ನಮ್ಮ ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ದಿನೇ ದಿನೇ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅವುಗಳಲ್ಲಿ ಹೈ ಬಿಪಿ ಅಥವಾ ರಕ್ತದೊತ್ತಡದ ಸಮಸ್ಯೆಯೂ ಪ್ರಮುಖವಾದದ್ದು.
health-life Jul 10 2026
Author: Ashwini HR Image Credits:Getty
Kannada
ನೈಸರ್ಗಿಕವಾಗಿಯೇ ಕಂಟ್ರೋಲ್ ಮಾಡಬಹುದು
ನೈಸರ್ಗಿಕ ವಿಧಾನಗಳ ಮೂಲಕವೇ ರಕ್ತದೊತ್ತಡವನ್ನು ಅತಿ ಸುಲಭವಾಗಿ ನಿಯಂತ್ರಣಕ್ಕೆ ತರಬಹುದು. ಅದು ಹೇಗೆ ಎಂದು ವಿವರವಾಗಿ ತಿಳಿಯೋಣ.
Image credits: Getty
Kannada
ಶಕ್ತಿಶಾಲಿ ಕೊತ್ತಂಬರಿ ರಸ!
ಬಿಪಿ ನಿಯಂತ್ರಿಸುವಲ್ಲಿ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಅತ್ಯಂತ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಮತ್ತು ವಿಟಮಿನ್ ಕೆ ನಂತಹ ಪ್ರಮುಖ ಪೋಷಕಾಂಶಗಳು ಹೇರಳವಾಗಿವೆ.
Image credits: Getty
Kannada
ಆಂಟಿಆಕ್ಸಿಡೆಂಟ್‌ಗಳ ಆಗರ
ಕೊತ್ತಂಬರಿ ಸೊಪ್ಪು ದೇಹಕ್ಕೆ ಬೇಕಾದ ಯಥೇಚ್ಛವಾದ ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸಲು ನೆರವಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ.
Image credits: Getty
Kannada
ಹೊಟ್ಟೆಯ ಸಮಸ್ಯೆಗಳಿಗೆ ರಾಮಬಾಣ
ಕೊತ್ತಂಬರಿ ಸೊಪ್ಪು ಕೇವಲ ಬಿಪಿ ಮಾತ್ರವಲ್ಲದೆ, ನಮ್ಮ ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹ ಪ್ರಯೋಜನಕಾರಿ ಎಂದು ಕೆಲವು ಪ್ರಮುಖ ಆರೋಗ್ಯ ಅಧ್ಯಯನಗಳು ಕೂಡ ಸಾಬೀತುಪಡಿಸಿವೆ.
Image credits: Getty
Kannada
ಪ್ರತಿದಿನದ ಆಹಾರದಲ್ಲಿ ಬಳಸಿ
ಈ ಕೊತ್ತಂಬರಿ ಜ್ಯೂಸ್ ಅನ್ನು ನಿಮ್ಮ ಪ್ರತಿದಿನದ ಆಹಾರದ ಡಯಟ್‌ನಲ್ಲಿ ಸೇರಿಸಿಕೊಳ್ಳಿ. ಜ್ಯೂಸ್ ಕುಡಿಯಲು ಸಾಧ್ಯವಾಗದಿದ್ದರೆ, ದಿನನಿತ್ಯದ ಅಡುಗೆಯಲ್ಲಾದರೂ ಈ ಸೊಪ್ಪನ್ನು ಹೆಚ್ಚಾಗಿ ಬಳಸುವುದನ್ನು ರೂಢಿಸಿಕೊಳ್ಳಿ.
Image credits: Getty
Kannada
ವೈದ್ಯರ ಸಲಹೆ ಮುಖ್ಯ
ಇಲ್ಲಿ ನೀಡಲಾಗಿರುವ ಅಂಶಗಳು ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಿಮಗೇನಾದರೂ ಗಂಭೀರವಾದ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಬಿಪಿ ಹೆಚ್ಚಾಗಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.