Asianet Suvarna News Asianet Suvarna News

Thumb: ಹೆಬ್ಬೆರಳಲ್ಲಿದೆ ನಿಮ್ಮ ಸಂಪೂರ್ಣ ಜಾತಕ! ಬೆರಳು ನೋಡಿ ಸ್ವಭಾವ ತಿಳೀಬಹುದು..

ಒಬ್ಬ ವ್ಯಕ್ತಿಯ ಸ್ವಭಾವದ ಬಗ್ಗೆ ತಿಳಿಯಲು ಭಾರೀ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆತನ ಹೆಬ್ಬೆರಳನ್ನು ನೋಡಿದರೆ ಸಾಕು!

The shape of your thumb reveals your personality
Author
Bangalore, First Published Jan 24, 2022, 11:53 AM IST

ನೀವು ಕೈಯನ್ನು (Hand) ನೋಡಿ ಹೇಳುವ ಭವಿಷ್ಯ ನಂಬುವವರಾ? ಕೈಯ್ಯಲ್ಲಿರುವ ರೇಖೆಗಳನ್ನು ನೋಡಿ ರೇಖೆಗಳು ಹೇಗೆ ಹಾದು ಹೋಗಿವೆ ನೋಡಿ ಅವರು ಆರೋಗ್ಯವಂತರಾ, ಅಥವಾ ಸಿರಿವಂತರಾ ಹಾಗೂ ವ್ಯಕ್ತಿಯ ಆಯಸ್ಸು ಎಷ್ಟು ಎಂದೆಲ್ಲಾ ಹೇಳುತ್ತಾರಲ್ಲವೇ? ಹಾಗೆಯೇ ಹೆಬ್ಬೆರಳು ನೋಡಿ (Thumb) ನಿಮ್ಮ ವ್ಯಕ್ತಿತ್ವ (Personality) ಎಂಥದು ಎಂದು ಹೇಳಬಹುದು.

ಮೂರು ಆಯ್ಕೆಗಳು

ಜನರನ್ನು ಅವರ ಹೆಬ್ಬೆರಳಿನ ರಚನೆಯ ಆಧಾರದ ಮೇಲೆ ಮೂರು ರೀತಿಯಲ್ಲಿ ವಿಭಾಗಿಸಬಹುದು. ಈ ಮೂರು ರೀತಿಯ ವರ್ಗದ (Category) ಜನರು ಮೂರು ವಿಭಿನ್ನ ರೀತಿಯ ವ್ಯಕ್ತಿತ್ವ ಹೊಂದಿರುತ್ತಾರೆ. ಆ ವರ್ಗಗಳನ್ನು ಹೀಗೆ ವಿಂಗಡಿಸಲಾಗಿದೆ. ಹೆಬ್ಬೆರಳಿನ ಮೇಲಿನ ಅರ್ಧವು (Half) ಕೆಳಗಿನ ಭಾಗದಲ್ಲಿರುವ ಅರ್ಧಕ್ಕಿಂತ ಹೆಚ್ಚಿರುವುದು ಒಂದು ವರ್ಗ ಅದನ್ನು ಎ (A) ಎಂದು ಪರಿಗಣಿಸೋಣ. ಇನ್ನು ಹೆಬ್ಬೆರಳಿನ ಮೇಲ್ಬಾಗ ಹಾಗೂ ಕೆಳಭಾಗ ಎರಡೂ ಸಮ ಸಮ (Equal) ಇರುವ ವರ್ಗದವರನ್ನು ಬಿ (B) ಎಂದು ಪರಿಗಣಿಸೋಣ ಹಾಗೂ ಕೊನೆಯದಾಗಿ ಹೆಬ್ಬೆರಳಿನ ಕೆಳ ಭಾಗವನ್ನು ಹೆಚ್ಚು ಹೊಂದಿರುವವರನ್ನು ಸಿ(C) ಎಂದು ವಿಂಗಡಿಸೋಣ.

Face Reading: ಮುಖ ನೋಡಿ ವ್ಯಕ್ತಿಯ ವ್ಯಕ್ತಿತ್ವ ಹೇಳಬಹುದು!

ಎ ರೀತಿಯ ಹೆಬ್ಬೆರಳು ಹೊಂದಿರುವವರು

ಹೆಬ್ಬೆರಳಿನ ಮೇಲಿನ ಭಾಗವನ್ನು ಕೆಳಗಿನ ಭಾಗಕ್ಕಿಂತ ಹೆಚ್ಚು ಹೊಂದಿರುವ ಜನರು ತಮ್ಮ ಜೊತೆಗಾರರ (Partner) ಬಗ್ಗೆ ಬಹಳ ಪ್ರೀತಿಯನ್ನು (Love) ಹೊಂದಿರುತ್ತಾರೆ. ಹಾಗೂ ಸಂಗಾತಿಯ ಬಗ್ಗೆ ಅಪಾರ ನಂಬಿಕೆ ಇಟ್ಟಿರುತ್ತಾರೆ. ತಮ್ಮ ಸಂಗಾತಿ ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಾರೆ. ಇವರಿಗೆ ಬೇರೆ ಎಲ್ಲಾ ವಿಷಯಗಳಿಗಿಂತ ಅವರ ಪ್ರೀತಿ ಪಾತ್ರರೇ ಬಹಳ ಮುಖ್ಯ, ಯಾವುದೇ ಸಂದರ್ಭ ಎದುರಾದರೂ ಅವರ ಹಾಗೂ ಅವರ ಸಂಗಾತಿಯ ಸಂಬಂಧವನ್ನು ಬಿಟ್ಟುಕೊಡುವುದಿಲ್ಲ. ಬೇರೆ ಎಲ್ಲಾ ವಿಷಯಗಳಿಗಿಂತ ಅವರ ಕೆಲಸ ಮತ್ತು ಸಂಗಾತಿಯ ಸಂತೋಷವೇ ಮುಖ್ಯವಾಗಿರುತ್ತದೆ

ಬಿ ರೀತಿಯ ಹೆಬ್ಬೆರಳು ಹೊಂದಿರುವವರು

ಹೆಬ್ಬೆರಳಿನ ಮೇಲಿನ ಭಾಗ ಹಾಗೂ ಕೆಳಗಿನ ಭಾಗ ಎರಡೂ ಸಮನಾಗಿದ್ದರೆ ಅಂಥವರು ಅವರ ಸಂಬಂಧದ ವಿಚಾರಕ್ಕೆ ಬಂದಾಗ ಬಹಳ ಶಾಂತತೆಯನ್ನು (Calm) ಹೊಂದಿರುತ್ತಾರೆ. ಇವರು ತಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಿರುತ್ತಾರೆ. ತಾಳ್ಮೆಯ ಸ್ವಭಾವವನ್ನು ಹೊಂದಿರುತ್ತಾರೆ. ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಇವರು ಅದರ ಸಾಧನೆಗಾಗಿ ಹಗಲು ರಾತ್ರಿ ಎನ್ನದೆ ಕಷ್ಟ ಪಡುತ್ತಾರೆ. ಇದರ ಕುರಿತಾಗಿಯೇ ಹೆಚ್ಚು ಗಮನ ನೀಡುವ ವ್ಯಕ್ತಿತ್ವ ಹೊಂದಿರುವ ಜನರು ಬೇರೆಯ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಷ್ಟೊಂದು ಕನಸು, ಗುರಿ ಹಾಗು ಛಲ ಹೊಂದಿರುವವರನ್ನು ಪ್ರೀತಿಯಲ್ಲಿ ಬೀಳಿಸಿಕೊಳ್ಳುವುದು ಬಹಳ ಕಷ್ಟದ ಮಾತು.

Intrusive Thoughts: ಒಳನುಗ್ಗುವ ಆಲೋಚನೆಗಳಿಗೆ ಕಡಿವಾಣ ಹಾಕುವುದು ಹೇಗೆ!

ಸಿ ರೀತಿಯ ಹೆಬ್ಬೆರಳು ಹೊಂದಿರುವವರು

ಹೆಬ್ಬೆರಳಿನ ಮೇಲಿನ ಭಾಗಕ್ಕಿಂತ ಕೆಳಗಿನ ಭಾಗವನ್ನೇ ಹೆಚ್ಚು ಹೊಂದಿರುವ ಈ ಜನರು ನಂಬಿಕೆಗೆ ಅರ್ಹರಾಗಿರುತ್ತಾರೆ. ಇವರು ಯಾವುದೇ ಕೆಲಸ ಮಾಡುವಾಗ ಅಥವಾ ನಿರ್ಧಾರಗಳನ್ನು (Decision) ತೆಗೆದುಕೊಳ್ಳುವಾಗ ಅದರ ಒಳಿತು ಕೆಡುಕುಗಳನ್ನು ನೂರಾರು ಬಾರಿ ಯೋಚಿಸುತ್ತಾರೆ. ಅಷ್ಟೆಲ್ಲಾ ಯೋಚಿಸಿ ಒಬ್ಬ ವ್ಯಕ್ತಿಯ ಜೊತೆ ಮುನ್ನೆಡೆಯುತ್ತಾರೆ ಎಂದಾದರೆ ಆ ವ್ಯಕ್ತಿ ಇವರಿಗಾಗಿಯೇ ಇರುವವರು ಎಂದರ್ಥ. ಇವರು ಯಾವುದೇ ವಿಷಯದಲ್ಲಿಯೂ ಸುಲಭವಾಗಿ ರಾಜಿಯಾಗುವ ಮಾತೇ ಇರುವುದಿಲ್ಲ. ಇದೆಲ್ಲದರ ನಡುವೆ ತಮ್ಮ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ ಎಂದಾದರೆ ಆ ಸಂಗಾತಿಯ ಬಗ್ಗೆ ಬಹಳ ಬಾವನೆಯನ್ನು ಹೊಂದಿರುತ್ತಾರೆ. ಅವರಿಗಾಗಿ ಎನನ್ನೂ ಮಾಡಲು ಸಿದ್ದರಿರುತ್ತಾರೆ.

ಈಗ ಹೇಳಿ ನೀವು ಯಾವ ರೀತಿಯ ವ್ಯಕ್ತಿತ್ವ ಹೊಂದಿರುವಿರಿ ಹಾಗೂ ನಿಮ್ಮ ಸಂಗಾತಿಯ ವ್ಯಕ್ತಿತ್ವದ ಪರಿಚಯ ಕೂಡಾ ಆಗಿರಬೇಕಲ್ಲವೇ?

Follow Us:
Download App:
  • android
  • ios