ಹೃದಯಾಘಾತದ ಅಪಾಯವನ್ನು ತಪ್ಪಿಸಬೇಕೇ? ಹಾಗಿದ್ರೆ ಮಿಸ್ ಮಾಡದೆ ಇದನ್ನ ತಿನ್ನಿ
ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಅಪಾಯ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಏನು ಗೊತ್ತಾ? ಅದು ನಿಮ್ಮ ಜೀವನ ಶೈಲಿ. ಸರಿಯಾದ ಲೈಫ್ ಸ್ಟೈಲ್ ಹೊಂದಿರದ ಕಾರಣ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಂತಹ ರೋಗಗಳಿಂದ ತೊಂದರೆಗೀಡಾಗಿದ್ದಾರೆ. ಹೀಗೆ ಮುಂದುವರೆದರೆ ಆರೋಗ್ಯಕ್ಕೆ ಹಾನಿ ಖಚಿತ. ಅದಕ್ಕಾಗಿ ನೀವು ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆಯೂ ಕಾಳಜಿ ವಹಿಸಬೇಕು.
ನೀವು ಏನೆನೋ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಿದರೆ, ಅದು ಕೊಲೆಸ್ಟ್ರಾಲ್ ಅನ್ನು(Cholestrol) ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ, ದೇಹದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾದರೆ, ಇದು ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಹಾಗಾದರೆ ಹೃದ್ರೋಗದ ಸಮಸ್ಯೆಗಳನ್ನು ತಪ್ಪಿಸಲು ಏನು ಮಾಡಬೇಕು? ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸುವ ಮೂಲಕ ಹೃದಯಾಘಾತದ(Heart Attack) ಅಪಾಯವನ್ನು ಕಡಿಮೆ ಮಾಡಬಹುದು. ಹಾಗಿದ್ರೆ ನೀವು ಏನು ಬದಲಾವಣೆ ಮಾಡಬೇಕು ಅನ್ನೋ ಕುತೂಹಲ, ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಮುಂದೆ ಓದಿ…
ಹೃದ್ರೋಗಿಗಳಿಗೆ ಹಣ್ಣು
ಬೆರ್ರಿಗಳು(Berry) ಮತ್ತು ದ್ರಾಕ್ಷಿಗಳು- ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೀವು ಸ್ಟ್ರಾಬೆರಿಗಳು, ಬ್ಲೂಬೆರ್ರಿಗಳು, ರಾಸ್ಬೆರಿಗಳು ಮತ್ತು ದ್ರಾಕ್ಷಿಗಳಂತಹ ಎಲ್ಲಾ ರೀತಿಯ ಬೆರ್ರಿಗಳನ್ನು ಸೇವಿಸಬೇಕು. ಅವು ಉತ್ತಮ ಪ್ರಮಾಣದ ಪೆಕ್ಟಿನ್ ಅನ್ನು ಹೊಂದಿರುತ್ತವೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಉತ್ತಮ ಆರೋಗ್ಯವನ್ನು ನೀಡುತ್ತದೆ.
ಸೇಬುಗಳು ಮತ್ತು ಸಿಟ್ರಸ್ ಹಣ್ಣುಗಳು(Citrus Fruit) - ಈ ಹಣ್ಣುಗಳು ಸಾಕಷ್ಟು ನಾರಿನಂಶವನ್ನು ಹೊಂದಿರುತ್ತವೆ. ಅವು ಪೆಕ್ಟಿನ್ ಎಂಬ ವಿಶೇಷ ಕರಗುವ ನಾರನ್ನು ಹೊಂದಿರುತ್ತವೆ. ಈ ಹಣ್ಣುಗಳನ್ನು ನಿಮ್ಮ ಪ್ರತಿದಿನದ ಡಾಯಟ್ ನಲ್ಲಿ ಸೇರಿಸಿ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಆವಕಾಡೊ(Avacado) - ಇದನ್ನು ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಆವಕಾಡೊವು ಮೊನೊಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ನಾರುಗಳನ್ನು ಹೊಂದಿರುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಹಸಿರು ಸೊಪ್ಪು (Green leaves)ತರಕಾರಿಗಳು- ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೀವು ನಿಯಮಿತವಾಗಿ ಹಸಿರು ತರಕಾರಿಗಳನ್ನು ತಿನ್ನುವುದನ್ನು ಮರೆಯಬಾರದು. ಪಾಲಕ್ ಮತ್ತು ಸೊಪ್ಪುಗಳಂತಹ ಹಸಿರು ಎಲೆ ತರಕಾರಿಗಳು ಲ್ಯೂಟೀನ್ ಮತ್ತು ಕ್ಯಾರೋಟಿನಾಯ್ಡ್ ಗಳನ್ನು ಹೊಂದಿರುತ್ತವೆ, ಇದು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಬದನೆಕಾಯಿ(Brinjal)- ಬದನೆಕಾಯಿ ಕೊಲೆಸ್ಟ್ರಾಲ್ ರೋಗಿಗಳಿಗೆ ಪ್ರಯೋಜನಕಾರಿ ತರಕಾರಿಯಾಗಿದೆ. ಬದನೆಕಾಯಿ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಬದನೆಕಾಯಿ ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮತ್ತೇಕೆ ತಡ ಇಂದೇ ಮನೆಗೆ ಬದನೆಕಾಯಿ ತಂದು ಗೊಜ್ಜು ಮಾಡಿ ಸೇವಿಸಿ.
ಟೊಮೆಟೊ- ಟೊಮೆಟೊ (Tomato) ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಟೊಮೆಟೊದ ರಸವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಟೊಮೆಟೊವನ್ನು ಪ್ರತಿದಿನ ತಿನ್ನಬೇಕು. ಇನ್ನು ಮುಂದೆ ಈ ಎಲ್ಲಾ ಹಣ್ಣು, ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಇದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತೆ.