MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಸೋಪಿನ ನೀರಿಗೆ ಹೋಗಲ್ಲ.. ಮರದ ಸೌಟಿನ ಜಿಡ್ಡು, ವಾಸನೆ ತೆಗೆಯಲು ಕಿಚನ್‌ನಲ್ಲಿರುವ ಈ ಒಂದು ಪದಾರ್ಥ ಸಾಕು

ಸೋಪಿನ ನೀರಿಗೆ ಹೋಗಲ್ಲ.. ಮರದ ಸೌಟಿನ ಜಿಡ್ಡು, ವಾಸನೆ ತೆಗೆಯಲು ಕಿಚನ್‌ನಲ್ಲಿರುವ ಈ ಒಂದು ಪದಾರ್ಥ ಸಾಕು

Wooden Spoons Cleaning: ಮರದ ಚಮಚಗಳು ಬೇಗನೆ ಜಿಡ್ಡು ಹಿಡಿದು, ಬಣ್ಣ ಕಳೆದುಕೊಳ್ಳುತ್ತವೆ. ಬರಿ ನೀರಿನಿಂದ ತೊಳೆದರೆ ಇವು ಪೂರ್ತಿ ಸ್ವಚ್ಛವಾಗುವುದಿಲ್ಲ. ನಿಮ್ಮ ಮರದ ಪಾತ್ರೆ, ಚಮಚಗಳನ್ನು ಹೊಸದರಂತೆ ಹೊಳೆಯುವಂತೆ ಮಾಡಲು ಮತ್ತು ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್. 

2 Min read
Author : Ashwini HR
Published : Jul 25 2026, 04:11 PM IST
Share this Photo Gallery
  • FB
  • TW
  • Linkdin
  • Whatsapp
15
ಜಸ್ಟ್ ನೀರಿನಿಂದ ಕ್ಲೀನ್ ಮಾಡೋಕೆ ಆಗಲ್ಲ
Image Credit : AI Image

ಜಸ್ಟ್ ನೀರಿನಿಂದ ಕ್ಲೀನ್ ಮಾಡೋಕೆ ಆಗಲ್ಲ

ಜಸ್ಟ್ ನೀರಿನಿಂದ ಕ್ಲೀನ್ ಮಾಡೋಕೆ ಆಗಲ್ಲ
ಇತ್ತೀಚಿನ ದಿನಗಳಲ್ಲಿ ಅಡುಗೆಮನೆಯಲ್ಲಿ ಸ್ಟೀಲ್ ಮತ್ತು ಹಿತ್ತಾಳೆಯ ಪಾತ್ರೆಗಳಿಗಿಂತ ಮರದ ಚಮಚಗಳು (Wooden Spoons) ಮತ್ತು ಸೌಟುಗಳ ಬಳಕೆ ಹೆಚ್ಚಾಗುತ್ತಿದೆ. ಇವು ನೋಡಲು ಸುಂದರ ಮತ್ತು ಬಳಸಲು ಸುಲಭ. ಆದರೆ, ಮರದ ಪಾತ್ರೆಗಳ ಒಂದು ದೊಡ್ಡ ಸಮಸ್ಯೆ ಎಂದರೆ ಅವು ಬೇಗನೆ ಮಂದವಾಗುತ್ತವೆ (Dull), ಎಣ್ಣೆಯ ಜಿಡ್ಡು ಮತ್ತು ಆಹಾರದ ವಾಸನೆಯನ್ನು ಹೀರಿಕೊಳ್ಳುತ್ತವೆ. ಕೇವಲ ಸೋಪಿನ ನೀರಿನಿಂದ ಇವುಗಳನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಡೀಪ್ ಕ್ಲೀನಿಂಗ್ ಮಾಡಿ
Image Credit : Getty

ಡೀಪ್ ಕ್ಲೀನಿಂಗ್ ಮಾಡಿ

ಡೀಪ್ ಕ್ಲೀನಿಂಗ್ ಮಾಡಿ
ನಿಮ್ಮ ಮನೆಯ ಕಿಚನ್‌ನಲ್ಲಿರುವ ಮರದ ಚಮಚಗಳು ಸದಾ ಹೊಸದರಂತೆ ಹೊಳೆಯಬೇಕೆಂದರೆ ತಿಂಗಳಿಗೊಮ್ಮೆ ಈ 'ಡೀಪ್ ಕ್ಲೀನಿಂಗ್' ವಿಧಾನವನ್ನು ಅನುಸರಿಸಿ. ಅದಕ್ಕೆ ಬೇಕಾಗುವ ಸರಳ ಪದಾರ್ಥಗಳೇನೆಂದು ನೋಡೋಣ ಬನ್ನಿ..
*ಕುದಿಯುವ ಬಿಸಿ ನೀರು.
*1-2ಚಮಚ ಬೇಕಿಂಗ್ ಸೋಡಾ.
*ಸ್ವಲ್ಪ ತೆಂಗಿನ ಎಣ್ಣೆ.
*ಒಂದು ಆಳವಾದ ಪಾತ್ರೆ ಮತ್ತು ಒಣ ಬಟ್ಟೆ.

Related Articles

Related image1
ಹಾಲು ಕಾಯಿಸುವ ಮುನ್ನ ಪಾತ್ರೆಗೆ ಒಂದು ಚಮಚ ನೀರು ಹಾಕುವ ಈ ಟ್ರಿಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
Related image2
ಬಾಯಲಿಟ್ಟರೆ ಕರಗುವಂತಹ ಸೂಪರ್ ಸಾಫ್ಟ್ ನೀರ್ ದೋಸೆ ಮಾಡಲು 5 ಬೆಸ್ಟ್ ಟಿಪ್ಸ್
35
ಸ್ವಚ್ಛಗೊಳಿಸುವ ಹಂತಗಳು
Image Credit : Gemini

ಸ್ವಚ್ಛಗೊಳಿಸುವ ಹಂತಗಳು

ಸ್ವಚ್ಛಗೊಳಿಸುವ ಹಂತಗಳು

*ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ. ಈ ಬಿಸಿ ನೀರು ಮರದ ರಂಧ್ರಗಳಲ್ಲಿ ಅಡಗಿರುವ ಜಿಡ್ಡು ಮತ್ತು ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

*ಕುದಿಯುವ ನೀರಿಗೆ 1-2 ಚಮಚ ಬೇಕಿಂಗ್ ಸೋಡಾ ಬೆರೆಸಿ. ಈ ದ್ರಾವಣದಲ್ಲಿ ಮರದ ಚಮಚಗಳನ್ನು ಹಾಕಿ ಸುಮಾರು 15-20 ನಿಮಿಷಗಳ ಕಾಲ ನೆನೆಯಲು ಬಿಡಿ. ಆಗ ಚಮಚದಲ್ಲಿ ಸಂಗ್ರಹವಾಗಿದ್ದ ಕೊಳೆ ತಾನಾಗಿಯೇ ಬಿಟ್ಟುಕೊಳ್ಳುತ್ತದೆ.

*ನೀರಿನಿಂದ ಹೊರತೆಗೆದ ನಂತರ ಶುದ್ಧ ನೀರಿನಲ್ಲಿ ಒಮ್ಮೆ ತೊಳೆದು, ಒಣ ಬಟ್ಟೆಯಿಂದ ನೀರಿಲ್ಲದಂತೆ ಚೆನ್ನಾಗಿ ಒರೆಸಿ. ಮರದ ಪಾತ್ರೆಗಳು ಪೂರ್ತಿಯಾಗಿ ಒಣಗುವುದು ಬಹಳ ಮುಖ್ಯ.

45
ಹೊಸದರಂತೆ ಹೊಳೆಯಲು ಎಣ್ಣೆ ಹಚ್ಚಿ
Image Credit : Getty

ಹೊಸದರಂತೆ ಹೊಳೆಯಲು ಎಣ್ಣೆ ಹಚ್ಚಿ

ಹೊಸದರಂತೆ ಹೊಳೆಯಲು ಎಣ್ಣೆ ಹಚ್ಚಿ
ಮರದ ಚಮಚ ಸಂಪೂರ್ಣ ಒಣಗಿದ ನಂತರ, ಅದರ ಮೇಲೆ ಕೆಲವು ಹನಿ ತೆಂಗಿನ ಎಣ್ಣೆ ಹಾಕಿ ಸವರಿ. ಇದು ಮರಕ್ಕೆ ಬೇಕಾದ ತೇವಾಂಶವನ್ನು ನೀಡುವುದಲ್ಲದೆ, ಮಂದವಾಗಿದ್ದ ಚಮಚಕ್ಕೆ ಹೊಸದರಂತಹ ಹೊಳಪನ್ನು ನೀಡುತ್ತದೆ. ಇದು ಒಂದು ರೀತಿಯ ನೈಸರ್ಗಿಕ ಪಾಲಿಷ್‌ನಂತೆ ಕೆಲಸ ಮಾಡುತ್ತದೆ.

55
ನೆನಪಿರಲಿ ಈ ಮುನ್ನೆಚ್ಚರಿಕೆಗಳು
Image Credit : AI Image

ನೆನಪಿರಲಿ ಈ ಮುನ್ನೆಚ್ಚರಿಕೆಗಳು

ನೆನಪಿರಲಿ ಈ ಮುನ್ನೆಚ್ಚರಿಕೆಗಳು

*ಮರದ ಚಮಚಗಳನ್ನು ಅತಿಯಾದ ಸಮಯ ನೀರಿನಲ್ಲಿ ನೆನೆಸಿಡಬೇಡಿ, ಇದರಿಂದ ಮರ ಬಿರುಕು ಬಿಡಬಹುದು.

*ಪ್ರತಿ ಬಾರಿ ಬಳಸಿದ ನಂತರವೂ ಇವುಗಳನ್ನು ಚೆನ್ನಾಗಿ ತೊಳೆದು ಒಣಗಿಸಿಯೇ ಎತ್ತಿಡಿ.

*ಪ್ಲಾಸ್ಟಿಕ್ ಅಥವಾ ಸಿಲಿಕಾನ್ ಚಮಚಗಳಿಗಿಂತ ಮರದ ಚಮಚಗಳು ಆರೋಗ್ಯಕ್ಕೆ ಉತ್ತಮ, ಆದರೆ ಸರಿಯಾದ ಸ್ವಚ್ಛತೆ ಅತಿ ಅಗತ್ಯ.

*ಈ ಸರಳ ಕಿಚನ್ ಹ್ಯಾಕ್ ಬಳಸಿ ನಿಮ್ಮ ಅಡುಗೆಮನೆಯ ಮರದ ಪಾತ್ರೆಗಳನ್ನು ಫ್ರೆಶ್ ಆಗಿ ಮತ್ತು ಹೈಜಿನಿಕ್ ಆಗಿ ಇಟ್ಟುಕೊಳ್ಳಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಅಡುಗೆಮನೆ ಸಲಹೆಗಳು
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
ಮಸಾಲಾ ಟೀ ಮಾಡ್ತಾರೆ, ಆದ್ರೆ ಮಸಾಲಾ ಕಾಫಿ ಯಾಕೆ ಮಾಡಲ್ಲ? ಈ 'ಮಹಾನ್ ರಹಸ್ಯ'ಕ್ಕೆ ಉತ್ತರ ಇಲ್ಲಿದೆ ನೋಡಿ!
Recommended image2
ಗೃಹಿಣಿಯರೇ ನಿಮಗಿದು ತಿಳಿದಿರಲಿ: ಅಡುಗೆ ಮನೇಲಿ ರಾತ್ರಿ ವೇಳೆಯೇ ಜಿರಳೆಗಳು ಕಾಣಿಸಿಕೊಳ್ಳೋದೇಕೆ?
Recommended image3
ಈ ಹಿಟ್ಟನ್ನು ಚಿಮುಕಿಸಿ ಮೆಲ್ಲಗೆ ಉಜ್ಜಿದ್ರೆ ಸಾಕು.. ಅಣಬೆಯಲ್ಲಿರುವ ಕೊಳೆ, ಮಣ್ಣು ಸುಲಭವಾಗಿ ಹೊರಬರುತ್ತೆ
Related Stories
Recommended image1
ಹಾಲು ಕಾಯಿಸುವ ಮುನ್ನ ಪಾತ್ರೆಗೆ ಒಂದು ಚಮಚ ನೀರು ಹಾಕುವ ಈ ಟ್ರಿಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
Recommended image2
ಬಾಯಲಿಟ್ಟರೆ ಕರಗುವಂತಹ ಸೂಪರ್ ಸಾಫ್ಟ್ ನೀರ್ ದೋಸೆ ಮಾಡಲು 5 ಬೆಸ್ಟ್ ಟಿಪ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved