ಸೂರ್ಯ ನಮಸ್ಕಾರದೊಂದಿಗೆ ಈ ಯೋಗಾಸನ ಮಾಡಿದ್ರೆ ಉತ್ತಮ ಅರೋಗ್ಯ
ಯೋಗದ ವಿಷಯಕ್ಕೆ ಬಂದಾಗ, ಸೂರ್ಯ ನಮಸ್ಕಾರದ ಹೆಸರು ಮೊದಲು ಬರುತ್ತದೆ. ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ, ದೇಹವು ಆರೋಗ್ಯಕರವಾಗುತ್ತದೆ. ಇದನ್ನು ಮಾಡುವುದರಿಂದ ಹೃದಯ, ಹೊಟ್ಟೆ, ಎದೆ, ಕರುಳು ಮತ್ತು ಪಾದ ಮಾತ್ರವಲ್ಲದೆ ದೇಹದ ಇತರ ಅಂಗಗಳಿಗೂ ಹೆಚ್ಚಿನ ಪ್ರಯೋಜನವಾಗುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುವುದಲ್ಲದೆ, ಮನಸ್ಸಿನ ಪ್ರತಿಯೊಂದು ಚಿಂತೆ ಮತ್ತು ಒತ್ತಡವನ್ನು ದೂರವಿರಿಸುತ್ತದೆ.
surya namaskar
ಇದು ಆರೋಗ್ಯ ಪ್ರಜ್ಞೆಯುಳ್ಳ ಜನರಿಗೆ ವರದಾನವಾಗಿದೆ. ಆದ್ದರಿಂದಲೇ ಎಲ್ಲಾ ಯೋಗ ತಜ್ಞರು ಸೂರ್ಯ ನಮಸ್ಕಾರವನ್ನು ಮಾಡಬೇಕೆಂದು ಒತ್ತಾಯಿಸುತ್ತಾರೆ. ನೀವು ಪ್ರತಿದಿನ ಸೂರ್ಯ ನಮಸ್ಕಾರ (Surya namaskar) ಮಾಡಿದರೆ, ಆರೋಗ್ಯಕ್ಕೆ ಉತ್ತಮ ಲಾಭ ದೊರೆಯುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಬೆನ್ನುಮೂಳೆಗೆ ಫ್ಲೆಕ್ಸಿಬಿಲಿಟಿ ಮತ್ತು ಶಕ್ತಿ ಎರಡೂ ಇರುತ್ತದೆ ಎಂದು ಯೋಗ ತಜ್ಞರು ಹೇಳುತ್ತಾರೆ.
surya namaskar
ಸೂರ್ಯ ನಮಸ್ಕಾರವು ನಮ್ಮ ತೋಳುಗಳು, ಬೆನ್ನುಮೂಳೆ ಮತ್ತು ಕೈಗಳನ್ನು(Hand), ಕಾಲುಗಳನ್ನು ಬಲಪಡಿಸುತ್ತದೆ. ಈ ಎರಡು ಸೂರ್ಯ ನಮಸ್ಕಾರ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಅನ್ನೋದನ್ನು ತಜ್ಞರು ತಿಳಿಸಿದ್ದಾರೆ,ಅದರ ಬಗ್ಗೆ ಇಲ್ಲಿದೆ ಮಾಹಿತಿ ತಿಳಿಯೋಣ.
surya namaskar
ಗೋಮುಖಸಾನ(Gomukhasana)
ಈ ಅಸನ ದೇಹದ ನಮ್ಯತೆಯನ್ನು ಹೆಚ್ಚಿಸುವ ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತವೆ.
ಅದನ್ನು ಹೇಗೆ ಮಾಡುವುದು -
ಈ ಆಸನವನ್ನು ಮಾಡಲು, ಮೊಣಕಾಲುಗಳನ್ನು ಒಂದರ ಮೇಲೆ ಇನ್ನೊಂದು ಇರಿಸಿ. ಮಂಡಿಗಳಲ್ಲಿ ಸಮಸ್ಯೆ ಇದ್ದರೆ ಆಗ ಸುಖಾಸನಾದಲ್ಲಿ ಪಾದಗಳನ್ನು ಇರಿಸಿಕೊಳ್ಳುವ ಮೂಲಕ ಗೋಮುಖಾಸನಾ ಮಾಡಬಹುದು.
ನಿಮ್ಮ ಮೊಣಕಾಲುಗಳು ಪರಸ್ಪರ ಸ್ಪರ್ಶಿಸದಿದ್ದರೆ, ನೀವು ಮೊಣಕಾಲುಗಳ ಕೆಳಗೆ ಟವೆಲ್ ಅನ್ನು ಹಾಕಬಹುದು.
surya namaskar
ಈ ಅಸನ ಮಾಡುವಾಗ ನಿಮ್ಮ ಹೆಬ್ಬೆರಳುಗಳನ್ನು ಸಕ್ರಿಯವಾಗಿರಿಸಿ.
ಈಗ ಮೊದಲು ನಿಮ್ಮ ಬಲಗಾಲನ್ನು ಮೇಲೆ ಇಡಿ. ಎಡಗೈಯನ್ನು ಮೇಲಕ್ಕೆ ಸರಿಸಿ ಕೈಯನ್ನು ಮಡಚಿ. ನೀವು ನಿಮ್ಮ ಫ್ಲೆಕ್ಸಿಬಿಲಿಟಿ(Flexibility) ಯನ್ನು ಸ್ವಲ್ಪ ಹೆಚ್ಚಿಸಬೇಕಾದರೆ, ನಿಮ್ಮ ಬಲಗೈಯನ್ನು ಹಿಂದಕ್ಕೆ ಸರಿಸಿ ಮತ್ತು ಬಲಗೈ ಬೆರಳಿನ ತುದಿಯಿಂದ ಎಡಗೈ ಬೆರಳಿನ ತುದಿಯನ್ನು ಸ್ಪರ್ಶಿಸಿ.
ನೀವು ಹೆಚ್ಚು ಫ್ಲೆಕ್ಸಿಬಲ್ ಆಗಿದ್ದರೆ, ನೀವು ಒಟ್ಟಿಗೆ ನಿಮ್ಮ ಕೈಗಳನ್ನು ಜೋಡಿಸಬಹುದು.
surya namaskar
5 ರಿಂದ 19 ಎಣಿಕೆಗಳವರೆಗೆ ಹಾಗೆ ಇರಿ. ಈ ಸಮಯದಲ್ಲಿ ಉಸಿರಾಟ(Breathing)ವನ್ನು ಮುಂದುವರಿಸಿ.
ಈಗ ಕೊನೆಯಲ್ಲಿ, ನಿಮ್ಮ ಬಲಗೈ ಮತ್ತು ಎಡಗೈಯನ್ನು ತೆಗೆದು ವಿಶ್ರಾಂತಿ ಪಡೆಯಿರಿ.
ಈಗ ಇಡೀ ಪ್ರಕ್ರಿಯೆಯನ್ನು ಎಡಗಾಲಿನಿಂದ ಮಾಡಿ. ಗೋಮುಖಾಸನವು ನಮ್ಮ ಭುಜಗಳು, ಬೆನ್ನಿನ ಮೇಲ್ಭಾಗ ಮತ್ತು ಸೊಂಟಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ
surya namaskar
ಪಶ್ಚಿಮೋತ್ತಾನಾಸನ (Pashchimottasana)
ಈ ಅಸನಾ ಹ್ಯಾಮ್ ಸ್ಟ್ರಿಂಗ್ ಅನ್ನು ಬಲಗೊಳಿಸುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇಷ್ಟೇ ಅಲ್ಲ, ಕಾಲುಗಳು, ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ.
surya namaskar
ಈ ಆಸನ(Yogasan) ಮಾಡಲು ನಿಮ್ಮ ಪಾದಗಳನ್ನು ಮುಂದೆ ಇರಿಸಿ.
ಈಗ, ಉಸಿರನ್ನು ಒಳಗೆ ತೆಗೆದುಕೊಂಡು, ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮತ್ತು ಉಸಿರನ್ನು ಹೊರಬಿಡುವಾಗ ಮುಂದೆ ಬಾಗಿ. ನಿಮ್ಮ ಕೈ ಹೆಬ್ಬೆರಳುಗಳನ್ನು ತಲುಪುತ್ತಿದ್ದರೆ ಅದು ಒಳ್ಳೆಯದು ಮತ್ತು ಅದು ಆಗದೆ ಇದ್ದರೂ ಸಮಸ್ಯೆ ಇಲ್ಲ.
surya namaskar
ಈ ಸಮಯದಲ್ಲಿ ಬೆನ್ನುಮೂಳೆ ನೇರವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಹಾಗೆ ನಿಲ್ಲಿಸಿ ಮತ್ತು ನಂತರ ನಿಮ್ಮ ತಲೆಯನ್ನು ಕೆಳಮುಖವಾಗಿ ಬಾಗಿಸಿ.
5 ರಿಂದ 10 ಎಣಿಕೆಗಳವರೆಗೆ ಇರಿ ಆದರೆ ಬೆನ್ನಿನ ಮೇಲೆ ಒತ್ತಡ(Stress) ಹೇರದಂತೆ ಕಾಳಜಿ ವಹಿಸಿ.
ಈಗ ನೀವು ಉಸಿರಾಡುತ್ತ ಮೇಲೆ ನೋಡಿ. ನಿಮ್ಮ ಕೈಗಳನ್ನು ಮರಳಿ ತನ್ನಿ ಮತ್ತು ವಿಶ್ರಾಂತಿ ಪಡೆಯಿರಿ.