MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Karnataka Districts
  • ಬೆಳಗಾವಿ ಚಿನ್ನದ ನಿಧಿಯಲ್ಲಿ ರೋಚಕ ಟ್ವಿಸ್ಟ್: ನಿಧಿಯನ್ನು ಮನೆಗೆ ಕೊಂಡೊಯ್ದಿದ್ದ ಕಾರ್ಮಿಕ ಹೇಳಿದ್ದೇನು?

ಬೆಳಗಾವಿ ಚಿನ್ನದ ನಿಧಿಯಲ್ಲಿ ರೋಚಕ ಟ್ವಿಸ್ಟ್: ನಿಧಿಯನ್ನು ಮನೆಗೆ ಕೊಂಡೊಯ್ದಿದ್ದ ಕಾರ್ಮಿಕ ಹೇಳಿದ್ದೇನು?

ಬೆಳಗಾವಿಯ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕನೊಬ್ಬನಿಗೆ 8.27 ಲಕ್ಷ ಮೌಲ್ಯದ ಪುರಾತನ ಚಿನ್ನದ ನಾಣ್ಯಗಳ ನಿಧಿ ಸಿಕ್ಕಿದೆ. ಆದರೆ, ಈ ಬಗ್ಗೆ ಮಾತನಾಡಿದ ಕಾರ್ಮಿಕ ಲಕ್ಕುಂಡಿ ನಿಧಿ ಪ್ರಕರಣದ ಅರಿವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಚಿನ್ನದ ನಿಧಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

2 Min read
Author : Sathish Kumar KH
Published : Sep 05 2026, 02:11 PM IST
Share this Photo Gallery
  • FB
  • TW
  • Linkdin
  • Whatsapp
13
Image Credit : Asianet News

ಬೆಳಗಾವಿಯ ಇಂಚಲ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಬಂಗಾರದ ನಾಣ್ಯಗಳ ನಿಧಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೂಲಿ ಕೆಲಸ ಮಾಡುವ ವೇಳೆ ಮಣ್ಣಿನ ಗಡಿಗೆಯಲ್ಲಿ ಸಿಕ್ಕ ಬರೋಬ್ಬರಿ 8.27 ಲಕ್ಷ ರೂಪಾಯಿ ಮೌಲ್ಯದ ಪುರಾತನ ಚಿನ್ನದ ನಾಣ್ಯಗಳನ್ನು ಕೂಲಿಕಾರ್ಮಿಕನೊಬ್ಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಆದರೆ, ಇದರ ಹಿಂದೆ ಲಕ್ಕುಂಡಿ ಪ್ರಕರಣದ ಅರಿವಿನ ಬಗ್ಗೆ ಸುವರ್ಣ ನ್ಯೂಸ್ ಮುಂದೆ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಕೂಲಿಕಾರ್ಮಿಕ ಯಲ್ಲಪ್ಪ ಕರಿಗಾರ ಎಂಬುವವರೇ ಈ ಅಪರೂಪದ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಈ ಕುರಿತು ಅವರು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಜೊತೆ ಮಾತನಾಡಿ ಸಂಪೂರ್ಣ ಘಟನೆಯನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
Image Credit : Asianet News

ಮಣ್ಣಿನ ಗಡಿಗೆಯಲ್ಲಿ ಸಿಕ್ಕಿತ್ತು 14 ಬಂಗಾರದ ನಾಣ್ಯಗಳು!

ಕಳೆದ ಆಗಸ್ಟ್ 29 ರಂದು ಇಂಚಲ ಗ್ರಾಮದ ಗೋಮಾಳ ಜಮೀನಿನಲ್ಲಿ ವಿಬಿಜಿ ರಾಮ್ ಜೀ (ಗ್ರಾಮೀಣ ಕಾಮಗಾರಿ) ಯೋಜನೆಯಡಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಯಲ್ಲಪ್ಪ ಕರಿಗಾರ ಸೇರಿದಂತೆ ನಾಲ್ವರು ಕೂಲಿಕಾರ್ಮಿಕರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಜಮೀನು ಅಗೆಯುವ ಸಂದರ್ಭದಲ್ಲಿ ಹಳೆಯ ಕಾಲದ ಮಣ್ಣಿನ ಪುಟ್ಟ ಗಡಿಗೆಯೊಂದು ಪತ್ತೆಯಾಗಿತ್ತು. ಕುತೂಹಲದಿಂದ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪುರಾತನ ಕಾಲದ 14 ಚಿನ್ನದ ನಾಣ್ಯಗಳಿರುವುದು ಕಂಡುಬಂದಿತ್ತು. ಈ ನಾಣ್ಯಗಳ ಅಂದಾಜು ಮೌಲ್ಯ ಬರೋಬ್ಬರಿ 8.27 ಲಕ್ಷ ರೂಪಾಯಿ ಎನ್ನಲಾಗಿದೆ.

ಮನೆಗೆ ತಂದಿದ್ದ ಯಲ್ಲಪ್ಪ; ಮನಸ್ಸು ಬದಲಾಗಿದ್ದು ಹೇಗೆ?

ನಿಧಿ ಸಿಕ್ಕ ತಕ್ಷಣ ಏನು ಮಾಡಬೇಕೆಂದು ದಿಕ್ಕು ತೋಚದೆ ಯಲ್ಲಪ್ಪ ಆ ಮಣ್ಣಿನ ಗಡಿಗೆಯನ್ನು ಮನೆಗೆ ಕೊಂಡೊಯ್ದು ಇಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ವಿಚಾರ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ವೇಳೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದ್ದ ಯಲ್ಲಪ್ಪ ಅವರಿಗೆ, ‘ಭೂಮಿಯಲ್ಲಿ ಸಿಗುವ ಯಾವುದೇ ಪ್ರಾಚೀನ ನಿಧಿ ಅಥವಾ ಸಂಪತ್ತು ಸರ್ಕಾರದ ಸ್ವತ್ತು’ ಎಂಬ ಅರಿವು ಉಂಟಾಗಿದೆ.

ದುರಾಸೆಗೆ ಬೀಳದೆ ಸತ್ಯದ ಹಾದಿ ಹಿಡಿದ ಯಲ್ಲಪ್ಪ, ಕೂಡಲೇ ಇಂಚಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿ ಮಾಡಿ, ತನಗೆ ಸಿಕ್ಕಿದ್ದ ಎಲ್ಲಾ 14 ಚಿನ್ನದ ನಾಣ್ಯಗಳಿದ್ದ ಗಡಿಗೆಯನ್ನು ಯಥಾವತ್ತಾಗಿ ಹಸ್ತಾಂತರಿಸಿದ್ದಾರೆ.

Related Articles

Related image1
ಕೂಲಿ ಕಾರ್ಮಿಕರ ಕೈಗೆ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನದ ನಿಧಿ: ಮುಂದೇನಾಯ್ತು ಗೊತ್ತಾ?
Related image2
ಮನೆಯ ಗೋಡೆ ಕೊರೆಯುತ್ತಿದ್ದಾಗ ಸುರಿದ ಬಂಗಾರದ ನಾಣ್ಯಗಳು! ಕಾರ್ಮಿಕರಿಗೆ ಸಿಕ್ತು ಬರೋಬ್ಬರಿ ₹100 ಕೋಟಿ ಚಿನ್ನದ ನಿಧಿ!
33
Image Credit : Asianet News

ಸರ್ವತ್ರ ಪ್ರಶಂಸೆ; ಸುವರ್ಣ ನ್ಯೂಸ್‌ಗೆ ಯಲ್ಲಪ್ಪ ಹೇಳಿದ್ದೇನು?

'ನಿಧಿ ಸಿಕ್ಕಾಗ ಒಂದು ಕ್ಷಣ ಭಯ ಮತ್ತು ಆಶ್ಚರ್ಯವಾಗಿತ್ತು. ಹೀಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದೆ. ಆದರೆ ಲಕ್ಕುಂಡಿ ಘಟನೆಯ ಬಳಿಕ ಇದು ಸಾರ್ವಜನಿಕ ಆಸ್ತಿ, ಸರ್ಕಾರಕ್ಕೆ ಸೇರಿದ್ದು ಎಂದು ತಿಳಿಯಿತು. ಆದ್ದರಿಂದ ಯಾವುದೇ ಆಸೆ ಪಡದೆ ಪಿಡಿಒ ಸಾಹೇಬರಿಗೆ ಒಪ್ಪಿಸಿದೆ. ಅಧಿಕಾರಿಗಳು ಮತ್ತು ಊರಿನ ಜನ ನನ್ನ ಪ್ರಾಮಾಣಿಕತೆಯನ್ನು ಮೆಚ್ಚಿ ಪ್ರಶಂಸಿಸುತ್ತಿದ್ದಾರೆ. ನನಗೆ ತುಂಬಾ ನೆಮ್ಮದಿ ಮತ್ತು ಖುಷಿಯಾಗಿದೆ' ಎಂದು ಯಲ್ಲಪ್ಪ ಕರಿಗಾರ ಸುವರ್ಣ ನ್ಯೂಸ್ ಎದುರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಡತನದಲ್ಲಿದ್ದರೂ ಕೋಟ್ಯಂತರ ಆಸೆಯ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸರ್ಕಾರಕ್ಕೆ ಮರಳಿಸಿದ ಯಲ್ಲಪ್ಪನ ಪ್ರಾಮಾಣಿಕತೆಗೆ ಇಡೀ ಜಿಲ್ಲೆಯಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬಂಗಾರದ ನಿಧಿ
ಚಿನ್ನ
ಬೆಳಗಾವಿ

Latest Videos
Recommended Stories
Recommended image1
28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Recommended image2
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?
Recommended image3
ಸರ್ಕಾರಿ ಶಾಲೆಯ 40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಡಬಲ್ ಗುಡ್‌ನ್ಯೂಸ್ ಕೊಟ್ಟ ಸಚಿವ ಮಧುಬಂಗಾರಪ್ಪ
Related Stories
Recommended image1
ಕೂಲಿ ಕಾರ್ಮಿಕರ ಕೈಗೆ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನದ ನಿಧಿ: ಮುಂದೇನಾಯ್ತು ಗೊತ್ತಾ?
Recommended image2
ಮನೆಯ ಗೋಡೆ ಕೊರೆಯುತ್ತಿದ್ದಾಗ ಸುರಿದ ಬಂಗಾರದ ನಾಣ್ಯಗಳು! ಕಾರ್ಮಿಕರಿಗೆ ಸಿಕ್ತು ಬರೋಬ್ಬರಿ ₹100 ಕೋಟಿ ಚಿನ್ನದ ನಿಧಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved