ರಾಯಚೂರು: ಮಾನ್ವಿ ಕೋಟೆ ಬಳಿ ಮಣ್ಣು ಅಗೆಯುವಾಗ ಪುರಾತನ ಕಾಲದ 360 ನಾಣ್ಯಗಳು ಪತ್ತೆ!
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಕೋಟೆಯ ಬಳಿ ನೆಲ ಅಗೆಯುವಾಗ ಒಂದಲ್ಲ ಎರಡಲ್ಲ ಮುನ್ನೂರಕ್ಕೂ ಹೆಚ್ಚು ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಯಾವ ಕಾಲದ್ದು? ನಾಣ್ಯಗಳ ಮೇಲಿನ ಲಿಪಿ ಯಾವ ಭಾಷೆಯಲ್ಲಿದೆ ಹೆಚ್ಚಿನ ವಿವರ ತಿಳಿಯಿರಿ

ಮಾನ್ವಿ ತಾಲೂಕಿನಲ್ಲಿ ಪುರಾತನ ನಾಣ್ಯಗಳು ಪತ್ತೆ!
ರಾಯಚೂರು ಜಿಲ್ಲೆಯ, ಮಾನ್ವಿ ತಾಲೂಕಿನ ಕಿಲ್ಲಾ ಪ್ರದೇಶದಲ್ಲಿ ಕೋಟೆಯ ಮಣ್ಣು ಅಗೆಯುವ ವೇಳೆ ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಮಾನ್ವಿ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಈ ಅಪರೂಪದ ನಾಣ್ಯಗಳು ಪತ್ತೆಯಾಗಿವೆ.
360 ತಾಮ್ರದ ನಾಣ್ಯಗಳು ಪತ್ತೆ
ಕೋಟೆಯ ಬಳಿ ಮಣ್ಣು ಅಗೆಯುವ ವೇಳೆ ಒಂದಲ್ಲ, ಎರಡಲ್ಲ ಬರೋಬ್ಬರಿ 360 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ನಾಣ್ಯಗಳು ಸಿಕ್ಕಿರುವ ಸುದ್ದಿ ಇದೀಗ ಇತಿಹಾಸಕಾರರು, ಸ್ಥಳೀಯರಿಗೂ ಕುತೂಹಲ ಮೂಡಿಸಿದೆ
ಸ್ಥಳಕ್ಕೆ ಮಾನ್ವಿ ತಹಸೀಲ್ದಾರ್ ಭೇಟಿ
ವಿಷಯ ತಿಳಿಯುತ್ತಿದ್ದಂತೆ ಮಾನ್ವಿ ತಹಸೀಲ್ದಾರ್ ಭೀಮರಾಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪತ್ತೆಯಾದ ನಾಣ್ಯಗಳನ್ನ ಪರಿಶೀಲಿಸಿದರು. ಪತ್ತೆಯಾದ ನಾಣ್ಯಗಳು ಹೆಚ್ಚಿನ ಸಂಶೋಧನೆ ದೃಷ್ಟಿಯಿಂದ ವಶಕ್ಕೆ ತೆಗೆದುಕೊಂಡರು.
ನಾಣ್ಯಗಳ ಮೇಲಿದೆ ಉರ್ದು ಲಿಪಿ
ಪತ್ತೆಯಾಗಿರುವ ನಾಣ್ಯಗಳ ಮೇಲೆ ಉರ್ದು ಭಾಷೆಯ ಲಿಪಿ ಕಂಡುಬಂದಿದೆ. ಆದರೆ ಈ ನಾಣ್ಯಗಳು ಯಾವ ಕಾಲಕ್ಕೆ ಸೇರಿವೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.
ಇನ್ನಷ್ಟು ವಿಸ್ತರಿಸಿದ ರಾಯಚೂರು ಇತಿಹಾಸ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಪುರಾತನ ವಸ್ತುಗಳು, ನಾಣ್ಯಗಳು ಹಾಗೂ ಶಿಲ್ಪಗಳು ಪತ್ತೆಯಾಗುತ್ತಿವೆ. ಗದಗ, ಬಳ್ಳಾರಿ ಜಿಲ್ಲೆಯ ಕೋಳೂರು ಬಳಿಕ ಇದೀಗ ರಾಯಚೂರಿನಲ್ಲೂ ಪುರಾತನ ನಾಣ್ಯಗಳು ಪತ್ತೆಯಾಗಿರುವುದು ರಾಜ್ಯದ ಇತಿಹಾಸ ಇನ್ನಷ್ಟು ವಿಸ್ತರಿಸಿದಂತಾಗಿದೆ.
ವಶಕ್ಕೆ ಪಡೆದ ಅಪರೂಪದ ನಾಣ್ಯಗಳು
ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಪತ್ತೆಯಾಗಿರುವ ನಾಣ್ಯಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಾಣ್ಯಗಳ ಕಾಲಘಟ್ಟ ಹಾಗೂ ಹಿನ್ನೆಲೆ ಮುಂದಿನ ಪರಿಶೀಲನೆಯಿಂದ ತಿಳಿದುಬರಬೇಕಿದೆ.

