MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಮಳೆ ನೀರು ಕುಡಿದ್ರೆ ಏನಾಗುತ್ತೆ..? ಆಸ್ಪತ್ರೆ ಸೇರುತ್ತೀರಿ ಎಚ್ಚರ!

ಮಳೆ ನೀರು ಕುಡಿದ್ರೆ ಏನಾಗುತ್ತೆ..? ಆಸ್ಪತ್ರೆ ಸೇರುತ್ತೀರಿ ಎಚ್ಚರ!

ಮಳೆ ನೀರು ಶುದ್ಧವೆಂಬುದು ತಪ್ಪು ಕಲ್ಪನೆಯಾಗಿದ್ದು, ವಾತಾವರಣದ ಮಾಲಿನ್ಯದಿಂದ ಅದು ಕಲುಷಿತಗೊಂಡಿರುತ್ತದೆ. ತಜ್ಞರ ಪ್ರಕಾರ, ಈ ನೀರನ್ನು ಫಿಲ್ಟರ್ ಮಾಡದೆ ಅಥವಾ ಕುದಿಸದೆ ಕುಡಿಯುವುದರಿಂದ ಹೊಟ್ಟೆಯ ಸೋಂಕು, ಟೈಫಾಯಿಡ್, ಮತ್ತು ಕಾಲರಾದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

2 Min read
Author : Ganesh Mabla Gowda
Published : Jul 11 2026, 12:02 PM IST
Share this Photo Gallery
  • FB
  • TW
  • Linkdin
  • Whatsapp
15
ತಜ್ಞರಿಂದ ಎಚ್ಚರಿಕೆ
Image Credit : Meta AI

ತಜ್ಞರಿಂದ ಎಚ್ಚರಿಕೆ

ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು, ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮಳೆ ಹನಿಗಳನ್ನು ಬಾಯಿ ತೆರೆದು ಕುಡಿಯುವ ಸಂಭ್ರಮ ಎಲ್ಲರಿಗೂ ಇರುತ್ತದೆ. ಪ್ರಕೃತಿಯಿಂದ ನೇರವಾಗಿ ಬರುವ ಈ ನೀರು ಅತ್ಯಂತ ಶುದ್ಧ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಮಳೆ ನೀರು ಕುಡಿಯುವುದು ನಿಮ್ಮನ್ನು ನೇರವಾಗಿ ಆಸ್ಪತ್ರೆಯ ಬೆಡ್ ತಲುಪಿಸಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಸಲಿಗೆ ಮಳೆ ನೀರು ಕುಡಿಯುವುದು ಸುರಕ್ಷಿತವೇ?
Image Credit : pexels

ಅಸಲಿಗೆ ಮಳೆ ನೀರು ಕುಡಿಯುವುದು ಸುರಕ್ಷಿತವೇ?

ಈ ಬಗ್ಗೆ ವೈದ್ಯಕೀಯ ಲೋಕ ಏನು ಹೇಳುತ್ತದೆ? ಪ್ರಸಿದ್ಧ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಹಿರಿಯ ಸಮಾಲೋಚಕ ಡಾ.ಸಂಜಯ್ ವಿನಾಯಕ್ ಅವರ ಪ್ರಕಾರ, ಮಳೆ ನೀರು ನೈಸರ್ಗಿಕವಾಗಿದ್ದರೂ, ಅದು ಕುಡಿಯಲು ಯೋಗ್ಯವಾಗಿರುವುದಿಲ್ಲ. ವಾತಾವರಣದಲ್ಲಿರುವ ಮಾಲಿನ್ಯ, ಧೂಳು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಮಳೆ ಹನಿಗಳ ಜೊತೆ ಸೇರಿಕೊಳ್ಳುತ್ತವೆ. ಹೀಗಾಗಿ ಫಿಲ್ಟರ್ ಮಾಡದೆ ಅಥವಾ ಕುದಿಸದೆ ಮಳೆ ನೀರು ಕುಡಿಯುವುದು ಅಪಾಯಕಾರಿ. ಅದರಲ್ಲೂ ಮುಖ್ಯವಾಗಿ 'ಮೊದಲ ಮಳೆ'ಯ ನೀರನ್ನು ಮುಟ್ಟಲೇಬಾರದು.

Related Articles

Related image1
ಲಂಡನ್‌ನಲ್ಲಿ ಕೊಹ್ಲಿ ರಹಸ್ಯ ಭೇಟಿಯ ಫೋಟೋ ವೈರಲ್.. ಆಕ್ರೋಶ ಹೊರಹಾಕಿದ RCB ಸ್ಟಾರ್..!
Related image2
ಗುಡ್‌ನ್ಯೂಸ್.. ಬೆಂಗಳೂರಲ್ಲಿ ಮತ್ತೊಂದು 4.4 ಕಿ.ಮೀ ಸುರಂಗ ರಸ್ತೆ..!
35
3 ದೊಡ್ಡ ತಪ್ಪುಗಳು ಮಾಡಲೇಬೇಡ
Image Credit : pexels

3 ದೊಡ್ಡ ತಪ್ಪುಗಳು ಮಾಡಲೇಬೇಡ

ನೇರವಾಗಿ ಬಾಯಿ ತೆರೆದು ಕುಡಿಯುವುದು: ಆಕಾಶದ ಕಡೆ ಮುಖ ಮಾಡಿ ಮಳೆ ಹನಿಗಳನ್ನು ನೇರವಾಗಿ ಕುಡಿಯುವುದು ದೊಡ್ಡ ತಪ್ಪು. ಗಾಳಿಯಲ್ಲಿ ಬೆರೆತಿರುವ ಹೊಗೆ, ರಾಸಾಯನಿಕಗಳು ಮತ್ತು ವಿಷಕಾರಿ ಅಂಶಗಳು ನೀರಿನ ಮೂಲಕ ನೇರವಾಗಿ ನಿಮ್ಮ ದೇಹ ಸೇರುತ್ತವೆ.

ಆಲ್ಕಲೈನ್ ನೀರು ಎಂಬ ಭ್ರಮೆ: ಮಳೆ ನೀರು ಆಲ್ಕಲೈನ್ (Alkaline) ಗುಣ ಹೊಂದಿದೆ, ಇದು ರಕ್ತದ pH ಮಟ್ಟವನ್ನು ಸುಧಾರಿಸುತ್ತದೆ ಎಂದು ಇಂಟರ್ನೆಟ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿಯನ್ನು ನಂಬಬೇಡಿ. ವಿಜ್ಞಾನದ ಪ್ರಕಾರ, ಮಳೆ ನೀರು ಆಲ್ಕಲೈನ್ ಅಲ್ಲ, ಬದಲಾಗಿ ಅದು ಸ್ವಲ್ಪ ಮಟ್ಟಿಗೆ ಆಮ್ಲೀಯ (Acidic) ಸ್ವಭಾವವನ್ನು ಹೊಂದಿರುತ್ತದೆ.

ಕುದಿಸದೆ ಸಂಗ್ರಹಿಸಿ ಕುಡಿಯುವುದು: ಬಕೆಟ್ ಅಥವಾ ಪಾತ್ರೆಗಳಲ್ಲಿ ಮಳೆ ನೀರನ್ನು ಹಿಡಿದು ನೇರವಾಗಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಆಹ್ವಾನಿಸಿದಂತಾಗುತ್ತದೆ.

45
ಮೊದಲ ಮಳೆ ಯಾಕೆ ಅಪಾಯಕಾರಿ?
Image Credit : pexels

ಮೊದಲ ಮಳೆ ಯಾಕೆ ಅಪಾಯಕಾರಿ?

ಹಲವು ದಿನಗಳ ನಂತರ ಬೀಳುವ ಮೊದಲ ಮಳೆಯು ವಾತಾವರಣದಲ್ಲಿರುವ ವಿಷಕಾರಿ ಅನಿಲಗಳು, ಆಮ್ಲಗಳು ಮತ್ತು ಧೂಳನ್ನು ಸ್ವಚ್ಛಗೊಳಿಸುತ್ತದೆ. ಈ ಎಲ್ಲಾ ಕಲುಷಿತ ಅಂಶಗಳು ಮೊದಲ ಮಳೆಯ ನೀರಿನಲ್ಲಿ ಬೆರೆತಿರುತ್ತವೆ. ಆದ್ದರಿಂದ ಈ ನೀರು ಅತ್ಯಂತ ಹಾನಿಕಾರಕ.

ಏನೆಲ್ಲ ರೋಗ ಬರುತ್ತದೆ..?

  • ಹೊಟ್ಟೆಯ ಸೋಂಕು ಮತ್ತು ಅತಿಯಾದ ವಾಂತಿ
  • ತೀವ್ರ ಸ್ವರೂಪದ ಭೇದಿ (Diarrhea) ಮತ್ತು ಫುಡ್ ಪಾಯಿಸನಿಂಗ್
  • ಟೈಫಾಯಿಡ್ ಮತ್ತು ಕಾಲರಾದಂತಹ ನೀರಿನಿಂದ ಹರಡುವ ರೋಗಗಳು
  • ಹೆಪಟೈಟಿಸ್-A (ಕಾಮಾಲೆ) ಬರುವ ಅಪಾಯ
55
 ಮಳೆ ನೀರು ಹೇಗೆ ಬಳಸಬೇಕು?
Image Credit : pexels

ಮಳೆ ನೀರು ಹೇಗೆ ಬಳಸಬೇಕು?

  • ಮಳೆ ನೀರನ್ನು ಕನಿಷ್ಠ 20 ನಿಮಿಷ ಕುದಿಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸಾಯುತ್ತವೆ
  • ನೀರಿನಲ್ಲಿರುವ ಭಾರ ಲೋಹಗಳು ಮತ್ತು ರಾಸಾಯನಿಕಗಳನ್ನು ತೆಗೆದುಹಾಕಲು ಉತ್ತಮ ಫಿಲ್ಟರ್ ಬಳಸಿ
  • ಕುಡಿಯುವ ಬದಲು ಗಿಡಗಳಿಗೆ ನೀರುಣಿಸಲು, ಬಟ್ಟೆ ತೊಳೆಯಲು ಅಥವಾ ಸ್ನಾನ ಮಾಡಲು ಮಳೆ ನೀರನ್ನು ಬಳಸುವುದು ಉತ್ತಮ
  • ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಮಳೆಗಾಲದ ಮಜಾ ಸವಿಯಿರಿ, ಆದರೆ ನೀರು ಕುಡಿಯುವಾಗ ಎಚ್ಚರವಿರಲಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಆರೋಗ್ಯ
ಆರೋಗ್ಯ ಸಮಸ್ಯೆಗಳು
ನೀರು
ಮಳೆ
ಸುದ್ದಿ
ನ್ಯೂಸ್‌ ರೌಂಡ್‌ಅಪ್

Latest Videos
Recommended Stories
Recommended image1
ಬೆರಳಿನಿಂದ ಉಂಗುರ ತೆಗೆಯಲು ಆಗ್ತಿಲ್ವಾ? ಕತ್ತರಿಸಬೇಡಿ, ಹೀಗೆ ಮಾಡಿದರೆ ಸುಲಭವಾಗಿ ಬರುತ್ತೆ!
Recommended image2
ಬಿಪಿ ಕಂಟ್ರೋಲ್ ಮಾಡಲು ಅಜ್ಜಿಯ ಕಾಲದ ಸಲಹೆ
Recommended image3
ಕಂದಮ್ಮಗಳಿಗೆ ಮೊದಲ ಬಾರಿಗೆ ಘನ ಆಹಾರ ಕೊಡ್ತಿರುವಿರಾ? ವೈದ್ಯರ ಈ ಸಲಹೆ ಮೊದಲು ಕೇಳಿ
Related Stories
Recommended image1
ಲಂಡನ್‌ನಲ್ಲಿ ಕೊಹ್ಲಿ ರಹಸ್ಯ ಭೇಟಿಯ ಫೋಟೋ ವೈರಲ್.. ಆಕ್ರೋಶ ಹೊರಹಾಕಿದ RCB ಸ್ಟಾರ್..!
Recommended image2
ಗುಡ್‌ನ್ಯೂಸ್.. ಬೆಂಗಳೂರಲ್ಲಿ ಮತ್ತೊಂದು 4.4 ಕಿ.ಮೀ ಸುರಂಗ ರಸ್ತೆ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved