ಬಾಟಲಿಯಲ್ಲಿ ಸಿಗೋ ಎಲ್ಲ ನೀರು ಶುದ್ಧವಾ? ಖರೀದಿ ಮಾಡುವಾಗ ಚೆಕ್ ಮಾಡಿ
packaged water purity check : ಬಾಟಲ್ ನೀರು ಶುದ್ಧ, ಖನಿಜಯುಕ್ತ ಅಂತ ಎಲ್ಲರೂ ಭಾವಿಸಿದ್ದಾರೆ. ಆದ್ರೆ ಬಾಟಲಿಯಲ್ಲಿ ತುಂಬುವ ಎಲ್ಲ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ನಿಮಗೆ ಗೊತ್ತಾ?

ಎಲ್ಲ ನೀರು ಶುದ್ಧವಲ್ಲ
ದೇಹಕ್ಕೆ ಪೌಷ್ಟಿಕ ಆಹಾರ ಅಗತ್ಯ ಇದ್ದಂತೆ ಶುದ್ಧ, ಖನಿಜಯುಕ್ತ ನೀರು ಅಗತ್ಯ. ಪ್ರತಿ ದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯುವಂತೆ ಸಲಹೆ ನೀಡಲಾಗುತ್ತೆ. ಮನೆಯಿಂದ ಹೊರಗೆ ಹೋಗುವಾಗ ಬಾಟಲ್ ನೀರು ತೆಗೆದುಕೊಂಡು ಹೋಗೋಗು ಕಷ್ಟ. ಹಾಗಾಗಿ ಅಂಗಡಿಯಲ್ಲಿ ಸಿಗೋ ಬಾಟಲ್ ನೀರನ್ನು ಕುಡಿತಾರೆ. ಬಾಟಲ್ ನೀರು ಶುದ್ಧ ಅಂತ ಅನೇಕರು ಭಾವಿಸ್ತಾರೆ ಕೂಡ. ಆದ್ರೆ ಮಾರ್ಕೆಟ್ ನಲ್ಲಿ ಸಿಗುವ ಎಲ್ಲ ಬಾಟಲ್ ನೀರು ಶುದ್ಧವಲ್ಲ. ಖನಿಜಯುಕ್ತ ಹಾಗೂ ಕೊಳಕು ನೀರಿನ ಬಾಟಲ್ ಯಾವ್ದು ಅಂತ ಪತ್ತೆ ಹಚ್ಚೋದು ಹೇಗೆ?
ವಿವಿಧ ಬೆಲೆಗಳಲ್ಲಿ ನೀರಿನ ಬಾಟಲಿ
ವಿವಿಧ ಕಂಪನಿಗಳಿಂದ ಅನೇಕ ರೀತಿಯ ನೀರಿನ ಬಾಟಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು 1 ಲೀಟರ್ನಿಂದ 5 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಬಾಟಲಿಗಳನ್ನು ಕಾಣಬಹುದು. ಈ ನೀರಿನ ಬಾಟಲಿಗಳ ಬೆಲೆ 10 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ಟ್ಯಾಪ್ ನೀರು
ಬಾಟಲಿಯಲ್ಲಿ ಸಿಗುವ ಎಲ್ಲ ನೀರು ಶುದ್ಧ ಅಂತ ನಾವು ಭಾವಿಸ್ತೇವೆ. ಅದ್ರಲ್ಲಿ ಅಗತ್ಯವಿರುವ ಖನಿಜವಿದೆ ಎಂದುಕೊಳ್ತೇವೆ. ಆದ್ರೆ ಎಲ್ಲ ಬಾಟಲಿಯಲ್ಲಿ ಶುದ್ಧ ನೀರಿರೋದಿಲ್ಲ. ಟ್ಯಾಪ್ ನೀರನ್ನು ತುಂಬಿಸಿ ಹಾಗೆಯೇ ಮಾರಾಟ ಮಾಡಲಾಗುತ್ತದೆ.
ಬಾಟಲ್ ನೀರು ಪತ್ತೆ ಹೇಗೆ?
ಬಾಟಲ್ನಲ್ಲಿರುವ ನೀರಿನ ಗುಣಮಟ್ಟವನ್ನು ನೀವು ಸುಲಭವಾಗಿ ಪತ್ತೆ ಮಾಡ್ಬುದು. ನೀರಿನ ಬಾಟಲಿಯ ಮೇಲೆ ಬರೆದದ್ದನ್ನು ನೀವು ಓದ್ಬೇಕ. ಅಲ್ಲಿಯೇ ನಿಮಗೆ ಎಲ್ಲ ಮಾಹಿತಿ ಸಿಗುತ್ತದೆ. ಬಾಟಲಿಯ ಮೇಲೆ PWS ಪದ ಬರೆಯಲಾಗಿದೆಯೇ ಎಂದು ನೀವು ಪರಿಶೀಲಿಸಬೇಕು. ಕೆಲವು ಸಮಯದ ಹಿಂದೆ, ಅಮೆರಿಕದ ಕಂಪನಿಯೊಂದು ತನ್ನ ನೀರಿನ ಬಾಟಲಿಗಳಲ್ಲಿ ಟ್ಯಾಪ್ ನೀರು ಇದೆಯೇ ಹೊರತು ಖನಿಜಯುಕ್ತ ನೀರು ಅಲ್ಲ ಎಂದು ಒಪ್ಪಿಕೊಂಡಿತು. ಅದಾದ್ಮೇಲೆ ಎಲ್ಲ ಕಂಪನಿಗಳು ತಮ್ಮ ನೀರಿನ ಬಾಟಲಿ ಮೇಲೆ PWS ಎಂದು ಬರೆಯುವುದು ಕಡ್ಡಾಯವಾಗಿದೆ.
ಪಿಡಬ್ಲ್ಯೂ ಎಸ್ ಅಂದ್ರೇನು?
PWS ಎಂದರೆ ಸಾರ್ವಜನಿಕ ನೀರಿನ ಮೂಲ. ಅಂದ್ರೆ ಈ ನೀರನ್ನು ಟ್ಯಾಪ್ನಂತಹ ಸಾರ್ವಜನಿಕ ನೀರಿನ ಮೂಲದಿಂದ ತೆಗೆದುಕೊಳ್ಳಲಾಗುತ್ತದೆ. ಖನಿಜಯುಕ್ತ ನೀರಿನಿಂದ ಅಲ್ಲ. ಪ್ರತಿಯೊಂದು ನೀರಿನ ಬಾಟಲಿ ಮೇಲೆ ಅದ್ರ ಮೂಲದ ಬಗ್ಗೆ ಮಾಹಿತಿ ಇರುತ್ತದೆ. ಅಂದರೆ ನೀರನ್ನು ಎಲ್ಲಿಂದ ತೆಗೆದುಕೊಳ್ಳಲಾಗಿದೆ, ಆದ್ದರಿಂದ ನೀವು ನೀರು ಟ್ಯಾಪ್ ವಾಟರ್ ಅಥವಾ ಖನಿಜಯುಕ್ತ ನೀರಾಗಿದೆಯೇ ಎಂದು ನಿರ್ಧರಿಸಬಹುದು.
ಟ್ಯಾಪ್ ವಾಟರ್ ಕುಡಿದ್ರೆ ಏನಾಗುತ್ತೆ?
ಆರೋಗ್ಯ ಪ್ರಯೋಜನಗಳಿಗೆ ಪ್ರಮುಖ ಕಾರಣವೆಂದರೆ ನೀರಿನಲ್ಲಿರುವ ಖನಿಜಗಳು. ನೀರಿನಲ್ಲಿ ಕಂಡುಬರುವ ಖನಿಜಗಳು ಆರೋಗ್ಯಕರ ಮೂಳೆಗಳು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಟ್ಯಾಪ್ ವಾಟರ್ ತಾಮ್ರ, ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿರುತ್ತದೆ. ಟ್ಯಾಪ್ ನೀರು ಸೇವನೆ ಮಾಡಿದ ತಕ್ಷಣ ಆರೋಗ್ಯ ಹಾಳಾಗುವುದಿಲ್ಲ. ಪ್ರತಿ ದಿನ ಈ ನೀರಿನ ಸೇವನೆಯಿಂದ ನಿಧಾನವಾಗಿ ನಿಮ್ಮ ಆರೋಗ್ಯ ಹದಗೆಡುತ್ತದೆ. ಹೊಟ್ಟೆ ನೋವು, ಅತಿಸಾರ, ವಾಂತಿ, ಹೆಪಟೈಟಿಸ್, ಕಾಲರಾ ಅಥವಾ ಟೈಫಾಯ್ಡ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

