ಇಡೀ ದಿನ ಸ್ಮಾರ್ಟ್ಫೋನ್ ಕೈನಲ್ಲಿ ಬೇಕು. ಅರೆ ಕ್ಷಣ ಫೋನ್ ದೂರವಾದ್ರೂ ಇರೋದು ಕಷ್ಟ. ಫೋನ್ ನಲ್ಲಿ ಮಾತನಾಡಿದಷ್ಟು ಜನರು ಪಕ್ಕದಲ್ಲಿರುವವರ ಜೊತೆ ಮಾತನಾಡೋದಿಲ್ಲ. ಇದು ಸಂವಹನಕ್ಕೆ ಮಾತ್ರವಲ್ಲ ಜನಸಂಖ್ಯೆ ಮೇಲೂ ಪರಿಣಾಮ ಬೀರಿದೆ. 

ಇತ್ತೀಚಿನ ದಿನಗಳಲ್ಲಿ ಭಾರತೀಯ ಮಹಿಳೆಯರು ಪೋಷಕರಾಗಲು ಹಿಂಜರಿಯುತ್ತಿದ್ದಾರೆ. 30 ವರ್ಷಗಳ ಹಿಂದೆ, ಭಾರತೀಯ ಮಹಿಳೆಯರು ಸರಾಸರಿ 3.4 ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಆದ್ರೀಗ ಈ ಸಂಖ್ಯೆ 2.0 ಕ್ಕೆ ಇಳಿದಿದೆ. ಸರ್ಕಾರಿ ಸಮೀಕ್ಷೆಗಳ ಪ್ರಕಾರ ಪ್ರಮಾಣ 2.1 ರಷ್ಟು ಇಳಿದಿದೆ. ಬರೀ ಭಾರತದಲ್ಲಿ ಮಾತ್ರವಲ್ಲ ಅನೇಕ ದೇಶಗಳಲ್ಲಿ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡ್ತಿದೆ.

Add Asianetnews Kannada as a Preferred SourcegooglePreferred

ಮಕ್ಕಳ ಸಂಖ್ಯೆ ಕಡಿಮೆ ಆಗಲು ಕಾರಣ

ಇದಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆ, ಅಧ್ಯಯನಗಳು ನಡೆದಿವೆ. ಈ ಹಿಂದೆ ಜನನ ಪ್ರಮಾಣ ಕಡಿಮೆ ಆಗಲು ಹೆಚ್ಚುತ್ತಿರುವ ಹಣದುಬ್ಬರ, ದುಬಾರಿ ವಸತಿ, ತಡವಾದ ಮದುವೆ, ವೃತ್ತಿ ಒತ್ತಡ ಇದಕ್ಕೆ ಕಾರಣ ಎಂದು ತಜ್ಞರು ಹೇಳಿದ್ದರು. ಆದ್ರೀಗ ಹೊಸ ವಿಷ್ಯ ಹೊರ ಬಿದ್ದಿದೆ. ಮಹಿಳೆಯರಿಗೆ ಮಕ್ಕಳಾಗದಿರಲು ಮುಖ್ಯ ಕಾರಣ ಸ್ಮಾರ್ಟ್ಫೋನ್ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಪ್ರಭಾವ ಎನ್ನಲಾಗಿದೆ. ತಂತ್ರಜ್ಞಾನವು ಜನರು ಸಂವಹನ ನಡೆಸುವ ವಿಧಾನವನ್ನು ಬದಲಾಯಿಸಿದೆ. ಜನನ ದರದ ಮೇಲೂ ಇದು ಪರಿಣಾಮ ಬೀರಲಾರಂಭಿಸಿದೆ ಎಂದು ಸಂಶೋಧನೆ ಹೇಳಿದೆ.

Secret: ಮೊದಲ ಹೆರಿಗೆ ತವರು ಮನೆಯಲ್ಲೇ ಆಗ್ಬೇಕು.. ಈ ಸಂಪ್ರದಾಯದ ಹಿಂದಿರೋ ಸೀಕ್ರೆಟ್ ಹಲವರಿಗೆ ಗೊತ್ತಿಲ್ಲ!

ಜನನ ಪ್ರಮಾಣದ ಮೇಲೆ ಸ್ಮಾರ್ಟ್ಫೋನ್ ಪ್ರಭಾವ?

ಸಿನ್ಸಿನಾಟಿ ವಿಶ್ವವಿದ್ಯಾಲಯದ ಸಂಶೋಧಕರು, ಯುಎಸ್ ಮತ್ತು ಯುಕೆಯಲ್ಲಿ 4 ಜಿ ಮೊಬೈಲ್ ಇಂಟರ್ನೆಟ್ ಪರಿಚಯಿಸಿದ ನಂತ್ರ ಜನನ ದರದ ಡೇಟಾವನ್ನು ಅಧ್ಯಯನ ಮಾಡಿದ್ದಾರೆ. ಮೊಬೈಲ್ ಇಂಟರ್ನೆಟ್ ತಲುಪಿದ ಜಾಗಗಳಲ್ಲಿ ಜನನ ದರಗಳು ಅತಿ ವೇಗದಲ್ಲಿ ಹಾಗೂ ಮೊದಲು ಕುಸಿಯಲು ಪ್ರಾರಂಭಿಸಿತು ಎಂದು ಸಂಶೋಧಕರು ಹೇಳಿದ್ದಾರೆ. ಸ್ಮಾರ್ಟ್ಫೋನ್ ಬಳಸುವ ಜನರು ಸಂವಹನ ಕಡಿಮೆ ಮಾಡಿದ್ದಾರೆ. ಆನ್ಲೈನ್ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕುಟುಂಬದಲ್ಲಿ ವೈಯಕ್ತಿಕ ಸಂವಹನ ಕಡಿಮೆಯಾಗಿದ್ದು, ಈ ಬದಲಾವಣೆ ಜನನ ದರಗಳ ಕುಸಿತದಲ್ಲಿ ಬಹುಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಯುಎಸ್ ಮತ್ತು ಯುಕೆಗೆ ಮಾತ್ರ ಇದು ಸೀಮಿತವಾಗಿಲ್ಲ. ಸ್ಮಾರ್ಟ್ಫೋನ್ಗಳು ದೈನಂದಿನ ಜೀವನದ ಭಾಗವಾಗಿರುವ ಎಲ್ಲ ದೇಶಗಳಲ್ಲಿ ಜನನ ದರಗಳು ವೇಗವಾಗಿ ಕುಸಿಯಲು ಪ್ರಾರಂಭಿಸಿವೆ ಎಂದು ಸಂಶೋಧನೆ ಹೇಳಿದೆ. ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ, ಸ್ಮಾರ್ಟ್ಫೋನ್ಗಳು ಮತ್ತು ಮೊಬೈಲ್ ಅಪ್ಲಿಕೇಶನ್ಗಳು ಹೆಚ್ಚು ಜನಪ್ರಿಯವಾದ ಸಮಯ ಅಂದ್ರೆ 2007 ರ ನಂತರ ಹದಿಹರೆಯದವರು ಮತ್ತು ಯುವಜನರಲ್ಲಿ ಜನನ ಪ್ರಮಾಣ ತೀವ್ರವಾಗಿ ಕುಸಿದಿದೆ.

ಹಾಲು ಕುಡಿದರೆ ಮೂಳೆಗಳು ಗಟ್ಟಿಯಾಗಲ್ಲ: ವಯಸ್ಸಾದ ಮೇಲೂ ಗಟ್ಟಿಮುಟ್ಟಾಗಿರಲು ಈ 5 ಟಿಪ್ಸ್ ಪಾಲಿಸಿ!

ಪೋಷಕರಾಗಲು ಹಿಂಜರಿಕೆ ಏಕೆ?

ಸೋಶಿಯಲ್ ಮೀಡಿಯಾ ಅತಿಯಾದ ಬಳಕೆಯಿಂದ ಯುವಜನರು ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು, ಇತರರ ಆಕರ್ಷಕ ಜೀವನ, ಆರ್ಥಿಕ ಜೀವನ, ಹೋಲಿಕೆಯಲ್ಲಿ ಬದುಕುತ್ತಿದ್ದಾರೆ. ಇದು ಅಭದ್ರತೆ ಮತ್ತು ಅಸ್ಥಿರತೆಯ ಭಾವನೆಗಳಿಕೆ ಕಾರಣವಾಗ್ತಿದೆ. ಡಿಜಿಟಲ್ ಪ್ಲಾಟ್ಫಾರ್ಮ್ ಹಣ, ವೃತ್ತಿ ಮತ್ತು ಮನೆಯ ಬಗ್ಗೆ ಅಸ್ತಿತ್ವದಲ್ಲಿರುವ ಕಾಳಜಿಗಳನ್ನು ಉಲ್ಬಣಗೊಳಿಸುತ್ತವೆ. ಇದರಿಂದಾಗಿ ಯುವಜನರು ಪೋಷಕರಾಗಲು ಸಿದ್ಧರಿಲ್ಲ ಎಂದು ಭಾವಿಸುತ್ತಾರೆ. ಪೋಷಕರಾಗಿ ಹೊಸ ಜವಾಬ್ದಾರಿ ಹೊರಲು ಹಿಂಜರಿಯುತ್ತಿದ್ದಾರೆ.