MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • 40ರ ನಂತ್ರ ಈ ಸಮಸ್ಯೆ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಮೆನೋಪಾಸ್‌ನ ಮೂರು ಹಂತ ನಿಮಗೆ ತಿಳಿದಿರಲಿ

40ರ ನಂತ್ರ ಈ ಸಮಸ್ಯೆ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಮೆನೋಪಾಸ್‌ನ ಮೂರು ಹಂತ ನಿಮಗೆ ತಿಳಿದಿರಲಿ

ಮಹಿಳೆಯರ ವಯಸ್ಸು 40 ವರ್ಷ ದಾಟುತ್ತಿದ್ದಂತೆ ದೇಹದಲ್ಲಿಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ವೆ. ಮೆನೋಪಾಸ್ ಮಹಿಳೆಯ ಜೀವನದಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾದ್ರೂ ಈ ಹಂತಕ್ಕೆ ಬರುವ ವೇಳೆಗೆ ಮಹಿಳೆ ಅನೇಕ ಹಂತಗಳನ್ನು ದಾಟಬೇಕು. ಕೆಲವೊಂದನ್ನು ಸಾಮಾನ್ಯ ಅಂತ ಭಾವಿಸಿದ್ರೆ ಅಪಾಯ.

2 Min read
Author : Roopa Hegde
Published : Oct 23 2026, 06:42 PM IST
Share this Photo Gallery
  • FB
  • TW
  • Linkdin
  • Whatsapp
15
ಪೆರಿಮೆನೋಪಾಸ್
Image Credit : Asianet News

ಪೆರಿಮೆನೋಪಾಸ್

ಇದು ಮೆನೋಪಾಸ್ ಆರಂಭವಾಗುವ ಮೊದಲು ಕಾಣಿಸಿಕೊಳ್ಳುವ ಹಂತ. ಈ ಸಮಯದಲ್ಲಿ ಅಂಡಾಶಯಗಳಲ್ಲಿ ಈಸ್ಟ್ರೋಜನ್ ಹಾರ್ಮೋನ್ ಉತ್ಪಾದನೆ ಬದಲಾಗತೊಡಗುತ್ತದೆ. ಸಾಮಾನ್ಯವಾಗಿ 40ರ ಆಸುಪಾಸಿನಲ್ಲಿ ಈ ಹಂತ ಆರಂಭವಾಗಬಹುದು. ಕೆಲವರಲ್ಲಿ ಅದಕ್ಕೂ ಮೊದಲೇ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಪೀರಿಯಡ್ಸ್ ಅನಿಯಮಿತವಾಗುವುದು, ರಾತ್ರಿ ಬೆವರುವುದು ಮತ್ತು ಮೂಡ್ ಸ್ವಿಂಗ್ಗಳು ಈ ಹಂತದ ಲಕ್ಷಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮೆನೋಪಾಸ್
Image Credit : Asianet News

ಮೆನೋಪಾಸ್

ಸತತ 12 ತಿಂಗಳ ಕಾಲ ಪೀರಿಯಡ್ಸ್ ಆಗದಿದ್ದಾಗ, ಬೇರೆ ಯಾವುದೇ ವೈದ್ಯಕೀಯ ಕಾರಣವಿಲ್ಲದಿದ್ದರೆ, ಅದನ್ನು ಮೆನೋಪಾಸ್ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಅಂಡಾಶಯಗಳ ಕಾರ್ಯಕ್ಷಮತೆ ಕಡಿಮೆಯಾಗಿರುತ್ತದೆ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಸಹಜವಾಗಿ ಅಂತ್ಯಗೊಳ್ಳುತ್ತದೆ.

Related Articles

Related image1
Shamonda Virus: ಏನಿದು ಶಮೊಂಡಾ ವೈರಸ್? ಮನುಷ್ಯರಿಗೂ ಹರಡಿದ ಹೊಸ ಅಪಾಯ, WHO ಹೇಳಿದ್ದೇನು?
Related image2
ಬಿಸಿ ಬಿಸಿ ಒಬ್ಬಟ್ಟು – ರೊಟ್ಟಿನಾ ನ್ಯೂಸ್ ಪೇಪರ್ ಮೇಲೆ ಹಾಕೋ ಅಭ್ಯಾಸ ನಿಮಗೂ ಇದ್ಯಾ?
35
ಪೋಸ್ಟ್ಮೆನೋಪಾಸ್
Image Credit : Asianet News

ಪೋಸ್ಟ್ಮೆನೋಪಾಸ್

ಮೆನೋಪಾಸ್ ಆದ ನಂತರದ ಜೀವನದ ಹಂತವನ್ನು ಪೋಸ್ಟ್ಮೆನೋಪಾಸ್ ಎಂದು ಕರೆಯಲಾಗುತ್ತದೆ. ಈ ಹಂತ ಜೀವನಪೂರ್ತಿ ಮುಂದುವರಿಯುತ್ತದೆ. ಈಸ್ಟ್ರೋಜನ್ ಮಟ್ಟ ಕಡಿಮೆಯಾಗಿರುವುದರಿಂದ ಮೂಳೆಗಳ ಸಾಂದ್ರತೆ ಕುಸಿಯುವ ಆಸ್ಟಿಯೊಪೊರೋಸಿಸ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಮುಖ್ಯ.

45
ಮೆನೋಪಾಸ್ನ ಪ್ರಮುಖ ಲಕ್ಷಣಗಳೇನು?
Image Credit : Asianet News

ಮೆನೋಪಾಸ್ನ ಪ್ರಮುಖ ಲಕ್ಷಣಗಳೇನು?

• ದೈಹಿಕ ಲಕ್ಷಣಗಳು : ದೇಹದಲ್ಲಿ ಇದ್ದಕ್ಕಿದ್ದಂತೆ ಬಿಸಿ ಹೆಚ್ಚಾದಂತೆ ಆಗುವುದು, ರಾತ್ರಿ ಬೆವರುವುದು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಸುಸ್ತು, ತಲೆನೋವು, ನಿದ್ರಾಹೀನತೆ, ತೂಕ ಹೆಚ್ಚಾಗುವುದು ಮತ್ತು ಕೂದಲು ಉದುರುವುದು ಕಾಣಿಸಿಕೊಳ್ಳಬಹುದು. ಕೆಲವರಿಗೆ ತ್ವಚೆ ಒಣಗುವುದು ಕೂಡ ಅನುಭವಕ್ಕೆ ಬರಬಹುದು.

• ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು : ಮೂಡ್ ಸ್ವಿಂಗ್ಗಳು, ಸಣ್ಣ ವಿಷಯಕ್ಕೂ ಕಿರಿಕಿರಿಯಾಗುವುದು, ಆತಂಕ, ಬೇಸರ, ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಮತ್ತು ಮರೆವು ಕಾಣಿಸಿಕೊಳ್ಳಬಹುದು. ಇಂತಹ ಬದಲಾವಣೆಗಳು ದೈನಂದಿನ ಜೀವನದ ಮೇಲೂ ಪರಿಣಾಮ ಬೀರುತ್ತದೆ.

•ಮೂತ್ರ ಮತ್ತು ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಲಕ್ಷಣಗಳು : ಯೋನಿಯಲ್ಲಿ ಒಣತನ, ಲೈಂಗಿಕ ಸಂಬಂಧದ ಸಮಯದಲ್ಲಿ ಕಿರಿಕಿರಿ, ಪದೇಪದೇ ಮೂತ್ರ ವಿಸರ್ಜನೆ, ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಾಗುವುದು ಕೆಲವು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಲೈಂಗಿಕ ಆಸಕ್ತಿಯಲ್ಲಿಯೂ ಬದಲಾವಣೆ ಉಂಟಾಗಬಹುದು.

55
ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡ
Image Credit : Asianet News

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡ

ಮೆನೋಪಾಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಹಲವು ಲಕ್ಷಣಗಳನ್ನು ಮಹಿಳೆಯರು ವಯಸ್ಸಾಗುತ್ತಿರುವುದರ ಸಹಜ ಪರಿಣಾಮ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ ಈ ಬದಲಾವಣೆಗಳು ನಿದ್ರೆ, ಮನಸ್ಥಿತಿ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಮೆನೋಪಾಸ್ ಒಂದು ಸಹಜ ಪ್ರಕ್ರಿಯೆಯಾದರೂ, ಪ್ರತಿಯೊಬ್ಬ ಮಹಿಳೆಯ ಅನುಭವವೂ ವಿಭಿನ್ನವಾಗಿರುತ್ತದೆ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಸಲಹೆ ಪಡೆಯುವ ಮೂಲಕ ಈ ಹಂತದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.12 ತಿಂಗಳು ಪೀರಿಯಡ್ಸ್ ಆಗದಿರುವುದು ಮೆನೋಪಾಸ್ನ ಪ್ರಮುಖ ಸೂಚನೆಯಾದರೂ, ಇತರ ಕಾರಣಗಳಿಂದಲೂ ಪೀರಿಯಡ್ಸ್ ನಿಲ್ಲಬಹುದು. ವಿಶೇಷವಾಗಿ 45 ವರ್ಷಕ್ಕಿಂತ ಮೊದಲು ಪೀರಿಯಡ್ಸ್ ನಿಂತರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಮಹಿಳೆಯರು
ಆರೋಗ್ಯ
ಜೀವನಶೈಲಿ
 
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
4th T20 • IND vs WI
Result
INDIND
223
WIWI
247/3
WI beat IND by 24 runs
Schedule ›
2nd T20 • NZ vs IND 2026
NZNZ
Sat, 24 Oct, 2026
INDIND
12:30 pm
Match yet to begin.
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ಧೂಳಿನಿಂದ ಗಲೀಜಾಗಿರೋ ಬಾಗಿಲ ಹ್ಯಾಂಡಲ್​ಗಳು ಫಳಫಳ ಹೊಳೆಯಲು ಸೂಪರ್​ ಟಿಪ್ಸ್​ ಇಲ್ಲಿವೆ
Recommended image2
MINUGU TAARE KALPANA DEATH SECRET: ಆ ಜೋಡಿ ಮಾಡದ ಅದೊಂದೇ ತಪ್ಪಿಗೆ ಮಿನುಗುತಾರೆ ಕಲ್ಪನಾ ಪ್ರಾಣಪಕ್ಷಿ ಹಾರಿಹೋಯ್ತು; ಅಂದು ನಿಜವಾಗಿ ನಡೆದಿದ್ದೇನು?
Recommended image3
ಮಕ್ಕಳಿಗೆ ಎದೆ ಹಾಲುಣಿಸಿದರೆ ಸ್ತನ ಕ್ಯಾನ್ಸರ್ ಬರಲ್ವಾ? ವೈದ್ಯರು ಹೇಳುವ ಸತ್ಯವೇ ಬೇರೆ!
Related Stories
Recommended image1
Shamonda Virus: ಏನಿದು ಶಮೊಂಡಾ ವೈರಸ್? ಮನುಷ್ಯರಿಗೂ ಹರಡಿದ ಹೊಸ ಅಪಾಯ, WHO ಹೇಳಿದ್ದೇನು?
Recommended image2
ಬಿಸಿ ಬಿಸಿ ಒಬ್ಬಟ್ಟು – ರೊಟ್ಟಿನಾ ನ್ಯೂಸ್ ಪೇಪರ್ ಮೇಲೆ ಹಾಕೋ ಅಭ್ಯಾಸ ನಿಮಗೂ ಇದ್ಯಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved