MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಈ 3 ತರಕಾರಿ ಕಟ್ ಮಾಡಿದ ತಕ್ಷಣ ಅಡುಗೆ ಮಾಡ್ಬೇಡಿ ಎಂದ ಡಾಕ್ಟರ್, ಕಾರಣ ಗೊತ್ತಾದ್ರೆ ನೀವೂ ಖುಷಿಯಾಗ್ತೀರ

ಈ 3 ತರಕಾರಿ ಕಟ್ ಮಾಡಿದ ತಕ್ಷಣ ಅಡುಗೆ ಮಾಡ್ಬೇಡಿ ಎಂದ ಡಾಕ್ಟರ್, ಕಾರಣ ಗೊತ್ತಾದ್ರೆ ನೀವೂ ಖುಷಿಯಾಗ್ತೀರ

Cooking tips for vegetables: ತರಕಾರಿ ತೊಳೆದು, ಕತ್ತರಿಸಿ ತಕ್ಷಣವೇ ಒಲೆ ಮೇಲೆ ಹಾಕುವುದು ನಮ್ಮೆಲ್ಲರ ಅಭ್ಯಾಸ. ಆದರೆ ವೈದ್ಯರ ಪ್ರಕಾರ, ಕೆಲವು ತರಕಾರಿಗಳನ್ನು ಕತ್ತರಿಸಿದ ತಕ್ಷಣ ಅಡುಗೆ ಮಾಡಿದರೆ ಅವುಗಳಲ್ಲಿರುವ ಕ್ಯಾನ್ಸರ್ ವಿರೋಧಿ ಮತ್ತು ಹೃದಯದ ಆರೋಗ್ಯಕ್ಕೆ ಪೂರಕವಾದ ಅಂಶಗಳು ನಶಿಸಿಹೋಗುತ್ತವೆ! 

2 Min read
Author : Ashwini HR
Published : May 22 2026, 02:34 PM IST
Share this Photo Gallery
  • FB
  • TW
  • Linkdin
  • Whatsapp
15
ಇಲ್ಲಿದೆ ಆಸಕ್ತಿದಾಯಕ ಮಾಹಿತಿ
Image Credit : Getty

ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ನಮ್ಮ ದೇಹ ಆರೋಗ್ಯವಾಗಿರಬೇಕೆಂದರೆ ದಿನನಿತ್ಯದ ಆಹಾರದಲ್ಲಿ ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು. ತರಕಾರಿಗಳಲ್ಲಿ ನಾರಿನಂಶ (Fibre) ಮತ್ತು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕಾಯಿಲೆಗಳಿಂದ ದೂರವಿಡುತ್ತವೆ. ಆದರೆ, ಕೆಲವು ನಿರ್ದಿಷ್ಟ ತರಕಾರಿಗಳನ್ನು ಕತ್ತರಿಸಿದ ತಕ್ಷಣ ಅಡುಗೆ ಮಾಡಬಾರದು ಎಂಬ ವಿಷಯ ನಿಮಗೆ ಗೊತ್ತೇ? ಈ ತರಕಾರಿಗಳನ್ನು ಕತ್ತರಿಸಿ ಸ್ವಲ್ಪ ಸಮಯದ ನಂತರ ಅಡುಗೆ ಮಾಡಿದರೆ ಅವುಗಳಲ್ಲಿರುವ ಪೋಷಕಾಂಶಗಳು ಮತ್ತಷ್ಟು ಹೆಚ್ಚಾಗುತ್ತವೆ! ಈ ಬಗ್ಗೆ ಡಾಕ್ಟರ್ ಪಿಳ್ಳೈ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿರುವ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

Add Asianetnews Kannada as a Preferred SourcegooglePreferred
25
1.ಎಲೆಕೋಸು, ಹೂಕೋಸು ಮತ್ತು ಬ್ರೊಕೋಲಿ
Image Credit : Getty

1.ಎಲೆಕೋಸು, ಹೂಕೋಸು ಮತ್ತು ಬ್ರೊಕೋಲಿ

ಎಲೆಕೋಸು, ಹೂಕೋಸು ಮತ್ತು ಬ್ರೊಕೋಲಿ ಈ ಮೂರೂ ಒಂದೇ ಕುಟುಂಬಕ್ಕೆ ಸೇರಿದ ತರಕಾರಿಗಳು. ಇವುಗಳ ಗುಣಗಳೂ ಬಹುತೇಕ ಒಂದೇ ಆಗಿರುತ್ತವೆ.
ವಿಧಾನ: ಇವುಗಳನ್ನು ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆದು ಕಟ್ ಮಾಡಿದ ನಂತರ 30 ರಿಂದ 40 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.
ಗಮನಿಸಿ: ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ, ಗಾಳಿಯಾಡುವ ಜಾಗದಲ್ಲಿ ಇಡಿ.
ಪ್ರಯೋಜನ: ಹೀಗೆ ಮಾಡುವುದರಿಂದ ಇವುಗಳಲ್ಲಿ 'ಸಲ್ಫೊರಾಫೇನ್' (Sulforaphane) ಎಂಬ ಅಂಶ ಹೆಚ್ಚಾಗುತ್ತದೆ. ಇದು ಕ್ಯಾನ್ಸರ್ ತಡೆಗಟ್ಟುವ ಶಕ್ತಿಯನ್ನು ಹೊಂದಿದೆ. ಜೊತೆಗೆ ಇದರಲ್ಲಿರುವ 'ಐಸೊಥಿಯೊಸೈನೇಟ್' ಎಂಬ ಅಂಶವು ಆರೋಗ್ಯಕ್ಕೆ ಬಹಳ ಒಳ್ಳೆಯದು.

Related Articles

Related image1
ವರ್ಷಪೂರ್ತಿ ಹುಣಸೆಹಣ್ಣು ಫ್ರೆಶ್ ಆಗಿರಬೇಕೇ? ಅಮ್ಮಮ್ಮನ ಕಾಲದ ಈ ಉಪ್ಪಿನ ಟ್ರಿಕ್ ಬಳಸಿ
Related image2
ಹಿಟ್ಟು ಹುಳಿಯಾಗದಂತೆ ಹೂವಿನಂತೆ ಮೃದುವಾದ ಇಡ್ಲಿ ಮಾಡಲು ಈ ಟಿಪ್ಸ್ ಫಾಲೋ ಮಾಡಿ
35
2.ಬೆಳ್ಳುಳ್ಳಿ
Image Credit : Getty

2.ಬೆಳ್ಳುಳ್ಳಿ

ನಾವು ದಿನನಿತ್ಯ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುತ್ತೇವೆ. ಸಾಮಾನ್ಯವಾಗಿ ನಾವು ಸಿಪ್ಪೆ ಸುಲಿದ ತಕ್ಷಣ ಅಥವಾ ಜಜ್ಜಿದ ತಕ್ಷಣ ಅಡುಗೆಗೆ ಹಾಕುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ.
ವಿಧಾನ: ಬೆಳ್ಳುಳ್ಳಿಯ ಸಿಪ್ಪೆ ಸುಲಿದು ಅಥವಾ ಸಣ್ಣಗೆ ಕತ್ತರಿಸಿದ ನಂತರ 10-15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಬಳಸಿ.
ಪ್ರಯೋಜನ: ಹೀಗೆ ಮಾಡುವುದರಿಂದ ಬೆಳ್ಳುಳ್ಳಿಯಲ್ಲಿರುವ ಅದ್ಭುತವಾದ 'ಅಲಿಸಿನ್' (Allicin) ಎಂಬ ರಾಸಾಯನಿಕ ಅಂಶ ಹೆಚ್ಚಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

45
3. ಈರುಳ್ಳಿ
Image Credit : Getty

3. ಈರುಳ್ಳಿ

ಸಾಮಾನ್ಯವಾಗಿ ಈರುಳ್ಳಿ ಕತ್ತರಿಸಿ ಹೆಚ್ಚು ಹೊತ್ತು ಹೊರಗಿಡಬಾರದು ಎಂಬ ಮಾತಿದೆ. ಆದರೆ ಡಾಕ್ಟರ್ ಪ್ರಕಾರ:
ವಿಧಾನ: ಈರುಳ್ಳಿಯನ್ನು ಕತ್ತರಿಸಿದ ತಕ್ಷಣ ಬಳಸುವ ಬದಲು 10 ನಿಮಿಷಗಳ ಕಾಲ ಹಾಗೆಯೇ ಇಟ್ಟು ನಂತರ ಬಳಸಿ.
ಪ್ರಯೋಜನ: ಹೀಗೆ ಮಾಡುವುದರಿಂದ ಅದರಲ್ಲಿ ಸಲ್ಫರ್ ಅಂಶ ಹೆಚ್ಚಾಗುತ್ತದೆ. ಇದು ಹೃದಯಾಘಾತದ (Heart Attack) ಅಪಾಯವನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಒಳ್ಳೆಯದೇ, ಇದು ಕಣ್ಣಿನಲ್ಲಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ.

55
ಈ ಅಂಶಗಳು ಗಮನದಲ್ಲಿರಲಿ
Image Credit : Getty

ಈ ಅಂಶಗಳು ಗಮನದಲ್ಲಿರಲಿ

*ಈ ತರಕಾರಿಗಳನ್ನು ಎಣ್ಣೆಯಲ್ಲಿ ಬೇಯಿಸಿ ತಿನ್ನುವುದರಿಂದ ಮತ್ತೊಂದು ಪ್ರಯೋಜನವಿದೆ. ಇವುಗಳಲ್ಲಿರುವ ವಿಟಮಿನ್ ಎ, ಡಿ, ಇ ಮತ್ತು ಕೆ ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳಾಗಿವೆ (ನಮ್ಮ ದೇಹವು ಆಹಾರದಲ್ಲಿರುವ ವಿಟಮಿನ್‌ಗಳನ್ನು ಹೀರಿಕೊಳ್ಳಲು ಎರಡು ಮಾರ್ಗಗಳಿವೆ. ಕೆಲವು ನೀರಿನಲ್ಲಿ ಕರಗುತ್ತವೆ, ಇನ್ನು ಕೆಲವು ಕೊಬ್ಬಿನಲ್ಲಿ ಕರಗುತ್ತವೆ)
*ಅಡುಗೆಗೆ ಗಾಣದ ಎಣ್ಣೆ ಬಳಸುವುದು ಇನ್ನು ಉತ್ತಮ.
*ಉಪ್ಪನ್ನು ಮಿತವಾಗಿ ಬಳಸಿ.
*ಈ 3 ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ. ಫ್ರಿಡ್ಜ್‌ನಲ್ಲಿ ಇಡುವುದರಿಂದ ಇವುಗಳಲ್ಲಿರುವ ವಿಟಮಿನ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳ ಪ್ರಮಾಣ ಕಡಿಮೆಯಾಗುತ್ತದೆ.

(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಯಾವುದೇ ಬದಲಾವಣೆ ಮಾಡುವ ಮೊದಲು ಅಥವಾ ಆರೋಗ್ಯ ಸಮಸ್ಯೆಗಳಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.)

 
 
 
 
View this post on Instagram
 
 
 
 
 
 
 
 
 
 
 

A post shared by Ask Doctor Pillai Tamil (@doctor.pillai)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯ ಸಮಸ್ಯೆಗಳು
ಜೀವನಶೈಲಿ

Latest Videos
Recommended Stories
Recommended image1
ಸ್ಮಾರ್ಟ್‌ ಫೋನ್‌ ಕಾರಣಕ್ಕೆ ಮಕ್ಕಳಾಗ್ತಿಲ್ಲ ! ಭಾರತದಲ್ಲಿ ಇಳಿತಿದೆ ಜನನ ದರ
Recommended image2
ಹಾಲು ಕುಡಿದರೆ ಮೂಳೆಗಳು ಗಟ್ಟಿಯಾಗಲ್ಲ: ವಯಸ್ಸಾದ ಮೇಲೂ ಗಟ್ಟಿಮುಟ್ಟಾಗಿರಲು ಈ 5 ಟಿಪ್ಸ್ ಪಾಲಿಸಿ!
Recommended image3
ಬಿಸಿ ಹಾಲು Vs ತಣ್ಣನೆಯ ಹಾಲು; ಈ ಎರಡರಲ್ಲಿ ಯಾವುದು ಬೆಟರ್..? ಇಲ್ಲಿದೆ ತಿಳಿಯಲೇಬೇಕಾದ ಸತ್ಯ!
Related Stories
Recommended image1
ವರ್ಷಪೂರ್ತಿ ಹುಣಸೆಹಣ್ಣು ಫ್ರೆಶ್ ಆಗಿರಬೇಕೇ? ಅಮ್ಮಮ್ಮನ ಕಾಲದ ಈ ಉಪ್ಪಿನ ಟ್ರಿಕ್ ಬಳಸಿ
Recommended image2
ಹಿಟ್ಟು ಹುಳಿಯಾಗದಂತೆ ಹೂವಿನಂತೆ ಮೃದುವಾದ ಇಡ್ಲಿ ಮಾಡಲು ಈ ಟಿಪ್ಸ್ ಫಾಲೋ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved