ಉದ್ಯೋಗ ಹುಡುಕುವವರು ಸಾಮಾನ್ಯವಾಗಿ ತಮ್ಮ ಕೌಶಲ್ಯ, ಅನುಭವ ಮತ್ತು ಸಾಧನೆಗಳನ್ನು ಹೇಳಿಕೊಂಡು ಕಂಪನಿಗಳಲ್ಲಿ ಅವಕಾಶ ಕೇಳುತ್ತಾರೆ. ಆದರೆ ಇಲ್ಲೊಬ್ಬ ಯುವ ಡೆವಲಪರ್ ವಿಭಿನ್ನ ರೀತಿಯಲ್ಲಿ ಉದ್ಯೋಗಕ್ಕಾಗಿ ಸಂಪರ್ಕಿಸಿದ್ದು, ಇದೀಗ ಆ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉದ್ಯೋಗ ಹುಡುಕುವವರು ಸಾಮಾನ್ಯವಾಗಿ ತಮ್ಮ ಕೌಶಲ್ಯ, ಅನುಭವ ಮತ್ತು ಸಾಧನೆಗಳನ್ನು ಹೇಳಿಕೊಂಡು ಕಂಪನಿಗಳಲ್ಲಿ ಅವಕಾಶ ಕೇಳುತ್ತಾರೆ. ಆದರೆ ಇಲ್ಲೊಬ್ಬ ಯುವ ಡೆವಲಪರ್ ವಿಭಿನ್ನ ರೀತಿಯಲ್ಲಿ ಉದ್ಯೋಗಕ್ಕಾಗಿ ಸಂಪರ್ಕಿಸಿದ್ದು, ಇದೀಗ ಆ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಸ್ಟಾರ್ಟ್‌ಅಪ್ ಫೌಂಡರ್ ಪ್ರೀತಮ್ ಕುಡೆವ್ ಅವರಿಗೆ 22 ವರ್ಷದ ಉದ್ಯೋಗಾಕಾಂಕ್ಷಿಯೊಬ್ಬರು LinkedIn ಮೂಲಕ ಮೆಸೇಜ್ ಮಾಡಿದ್ದರು. ಆದರೆ ಉದ್ಯೋಗ ಕೇಳುವ ಮುನ್ನ ಆಕೆ ಫೌಂಡರ್ ಅವರ ಕಂಪನಿಯ ವೆಬ್‌ಸೈಟ್ ಬಗ್ಗೆ ತೀವ್ರ ಟೀಕೆ ಮಾಡಿದ್ದರು. ವೆಬ್‌ಸೈಟ್ ತುಂಬಾ ಆಕರ್ಷಕವಾಗಿಲ್ಲ, ಬಳಕೆದಾರರಿಗೆ ಅಸಹ್ಯ ಮೂಡಿಸುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
'ವೆಬ್‌ಸೈಟ್ ನೋಡಿದಾಗ ಕ್ರಿಂಜ್ ಆಯ್ತು' ಎಂದ ಯುವತಿ
ಆಕೆ ತನ್ನ ಸಂದೇಶದಲ್ಲಿ, ಕಂಪನಿಯ ವೆಬ್‌ಸೈಟ್ ತುಂಬಾ 'repelling' ಆಗಿದ್ದು, 'borderline disgusting' ಎನಿಸಿತು ಎಂದು ಹೇಳಿದ್ದರು. ಶರ್ಟ್‌ಲೆಸ್ ಪುರುಷರ ಚಿತ್ರಗಳು ಹಾಗೂ ಉತ್ಪನ್ನಗಳ ಪ್ರಸ್ತುತಪಡಿಸುವ ವಿಧಾನವೂ ತನಗೆ ಇಷ್ಟವಾಗಲಿಲ್ಲ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲ, ಪುರುಷರಿಗಾಗಿ ಸ್ಕಿನ್‌ಕೇರ್ ಉತ್ಪನ್ನಗಳನ್ನು ರೂಪಿಸಿರುವ ಕಂಪನಿಯ ಆಲೋಚನೆ ಇಷ್ಟವಾಗಿದೆ. ಆದರೆ ವೆಬ್‌ಸೈಟ್ ಅನ್ನು ಇನ್ನಷ್ಟು ಸರಳ, ಎಲ್ಲರಿಗೂ ಸ್ವಾಗತಾರ್ಹ ಮತ್ತು ಉತ್ತಮ ರೀತಿಯಲ್ಲಿ ರೂಪಿಸಬಹುದು ಎಂದು ಸಲಹೆ ನೀಡಿದ್ದರು. ತಾನು ಡೆವಲಪರ್ ಆಗಿದ್ದು, ವೆಬ್‌ಸೈಟ್ ಲ್ಯಾಗ್ ಆಗುತ್ತಿರುವುದನ್ನೂ ಗಮನಿಸಿದ್ದೇನೆ ಎಂದು ಹೇಳಿ, ತಾನು ಕೆಲಸಕ್ಕೆ ಲಭ್ಯವಿದ್ದು ಈ ಸಮಸ್ಯೆಗಳನ್ನು ಸರಿಪಡಿಸಲು ಸಹಾಯ ಮಾಡಬಹುದು ಎಂದು ತಿಳಿಸಿದ್ದರು.
ಫೌಂಡರ್ ಕೊಟ್ಟ ಉತ್ತರವೇ ಈಗ ವೈರಲ್
ಯುವತಿಯ ನೇರ ಟೀಕೆಗೆ ಬೆಂಗಳೂರಿನ ಫೌಂಡರ್ ಪ್ರೀತಮ್ ಕುಡೆವ್ ಕೂಡ ಅಷ್ಟೇ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ವ್ಯಂಗ್ಯವಾಗಿ, 'ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದಗಳು' ಎಂದು ಹೇಳಿ, ತಮ್ಮ ವೆಬ್‌ಸೈಟ್ ಅನ್ನು ನಿರ್ದಿಷ್ಟ ರೀತಿಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡೇ ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ. ಇನ್ನು ಇತರರನ್ನು ದೂರವಿಡುವ ಉದ್ದೇಶವೂ ವೆಬ್‌ಸೈಟ್‌ನಲ್ಲಿತ್ತು. ಅದು ನಿಜವಾಗಿಯೂ ಕೆಲಸ ಮಾಡಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
'Apke charan kaha hai?' ಎಂದು ಪೋಸ್ಟ್
ಇಲ್ಲಿಗೆ ನಿಲ್ಲದ ಫೌಂಡರ್, ಈ ಸಂಪೂರ್ಣ LinkedIn ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂತಹ outreach templates ಅನ್ನು ಈ ಮಕ್ಕಳಿಗೆ ಯಾರು ಕಲಿಸುತ್ತಿದ್ದಾರೆ? Apke charan kaha hai?' ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಜೊತೆಗೆ, ಮಾರ್ಕೆಟಿಂಗ್, ಕಂಟೆಂಟ್ ಮತ್ತು ಆಪರೇಷನ್ಸ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರು ತಮ್ಮ ಪೋರ್ಟ್‌ಫೋಲಿಯೊ ಹಂಚಿಕೊಳ್ಳಬಹುದು ಎಂದು ಕೂಡ ಹೇಳಿದ್ದಾರೆ. ಆದರೆ ತಮ್ಮ ವೆಬ್‌ಸೈಟ್‌ನಿಂದ 'REPELLED' ಆಗದವರು ಮಾತ್ರ ಅರ್ಜಿ ಸಲ್ಲಿಸಲಿ ಎಂಬ ರೀತಿಯಲ್ಲಿ ಫೌಂಡರ್ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜಿತರಾಗಿದ್ದಾರೆ. ಕೆಲವರು ಯುವತಿಯ ನೇರ ಮಾತನ್ನು ಸಮರ್ಥಿಸಿದರೆ, ಇನ್ನೂ ಕೆಲವರು ಉದ್ಯೋಗಕ್ಕಾಗಿ ಸಂಪರ್ಕಿಸುವಾಗ ಯಾರದ್ದೇ ಕೆಲಸವನ್ನು 'disgusting' ಎಂದು ಕರೆಯುವುದು ವೃತ್ತಿಪರ ರೀತಿಯಲ್ಲ ಎಂದು ಟೀಕಿಸಿದ್ದಾರೆ. ಕೆಲವರು, ಗಮನ ಸೆಳೆಯಲು ಈ ರೀತಿಯ ತಂತ್ರ ಬಳಸುವುದು ಹೊಸ ರೀತಿಯ job outreach ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ಕೆಲವರು ಯುವತಿ ವೆಬ್‌ಸೈಟ್ ಬಗ್ಗೆ ನೀಡಿದ ಟೀಕೆಯಲ್ಲಿ ಅಂಶವಿದೆ, ಆದರೆ ಅದನ್ನು ಹೇಳಿದ ರೀತಿ ತಪ್ಪಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗಕ್ಕಾಗಿ ಫೌಂಡರ್‌ಗಳನ್ನು ನೇರವಾಗಿ ಸಂಪರ್ಕಿಸುವ ಸಂದರ್ಭದಲ್ಲಿ ಕೌಶಲ್ಯ ಮತ್ತು ಪೋರ್ಟ್‌ಫೋಲಿಯೊ ಜೊತೆಗೆ ಸಂವಹನದ ಶೈಲಿಯೂ ಎಷ್ಟು ಮುಖ್ಯ ಎಂಬ ಚರ್ಚೆಗೆ ಈ ವೈರಲ್ ಘಟನೆ ಕಾರಣವಾಗಿದೆ.
