ಉಗುರಿನ ಪಕ್ಕದಲ್ಲಿ ಚರ್ಮ ಕಿತ್ತು ಬರಲು ಕಾರಣ ಹಾಗೂ ಪರಿಹಾರ
ಬೆರಳು ತುದಿಯಲ್ಲಿ ಉಗುರಿನ ಸಂದುಗಳಲ್ಲಿ ಚರ್ಮ ಸುಲಿಯಲು ಕಾರಣಗಳು ಮತ್ತು ಅದನ್ನು ತಡೆಯಲು ಕೆಲವು ವಿಧಾನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.

ಬೆರಳುಗಳ ಸುತ್ತ ಚರ್ಮ ಸುಲಿಯಲು ಕಾರಣಗಳು: ಬೆರಳು ತುದಿಯಲ್ಲಿ ಚರ್ಮ ಸುಲಿಯುವುದು ಅನೇಕರು ಅನುಭವಿಸುವ ಒಂದು ಸಮಸ್ಯೆಯಾಗಿದೆ. ಬೆರಳಿನ ಸೌಂದರ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ತೀವ್ರವಾದ ನೋವನ್ನು ಉಂಟುಮಾಡುತ್ತದೆ.
ಬೆರಳು ತುದಿಯಲ್ಲಿ ಚರ್ಮ ಸುಲಿಯುವುದರ ಹಿಂದಿನ ಕಾರಣಗಳು:
1. ಚಳಿಗಾಲ ಮತ್ತು ಒಣ ಹವೆ : ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಒಣಗಿ ಬಿರುಕು ಬಿಡುತ್ತದೆ. ಈ ಬದಲಾವಣೆ ಮೊದಲು ಕೈಗಳಲ್ಲಿ ಅನುಭವವಾಗುತ್ತದೆ.
3. ಪೋಷಕಾಂಶಗಳ ಕೊರತೆ: ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ, ಇ, ಸಿ ಮತ್ತು ಕಬ್ಬಿಣಾಂಶ ಸಿಗದೇ ಇದ್ದರೆ ಚರ್ಮ ದುರ್ಬಲಗೊಂಡು ಬಿರುಕು ಬಿಡುತ್ತದೆ. ವಿಶೇಷವಾಗಿ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು ಇಲ್ಲದಿದ್ದರೆ.
ಬೆರಳು ತುದಿಯ ಚರ್ಮ ಸುಲಿಯುವುದನ್ನು ತಡೆಯಲು ಸುಲಭ ಮಾರ್ಗಗಳು:
ಮಾಯಿಶ್ಚರೈಸರ್ : ಒಣ ಮತ್ತು ಸುಲಿಯುವ ಚರ್ಮವನ್ನು ಗುಣಪಡಿಸಲು ಸುಲಭವಾದ ಮಾರ್ಗವೆಂದರೆ ಅದನ್ನು ಚೆನ್ನಾಗಿ ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು. ತೆಂಗಿನ ಎಣ್ಣೆ, ಅಲೋವೆರಾ ಹಚ್ಚಿ.
ಆರೋಗ್ಯಕರ ಆಹಾರವನ್ನು ಸೇವಿಸಿ : ಹಣ್ಣುಗಳು, ತರಕಾರಿಗಳು, ಬೀಜಗಳು, ಮೊಸರು ಮುಂತಾದ ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ.