ಕೊಳಕು ಟ್ಯಾಪ್ ನೀರು ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ!
ಮೂತ್ರಕೋಶವು ನಿಮ್ಮ ಕೆಳಹೊಟ್ಟೆಯಲ್ಲಿರುವ ಟೊಳ್ಳಾದ ಸ್ನಾಯು ಅಂಗವಾಗಿದ್ದು, ಅದು ಮೂತ್ರವನ್ನು ಸಂಗ್ರಹಿಸುತ್ತೆ.ಇದರಲ್ಲಿ ಉಂಟಾಗುವ ಕ್ಯಾನ್ಸರ್ ನ್ನು ಮೂತ್ರಕೋಶದ ಕ್ಯಾನ್ಸರ್ ಎಂದು ಕರೆಯಲಾಗುತ್ತೆ. ಇದು ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದ್ದು, ಮೂತ್ರಕೋಶದ ಸೆಲ್ಸ್ನಲ್ಲಿ ಪ್ರಾರಂಭವಾಗುತ್ತದೆ. ಹೆಚ್ಚಿನ ಮೂತ್ರಕೋಶದ ಕ್ಯಾನ್ಸರ್ ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಬಹುದು.
ಬ್ಲಾಡರ್ ಕ್ಯಾನ್ಸರ್(Bladder cancer) ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಚಿಕಿತ್ಸೆ ಪಡೆಯಬಹುದು ನಿಜ, ಆದರೆ ಬ್ಲಾಡರ್ ಕ್ಯಾನ್ಸರ್ ಚಿಕಿತ್ಸೆಯ ನಂತರವೂ ವಾಪಸಾಗಬಹುದು. ಈ ಕಾರಣಕ್ಕಾಗಿ, ಮೂತ್ರಕೋಶದ ಕ್ಯಾನ್ಸರ್ ಹೊಂದಿರುವ ಜನರು ಸಾಮಾನ್ಯವಾಗಿ ಚಿಕಿತ್ಸೆಯ ನಂತರ ವರ್ಷಗಳ ಕಾಲ ಫಾಲೋ ಅಪ್ ಮಾಡಬೇಕಾಗುತ್ತೆ, ಇದರಿಂದ ಕ್ಯಾನ್ಸರ್ ಮತ್ತೆ ಬರೋದಿಲ್ಲ. ಇದು ಹಲವಾರು ಕಾರಣಗಳಿಗಾಗಿ ಸಂಭವಿಸಬಹುದು, ಅವುಗಳಲ್ಲಿ ಒಂದು ಕೊಳಕು ನೀರಿನ ಸೇವನೆ. ನೀವು ಕೊಳಕು ಟ್ಯಾಪ್ ನೀರನ್ನು ಸೇವಿಸಿದ್ರೆ, ಅದರ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.
ಇತ್ತೀಚೆಗೆ ನಡೆಸಿದ ಸ್ಟಡಿ ಈ ಅಪಾಯವನ್ನು ಎತ್ತಿ ತೋರಿಸಿದೆ. ಆರ್ಸೆನಿಕ್ ಅಥವಾ ಕ್ಲೋರಿನ್ ಹೊಂದಿರುವ ನೀರು(Water) ಕುಡಿಯೋದರಿಂದ ಮೂತ್ರಕೋಶದ ಕ್ಯಾನ್ಸರ್ ಅಪಾಯ ಹೆಚ್ಚು. ಅದರ ಅಪಾಯ ಕಡಿಮೆ ಮಾಡಲು, ಕುಡಿಯುವ ನೀರಿನ ಸುರಕ್ಷತೆ ಹೆಚ್ಚಿಸಲು ಓಝೋನ್ ಬಯೋಫಿಲ್ಟರೇಶನ್ ಮತ್ತು ನ್ಯಾನೊಫಿಲ್ಟ್ರೇಶನ್ ನಂತಹ ಒಳ್ಳೆ ಸೊಲ್ಯೂಷನ್ಸ್ ವಿಜ್ಞಾನಿಗಳು ಸೂಚಿಸಿದ್ದಾರೆ.
ಮೂತ್ರಕೋಶದ ಕ್ಯಾನ್ಸರ್ ಲಕ್ಷಣಗಳು ಯಾವುವು?
ಬೇಗ-ಬೇಗ ಮೂತ್ರ ಬರುವುದು
ಮೂತ್ರ(Urine) ವಿಸರ್ಜನೆಯಲ್ಲಿ ನೋವು
ಪದೇ ಪದೇ ಮೂತ್ರ ವಿಸರ್ಜನೆ
ಬೆನ್ನು ನೋವು
ಮೂತ್ರದಲ್ಲಿ ರಕ್ತ
ಈ ಲಕ್ಷಣಗಳು ಕಂಡು ಬಂದರೆ ಎಚ್ಚರಿಕೆಯಿಂದ ಇರೋದು ಮುಖ್ಯ.
ಯಾವ ಜನರು ಹೆಚ್ಚು ಅಪಾಯದಲ್ಲಿದ್ದಾರೆ ಗೊತ್ತಾ?
ವಯಸ್ಸಾದವರು ಮೂತ್ರಕೋಶದ ಕ್ಯಾನ್ಸರ್ ನ ಹೆಚ್ಚಿನ ಅಪಾಯ(Danger) ಹೊಂದಿರುತ್ತಾರೆ. ಸುಮಾರು 90% ಜನರಲ್ಲಿ 55 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತೆ. ಮಹಿಳೆಯರಿಗಿಂತ ಪುರುಷರಿಗೆ ಮೂತ್ರಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಇದಲ್ಲದೆ, ಕ್ಯಾನ್ಸರ್ನ ವೈಯಕ್ತಿಕ ಮತ್ತು ಕೌಟುಂಬಿಕ ಇತಿಹಾಸ ಹೊಂದಿದ್ದರೆ ಇದರ ಅಪಾಯ ಜಾಸ್ತಿ.
ಮೂತ್ರಕೋಶದ ಕ್ಯಾನ್ಸರ್ ಅಪಾಯವು ಯಾವಾಗ ಹೆಚ್ಚಾಗುತ್ತೆ ?
ಸಿಗರೇಟು(Cigarette), ಸಿಗಾರ್ ಅಥವಾ ಪೈಪ್ ಸೇದೋದರಿಂದ ಮೂತ್ರಕೋಶದ ಕ್ಯಾನ್ಸರ್ ನ ಅಪಾಯ ಹೆಚ್ಚು.
ಆರ್ಸೆನಿಕ್, ಕಲರ್ಸ್, ರಬ್ಬರ್, ಚರ್ಮ, ಕ್ಲಾತ್ ಮತ್ತು ಪೈಂಟ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ.
ಸೈಕ್ಲೋಫಾಸ್ಫಾಮೈಡ್ ಎಂಬ ಔಷಧವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತೆ , ಇದು ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ. ಇದಲ್ಲದೇ ರಿಪೀಟೆಡ್ ಯೂರಿನ್ ಇನ್ಫೆಕ್ಷನ್(Urine infection) ಅಥವಾ ಉರಿಯೂತ, ಮೂತ್ರಕೋಶದ ಕ್ಯಾನ್ಸರ್ ನ ಅಪಾಯ ಜಾಸ್ತಿ ಮಾಡುತ್ತೆ.
ರಕ್ಷಿಸೋದು ಹೇಗೆ?
ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಎಲ್ಲಾ ರಿತಿಯ ಕೆಮಿಕಲ್ ಗಳಿಂದ ಸಾಧ್ಯವಾದಷ್ಟು ದೂರವಿರಿ.
ಸಾರ್ವಜನಿಕ ನಲ್ಲಿ(Tap) ಬಳಸೋದನ್ನು ತಪ್ಪಿಸಿ. ಯಾಕೆಂದರೆ ಅಲ್ಲಿ ಉತ್ತಮ ನೀರು ಬರುವ ಸಾಧ್ಯತೆ ಇಲ್ಲ.
ಧೂಮಪಾನ ಮಾಡಬೇಡಿ. ಮಾಡುತ್ತಿದ್ದರೆ, ಬಿಡಲು ಪ್ರಯತ್ನಿಸಿ.
ವಿವಿಧ ಬಣ್ಣಬಣ್ಣದ ಹಣ್ಣು ಮತ್ತು ತರಕಾರಿಗಳಿಂದ (Fruits and vegetables) ಸಮೃದ್ಧವಾಗಿರುವ ಆಹಾರ ಆರಿಸಿ.
ಮೂತ್ರಕೋಶದ ಕ್ಯಾನ್ಸರ್ ತಡೆಗಟ್ಟಲು ಯಾವುದೇ ಸ್ಟ್ರಿಕ್ಟ್ ಮಾರ್ಗವಿಲ್ಲದಿದ್ದರೂ, ಇದರ ಅಪಾಯ ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬಹುದು.
ವೈದ್ಯರನ್ನು ಯಾವಾಗ ಕನ್ಸಲ್ಟ್ ಮಾಡಬೇಕು (Consult doctor)
ನಿಮ್ಮ ಮೂತ್ರದ ಬಣ್ಣ ಡಲ್ ಆಗಿದ್ದು, ಅದರಲ್ಲಿ ರಕ್ತವಿರಬಹುದು ಎಂದು ನಿಮಗನಿಸಿದರೆ, ಅದನ್ನು ಟೆಸ್ಟ್ ಮಾಡಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇದಲ್ಲದೇ ಪದೇ ಪದೇ ಮೂತ್ರ ವಿಸರ್ಜನೆ ಮೊದಲಾದ ಸಮಸ್ಯೆ ಕಂಡು ಬಂದರೂ ಸಹ ನೀವು ವೈದ್ಯರಲ್ಲಿ ಪರೀಕ್ಷಿಸಿ.