ಸುಂದರವಾಗಿ, ಯಂಗ್ ಆಗಿ ಕಾಣಲು 5-6 ವರ್ಷದಿಂದ ಮೆಡಿಸಿನ್ ತೆಗೆದುಕೊಳ್ಳುತ್ತಿದ್ರು ಶೆಫಾಲಿ ಜರಿವಾಲಾ
ಮೂಲಗಳ ಪ್ರಕಾರ, ನಟಿ ಶೆಫಾಲಿ ಜರಿವಾಲಾ ಜೂನ್ 27ರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಇವರ ಹಠಾತ್ ನಿಧನದ ಸುದ್ದಿ ಅಭಿಮಾನಿಗಳನ್ನು ಮಾತ್ರವಲ್ಲದೆ, ಮನರಂಜನಾ ಉದ್ಯಮದ ತಾರೆಯರನ್ನು ಸಹ ಆಘಾತಕ್ಕೆ ದೂಡಿದೆ.

ನಟಿ, ಮಾಡೆಲ್, ಹಿಂದಿ ಬಿಗ್ ಬಾಸ್ 13 ಖ್ಯಾತಿಯ ಶೆಫಾಲಿ ಜರಿವಾಲಾ ಜೂನ್ 27 ರಂದು ರಾತ್ರಿ 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಶೆಫಾಲಿ ಹಠಾತ್ ಸಾವಿನ ಸುದ್ದಿ ಅವರ ಅಭಿಮಾನಿಗಳನ್ನು ಮಾತ್ರವಲ್ಲದೆ, ಮನರಂಜನಾ ಉದ್ಯಮದ ತಾರೆಯರನ್ನು ದುಃಖಿತರನ್ನಾಗಿ ಮಾಡಿದೆ.
ಗಾಯಕಿ ಮಿಕಾ ಸಿಂಗ್ ಮತ್ತು ಇತರ ಖ್ಯಾತನಾಮರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಚೆನ್ನಾಗಿ ಬದುಕಿದ್ದ ಶೆಫಾಲಿ ಹೇಗೆ ಹಠಾತ್ತನೆ ನಿಧನರಾದರು ಎಂದು ಯೋಚಿಸಿ ಕೆಲವರು ಆಶ್ಚರ್ಯ ಪಡುತ್ತಾರೆ. ಬಹುಶಃ ನೀವು ಸಹ ಅದೇ ರೀತಿ ಯೋಚಿಸುತ್ತಿದ್ದರೆ ಈ ಮಧ್ಯೆ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ ಕಳೆದ ಕೆಲವು ವರ್ಷಗಳಿಂದ ಶೆಫಾಲಿ ಯಂಗ್ ಆಗಿ ಕಾಣಲು ಚಿಕಿತ್ಸೆ ಪಡೆಯುತ್ತಿದ್ದರು.
ಮೂಲಗಳ ಪ್ರಕಾರ, ಶೆಫಾಲಿ ಕಳೆದ 5-6 ವರ್ಷಗಳಿಂದ ಯಂಗ್ ಆಗಿ ಕಾಣಲು ವಿಶೇಷ ಚಿಕಿತ್ಸೆಗೆ ಒಳಗಾಗಿದ್ದರು. ಈ ಸಂಬಂಧ, ಅವರು ಆಂಟಿ ಏಜಿಂಗ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದರು. ತ್ವಚೆ ಉತ್ತಮವಾಗಿ ಮತ್ತು ಚಿಕ್ಕವರಂತೆ ಕಾಣುವಂತೆ ಮಾಡಲು ಸಾಮಾನ್ಯವಾಗಿ ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲಾಗುತ್ತದೆ.
ಆಂಟಿ ಏಜಿಂಗ್ ಟ್ರೀಟ್‌ಮೆಂಟ್‌ನಲ್ಲಿ ಬಳಸುವ ಔಷಧಿಗಳಲ್ಲಿ ಮುಖ್ಯವಾಗಿ ವಿಟಮಿನ್ ಸಿ ಮತ್ತು ಗ್ಲುಟಾಥಿಯೋನ್ ಸೇರಿವೆ. ಗ್ಲುಟಾಥಿಯೋನ್ ಚರ್ಮದ ಸೌಂದರ್ಯ ಮತ್ತು ನಿರ್ವಿಶೀಕರಣ(detoxification)ಕ್ಕೆ ಬಳಸುವ ಔಷಧವಾಗಿದೆ. ಈ ಔಷಧಿಗಳು ಹೃದಯದ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಮತ್ತು ಇದು ಕೇವಲ ಸೌಂದರ್ಯ ಚಿಕಿತ್ಸೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಪ್ರಸ್ತುತ, ವಿಧಿವಿಜ್ಞಾನ ವರದಿ ಮತ್ತು ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಜವಾದ ಕಾರಣ ಬಹಿರಂಗಗೊಳ್ಳುತ್ತದೆ.
ಯಂಗ್ ಗರ್ಲ್ ಎಂದೇ ಜನಪ್ರಿಯರಾಗಿದ್ದ ಶೆಫಾಲಿ, 'ಕಾಂಟಾ ಲಗಾ' ಎಂಬ ಹಿಟ್ ಸಾಂಗ್ ಮತ್ತು 'ಬಿಗ್ ಬಾಸ್ 13' ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಹೆಸರುವಾಸಿಯಾಗಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಅವರ ಸಾವಿನ ಸುದ್ದಿ ತಿಳಿದ ತಕ್ಷಣ, ಚಲನಚಿತ್ರ ಮತ್ತು ಕಿರುತೆರೆ ಜಗತ್ತಿನ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಗಾಯಕಿ ಮಿಕಾ, ನಟ ಅಲಿ ಗೋನಿ, ತೆಹ್ಸೀನ್ ಪೂನಾವಾಲಾ, ನಟ ಪರಸ್ ಛಬ್ರಾ ಶೆಫಾಲಿ ಅವರ ಹಠಾತ್ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.