ಚರ್ಮ ರೋಗ ನಿವಾರಿಸಲು ಈ ಕಪ್ಪು ಬೀಜ ಬೆಸ್ಟ್ ಮದ್ದು, ಬಳಸೋದು ಹೇಗೆ?
ಎಸ್ಜಿಮಾ ಚರ್ಮದ ಕಾಯಿಲೆಯಾಗಿದ್ದು, ಇದು ಕಲೆ, ಕೆಂಪು ಗುರುತುಗಳು, ಊತ ಮತ್ತು ಒರಟು ಚರ್ಮವನ್ನು ಉಂಟುಮಾಡುತ್ತೆ. ಹಾಗೆಯೇ, ಸೋರಿಯಾಸಿಸ್ ಸಹ ನಮ್ಮ ದೇಹದಲ್ಲಿ ಉಂಟಾಗುವ ಚರ್ಮದ ಕಾಯಿಲೆ. ಈ ರೋಗದಲ್ಲಿ, ಚರ್ಮ ದಪ್ಪವಾಗುವುದು, ಬಿಳಿ ಮತ್ತು ಕೆಂಪು ಕಲೆಗಳು, ಚರ್ಮದಲ್ಲಿ ಊತದಂತಹ ರೋಗಲಕ್ಷಣಗಳು ಸಹ ಕಂಡು ಬರುತ್ತೆ. ಹಾಗಾದ್ರೆ ಈ ಸಮಸ್ಯೆಗೆ ನ್ಯಾಚುರಲ್ ರೆಮೆಡಿ ಏನೂ ಇಲ್ವಾ? ಖಂಡಿತಾ ಇದೆ. ಇಲ್ಲಿದೆ ನೋಡಿ ಈ ಬಗ್ಗೆ ಸಂಪೂರ್ಣ ಮಾಹಿತಿ.
ಎಸ್ಜಿಮಾ ಮತ್ತು ಸೋರಿಯಾಸಿಸ್(Psoriasisi) ಈ ಎರಡು ಚರ್ಮದ ಕಾಯಿಲೆಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದರೂ, ಎರಡರ ಮೂಲ ಕಾರಣವು ಒಂದೇ ಆಗಿದೆ ಮತ್ತು ಅದು ಕರುಳಿನ ಆರೋಗ್ಯ ಸರಿಯಾಗಿರದೇ ಇದ್ದರೆ, ಈ ಸಮಸ್ಯೆ ಕಾಡುತ್ತೆ. ಈ ಎರಡೂ ರೋಗಗಳು ತೀವ್ರವಾದ ನೋವು ಮತ್ತು ತುರಿಕೆಗೆ ಕಾರಣವಾಗಬಹುದು. ಕೆಲವು ಆಹಾರಗಳು ಈ ರೋಗಲಕ್ಷಣಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಎಸ್ಜಿಮಾ(eczema) ಮತ್ತು ಸೋರಿಯಾಸಿಸ್ ಎದುರಿಸಲು ಅನೇಕ ವೈದ್ಯಕೀಯ ಚಿಕಿತ್ಸೆಗಳು ಮತ್ತು ಔಷಧಿಗಳು ಲಭ್ಯವಿವೆ, ಆದರೆ ನೈಸರ್ಗಿಕ ಪರಿಹಾರಗಳ ಮೂಲಕ ನೀವು ಅವುಗಳ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು ಮತ್ತು ಅದರಿಂದ ಪರಿಹಾರ ಪಡೆಯಬಹುದು. ಹಾಗಾದ್ರೆ ಆ ನೈಸರ್ಗಿಕ ವಿಧಾನಗಳು ಯಾವುವು ನೋಡೋಣ.
ನಿಮಗೆ ಯಾವ ವಸ್ತುಗಳು ಬೇಕು
ನೀವು 2 ಚಮಚ ಸಬ್ಜಾ ಬೀಜ(Sabja Seed) ಅಥವಾ ತುಳಸಿ ಬೀಜಗಳನ್ನು ತೆಗೆದುಕೊಳ್ಳಬೇಕು ಮತ್ತು ಅವುಗಳನ್ನು ಪುಡಿ ಮಾಡಬೇಕು. 4 ಚಮಚ ಕಚ್ಚಾ ಅಥವಾ ತಣ್ಣಗಿನ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು, ಅದನ್ನು ಪುಡಿಗೆ ಸುರಿದು ಕಡಿಮೆ ಉರಿಯಲ್ಲಿ ಒಂದು ನಿಮಿಷ ಬಿಸಿ ಮಾಡಿ.
ಮಿಶ್ರಣವನ್ನು ತಣ್ಣಗಾಗಿಸಿ
ಈ ಮಿಶ್ರಣವನ್ನು ಹಗುರವಾದ ಉರಿಯಲ್ಲಿ ಬಿಸಿಮಾಡಿದ ನಂತರ, ಅದನ್ನು ತಣ್ಣಗಾಗಿಸಿ ಮತ್ತು ಸೋರಿಯಾಸಿಸ್ ಮತ್ತು ಎಸ್ಜಿಮಾದಿಂದ ಬಾಧಿತವಾದ ಚರ್ಮದ(Skin) ಪ್ರದೇಶಗಳಿಗೆ ಪ್ರತಿದಿನ 15 ನಿಮಿಷಗಳ ಕಾಲ ಹಚ್ಚಿ. ಇದರಿಂದ ಸಮಸ್ಯೆ ನಿವಾರಣೆಯಾಗುತ್ತೆ.
ಆಲೂಗಡ್ಡೆ ರಸ (Potato juice) ಬಳಸಿ
ನಿಮ್ಮ ದೇಹವನ್ನು ಚೆನ್ನಾಗಿ ಕ್ಲೀನ್ ಮಾಡಿದ ನಂತರ, ಹಸಿ ಆಲೂಗಡ್ಡೆ ರಸವನ್ನು ಆ ಜಾಗಕ್ಕೆ ಹಚ್ಚಿ ಮತ್ತು ಸುಮಾರು ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ. ಇದು ತೆಳುವಾದ ಪದರವಾಗುತ್ತೆ, ನಂತರ ನೀವು ಅದನ್ನು ಸಾದಾ ನೀರಿನಿಂದ ನಿಧಾನವಾಗಿ ತೊಳೆಯಬಹುದು.
ಎರಡು ವಾರಗಳ ಕಾಲ ಪ್ರಯತ್ನಿಸಿ
ಎಸ್ಜಿಮಾ ಮತ್ತು ಸೋರಿಯಾಸಿಸ್‌ಗೆ ಪರಿಣಾಮಕಾರಿ ಪರಿಹಾರವಾಗಿ ನೀವು ಈ ಪರಿಹಾರವನ್ನು ಕನಿಷ್ಠ 2 ವಾರಗಳವರೆಗೆ ಪ್ರಯತ್ನಿಸಬಹುದು. ತುರಿಕೆ (Itching) ಮತ್ತು ಕಿರಿಕಿರಿಗೆ ಕಾರಣವಾಗುವ ಇತರೆ ಚರ್ಮದ ಸಮಸ್ಯೆಗಳಿಗೂ ಇದನ್ನು ಬಳಸಬಹುದು.
ಚರ್ಮದ ಕಾಯಿಲೆಗೆ ಸಬ್ಜಾ ಬೀಜ ಹೇಗೆ ಸಹಾಯ ಮಾಡುತ್ತೆ?
ತುಳಸಿ ಬೀಜಗಳ ಪ್ರಯೋಜನಗಳು ಎಸ್ಜಿಮಾ ಮತ್ತು ಸೋರಿಯಾಸಿಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಅವು ದೇಹದ ಶಾಖವನ್ನು (Heat) ಕಡಿಮೆ ಮಾಡಲು ಸಹಾಯ ಮಾಡುತ್ತವೆ. ದೇಹದ ಉಷ್ಣತೆಯನ್ನು ನಿವಾರಿಸಿ, ದೇಹವನ್ನು ಕೂಲ್ ಮಾಡುತ್ತೆ.
ತಂಪಿನ ಬೀಜಗಳನ್ನು ನಿಯಮಿತವಾಗಿ ತಿನ್ನೋದರಿಂದ ಹೊಸ ಚರ್ಮ ಮತ್ತು ಜೀವಕೋಶಗಳನ್ನು ರಚಿಸಲು ಅಗತ್ಯವಿರುವ ಕಾಲಜನ್ ಎಂಬ ಸಂಯುಕ್ತವನ್ನು ಪಡೆಯಲು ಸಹಾಯ ಮಾಡುತ್ತೆ. ಪ್ರೋಟೀನ್ (Protein), ವಿಟಮಿನ್ ಕೆ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವ ತುಳಸಿ ಬೀಜ ಕೂದಲಿನ ಉತ್ತಮ ಗುಣಮಟ್ಟವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತೆ.