Asianet Suvarna News Asianet Suvarna News

ಹಾಸಿಗೆಗೆ ಹೋಗ್ತಿದ್ದಂತೆ ಮೈ ತುರಿಸುತ್ತಾ? ಟೆನ್ಷನ್ ಬೇಡ ಮನೆ ಮದ್ದಿದೆ

ದಿನ ರಾತ್ರಿ ನಿದ್ರೆ ಇಲ್ಲ. ಹಾಸಿಗೆಯಲ್ಲಿ ಏನಿದ್ಯೋ, ಮೈ ಪರ ಪರ ತುರಿಸುತ್ತೆ ಅಂತಾ ಕೆಲವರು ಹೇಳ್ತಿರುತ್ತಾರೆ. ಅದು ಹಾಸಿಗೆ ಪ್ರಾಬ್ಲಂ ಅಲ್ಲ. ನಿಮ್ಮ ದೇಹದ ಸಮಸ್ಯೆ. ಅದಕ್ಕೆ ಮನೆಯಲ್ಲೇ ಸಾಕಷ್ಟು ಮದ್ದಿದೆ.

Itching when on bed home remedies to overcome it
Author
Bangalore, First Published Aug 18, 2022, 1:10 PM IST

ರಾತ್ರಿ ಮಲಗುವ ಸಮಯದಲ್ಲಿ ದೇಹದ ಕೆಲ ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅನೇಕರಿಗೆ ಈ ಸಮಸ್ಯೆ ಸಾಮಾನ್ಯ. ನಿತ್ಯ ಸ್ನಾನ ಮಾಡದೆ ಇರುವುದು, ಸರಿಯಾಗಿ ಸ್ನಾನ ಮಾಡದಿರುವುದು,ಅಲರ್ಜಿ, ಧೂಳು ಅಥವಾ ಮಣ್ಣಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು, ಅತಿಯಾದ ಬೆವರು  ಮತ್ತು ದೇಹದ ಶುಚಿತ್ವದ ಬಗ್ಗೆ ಸಾಕಷ್ಟು ಗಮನ ನೀಡದಿರುವುದು ಹಾಗೂ ದೇಹದಲ್ಲಿ ನೀರಿನ ಅಂಶ ಕಡಿಮೆಯಾದ್ರೆ ತುರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬರೀ ಇವುಗಳಿಗೆ ಮಾತ್ರವಲ್ಲ ತುರಿಕೆ ಕೆಲ ಅನಾರೋಗ್ಯ ಲಕ್ಷಣವೂ ಹೌದು. ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರಿಂದ ಸರಿಯಾದ ಚಿಕಿತ್ಸೆ ಪಡೆಯಬೇಕು. ಆದರೆ ಅಲರ್ಜಿ ಅಥವಾ ದೇಹದ ಕೊಳಕು  ತುರಿಕೆಗೆ ಕಾರಣವೆಂದರೆ  ಕೆಲವು ಮನೆಮದ್ದುಗಳ ಸಹಾಯದಿಂದ ಅದನ್ನು ಸುಲಭವಾಗಿ ಕಡಿಮೆ ಮಾಡಬಹುದು. ನೀವೂ ರಾತ್ರಿ ತುರಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಯಾವ ಮನೆ ಮದ್ದು ಬೆಸ್ಟ್ ಎಂಬುದನ್ನು ನಾವು ಹೇಳ್ತೇವೆ.

ರಾತ್ರಿ (Night ) ಕಾಡುವ ತುರಿಕೆಗೆ ಇಲ್ಲಿದೆ ಮನೆ ಮದ್ದು (Home Remedy) :

1. ಮಲಗುವ ಮುನ್ನ ಸ್ನಾನ (Bath) ಮಾಡಿ : ಮಲಗುವ ಮುನ್ನ ದೇಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಪ್ರಯತ್ನಿಸಿ. ಇದರಿಂದ ಧೂಳು (dust) ಮತ್ತು ಕೊಳಕು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ (Bacteria)  ಹೊರ ಹೋಗುತ್ತದೆ. ಬಿಸಿ ನೀರಿನ ಸ್ನಾನ ಮಾಡುವುದು ಅತ್ಯಂತ ಪರಿಣಾಮಕಾರಿ. ಬೆಚ್ಚಗಿನ ನೀರಿನಲ್ಲಿ ಡೆಟಾಲ್ ಸೇರಿಸಿ ಸ್ನಾನ ಮಾಡಬಹುದು. ಮಲಗುವ ಮುನ್ನ ಸ್ನಾನ ಮಾಡುವ ವೇಳೆ ರಾಸಾಯನಿಕ ಮುಕ್ತ ಮತ್ತು ವಾಸನೆಯಿಲ್ಲದ ಸೋಪ್ (Soap) ಬಳಸಿ. ಸ್ನಾನದ ನಂತರ ದೇಹದಲ್ಲಿ ನೀರಿಲ್ಲದಂತೆ ಶುದ್ಧ ಟವೆಲ್ ನಿಂದ ಒರೆಸಿಕೊಳ್ಳಿ.

2. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ : ತೆಂಗಿನ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕುಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ ನೈಸರ್ಗಿಕವಾಗಿ ಚರ್ಮವನ್ನು ತೇವಗೊಳಿಸುತ್ತದೆ. ಸ್ನಾನದ ನಂತರ ತೆಂಗಿನ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಲು ಪ್ರಯತ್ನಿಸಿ.

ಸೈಲೆಂಟ್ ಕಿಲ್ಲರ್ ಅಧಿಕ ಬಿಪಿಯ ಲಕ್ಷಣ ಕಣ್ಣಿನಲ್ಲೂ ಕಾಣಿಸ್ಕೊಳ್ಳುತ್ತೆ

3. ಮಾಯಿಶ್ಚರೈಸರ್ ಅನ್ವಯಿಸಿ : ಹಲವು ಬಾರಿ ದೇಹದಲ್ಲಿ ತುರಿಕೆಯ ಸಮಸ್ಯೆ  ಒಣ ತ್ವಚೆಯಿಂದ ಉಂಟಾಗುತ್ತದೆ. ಆದ್ದರಿಂದ  ಸ್ನಾನದ ನಂತರ ನೀವು ಯಾವಾಗಲೂ ದೇಹಕ್ಕೆ ಲೋಷನ್ ಅಥವಾ ಮಾಯಿಶ್ಚರೈಸರ್  ಅನ್ವಯಿಸಬೇಕು. ಇದು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ರಾಸಾಯನಿಕ ಲೋಷನ್ಗಳನ್ನು ಬಳಸಬೇಡಿ.

4. ಬೇವಿನ ಎಲೆ ನೀರಿನಿಂದ ಸ್ನಾನ  : ಬೇವಿನ ಎಲೆಗಳು ಉತ್ಕರ್ಷಣ ನಿರೋಧಕ, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ.  ಹಾನಿಕಾರಕ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಬಿಸಿ ನೀರಿಗೆ 10-12 ಬೇವಿನ ಎಲೆಗಳನ್ನು ಹಾಕಿ ಕುದಿಸಿ. ನೀರು ತಣ್ಣಗಾಗಲು ಬಿಡಿ ಮತ್ತು ಅದು ಉಗುರುಬೆಚ್ಚಗಾದಾಗ  ಅದರಿಂದ ಸ್ನಾನ ಮಾಡಿ.

Cholesterol Level: ರಕ್ತದಲ್ಲಿ ಏಕಾಏಕಿ ಕೊಬ್ಬು ಹೆಚ್ಚೋಕೆ ಏನ್ ಕಾರಣ ಗೊತ್ತಾ?

5. ಮುನ್ನೆಚ್ಚರಿಕೆಗಳು ಸಹ ಅಗತ್ಯ : ದಿನನಿತ್ಯದ ಸ್ನಾನದ ಕೊರತೆ  ಮತ್ತು ಅತಿಯಾದ ಟೀ, ಕಾಫಿ ಸೇವನೆಯಿಂದ ದೇಹದಲ್ಲಿ ತುರಿಕೆಯ ಸಮಸ್ಯೆ ಅನೇಕರಿಗೆ ಕಾಡುತ್ತದೆ.  ಸ್ನಾನಕ್ಕೆ ಹೆಚ್ಚು ಕೆಮಿಕಲ್ ಸಾಬೂನುಗಳನ್ನು ಬಳಸುವುದರಿಂದ ಚರ್ಮದಲ್ಲಿ ದದ್ದು ಉಂಟಾಗುತ್ತದೆ. ಆದ್ದರಿಂದ ಪ್ರತಿದಿನ ಸ್ನಾನ ಮಾಡಿ ಮತ್ತು ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ. 

ಮಲಗುವ ಕೋಣೆಯ ಉಷ್ಣತೆಯು ತುರಿಕೆಗೆ ಕಾರಣವಾಗಬಹುದು. ಆದ್ದರಿಂದ ಕೋಣೆಯ ಉಷ್ಣಾಂಶವನ್ನು ಸಾಮಾನ್ಯವಾಗಿರಿಸಲು ಪ್ರಯತ್ನಿಸಿ. ಅತಿಯಾದ ಬೆವರುವಿಕೆಯಿಂದ ಅನೇಕ ಜನರು ತುರಿಕೆಗೆ ಒಳಗಾಗುತ್ತಾರೆ. ಬೆವರಿದ ಸಂದರ್ಭದಲ್ಲಿ ಮೈ ಸ್ವಚ್ಛಗೊಳಿಸುವುದು ಬಹಳ ಮುಖ್ಯ. 
 

Follow Us:
Download App:
  • android
  • ios