Asianet Suvarna News Asianet Suvarna News

Managing Psoriasis: ಸೋರಿಯಾಸಿಸ್‌ ನಿಭಾಯಿಸುವುದು ಹೇಗೆ?

ಚಳಿಗಾಲದಲ್ಲಿ ಹೆಚ್ಚುವ ಸೋರಿಯಾಸಿಸ್‌ನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬಯೋಲಾಜಿಕ್ಸ್‌ನಂಥ ಪರಿಣಾಮಕಾರಿಯಾದ ಅತ್ಯಾಧುನಿಕ ಚಿಕಿತ್ಸೆಗಳು ಮತ್ತು ಜೀವನಶೈಲಿ ಬದಲಾವಣೆ ಸಹಾಯಕ್ಕೆ ಬರುತ್ತವೆ. 

How to manage Psoriasis during winter
Author
Bangalore, First Published Dec 8, 2021, 3:23 PM IST

ಭಾರತದಲ್ಲಿ ಸುಮಾರು  25 ದಶಲಕ್ಷ ರೋಗಿಗಳು ಸೋರಿಯಾಸಿಸ್‍ನಿಂದ ಬಳಲುತ್ತಿದ್ದಾರೆ. ಈ ದೀರ್ಘಾವಧಿ ಆಟೋಇಮ್ಯೂನ್ ಕಾಯಿಲೆಯು ಚರ್ಮದ ಉರಿತ, ಪದರ ಏಳುವಿಕೆ ಮತ್ತು ದೇಹದ ಕಾಣುವಂಥ ಭಾಗದಲ್ಲಿ ಕೆಂಪಾಗುವಿಕೆ ಉಂಟು ಮಾಡುತ್ತದೆ. 

ಚಳಿಗಾಲದಲ್ಲಿ ಸೋರಿಯಾಸಿಸ್‌(Psoriasis)ನಂಥ ಚರ್ಮ ಸಮಸ್ಯೆ ಹೆಚ್ಚುತ್ತದೆ. ಮೊದಲೇ ಚರ್ಮ ಸಮಸ್ಯೆಯಿಂದ ಕಂಗಾಲಾಗಿರುವ ಸೋರಿಯಾಸಿಸ್ ರೋಗಿಗಳನ್ನು ಮತ್ತಷ್ಟು ಕಂಗಾಲಾಗಿಸುವುದು ಜನರ ತಿರಸ್ಕಾರ ಭಾವ. ಜಾಗತಿಕ ಕ್ಲಿಯರ್ ಅಬೌಟ್ ಸೋರಿಯಾಸಿಸ್ ಸಮೀಕ್ಷೆಯ ಪ್ರಕಾರ, ಸೋರಿಯಾಸಿಸ್ ಸಮಸ್ಯೆ ಇರುವ ಭಾರತೀಯರಲ್ಲಿ ಶೇ. 66ರಷ್ಟು ಭಾರತೀಯರು ತಾರತಮ್ಯ ಮತ್ತು ಅವಮಾನ ಎದುರಿಸಿದ್ದಾರೆ. ಅದರಲ್ಲೂ ತಮ್ಮ ಕೈಗಳನ್ನು ಕುಲುಕಲು ನಿರಾಕರಿಸಲ್ಪಟ್ಟ ಅನುಭವಗಳನ್ನು ಎದುರಿಸಿದುದಾಗಿ ಶೇ. 26ರಷ್ಟು ಮಂದಿ ತಿಳಿಸಿದ್ದಾರೆ. ಸಂಗಾತಿಗೆ ಸೋರಿಯಾಸಿಸ್ ಇದೆ ಎಂದು ತಿಳಿದು ಡೈವೋರ್ಸ್(Divorce) ನೀಡಿದ ಪ್ರಕರಣಗಳೂ ಹಲವಿವೆ. ಇದಕ್ಕೆ ಕಾರಣ ಸೋರಿಯಾಸಿಸ್ ಒಂದು ಪ್ರಸರಣ ರೋಗವೆಂಬ ತಪ್ಪು ಕಲ್ಪನೆ. ಇದರಿಂದಾಗಿ ಜನರು ಸೋರಿಯಾಸಿಸ್ ರೋಗಿಗಳನ್ನು ಅಸ್ಪರ್ಶ್ಯರ ಹಾಗೆ ನೋಡುತ್ತಾರೆ. ಇದರಿಂದ ರೋಗಿಗಳಲ್ಲಿ ತಮ್ಮ ಬಗ್ಗೆ ಕೀಳರಿಮೆ, ಹತಾಶೆ, ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಹೆಚ್ಚುತ್ತವೆ. ಆದರೆ, ರೋಗಿ ಹಾಗೂ ಜೊತೆಗಿರುವ ಆಪ್ತರು ಮನಸ್ಸು ಮಾಡಿದರೆ ಸೋರಿಯಾಸಿಸ್ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಹುದು. 

ಏನು ಚಿಕಿತ್ಸೆ(treatment)?
ಎಲ್ಲಕ್ಕಿಂತ ದೊಡ್ಡ ಚಿಕಿತ್ಸೆ ಎಂದರೆ ಹತ್ತಿರದವರಿಂದ ನಾವಿದ್ದೇವೆ ಜೊತೆಯಲ್ಲಿ ಎನ್ನುವ ಭರವಸೆ. ಅವರು ರೋಗವನ್ನು ಮುಚ್ಚಿಡಲು ಪ್ರೋತ್ಸಾಹಿಸುವ ಬದಲು, ತಮ್ಮನ್ನು ಇರುವಂತೆಯೇ ಒಪ್ಪಿಕೊಂಡು ಸಾಮಾಜಿಕ ಕೂಟಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು.

Kidney Problem: ಕಿಡ್ನಿ ಸಮಸ್ಯೆ ಇರೋರಿಗೆ ಬಿಸಿ ನೀಲು ಬೆಸ್ಟ್ ಮನೆ ಮದ್ದು

ಬೆಂಗಳೂರಿನ ಸೈಂಟ್ ಜಾನ್ಸ್ ಹಾಸ್ಪಿಟಲ್‍ನ ಮಾಜಿ ಪ್ರೊಫೆಸರ್, ಮುಖ್ಯಸ್ಥ ಮತ್ತು ಅಬ್ರಹಾಮ್ಸ್ ಸ್ಕಿನ್ ಅಂಡ್ ಹೇರ್ ಕ್ಲಿನಿಕ್‍ನ ಸಮಾಲೋಚಕ ಚರ್ಮರೋಗ ತಜ್ಞರಾದ  ಡಾ. ಅನಿಲ್ ಅಬ್ರಹಾಮ್ ಈ ಬಗ್ಗೆ,  'ಚಳಿಗಾಲದಲ್ಲಿ ಸಮಾಲೋಚನೆ ಮತ್ತು ಬೆಂಬಲ ಕೋರಿ ಬಂದ ಜನರ ಸಂಖ್ಯೆಯಲ್ಲಿ ಶೇ. 30-40 ಏರಿಕೆ ಕಂಡಿದೆ. ಈ  ಸಮಯದಲ್ಲಿ ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರಿಂದ ಬರುವ ವ್ಯತಿರಿಕ್ತ ಟೀಕೆಗಳು ಚಿಂತೆಗೆ ಇನ್ನಷ್ಟು ಕಾರಣವಾಗುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ ಪ್ರೀತಿಪಾತ್ರರಿಗೆ ಬೆಂಬಲ ಒದಗಿಸುವುದು ಅತಿ ಮುಖ್ಯವಾಗಿದೆ. ಅವರು ಸಮಸ್ಯೆ ಎದುರಿಸಲು ಬೇಕಾದ ಧೈರ್ಯ ತುಂಬಬೇಕು. ಮಾನಸಿಕ ಒತ್ತಡ(stress), ನೋವು ಕಡಿಮೆಯಾದರೆ ಸೋರಿಯಾಸಿಸ್ ಸಮಸ್ಯೆ ಅರ್ಧಕ್ಕರ್ಧ ಕಡಿಮೆಯಾದಂತೆಯೇ' ಎಂದಿದ್ದಾರೆ.

Skin Care: ಚಳಿಗಾಲದಲ್ಲಿ ಒಣ ಚರ್ಮದ ಕಿರಿಕಿರಿ ತಪ್ಪಿಸಲು ಇಲ್ಲಿವೆ ಟಿಪ್ಸ್

ಅಷ್ಟೇ ಅಲ್ಲದೆ, ಸೋರಿಯಾಸಿಸ್‌ಗಿರುವ ವೈದ್ಯಕೀಯ ಚಿಕಿತ್ಸೆ ಬಗ್ಗೆ ಕೂಡಾ ಅವರು ಮಾತನಾಡಿದ್ದಾರೆ. 'ಬಯಾಲಾಜಿಕ್ಸ್‌ನಂಥ ಆಧುನಿಕ ಚಿಕಿತ್ಸಾ ವಿಧಾನಗಳು ಸುರಕ್ಷಿತವಾಗಿವೆ ಮತ್ತು ಪರಿಣಾಮಕಾರಿಯಾಗಿವೆ. ಇವು ದೀರ್ಘಕಾಲಿಕವಾಗಿ ರೋಗಿಗಳು ಸೋರಿಯಾಸಿಸ್ ನಿಭಾಯಿಸಿಕೊಂಡು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವುದಕ್ಕೆ ನೆರವಾಗುತ್ತವೆ' ಎಂದಿದ್ದಾರೆ. 

ಏನಿದು ಬಯೋಲಾಜಿಕ್ಸ್(Biologics)?
ರೋಗಲಕ್ಷಣಗಳು ಹಾಗೂ ಗಂಭೀರತೆಯ ಆಧಾರದ ಮೇಲೆ, ಚರ್ಮರೋಗ ತಜ್ಞರು ಬಯೋಲಾಜಿಕ್ಸ್‌ನಂಥ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಶಿಫಾರಸು ಮಾಡುತ್ತಾರೆ. ಈ ಚಿಕಿತ್ಸೆಯಿಂದ ರೋಗ ನಿರೋಧಕ ವ್ಯವಸ್ಥೆಯ ಟಿ ಕೋಶ(T cells)ಗಳ ಕೆಲಸವನ್ನು ತಡೆ ಹಿಡಿಯಬಹುದಾಗಿದೆ. ಇಲ್ಲದಿದ್ದಲ್ಲಿ ಟಿಎನ್‍‌ಎಫ್ ಆಲ್ಫಾ(TNF alpha), ಇಂಟರ್‌ಲ್ಯುಕಿನ್ಸ್ 17ಎ, 12, 23ಯಂಥ ಸೋರಿಯಾಸಿಸ್‌ಗೆ ಕಾರಣವಾಗುವ ಪ್ರೋಟೀನ್‌(protien)ಗಳ ಉತ್ಪತ್ತಿಯನ್ನು ಬಯೋಲಾಜಿಕ್ಸ್ ತಡೆಯುತ್ತದೆ. 

ಜೀವನಶೈಲಿ(lifestyle)
ಈ ಚಿಕಿತ್ಸೆ, ಅನುಕಂಪದ ಜೊತೆಗೆ ಜೀವನಶೈಲಿ ಬದಲಾವಣೆ ಕೂಡಾ ಅತ್ಯಗತ್ಯ. ಸಿಗರೇಟು  ಹಾಗೂ ಮದ್ಯ ಸೇವನೆಯಿಂದ ದೂರ ಇರುವುದು, ಎತ್ತರಕ್ಕೆ ತಕ್ಕನಾದ ತೂಕವನ್ನು ನಿಭಾಯಿಸುವುದು, ಹಣ್ಣು, ತರಕಾರಿ ಹೆಚ್ಚಿರುವ ಉತ್ತಮ ಆಹಾರ ಸೇವನೆ, ವ್ಯಾಯಾಮ, ಸಂಬಂಧಿಸಿದ ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಸೋರಿಯಾಸಿಸ್ ನಿಭಾಯಿಸಬಹುದಾಗಿದೆ. 

Follow Us:
Download App:
  • android
  • ios