ಕಬ್ಬಿಣಾಂಶದ ಕೊರತೆಯೇ? ಇಲ್ಲಿವೆ ಸಮಸ್ಯೆ ನಿವಾರಿಸುವ ಆಹಾರಗಳು
ರಕ್ತಹೀನತೆಗೆ ಸಮಾನಾರ್ಥಕವಾದ ಕಬ್ಬಿಣದ ಕೊರತೆ ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳ ಕೊರತೆಯಿಂದ ಉಂಟಾಗುವ ಒಂದು ಸ್ಥಿತಿಯಾಗಿದೆ. ಕಬ್ಬಿಣದ ಅಂಶದ ಕೊರತೆ ಎದುರಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಇದನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಒಳ್ಳೆಯದು. ತಲೆ ಸುತ್ತುವುದು, ಆಯಾಸ, ರಕ್ತದ ಕೊರತೆ ಇವೆಲ್ಲವೂ ಕಭ್ಭಿಣಾಂಶದ ಕೊರತೆಯಿಂದ ಉಂಟಾಗುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಲು ಸೇವಿಸಲೇಬೇಕಾದ ಪ್ರಮುಖ ಆಹಾರಗಳು ಇವು.
ಕಬ್ಬಿಣದ ಕೊರತೆ ವಿರುದ್ಧ ಹೋರಾಡಲು ಅತ್ಯುತ್ತಮ ಆಹಾರಗಳು, ಇವುಗಳನ್ನು ಸೇವಿಸಿ ಸಮಸ್ಯೆಗಳನ್ನು ದೂರ ಓಡಿಸಿ...
ಹಸಿರು ಸೊಪ್ಪು: ಪಾಲಕ್, ಕೇಲ್ ಮತ್ತು ಸ್ವಿಸ್ ಚಾರ್ಡ್ ನಂತಹ ಸೊಪ್ಪುಗಳು ಕಬ್ಬಿಣಾಂಶವನ್ನು ತುಂಬುತ್ತವೆ ಮತ್ತು ರಕ್ತಹೀನತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಕೆಂಪು ಮಾಂಸ: ಕೆಂಪು ಮಾಂಸವು ಕಬ್ಬಿಣಾಂಶದ ಒಂದು ದೊಡ್ಡ ಮೂಲವಾಗಿದ್ದು, ರಕ್ತಹೀನತೆಯಿಂದ ಬಳಲಿರುವ ಜನರಿಗೆ ಇದು ಒಂದು ಸೂಪರ್ ಫುಡ್ ಆಗಿದೆ.
ಸೀ ಫುಡ್ : ಅನೇಕ ಅಧ್ಯಯನಗಳ ಪ್ರಕಾರ, ಪ್ರತಿದಿನ ಮೀನು ತಿನ್ನುವವರಲ್ಲಿ ಕಬ್ಬಿಣದ ಕೊರತೆಯಾಗುವ ಸಾಧ್ಯತೆ ಕಡಿಮೆ.
ಕೋಳಿ: ಕೋಳಿ ಮಾಂಸ ಮತ್ತು ಮೊಟ್ಟೆಗಳಂತಹ ಕೋಳಿ ಉತ್ಪನ್ನಗಳು ಕಬ್ಬಿಣಾಂಶವನ್ನು ಹೊಂದಿದ್ದು, ಇದು ಜನರಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಾಳು ಮತ್ತು ಬೇಳೆ: ನೀವು ಸಸ್ಯಾಹಾರಿಯಾಗಿದ್ದರೆ, ಕಾಳುಗಳು ನಿಮ್ಮ ಕಬ್ಬಿಣದ ಸೇವನೆಯನ್ನು ಉತ್ತಮಗೊಳಿಸುವ ಕೆಲವು ಅತ್ಯುತ್ತಮ ವಿಧಾನಗಳಾಗಿವೆ.
ಡ್ರೈ ಫ್ರೂಟ್ : ಡ್ರೈ ಫ್ರೂಟ್ ಗಳು, ವಾಲ್ ನಟ್, ಗೋಡಂಬಿ ಮತ್ತು ಬಾದಾಮಿಗಳು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ರಕ್ತದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಪೂರ್ಣ-ಧಾನ್ಯಗಳು: ಓಟ್ಸ್, ಕ್ವಿನೊವಾ, ಗೋಧಿ,ಮುಂತಾದ ಧಾನ್ಯಗಳು ಕಬ್ಬಿಣಾಂಶದಿಂದ ಸಮೃದ್ಧವಾಗಿವೆ. ಜೊತೆಗೆ ಇವು ಜೀರ್ಣಾಂಗಗಳ ಆರೋಗ್ಯಕ್ಕೂ ಅತ್ಯುತ್ತಮವಾಗಿವೆ.
ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಇತರ ಪೌಷ್ಟಿಕ ಆಹಾರಗಳೊಂದಿಗೆ ಇದು ಕಬ್ಬಿಣದ ಸೇವನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.