ಯಂಗ್ ಆಗಿ ಕಾಣಬೇಕಾ? ಬೆಳಗ್ಗೆ 8 ಗಂಟೆಯ ಮೊದಲು ಈ ಕೆಲಸ ಮಾಡಿ!
ನಿಮ್ಮ ಮುಖವು ಫ್ರೆಶಾಗಿದ್ದರೆ ಮತ್ತು ನೀವು ಎಜರ್ಜಿಟಿಕ್ ಆಗಿದ್ರೆ, ನಿಮ್ಮ ದಿನವು ಖಂಡಿತವಾಗಿಯೂ ತುಂಬಾ ಚೆನ್ನಾಗಿರುತ್ತೆ ಅಲ್ವಾ? ಆದರೆ ಪ್ರತಿಯೊಬ್ಬರ ಸಮಸ್ಯೆಯೆಂದರೆ ಸಮಯ ಕಡಿಮೆ ಮತ್ತು ಕೆಲಸ ಹೆಚ್ಚು, ಹಾಗಾಗಿ ತಮ್ಮ ಸ್ಕಿನ್ ಕಡೆಗೆ ಗಮನ ಹರಿಸಲು ಅವರಿಗೆ ಸಾಧ್ಯವಾಗೋದಿಲ್ಲ. ಹಾಗಾಗಿ, ಚರ್ಮದ ಬಗ್ಗೆ ಕಾಳಜಿ ವಹಿಸಲು ಏನು ಮಾಡಬೇಕು, ಹೇಗೆ ಇಟ್ಟುಕೊಳ್ಳೋದು ಎಂದು ಎಲ್ಲರ ಪ್ರಶ್ನೆ. ಆದಕ್ಕಾಗಿ ಕೆಲವು ಸುಲಭ ಸಲಹೆಗಳನ್ನು ಹೇಳಲಿದ್ದೇವೆ, ಅದನ್ನು ನೀವು ಅನುಸರಿಸಬಹುದು ಮತ್ತು ಕೆಲವೇ ವಸ್ತುಗಳೊಂದಿಗೆ ಹೆಚ್ಚು ಸಮಯ ತೆಗೆದುಕೊಳ್ಳದೆ ನಿಮ್ಮ ಮುಖದ ಬಗ್ಗೆ ವಿಶೇಷ ಕಾಳಜಿ ವಹಿಸಬಹುದು.
ನಿಮ್ಮ ತ್ವಚೆಯ(Skin) ಬಗ್ಗೆ ಕಾಳಜಿ ವಹಿಸಬೇಕು ಅಂದ್ರೆ ನೀವು ಬೆಳಿಗ್ಗೆ ಬೇಗನೆ ಏಳಬೇಕು ಮತ್ತು ಈ ಕೆಲಸಗಳನ್ನು ಅಂದ್ರೆ ಇಲ್ಲಿ ತಿಳಿಸಿರೋ ಕೆಲಸಗಳನ್ನು 8 ಗಂಟೆ ಮೊದಲು ಮಾಡಬೇಕು. ಹೀಗೆ ಮಾಡಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಮುಖ ಹೊಳೆಯೋದನ್ನು ನೀವು ನೋಡುತ್ತೀರಿ.
ಚರ್ಮಕ್ಕೆ ಹೊಳಪನ್ನು ತರಲು ತುಂಬಾ ಸುಲಭ ಟಿಪ್ಸ್
ಮುಖ ತೊಳೆಯಿರಿ (Face wash)
ಮುಖವು ಹೊಳೆಯುವಂತೆ ಮಾಡಲು, ಮೊದಲಿಗೆ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸೋದು ಬಹಳ ಮುಖ್ಯ. ಸೌಮ್ಯವಾದ ಫೇಸ್ ವಾಶ್ ನಿಂದ ಮುಖವನ್ನು ತೊಳೆಯುವ ಮೂಲಕ ದಿನವನ್ನು ಪ್ರಾರಂಭಿಸಿ. ಇದು ಮುಖಕ್ಕೆ ತಾಜಾತನ ನೀಡುತ್ತೆ.
ಫೇಸ್ ವಾಶ್ ಬಳಸುವಾಗ, ಅದು ನಿಮ್ಮ ಚರ್ಮಕ್ಕೆ ಸರಿ ಹೊಂದಬೇಕು ಎಂಬುದನ್ನು ನೆನಪಿನಲ್ಲಿಡಿ ಮತ್ತು ಸಾಧ್ಯವಾದರೆ, ಜೆಲ್(Gel) ಅಥವಾ ಫೋಮ್ ಆಧಾರಿತ ಫೇಸ್ ವಾಶ್ ಬಳಸಿ. ಬಾಯಿಯನ್ನು ಸರಿಯಾಗಿ ತೊಳೆಯಿರಿ, ಇದರಿಂದ ಮುಖವು ಹೆಚ್ಚಿನ ಪ್ರಮಾಣದಲ್ಲಿ ತಾಜಾವಾಗಿ ಕಾಣಲು ಪ್ರಾರಂಭಿಸುತ್ತೆ.
ರೋಸ್ ವಾಟರ್(Rose water) ಚರ್ಮವನ್ನು ಹೊಳೆಯುವಂತೆ ಮಾಡುತ್ತೆ
ರೋಸ್ ವಾಟರ್ ಚರ್ಮಕ್ಕೆ ಉತ್ತಮ ಪರಿಹಾರ. ಇದನ್ನು ನೀವು ಬಳಸೋದರಿಂದ ನಿಮ್ಮ ಚರ್ಮಕ್ಕೆ ಹೊಳಪನ್ನು ತರಬಹುದು. ಚರ್ಮದ ಹೊಳಪಿಗಾಗಿ ರೋಸ್ ವಾಟರ್ ಬಳಸೋದು ಇಂದು ನಿನ್ನೆಯದಲ್ಲ, ಇದನ್ನು ಅನಾದಿ ಕಾಲದಿಂದಲೂ ಬಳಕೆ ಮಾಡಲಾಗುತ್ತೆ.
ಸುಂದರ, ಸಾಫ್ಟ್ ತ್ವಚೆಗಾಗಿ (Soft skin)ನೀವು ಮಾಡಬೇಕಾಗಿರೋದು ಇಷ್ಟೇ. ಮುಖ ತೊಳೆದ ನಂತರ, ನಿಮ್ಮ ಚರ್ಮದ ಮೇಲೆ, ಹತ್ತಿಯ ಉಂಡೆಯ ಮೂಲಕ ರೋಸ್ ವಾಟರ್ ಅನ್ನು ತೆಗೆದುಕೊಂಡು ನೀವು ಅದನ್ನು ಚೆನ್ನಾಗಿ ಮುಖಕ್ಕೆ ಹಚ್ಚ ಬಹುದು. ಇದು ತ್ವಚೆಯನ್ನು ಪೂರ್ತಿಯಾಗಿ ಮಾಯಿಸ್ಚರೈಸ್ ಮಾಡುತ್ತೆ.
ಮುಖವನ್ನು ಮುಚ್ಚಿಕೊಳ್ಳಿ
ನೀವು ಎಲ್ಲಿಗಾದರೂ ಹೋಗುತ್ತಿದ್ದರೆ, ನಿಮ್ಮ ಮುಖವನ್ನು ರಕ್ಷಿಸಿಕೊಳ್ಳಿ. ಯಾವುದೇ ಬಟ್ಟೆ ಅಥವಾ ದುಪಟ್ಟಾವನ್ನು(Duppatta) ನಿಮ್ಮೊಂದಿಗೆ ಕೊಂಡೊಯ್ಯಿರಿ. ಇದು ನಿಮ್ಮ ಮುಖದ ಮೇಲೆ ಅನಗತ್ಯ ಧೂಳಿನ ವಸ್ತು ಕೂರದ ಹಾಗೆ ನೋಡಿಕೊಳ್ಳುತ್ತೆ ಮತ್ತು ಮುಖವನ್ನು ರಕ್ಷಿಸಲು ಸಾಧ್ಯವಾಗುತ್ತೆ.
ಮಾಯಿಶ್ಚರೈಸರ್(Moisturizer) ಬಳಸಿ
ಸಾಬೂನನ್ನು ಬಳಸೋದರಿಂದ ನಿಮ್ಮ ಚರ್ಮ ಒಣಗಬಹುದು. ಇದನ್ನು ತಪ್ಪಿಸಲು, ನೀವು ಮಾಯಿಶ್ಚರೈಸರ್ ಬಳಸಬೇಕು. ಮಾಯಿಸ್ಚರೈಸರ್ ಮುಖಕ್ಕೆ ಹೆಚ್ಚು ಸಾಫ್ಟ್ ನೆಸ್ ನೀಡುತ್ತೆ. ಇದರಿಂದ ನಿಮ್ಮ ಮುಖ ತಾಜಾತನದಿಂದ ಕೂಡಿರಲು ಸಹಾಯ ಮಾಡುತ್ತೆ.
ಮಾಯಿಶ್ಚರೈಸರ್ ಹಚ್ಚೋದ್ರಿಂದ ಚರ್ಮವು ಸಾಫ್ಟ್(Soft) ಆಗಿ, ಹೊಳೆಯುತ್ತೆ .ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತಹ ಮಾಯಿಸ್ಚರೈಸರ್ ಬಳಕೆ ಮಾಡಿ. ಇಲ್ಲವಾದರೆ ಇದರಿಂದ ನಿಮ್ಮ ಚರ್ಮದ ಮೇಲೆ ಹಾನಿಯುಂಟಾಗಬಹುದು, ಎಚ್ಚರವಾಗಿರಿ.