ಕೇವಲ ಒಂದು ಚಿಟಿಕೆ ಸುಣ್ಣದಿಂದ, ದೇಹವು ಸೂಪರ್ ಆಕ್ಟಿವ್ ಆಗಿರುತ್ತೆ!
ಸುಣ್ಣದ (Limestone) ಬಗ್ಗೆ ನಿಮಗೆ ಗೊತ್ತಿರಬೇಕಲ್ವಾ? ಇದನ್ನು ಹಲವಾರು ರೀತಿಯಲ್ಲಿ ಬಳಕೆ ಮಾಡಲಾಗುತ್ತೆ. ಪಾನ್ ತಿನ್ನಲು ಮಾತ್ರವಲ್ಲದೆ ಸುಣ್ಣವನ್ನು ಆರೋಗ್ಯದ (Health) ದೃಷ್ಟಿಯಿಂದ ಸಹ ಬಳಸಲಾಗುತ್ತದೆ ಅನ್ನೋದು ನಿಮಗೆ ಗೊತ್ತಾ?. ಮಾನವ ದೇಹಕ್ಕೆ ಕ್ಯಾಲ್ಸಿಯಂ (Calcium) ಹೆಚ್ಚು ಅಗತ್ಯವಿದೆ ಮತ್ತು ಸುಣ್ಣವು ಹೇರಳವಾದ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದನ್ನ ಸೇವಿಸೋದ್ರಿಂದ ಹಲವಾರು ಪ್ರಯೋಜನಗಳನ್ನು ಹೊಂದಿದೆ.
ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರೋ ಸುಣ್ಣವನ್ನು ಸೇವಿಸೋದ್ರಿಂದ ಮೂಳೆಗಳು ಬಲವಾಗಿರುತ್ತೆ. ಇದನ್ನು ಯಾರು ಬೇಕಾದರೂ ಸೇವಿಸಬಹುದು. ಅನೇಕ ರೋಗಗಳನ್ನು ಹೋಗಲಾಡಿಸಲು ಸುಣ್ಣವು ಸಹಕಾರಿಯಾಗಿದೆ. ಹಾಗಿದ್ರೆ ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನ ನೋಡೋಣ..
ಮೂಳೆಗಳಲ್ಲಿ(Bone) ನೋವು ಇದ್ದರೆ, ಒಂದು ಅಥವಾ ಎರಡು ಟೀ ಚಮಚ ಸುಣ್ಣದ ನೀರನ್ನು ಸೇವಿಸಿ. ಹೀಗೆ ಮಾಡುವುದರಿಂದ ಮೂಳೆಗಳು ಬಲಗೊಳ್ಳುವುದಲ್ಲದೆ ನೋವನ್ನು ನಿವಾರಿಸುತ್ತದೆ. ಆದರೆ ಇದನ್ನು ಟ್ರೈ ಮಾಡೋ ಮುನ್ನ ವೈದ್ಯರ ಬಳಿ ಸಲಹೆ ಕೇಳಿದ್ರೆ ಒಳ್ಳೇದು.
ಪದೇ ಪದೇ ಮೂತ್ರ(Urine) ಮಾಡುವುದು, ಉರಿ ಮೂತ್ರ ಮೊದಲಾದ ಮೂತ್ರವಿಸರ್ಜನೆಯಲ್ಲಿ ಸಮಸ್ಯೆ ಇದ್ದರೆ, ಸುಣ್ಣದೊಂದಿಗೆ ಎಳ್ಳೆಣ್ಣೆ ಮತ್ತು ಸಕ್ಕರೆಯನ್ನು ಕುಡಿಯುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
chest pain
ಪಕ್ಕೆಲುಬಿನಲ್ಲಿ(Rib cage) ನೋವು ಉಂಟಾದಾಗ, ಬಟ್ಟೆಯ ಮೇಲೆ ಸುಣ್ಣ ಮತ್ತು ಜೇನುತುಪ್ಪವನ್ನು ಹಾಕಿ ಅದಕ್ಕೆ ಬ್ಯಾಂಡೇಜ್ ಮಾಡುವ ಮೂಲಕ ಪಕ್ಕೆಲುಬಿನ ನೋವನ್ನು ತೆಗೆದುಹಾಕಬಹುದು. ಇದು ಶೀಘ್ರ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.
ಕಫ ಅಥವಾ ತಲೆನೋವಿನಿಂದ(Head ache) ತೊಂದರೆಗೀಡಾಗಿದ್ದರೆ, ಸುಣ್ಣ ಮತ್ತು ಅಮೋನಿಯಂ ಕ್ಲೋರೈಡ್ ಅನ್ನು ಮಿಶ್ರಣ ಮಾಡಿ ಮತ್ತು ಅದರ ವಾಸನೆ ತೆಗೆದುಕೊಳ್ಳಿ . ಹಾಗೆ ಮಾಡುವುದು ಒಳ್ಳೆಯದು . ಇಲ್ಲವಾದರೆ ಸುಣ್ಣ ಮತ್ತು ಬೆಲ್ಲವನ್ನು ಮಿಕ್ಸ್ ಮಾಡಿ ಗಂಟಲಿನ ಮೇಲೆ ಹಚ್ಚುವುದರಿಂದ ಕಫ ನಿವಾರಣೆಯಾಗುತ್ತದೆ.
ಹೊಟ್ಟೆಯಲ್ಲಿ ಹುಳುಗಳಿದ್ದರೆ, ಎಳನೀರಿನೊಂದಿಗೆ(Tender coconut) ಬೆರೆಸಿದ ಸುಣ್ಣದ ನೀರನ್ನು ಕುಡಿಯುವುದರಿಂದ ತ್ವರಿತ ಪರಿಹಾರ ಸಿಗುತ್ತದೆ. ಆದರೆ ಹೆಚ್ಚಿನ ಪ್ರಮಾಣದ ಸುಣ್ಣವನ್ನು ಬೆರೆಸದಂತೆ ನೋಡಿ. ಇಲ್ಲವಾದರೆ ಬೇರೊಂದು ಸಮಸ್ಯೆ ಉಂಟಾಗಬಹುದು.
ಹಲ್ಲುಗಳು ತುಂಬಾನೆ ವೀಕ್ ಆಗಿದ್ದು, ಏನಾದರೂ ತಂಪು ಸೇವಿಸಿದಾಗ ಹಲ್ಲುಗಳ ಜುಮ್ಮೆನಿಸುವಿಕೆಯಿಂದ ತೊಂದರೆಯಾಗಿದ್ದರೆ, ಸುಣ್ಣದ ನೀರನ್ನು ಕುಡಿಯಿರಿ, ಅದು ಹಲ್ಲುಗಳನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ ನಿಂದ(Calcium) ಹಲ್ಲುಗಳು ಹೆಚ್ಚು ಸ್ಟ್ರಾಂಗ್ ಆಗುತ್ತವೆ.
ಸುಟ್ಟ ಗಾಯಕ್ಕೆ ಸಹ ಈ ಸುಣ್ಣ ಉತ್ತಮ ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ., ಸ್ವಲ್ಪ ಸುಣ್ಣಕ್ಕೆ ಪ್ಲಾಸ್ ಸೀಡ್(Flax seed) ಎಣ್ಣೆಯನ್ನು ಸೇರಿಸಿ ಮತ್ತು ಸುಟ್ಟ ಜಾಗಕ್ಕೆ ಹಚ್ಚಿ ನೋಡಿ, ಬೇಗ ಗುಣವಾಗುತ್ತದೆ. ಗಾಯವಾಗಿದ್ದರೆ, ಸುಣ್ಣವನ್ನು ಬೆಣ್ಣೆ ಮತ್ತು ಶುಂಠಿಯೊಂದಿಗೆ ಬೆರೆಸಿ ಗಾಯಕ್ಕೆ ಹಚ್ಚಿ.
ಅದೇ ರೀತಿ ಮೊಡವೆಗಳನ್ನು(Pimples) ತೊಡೆದುಹಾಕಲು, ಸ್ವಲ್ಪ ಸುಣ್ಣದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಮೊಡವೆಗಳು ಕೆಲವೇ ದಿನಗಳಲ್ಲಿ ವಾಸಿಯಾಗುತ್ತವೆ. ಬೇಕಿದ್ದರೆ ನೀವೆ ಈ ಮ್ಯಾಜಿಕ್ ಟ್ರೈ ಮಾಡಿ ನೋಡಿ.
ದೇಹದಿಂದ ವಿಷವನ್ನು ಹೊರಹಾಕಲು ನಿಯಮಿತವಾಗಿ ಒಂದು ಅಥವಾ ಎರಡು ಟೀಸ್ಪೂನ್ ಸುಣ್ಣದ ನೀರನ್ನು ಸೇವಿಸಿ. ಇನ್ನು ಉಗುರುಗಳು ದುರ್ಬಲವಾಗಿದ್ದರೆ, ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಕಬ್ಬಿನ ರಸಕ್ಕೆ(Sugar cane juice) ಒಂದು ಟೀ ಚಮಚ ಸುಣ್ಣದ ನೀರನ್ನು ಸೇರಿಸಿ ಕುಡಿಯಿರಿ.
ವಿ. ಸೂಚನೆ : ಸುಣ್ಣದ ನೀರು ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಯೂ ಹೆಚ್ಚಿದೆ. ಆದುದರಿಂದ ಇದನ್ನು ಅತ್ಯಂತ ಸ್ವಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಸೇವಿಸಿದ್ರೆ ಮಾತ್ರ ಆರೋಗ್ಯಕ್ಕೆ ಉತ್ತಮವಾಗಿರುತ್ತೆ. ಇದನ್ನು ಸೇವಿಸೋ ಮೊದಲು ವೈದ್ಯರ ಬಳಿ ಸಲಹೆ(Consult Doctor) ಕೇಳೋದು ಉತ್ತಮ.