Asianet Suvarna News Asianet Suvarna News

Yoga Asanas: ಹೈರಾಣ ಮಾಡುವ ಕತ್ತು, ಬೆನ್ನು ನೋವಿಗೆ ಇಲ್ಲಿದೆ ಪರಿಹಾರ

ಕತ್ತು ನೋವು, ಭುಜ ನೋವು, ಸೊಂಟ ನೋವು ಹೀಗೆ ದಿನಕ್ಕೊಂದು ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ. ದೇಹಕ್ಕೆ ಶ್ರಮ ನೀಡದೆ, ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದ್ರಿಂದ ಸಮಸ್ಯೆ ಉಲ್ಬಣಗೊಳ್ತಿದೆ. 

Best Yoga Asanas For Back And Neck Pain In Work From Home
Author
Bangalore, First Published Jan 28, 2022, 7:25 PM IST

ಕೊರೊನಾ (Corona )ರೋಗದಿಂದಾಗಿ ಮನೆಯಿಂದಲೇ ಕೆಲಸ (Work )ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮನೆ(Home)ಯಲ್ಲಿಯೇ ಕೆಲಸ ಮಾಡುವ ಜನರು, ಸರಿಯಾದ ಭಂಗಿಯಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ. ಕಚೇರಿಯಲ್ಲಿ ಸಿಗ್ತಿದ್ದ ವಿಶ್ರಾಂತಿ,ಮನೆಯಲ್ಲಿ ಸಿಗ್ತಿಲ್ಲ. ಕುಳಿತುಕೊಳ್ಳುವ ಭಂಗಿ ಹಾಗೂ ತಪ್ಪಾದ ಜೀವನ ಶೈಲಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮನೆಯಿಂದ ಕೆಲಸ ಮಾಡುವ  ಜನರು ಕುತ್ತಿಗೆ ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಕಂಪ್ಯೂಟರ್ ಕೆಲಸ ಮಾಡುವ ಕಾರಣ, ಕುತ್ತಿಗೆ ಮತ್ತು ಬೆನ್ನುನೋವು ಕಾಡ್ತಿದೆ ಎಂದು ಹೇಳ್ತೇವೆಯೇ ವಿನಃ ಅದನ್ನು ಪರಿಹರಿಸಿಕೊಳ್ಳುವ ಪ್ರಯತ್ನ ನಡೆಸುವುದಿಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಹೋದಲ್ಲಿ ಸಮಸ್ಯೆ ಹೆಚ್ಚಾಗಬಹುದು. ಗಂಭೀರ ದೈಹಿಕ ಸಮಸ್ಯೆಯಾಗಿ ಬದಲಾಗಬಹುದು.   ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಹೆಚ್ಚು ಭಾರವನ್ನು ಕಣ್ಣಿನ ಬದಲಾಗಿ  ಹೆಗಲ ಮೇಲೆ ಹಾಕುತ್ತೇವೆ. ಸರಿಯಾದ ಕುರ್ಚಿ,ಟೇಬಲ್ ಬಳಸದೆ,ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ರೀತಿ ಕೆಲಸ ಮಾಡುವುದರಿಂದ ಭುಜ, ಕುತ್ತಿಗೆ, ಬೆನ್ನು ಮತ್ತು ಸೊಂಟದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇವುಗಳ ನೋವು ವಿಪರೀತ ಕಾಡುತ್ತದೆ. ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಈ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ನೀವೂ ಮನೆಯಲ್ಲಿಯೇ ಕೆಲಸ ಮಾಡ್ತಿದ್ದರೆ ಬೆನ್ನು ಹಾಗೂ ಕುತ್ತಿಗೆ ನೋವಿಗೆ ಪರಿಹಾರ ನೀಡಬಲ್ಲ ಯೋಗಾಸನದ ಬಗ್ಗೆ ತಿಳಿದುಕೊಳ್ಳಿ. ಸಾಧ್ಯವಾದಷ್ಟು ಮನೆಯಲ್ಲಿ ಇದನ್ನು ಮಾಡಿ.

ತಾಡಾಸನ : ತಾಡಾಸನವನ್ನು ಅಭ್ಯಾಸ ಮಾಡುವಾಗ ಕಾಲ್ಬೆರಳುಗಳ ಸಹಾಯದ ಮೇಲೆ ನಿಲ್ಲಬೇಕು. ಹಿಮ್ಮಡಯನ್ನು ಮೇಲೆತ್ತಿರಬೇಕು.  ಎರಡೂ ಕೈಗಳನ್ನು ಮೇಲಕ್ಕೆ ಎತ್ತಬೇಕು. ಇಡೀ ದೇಹದ ಭಾರವನ್ನು ಪಾದಗಳಿಗೆ ಹಾಕಬೇಕು.ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಸಮಯದವರೆಗೆ ಸಮತೋಲನವನ್ನು ಕಾಪಾಡಿಕೊಳ್ಳಿ. ನಂತರ ಹಿಂದಿನ ಸ್ಥಿತಿಗೆ ಹಿಂತಿರುಗಿ. ಪ್ರತಿ ನಿತ್ಯ ಈ ಆಸನ ಮಾಡುವುದ್ರಿಂದ ಕುತ್ತಿಗೆ,ಭುಜದ ನೋವನ್ನು ಕಡಿಮೆ ಮಾಡಬಹುದು.

ಸೇತುವೆ ಬಂಧಾಸನ : ಈ ಯೋಗಾಸನವು  ಸದಾ ಕುಳಿತು ಕೆಲಸ ಮಾಡುವವರಿಗೆ ಪ್ರಯೋಜನಕಾರಿ. ಸೇತು ಬಂಧಾಸನವನ್ನು ಮಾಡಲು, ನಿಮ್ಮ ಬೆನ್ನಿನ ಮೇಲೆ ಮಲಗಿ ಮತ್ತು ಎರಡೂ ಕಾಲುಗಳ ಮೊಣಕಾಲುಗಳನ್ನು ಬಾಗಿಸಿ ಮತ್ತು ನೆಲದ ಮೇಲೆ ಪಾದಗಳನ್ನು ಸ್ಪರ್ಶಿಸಿ. ಈಗ ಕೈಗಳ ಸಹಾಯದಿಂದ ದೇಹವನ್ನು ಮೇಲಕ್ಕೆತ್ತಿ ಮತ್ತು ಬೆನ್ನು ಮತ್ತು ತೊಡೆಯನ್ನು ನೆಲದಿಂದ ಮೇಲಕ್ಕೆತ್ತುವಾಗ ಆಳವಾದ ಉಸಿರನ್ನು ತೆಗೆದುಕೊಂಡು ಬಿಡಿ. ಸ್ವಲ್ಪ ಸಮಯ ಈ ಸ್ಥಿತಿಯಲ್ಲಿದ್ದ ನಂತರ, ಮೊದಲ ಸ್ಥಾನಕ್ಕೆ ಹಿಂತಿರುಗಿ. 

ಭುಜಂಗಾಸನ : ಬೆನ್ನು,ಕುತ್ತಿಗೆ,ಸೊಂಟ,ಭುಜದ ನೋವಿಗೆ ಭುಜಂಗಾಸನ ಪ್ರಯೋಜನಕಾರಿ. ನಿಯಮಿತವಾಗಿ ಇದನ್ನು ಮಾಡಿದ್ರೆ ಕೆಲವೇ ದಿನಗಳಲ್ಲಿ ಫಲಿತಾಂಶ ಕಾಣಬಹುದು. ಈ ಆಸನವನ್ನು ಅಭ್ಯಾಸ ಮಾಡಲು ಹೊಟ್ಟೆಯ ಮೇಲೆ ಮಲಗಬೇಕು. ಅಂಗೈಗಳನ್ನು ನಿಮ್ಮ ಭುಜದ ಕೆಳಗೆ ಇರಿಸಬೇಕು. ಕೈ ಸಹಾಯದಿಂದ ಎದೆಯನ್ನು ಮೇಲಕ್ಕೆತ್ತಬೇಕು. ಸ್ವಲ್ಪ ಸಮಯ ಈ ಸ್ಥಿತಿಯಲ್ಲಿದ್ದು ಉಸಿರಾಡಿ. ನಂತ್ರ ಹಿಂದಿನ ಸ್ಥಿತಿಗೆ ಮರಳಿ.  

Yogasana : ಮನೆಯಲ್ಲೇ ಹೀಗೆಲ್ಲಾ ಮಾಡಿದ್ರೆ ಹದಗೆಡಬಹುದು ಆರೋಗ್ಯ

ಭುಜ-ಕುತ್ತಿಗೆ ರೋಲಿಂಗ್ : ಕುತ್ತಿಗೆಯ ಒತ್ತಡವನ್ನು ನಿವಾರಿಸಲು ಬಹುಶಃ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧವಾದ ಯೋಗಾಸನ ಇದಾಗಿದೆ. ಮೊದಲು ಆರಾಮವಾಗಿ ಕುಳಿತುಕೊಳ್ಳಿ. ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಳ್ಳಿ. ಕಿವಿ ನಿಮ್ಮ ಭುಜವನ್ನು ಮುಟ್ಟುವವರೆಗೆ ನಿಮ್ಮ ತಲೆಯನ್ನು ಬಲಕ್ಕೆ ಅಥವಾ ಎಡಕ್ಕೆ ನಿಧಾನವಾಗಿ ಸುತ್ತಿಸಿ. ನಿಮ್ಮ ತಲೆಯನ್ನು ತಳ್ಳಲು ಒಂದು ಕೈಯನ್ನು ಬಳಸಿ. ಇದಲ್ಲದೆ ಕತ್ತನ್ನು ಮೇಲೆ,ಕೆಳಗೆ ನಿಧಾನವಾಗಿ ಮಾಡಬೇಕು. ಸ್ನಾಯುಗಳು ಇದ್ರಿಂದ ಸಡಿಲಗೊಳ್ಳುತ್ತವೆ.

ನರಕಯಾತನೆ ನೀಡುವ Acidityಗೆ ಮುಕ್ತಿ ಸಿಗಬೇಕೆಂದ್ರೆ ಹೀಗೆ ಮಾಡಿ

ಶೋಲ್ಡರ್ ಓಪನರ್ : ಮೊದಲು ನೇರವಾಗಿ ನಿಂತುಕೊಳ್ಳಿ. ನಂತ್ರ ನಿಮ್ಮ ಅಂಗೈಯನ್ನು ತಲೆಯ ಹಿಂದೆ ತೆಗೆದುಕೊಂಡು ಹೋಗಿ ಎರಡನ್ನೂ ಸೇರಿಸಿ. ನಂತ್ರ ಭುಜವನ್ನು ಸಾಧ್ಯವಾದಷ್ಟು ಹಿಂದಕ್ಕೆ,ಮುಂದಕ್ಕೆ ಎಳೆಯಿರಿ. ಇದು ಕೂಡ ಭುಜ,ಕತ್ತು ನೋವಿಗೆ ಸಹಕಾರಿ. 
ಯಾವುದೇ ಯೋಗಾಸನ ಶುರು ಮಾಡುವ ಮೊದಲು ಉಸಿರಾಟದ ಬಗ್ಗೆ ಗಮನ ನೀಡಬೇಕಾಗುತ್ತದೆ. ಹಾಗಾಗಿ ಆರಂಭದಲ್ಲಿ ತರಬೇತಿ ಪಡೆದು ಅಭ್ಯಾಸ ಮಾಡುವುದು ಒಳ್ಳೆಯದು.

Follow Us:
Download App:
  • android
  • ios