​ಅಪ್ಪ-ಅಮ್ಮ; ಹಾಗಿದ್ರೆ ಯಾರ ಮಗಳೀಕೆ
Recommended image2
DK Shivakumar: ಇಂದು-ನಿನ್ನೆಯದಲ್ಲ ಈ ಹೋರಾಟ, 8 ವರ್ಷಗಳ ಯಜ್ಞ; ಪಕ್ಕಾ ಪ್ಲಾನ್, ಪಕ್ಕಾ ಆಪರೇಷನ್!
Recommended image3
ಮೂಲೆ ಮೂಲೆಯಲ್ಲಿ ಈ ಸಿಪ್ಪೆ ಇಡಿ ಸಾಕು.. ಮನೆನೂ ಕ್ಲೀನ್, ಹಲ್ಲಿಗಳೂ ಬರಲ್ಲ!
Related Stories
Recommended image1
Dupatta Reuse: ಹಳೆ ದುಪಟ್ಟಾಗಳಿಂದ ಡಿಸೈನರ್ ಬ್ಲೌಸ್! ಕಡಿಮೆ ಖರ್ಚಲ್ಲಿ ಹೊಸ ಲುಕ್
Recommended image2
ಮೂಲೆ ಮೂಲೆಯಲ್ಲಿ ಈ ಸಿಪ್ಪೆ ಇಡಿ ಸಾಕು.. ಮನೆನೂ ಕ್ಲೀನ್, ಹಲ್ಲಿಗಳೂ ಬರಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved