ಪುರುಷರ ಈ ಸಮಸ್ಯೆಗಳ ಬಗ್ಗೆ ಎಷ್ಟು ಹೇಳಿದ್ರೂ ಮಹಿಳೆಯರಿಗೆ ಅರ್ಥ ಆಗೋದಿಲ್ವಂತೆ ಹೌದ?
Men Health: ಮಹಿಳೆಯರು ತಮ್ಮ ಸಂಗಾತಿಯ ಪ್ರತಿಯೊಂದು ಅಭ್ಯಾಸವನ್ನು ಚೆನ್ನಾಗಿ ತಿಳಿದಿದ್ದರೂ, ಪುರುಷರಿಗೆ ಸಂಬಂಧಿಸಿದ ಕೆಲವು ಗಂಭೀರ ಸಮಸ್ಯೆಗಳು ಬಗೆಹರಿಯದ ರಹಸ್ಯವಾಗಿ ಉಳಿದಿವೆ. ಮಹಿಳೆಯರು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ವಿಫಲವಾಗುವ ಐದು ಪ್ರಮುಖ ಸಮಸ್ಯೆಗಳು ಯಾವುವು ನೋಡೋಣ.

ಪುರುಷರನ್ನು ಮಹಿಳೆಯರು ಅರ್ಥ ಮಾಡಿಕೊಳ್ಳೋದಿಲ್ವಾ?
ಪುರುಷರು ನಮ್ಮ ಮನಸ್ಸಿನಲ್ಲಿ ಏನಿದೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಮಹಿಳೆಯರು ಹೆಚ್ಚಾಗಿ ದೂರುತ್ತಾರೆ; ಆದರೆ ಪುರುಷರು ತಮ್ಮ ಸ್ವಂತ ಜೀವನ ಮತ್ತು ಆರೋಗ್ಯದ ಬಗ್ಗೆ ಗಂಭೀರ ವಿಷಯಗಳನ್ನು ಎಂದಿಗೂ ಹೇಳೋದೆ ಇಲ್ಲ.ಮಹಿಳೆಯರು ಎಷ್ಟೇ ಆತ್ಮೀಯರಾಗಿದ್ದರೂ ಸಹ ಪುರುಷರ ಈ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅಂತಹ ವಿಷ್ಯಗಳು ಯಾವುವು ಗೊತ್ತಾ?
ಕುಟುಂಬದ ಜವಾಬ್ಧಾರಿಯ ಒತ್ತಡ
ಬಾಲ್ಯದಿಂದಲೂ, ಪುರುಷರಿಗೆ ತಮ್ಮ ಕುಟುಂಬಗಳಿಗೆ ಬೆಂಬಲವಾಗಿರಬೇಕು, ಆಧಾರಸ್ತಂಭವಾಗಿರಬೇಕು ಎಂದು ಕಲಿಸಲಾಗುತ್ತದೆ. ಕರಿಯರ್ ನಿರ್ಮಿಸಲು, ಆದಾಯ ಗಳಿಸಲು ಮತ್ತು ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಹೀಗೆ ನಿರಂತರ ಹೋರಾಟದಿಂದ ಅವರ ಒತ್ತಡ ಹೆಚ್ಚಾಗುತ್ತದೆ. ಆದರೆ ಪುರುಷರು ಆತಂಕ ಮತ್ತು ವೈಫಲ್ಯದ ಭಯವನ್ನು ಒಪ್ಪಿಕೊಳ್ಳುವುದಿಲ್ಲ. ಯಾಕಂದ್ರೆ, ಹಾಗೆ ಮಾಡಿದ್ರೆ ಅವರು ವೀಕ್ ಎನಿಸಿಕೊಳ್ಳುತ್ತಾರೆ. ಅವರು ಹೇಳಿಕೊಳ್ಳದೇ ಇರುವ ಆ ಭಾವನೆಗಳನ್ನು ಮಹಿಳೆಯರು ಅರ್ಥ ಮಾಡಿಕೊಳ್ಳೋದೆ ಇಲ್ಲ.
ಭಾವನೆಗಳನ್ನು ಮರೆಮಾಚುವುದು
ಪುರುಷರು ಅಳಬಾರದು ಅನ್ನೋದು ಹಿಂದಿನಿಂದ ಬಂದಂತಹ ಒಂದು ಮಾತು. ಹಾಗಾಗಿ ಇಂದಿಗೂ, ಸಮಾಜದಲ್ಲಿ ಪುರುಷರು ಸಂಕಷ್ಟದಲ್ಲಿದ್ದಾಗ ಅಳುವುದು ಅಥವಾ ತಮ್ಮ ಭಾವನಾತ್ಮಕ ಅಗತ್ಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ಸುಲಭವಲ್ಲ. ಪುರುಷರು ನೋವಲ್ಲಿದ್ದಾಗ, ಹೊರಗಿನಿಂದ ಶಾಂತವಾಗಿ ಕಾಣಬಹುದು ಅಥವಾ ಕೆಲವೊಮ್ಮೆ ಕೆರಳಬಹುದು. ಮಹಿಳೆಯರು ಹೆಚ್ಚಾಗಿ ಈ ಕಿರಿಕಿರಿಯನ್ನು ಕೋಪ ಎಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ಅದರ ಒಳಗಿರುವ ವೈಫಲ್ಯ, ನೋವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ.
ಟೆಸ್ಟೋಸ್ಟೆರಾನ್ ಕೊರತೆ ಮತ್ತು ಹಾರ್ಮೋನುಗಳ ಬದಲಾವಣೆಗಳು
ಮಹಿಳೆಯರ ಋತುಬಂಧದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಆದರೆ ವಯಸ್ಸಾದಂತೆ ಪುರುಷರು ಅನುಭವಿಸುವ ಹಾರ್ಮೋನುಗಳ ಏರಿಳಿತಗಳಿಗೆ ಕಡೆಗೆ ಗಮನ ಹರಿಸೋದು ಕಡಿಮೆ. ಉದಾಹರಣೆಗೆ ಟೆಸ್ಟೋಸ್ಟೆರಾನ್ ಮಟ್ಟಗಳು ಕಡಿಮೆಯಾಗುವುದು, ಈ ಸ್ಥಿತಿಯನ್ನು ಆಂಡ್ರೋಪಾಸ್ ಎಂದೂ ಕರೆಯುತ್ತಾರೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟಗಳು 30 ಅಥವಾ 40 ವರ್ಷಗಳ ನಂತರ ಕುಸಿಯಲು ಪ್ರಾರಂಭಿಸುತ್ತವೆ. ಇದರಿಂದ ನಿರಂತರ ಆಯಾಸ, ಶಕ್ತಿಯ ಕೊರತೆ, ಸ್ನಾಯು ದೌರ್ಬಲ್ಯ, ಮೂಡ್ ಸ್ವಿಂಗ್ಸ್ ಮತ್ತು ಲೈಂಗಿಕ ಬಯಕೆಯ ನಷ್ಟದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಪುರುಷರು ಸಾಮಾನ್ಯವಾಗಿ ಈ ದೈಹಿಕ ಬದಲಾವಣೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ತುಂಬಾ ಮುಜುಗರಪಡುತ್ತಾರೆ.
ಹೃದಯ ಆರೋಗ್ಯ ಮತ್ತು ಒತ್ತಡ
ಬಯೋಲಾಜಿಕಲ್ ಮತ್ತು ಜೀವನಶೈಲಿಯಿಂದಾಗಿ ಪುರುಷರು ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ. ಅವರು ಸಾಮಾನ್ಯವಾಗಿ ಕೆಲಸಕ್ಕೆ ಸಂಬಂಧಿಸಿದ ಒತ್ತಡ, ಅಸಮರ್ಪಕ ನಿದ್ರೆ ಮತ್ತು ಕಳಪೆ ಆಹಾರ ಪದ್ಧತಿಗಳನ್ನು ನಿರ್ಲಕ್ಷಿಸುತ್ತಾರೆ, "ಎಲ್ಲವೂ ಸರಿಯಾಗುತ್ತದೆ" ಎಂದು ಭಾವಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಸೌಮ್ಯವಾದ ಎದೆಯ ಒತ್ತಡ, ಅತಿಯಾದ ಬೆವರುವಿಕೆ ಅಥವಾ ನಿರಂತರ ಆಯಾಸದಂತಹ ಲಕ್ಷಣಗಳನ್ನು ಇಗ್ನೋರ್ ಮಾಡುತ್ತಾರೆ.
ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಯ
ಖಿನ್ನತೆ, ಆತಂಕ ಮೊದಲಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪುರುಷರು ಕೂಡ ಅನುಭವಿಸುತ್ತಾರೆ, ಆದರೆ ಅವರು ವೈದ್ಯರು ಅಥವಾ ಥೆರಪಿಸ್ಟ್ ಗಳನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ. ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸುವುದರಿಂದ ಅವರ ಸಾಮರ್ಥ್ಯ ಅಥವಾ ಅವರ ಪುರುಷತ್ವದ ಬಗ್ಗೆ ಅನುಮಾನ ಉಂಟಾಗಬಹುದು ಎಂಬ ಭಯ ಅವರಲ್ಲಿರುತ್ತದೆ. ಈ ಮಾನಸಿಕ ತೊಂದರೆಯನ್ನು ನಿಭಾಯಿಸಲು, ಅವರು ತಮ್ಮ ಪ್ರೀತಿ ಪಾತ್ರರಿಂದ ದೂರವಾಗಿ, ಕೆಲಸ ಮಾಡುತ್ತಾ, ಮತ್ತಷ್ಟು ಸಮಸ್ಯೆಯನ್ನು ಅನುಭವಿಸುತ್ತಾರೆ. ಆದರೆ ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

