ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸೂಚಿಸುವ ಚಿಹ್ನೆಗಳಿವು, ನಿರ್ಲಕ್ಷಿಸಬೇಡಿ
ಇಂದಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಹೆಚ್ಚಿನ ಜನರಲ್ಲಿ ಕೊಲೆಸ್ಟ್ರಾಲ್ (Cholesterol) ಸಮಸ್ಯೆ ಕಂಡು ಬರುತ್ತದೆ. ಇಂತಹ ಸಮಯದಲ್ಲಿ ಜನರು ಕೆಲವೊಂದು ವಿಚಾರಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಹಾಗಿದ್ರೆ ದೇಹದಲ್ಲಿ (Body) ಕೊಬ್ಬು ಹೆಚ್ಚಾಗಿದೆ ಎಂದು ತಿಳಿಯುವುದು ಹೇಗೆ?
ದೇಹದಲ್ಲಿ ಕೊಬ್ಬು( Cholesterol)ಹೆಚ್ಚಾಗಲು ನಮ್ಮ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ದೇಹದಲ್ಲಿ ಇರುವ ಕೆಲವೊಂದು ಅಂಶಗಳು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವುದು. ಆದರೆ ಇದರಿಂದ ಅನಾರೋಗ್ಯಗಳು ಕೂಡ ಬರಬಹುದು. ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಹೃದಯರಕ್ತನಾಳದ ಕಾಯಿಲೆ, ಪರಿಧಮನಿಯ ಕಾಯಿಲೆ (Disease) ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಅಧಿಕ ಕೊಲೆಸ್ಟ್ರಾಲ್ ರೋಗಲಕ್ಷಣಗಳ ಕೊರತೆಯನ್ನು ಹೊಂದಿದೆ, ಈ ಕಾರಣದಿಂದಾಗಿ ಇದನ್ನು ಹೆಚ್ಚಾಗಿ ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಗುರುತಿಸಲು ರಕ್ತ ಪರೀಕ್ಷೆ (Blood test) ಅಗತ್ಯವಿದೆ.
ಕೊಲೆಸ್ಟ್ರಾಲ್ಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು, ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವುದು. ಅಧಿಕ ಕೊಲೆಸ್ಟ್ರಾಲ್ ಮತ್ತು ಅಪಧಮನಿ ಸಮಸ್ಯೆಯ ಅಪಾಯವು ಒಂದಕ್ಕೊಂದು ಸಂಬಂಧಿಸಿದ್ದಾಗಿದೆ. ಹೀಗಿದ್ದೂ ಜನರು ಸಾಮಾನ್ಯವಾಗಿ ಅಧಿಕ ತೂಕ ಅಥವಾ ದೇಹದ ಕೊಬ್ಬನ್ನು ಅಧಿಕ ಕೊಲೆಸ್ಟ್ರಾಲ್‌ನ ಸೂಚಕಗಳಾಗಿ ಕಾಣುತ್ತಾರೆ. ಆದರೆ ನಿಮ್ಮ ಕಾಲು ಮತ್ತು ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದಾದ ಕೆಲವು ಎಚ್ಚರಿಕೆ ಚಿಹ್ನೆಗಳು ಇವೆ. ಅವುಗಳು ಯಾವುವು ಎಂದು ತಿಳಿದುಕೊಳ್ಳೋಣ.
Health Tips : ಹಾರ್ಟ್ ಗಟ್ಟಿಯಾಗಿರ್ಬೇಕೆಂದ್ರೆ ಇದರ ಬೀಜ ಕಸಕ್ಕೆ ಎಸಿಬೇಡಿ
ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂದು ತಿಳಿಯುವುದು ಹೇಗೆ ?
ಶೀತ ಪಾದಗಳು ಮತ್ತು ಕಾಲುಗಳು: ಅಧಿಕ ಕೊಲೆಸ್ಟರಾಲ್ ಮಟ್ಟಗಳು ನಿಮ್ಮ ಪಾದಗಳು (Leg) ಅಥವಾ ಕಾಲುಗಳು ಬೇಸಿಗೆಯಲ್ಲಿಯೂ ಸಹ ಕಾಲುಗಳು ತಣ್ಣಗಿರುವಂತೆ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಇರುವ ಸೂಚನೆಯಾಗಿರಬಹುದು.
ಚರ್ಮದ ಬಣ್ಣ ಬದಲಾವಣೆ: ಅಧಿಕ ಕೊಲೆಸ್ಟ್ರಾಲ್‌ನಿಂದ ರಕ್ತದ ಹರಿವು ಕಡಿಮೆಯಾಗುವುದರಿಂದ ಚರ್ಮದ ಬಣ್ಣ (skin color) ಬದಲಾಗುತ್ತದೆ. ಏಕೆಂದರೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುವ ರಕ್ತದ ಹರಿವು ಕಡಿಮೆಯಾಗುವುದರಿಂದ ಜೀವಕೋಶಗಳು ಸರಿಯಾದ ಪೋಷಣೆಯನ್ನು ಪಡೆಯುವುದಿಲ್ಲ. ಇದರಿಂದ ಚರ್ಮವು ತೆಳುವಾಗಿ ಕಾಣುವಂತೆ ಮಾಡುತ್ತದೆ.
ಕಾಲು ನೋವು: ಕಾಲು ನೋವು ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ನಿಮ್ಮ ಕಾಲುಗಳ ಅಪಧಮನಿಗಳು ಮುಚ್ಚಿಹೋಗಿರುವಾಗ, ಸಾಕಷ್ಟು, ಅಗತ್ಯವಿರುವ ಪ್ರಮಾಣದ ಆಮ್ಲಜನಕ-ಸಮೃದ್ಧ ರಕ್ತವು ಕಾಲನ್ನು ತಲುಪುವುದಿಲ್ಲ. ಇದರಿಂದ ಕಾಲು ಭಾರವಾದಂತೆ, ದಣಿದಂತೆ ಅನುಭವವಾಗುತ್ತದೆ. ಹೆಚ್ಚಿನ ಕೊಲೆಸ್ಟರಾಲ್ ಮಟ್ಟವನ್ನು ಹೊಂದಿರುವ ಜನರಲ್ಲಿ ಈ ನೋವು ಕಂಡುಬರುತ್ತದೆ. ತೊಡೆ ಅಥವಾ ಪೃಷ್ಠದವರೆಗೆ ಕಾಲಿನ ಯಾವುದೇ ಭಾಗದಲ್ಲಿ ನೋವು ಅನುಭವಿಸಬಹುದು ಮತ್ತು ಅದು ಒಂದು ಅಥವಾ ಎರಡೂ ಕಾಲುಗಳಲ್ಲಿ ಇರಬಹುದು.
ಕೊಬ್ಬು ಕರಗಬೇಕಾ? ಈ ಮೂರು ವಸ್ತುಗಳನ್ನು ತಿಂದು ನೋಡಿ!
ವಾಕಿಂಗ್, ಜಾಗಿಂಗ್ ಮತ್ತು ಮೆಟ್ಟಿಲು ಹತ್ತುವಂತಹ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಇದು ಹೆಚ್ಚಾಗಿ ಸಂಭವಿಸುತ್ತದೆ. ನೀವು ವಿಶ್ರಾಂತಿ ತೆಗೆದುಕೊಳ್ಳುವಾಗ ಈ ಅಸ್ವಸ್ಥತೆಯು ಸಾಮಾನ್ಯವಾಗಿ ಹೋಗುತ್ತದೆ. ಕಾಲುಗಳನ್ನು ಮತ್ತೆ ಚಲಿಸಲು ಪ್ರಾರಂಭಿಸಿದಾಗ ಮತ್ತೆ ಸಮಸ್ಯೆ ಎದುರಾಗುತ್ತದೆ.
ರಾತ್ರಿಯಲ್ಲಿ ಸೆಳೆತ: ನಿದ್ರಿಸುವಾಗ ತೀವ್ರವಾದ ಕಾಲಿನ ಸೆಳೆತವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳ ಮತ್ತೊಂದು ಸಾಮಾನ್ಯ ಲಕ್ಷಣವಾಗಿದೆ. ಸಾಮಾನ್ಯವಾಗಿ ಹಿಮ್ಮಡಿ, ಮುಂಗಾಲು ಅಥವಾ ಕಾಲ್ಬೆರಳುಗಳಲ್ಲಿ ನೋವು ಕಂಡು ಬರುತ್ತದೆ.
ವಾಸಿಯಾಗದ ಹುಣ್ಣುಗಳು: ಕಾಲು ಅಥವಾ ಪಾದದ ಹುಣ್ಣುಗಳು ಕಂಡು ಬರುತ್ತವೆ. ಚಿಕಿತ್ಸೆಯಿಲ್ಲದೆ, ಈ ರೀತಿಯ ಹುಣ್ಣುಗಳು ಮರುಕಳಿಸಬಹುದು. ಈ ಸ್ಥಿತಿಯು ಸಾಮಾನ್ಯವಾಗಿ ಕಳಪೆ ರಕ್ತಪರಿಚಲನೆಯಿಂದ ಉಂಟಾಗುತ್ತದೆ. ವಾಸಿಯಾಗದ ಅಥವಾ ನಿಧಾನವಾಗಿ ವಾಸಿಯಾಗದ ಹುಣ್ಣುಗಳು ಅಧಿಕ ಕೊಲೆಸ್ಟ್ರಾಲ್ ನಿಮ್ಮ ಕಾಲುಗಳಿಗೆ ರಕ್ತದ ಹರಿವನ್ನು ಕಡಿತಗೊಳಿಸುತ್ತಿದೆ ಎಂದು ಸೂಚಿಸಬಹುದು