Asianet Suvarna News Asianet Suvarna News

ಯೂರಿನ್ ಇನ್ಫೆಕ್ಷನ್ ಹೆಣ್ಮಕ್ಕಲ್ಲೇ ಜಾಸ್ತಿ ಯಾಕೆ?

  • ಪುರುಷ, ಮಹಿಳೆ ಇಬ್ಬರೂ ಮೂತ್ರಕೋಶ ಸೋಂಕಿಗೆ ತುತ್ತಾಗಬಹುದು. ಆದರೆ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ತುತ್ತಾಗುತ್ತಾರೆ. ಅದಕ್ಕೆ ಅವರ ಅಂಗರಚನೆ ಕಾರಣ.
  • ಜೀವನಶೈಲಿ ಸಹ ಮೂತ್ರಕೋಶ ಸೋಂಕು ತರಬಲ್ಲದು. ದೀರ್ಘಕಾಲ ಒಂದೇ ಕಡೆ ಕುಳಿತಿರುವುದು, ಜಾಸ್ತಿ ನಡೆದಾಡದೇ ಇರುವುದು, ಮೂತ್ರನಾಳ ಕಿರಿದಾಗಿದ್ದರೆ ಕೂಡ ಸೋಂಕಿನ ಅಪಾಯ ಹೆಚ್ಚು.
Urine infection affect women more than men
Author
Bengaluru, First Published Sep 20, 2018, 4:52 PM IST

ಹೆಚ್ಚಿನ ಪ್ರಕರಣಗಳಲ್ಲಿ 24 ರಿಂದ 48 ಗಂಟೆಗಳ ಒಳಗೆ ಮೂತ್ರಕೋಶ ಸೋಂಕು ನಿವಾರಣೆ ಆಗುತ್ತದೆ. ತೀರಾ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಬ್ಯಾಕ್ಟೀರಿಯಾಗಳು ಆ್ಯಂಟಿಬಯೊಟಿಕ್‌ಗಳಿಗೆ ಸ್ಪಂದಿಸದೇ ಇರಬಹುದು. ಅಂತಹ ಸಂದರ್ಭಗಳಲ್ಲಿ ಪರಿಸ್ಥಿತಿ ಕೊಂಚ ಗಂಭೀರವಾಗಿದೆ ಎಂದೇ ಭಾವಿಸಿಕೊಳ್ಳಬೇಕು. ಏಕೆಂದರೆ ಸೋಂಕು ಮೂತ್ರಪಿಂಡ(ಕಿಡ್ನಿ)ಗಳಿಗೂ ಹರಡಿರುವ ಅಪಾಯ ಇರುತ್ತದೆ.

ವಿಸ್ತೃತ ಪರೀಕ್ಷೆಗಳ ಮೂಲಕ ಅದನ್ನು ನಿರ್ಧರಿಸಿಕೊಂಡು ಚಿಕಿತ್ಸೆ ಸ್ವರೂಪ ನಿರ್ಧರಿಸಬೇಕಾಗುತ್ತದೆ. ಪುರುಷ, ಮಹಿಳೆ ಇಬ್ಬರೂ ಮೂತ್ರಕೋಶ ಸೋಂಕಿಗೆ ತುತ್ತಾಗಬಹುದು. ಆದರೆ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ತುತ್ತಾಗುತ್ತಾರೆ. ಅದಕ್ಕೆ ಅವರ ಅಂಗರಚನೆ ಕಾರಣ. ಅಷ್ಟೇ ಅಲ್ಲ, ಮೇಲಿಂದ ಮೇಲೆ ಮೂತ್ರಕೋಶ ಸೋಂಕಿಗೆ ತುತ್ತಾಗುವ ಸಂಭವಗಳೂ ಹೆಚ್ಚು. ಸ್ತ್ರೀಯರಲ್ಲಿ ಮೂತ್ರದ್ವಾರ ಚಿಕ್ಕದಾಗಿರುತ್ತದೆ. ಹೀಗಾಗಿ ಬ್ಯಾಕ್ಟೀರಿಯಾಗಳು ಮೂತ್ರಕೋಶವನ್ನು ತಲುಪುವುದು ಸುಲಭ. ಅಲ್ಲದೇ ಅವರಲ್ಲಿ ಮೂತ್ರ ದ್ವಾರವು ಗುದನಾಳಗಳಿಗೆ ಬಹಳ ಸಮೀಪದಲ್ಲಿರುತ್ತದೆ. ಇದರರಿಂದ ಬ್ಯಾಕ್ಟೀರಿಯಾ ಬಹು ಸುಲಭವಾಗಿ ಮೂತ್ರನಾಳಗಳಲ್ಲಿ ಸಂಚರಿಸಬಹುದು.

ಹೀಗಾಗಿ ಮಹಿಳೆಯರು ಸ್ವಚ್ಛತೆ ಬಗ್ಗೆ ಗಮನ ಕೊಡುವುದು ಅಗತ್ಯ. ಜೀವನಶೈಲಿ ಸಹ ಮೂತ್ರಕೋಶ ಸೋಂಕು ತರಬಲ್ಲದು. ದೀರ್ಘಕಾಲ ಒಂದೇ ಕಡೆ ಕುಳಿತಿರುವುದು, ಜಾಸ್ತಿ ನಡೆದಾಡದೇ ಇರುವುದು, ಗರ್ಭಧಾರಣೆ ಇವೆಲ್ಲವೂ ಮೂತ್ರಕೋಶ ಸೋಂಕಿಗೆ ಕಾರಣವಾಗಬಹುದು. ಮೂತ್ರಕೋಶ ಅಥವಾ ಮೂತ್ರದ್ವಾರದಲ್ಲಿ ಅಡೆತಡೆಗಳಿದ್ದರೆ, ಈ ಅಂಗಗಳಲ್ಲಿ ಗಾಯಗಳಾಗಿದ್ದರೆ, ಮೂತ್ರನಾಳ ಕಿರಿದಾಗಿದ್ದರೆ ಕೂಡ ಸೋಂಕಿನ ಅಪಾಯ ಹೆಚ್ಚು.

Follow Us:
Download App:
  • android
  • ios