ಹೆಚ್ಚು ಕಾಲ ಬದುಕಬೇಕಾ? ವ್ಯಾಯಾಮ ಮಾಡಿದ್ರೆ ಸಾಲದು, ಬೆಳಗಿನ ತಿಂಡಿ, ರಾತ್ರಿಯ ಊಟ ಹೀಗಿರಲಿ!
ಪ್ರತಿಯೊಬ್ಬರಿಗೂ ದೀರ್ಘಕಾಲ ಬದುಕಬೇಕು ಅನ್ನುವ ಆಸೆ ಇರುತ್ತೆ. ಅದಕ್ಕಾಗಿ ನಿತ್ಯ ವ್ಯಾಯಾಮ ಮಾಡುತ್ತಾರೆ. ಆದರೆ ಆರೋಗ್ಯವಾಗಿರಲು ವ್ಯಾಯಾಮ ಮಾಡಿದರೆ ಸಾಲದು, ಆಹಾರವೂ ಮುಖ್ಯ. ದೀರ್ಘಕಾಲ ಆರೋಗ್ಯದಿಂದ ಇರಲು ಊಟದ ವಿಧಾನ ಹೇಗಿರಬೇಕು? ಮುಂದೆ ಓದಿ.

ದೀರ್ಘಾವಧಿ ಆರೋಗ್ಯವಾಗಿರಲು ರಾತ್ರಿಯ ಊಟ ಹೀಗಿರಲಿ!
ಆರೋಗ್ಯಕರ ಜೀವನ ಎಷ್ಟು ಮುಖ್ಯ ಅಂತಾ ತಿಳಿಬೇಕೆಂದರೆ ಒಮ್ಮೆಯಾದರೂ ದೊಡ್ಡ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಹೇಳ್ತಾರೆ. ಆರೋಗ್ಯದ ಕುರಿತು ನಿರ್ಲಕ್ಷ್ಯದಿಂದ ವಿವಿಧ ರೋಗ ರುಜಿನಗಳಿಗೆ ತುತ್ತಾದ ರೋಗಿಗಳ ನರಳಾಟ ನೋಡಿದಾಗ ಪ್ರತಿಯೊಬ್ಬರಿಗೂ ಆರೋಗ್ಯದ ಮಹತ್ವ ಅರಿವಾಗುತ್ತದೆ.
ವ್ಯಾಯಾಮ ಮಾಡಿದ್ರೆ ಸಾಲದು, ರಾತ್ರಿಯ ಊಟ ಹೀಗಿರಲಿ
ಪ್ರತಿಯೊಬ್ಬರೂ ಇಂದು ಆರೋಗ್ಯವಾಗಿರಲು ದೀರ್ಘಕಾಲದವರೆಗೆ ಯಾವುದೇ ಕಾಯಿಲೆ ಬಾರದಂತೆ ಇರಲು ಇಷ್ಟಪಡ್ತಾರೆ. ಆರೋಗ್ಯವಾಗಿರಲು ಕೇವಲ ವ್ಯಾಯಾಮ ಮಾಡಿ ಕಟ್ಟುಮಸ್ತಾದ ದೇಹ ಬಳಸಿಬಿಟ್ಟರೆ ಸಾಲದು. ಆದರೆ ನೀವು ಪ್ರತಿ ದಿನ ಏನು ತಿನ್ನುತ್ತೀರಿ ಅನ್ನೋದರ ಮೇಲೆ ನಿಮ್ಮ ಆರೋಗ್ಯ ಹೇಗಿದೆ ಅನ್ನೋದು ತಿಳಿಯುತ್ತೆ.ಅದರಲ್ಲೂ ರಾತ್ರಿ ಊಟದ ಬಗ್ಗೆ ಹೆಚ್ಚು ಗಮನ ಹರಿಸೋದು ಮುಖ್ಯ. ರಾತ್ರಿ ಡಿನ್ನರ್ ಪಾರ್ಟಿ ಅಂತಾ ಹೊಟ್ಟೆ ಬಿರಿಯುವಂತೆ ತಿಂದು ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ರಾತ್ರಿ ವೇಳೆ ಸರಿಯಾದ ಆಹಾರ ಮುಖ್ಯ. ಏಕೆಂದ್ರೆ ನಮ್ಮ ದೇಹಕ್ಕೆ ವಿಶ್ರಾಂತಿಯ ಸಮಯವದು. ಹೀಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿದರೆ ರಾತ್ರಿಯ ನಿದ್ದೆಯು ಚೆನ್ನಾಗಿರುತ್ತೆ.
ಪಾಸ್ಟ್ ಫುಡ್ ಬೇಡವೇ ಬೇಡ
ಹಾಗಾದರೆ ರಾತ್ರಿಯ ಊಟದಲ್ಲಿ ಏನೇನಿರಬೇಕು?
ಹಸಿರು ತರಕಾರಿಗಳನ್ನು ತಿನ್ನಬೇಕು
ಊಟದ ತಟ್ಟೆಯಲ್ಲಿ ಹಸಿರು ತರಕಾರಿಗಳಿರಲಿ. ಪಾಲಕ್, ಸೋರೆಕಾಯಿ, ಬೆಂಡೆಕಾಯಿ, ಟೊಮೆಟೋ, ಬೀನ್ಸ್, ಎಲೆಕೋಸು ಮುಂತಾದ ಹಸಿರು ತರಕಾರಿಗಳಲ್ಲಿ ಯಾವುದಾದರೊಂದು ಊಟದಲ್ಲಿರಲಿ. ಯಾಕೆಂದರೆ ಇವು ಹೊಟ್ಟೆಗೆ, ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ ಜೀರ್ಣಿಸಿಕೊಳ್ಳಲು ಸುಲಭ. ಆದರೆ ಯಾವುದೇ ಕಾರಣಕ್ಕೂ ಎಣ್ಣೆ ಮಸಾಲೆ ಪದಾರ್ಥ ಸೇವನೆ ಬೇಡ.
ರೊಟ್ಟಿ ಬೇಳೆ: ರಾತ್ರಿ ಊಟಕ್ಕೆ ಬೆಸ್ಟ್
ಹಿಂದಿನ ಜನರು ಅನ್ನಕ್ಕಿಂತ ಹೆಚ್ಚಾಗಿ ರೊಟ್ಟಿ ಬೇಳೆ ತಿಂದು ಗಟ್ಟಿಯಾಗಿದ್ದರು. ಈಗ ಫಾಸ್ಟ್ ಫುಡ್ ಕಾಲ, ರೊಟ್ಟಿ ಬೇಳೆ ಎಲ್ಲ ಯಾರು ತಿಂತಾರೀ ಅದರಲ್ಲೇನಿದೆ ಟೆಸ್ಟ್ ಅನ್ನೋ ಜನ ಫಾಸ್ಟ್ ಫುಡ್ ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ರಾತ್ರಿ ಒಂದು ಬಟ್ಟಲು ಬೇಳೆ, ಎರಡು ರೊಟ್ಟಿ ತಿಂದ್ರೆ ಸಾಕು. ಬೇಳೆ ಯಾಕೆ ತಿನ್ನಬೇಕೆಂದ್ರೆ ದೇಹಕ್ಕೆ ಶಕ್ತಿ ತುಂಬಲು, ಹಸಿವು ತಡೆಯಲು ಬೇಕು. ಬೇಳೆ ಬೇಡಪ್ಪ ಅಂದ್ರೆ ನೀವು ಬೇಳೆ ಬದಲಿಗೆ ಪನೀರ್ ಅಥವಾ ಸೋಯಾಬೀನ್ ಅನ್ನು ಸಹ ತಿನ್ನಬಹುದು. ಆದರೆ ಯಾವುದೇ ಆದರೂ ಮಿತಿ ಇರಲಿ.
ರಾತ್ರಿ ಊಟದಲ್ಲಿ ಸಲಾಡ್ ತಿನ್ನೋದು ಮರಿಬೇಡಿ!
ಇನ್ನೊಂದು ರಾತ್ರಿ ಊಟದಲ್ಲಿ ಸ್ವಲ್ಪ ಸಲಾಡ್ ತಿನ್ನೋದು ಮರೆಯಬೇಡಿ, ಸೌತೆಕಾಯಿ, ಟೊಮೆಟೊ ಅಥವಾ ಗಜ್ಜರಿ, ಬೀಟ್ರೂಟ್ ಯಾವುದೇ ಆಗಿರಲಿ ಊಟದ ತಟ್ಟೆಯಲ್ಲಿ ಏನಾದರೊಂದು ಸೈಡ್‌ಗಿರಲಿ. ಸಲಾಡ್ ತಿನ್ನುವುದರಿಂದ ಹೊಟ್ಟೆ ಬೇಗನೇ ತುಂಬುತ್ತೆ. ಇದರಿಂದ ಅತಿಯಾಗಿ ತಿನ್ನುವುದು ಕಡಿಮೆ ಆಗುತ್ತೆ. ಊಟದಲ್ಲಿ ನಿಂಬೆರಸ ಹಾಕಿಕೊಂಡರೆ ಇನ್ನೂ ಉತ್ತಮ.
ಉತ್ತಮ ಆರೋಗ್ಯಕ್ಕೆ ಹಣ್ಣುಗಳು ತಿನ್ನಿ
ರಾತ್ರಿ ಲೈಟಾಗಿ ಊಟ ಮಾಡಿದ ನಂತರ ಸ್ವಲ್ಪ ಹಸಿವು ಎನಿಸಿದರೆ ನೀವು ಸೇಬು, ಪಪ್ಪಾಯಿ, ಪೇರಲ ಹಣ್ಣುಗಳನ್ನು ತಿನ್ನಬಹುದು. ಆದರೆ ಊಟದವಾದ ತಕ್ಷಣ ಯಾವುದೇ ಕಾರಣಕ್ಕೂ ಹಣ್ಣುಗಳನ್ನ ತಿನ್ನುವುದು ತಪ್ಪಿಸಿ, ಸ್ವಲ್ಪ ಸಮಯ ಬಿಟ್ಟು ತಿನ್ನುವುದು ಉತ್ತಮ.
ನೀವು ಲಘು ಭೋಜನ ಮಾಡಿ ಸ್ವಲ್ಪ ಸಮಯದ ನಂತರ ಹಸಿವಾದರೆ, ನೀವು ಸೇಬು, ಪಪ್ಪಾಯಿ ಅಥವಾ ಪೇರಲದಂತಹ ಹಣ್ಣನ್ನು ತಿನ್ನಬಹುದು. ಆದರೆ ಊಟದ ನಂತರ ತಕ್ಷಣ ಹೆಚ್ಚು ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಸ್ವಲ್ಪ ಸಮಯ ಕಾಯುವುದು ಉತ್ತಮ.
ಇವುಗಳಿಂದ ದೂರ ಇರಿ!
ರಾತ್ರಿವೇಳೆ ಹೆಚ್ಚು ಹುರಿದ ಆಹಾರ, ಫಾಸ್ಟ್ ಫುಡ್, ಸ್ವೀಟ್ಸ್, ಕೂಲ್‌ಡ್ರಿಂಕ್ಸ್ ಬೇಡವೇ ಬೇಡ.
ಊಟವಾದ ತಕ್ಷಣ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. 30 ನಿಮಿಷಗಳ ಕಾಲ ವಾಕ್ ಮಾಡಿ ನಂತರ ಮಲಗುವುದು ಒಳ್ಳೇದು.
ಆಹಾರದ ಜೊತೆ ನಿಮ್ಮ ಹ್ಯಾಬಿಟ್ ಕೂಡ ಬದಲಿಸಿ
ನೀವು ನಿಜವಾಗಿಯೂ ಹೆಚ್ಚು ಕಾಲ ಆರೋಗ್ಯಯುತವಾಗಿ ಬದುಕುವ ಆಸೆ ಇದ್ರೆ, ವ್ಯಾಯಾಮ, ರಾತ್ರಿ ಊಟ ಅಷ್ಟೇ ಅಲ್ಲ, ಊಟದ ನಂತರವೂ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಅವುಗಳೆಂದರೆ
- ಊಟ ತಪ್ಪಿಸದೆ ಸಮಯಕ್ಕೆ ಸರಿಯಾಗಿ ತಿನ್ನುವುದು.
- ಸಾಕಷ್ಟು ನೀರು ಕುಡಿಯಿರಿ.
- ಉತ್ತಮವಾಗಿ ನಿದ್ರಿಸಿ.
- ಪ್ರತಿದಿನ ವಾಕಿಂಗ್ ಮಾಡಿ.
- ವ್ಯಾಯಾಮ.
- ಊಟ ಹೆಚ್ಚು ಬೇಡ, ಕಡಿಮೆ ಬೇಡ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

