- Home
- Life
- Health
- Health Tips: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಆಗುತ್ತಾ? ಕಣ್ಣು ಮಂಜಾಗುತ್ತಾ? ನಿರ್ಲಕ್ಷ್ಯ ಮಾಡಿದ್ರೆ ಈ ಅಪಾಯ ತಪ್ಪಿದ್ದಲ್ಲ!
Health Tips: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಆಗುತ್ತಾ? ಕಣ್ಣು ಮಂಜಾಗುತ್ತಾ? ನಿರ್ಲಕ್ಷ್ಯ ಮಾಡಿದ್ರೆ ಈ ಅಪಾಯ ತಪ್ಪಿದ್ದಲ್ಲ!
ಮೆಟ್ಟಿಲು ಹತ್ತುವಾಗ ಏದುಸಿರು ಬಿಡುವುದು ಸಾಮಾನ್ಯ. ಆದರೆ ತೀವ್ರ ಉಸಿರಾಟ ತೊಂದರೆ ಅನುಭವಿಸಿದರೆ ಮತ್ತು ಈ ಸಮಸ್ಯೆ ಸಾಮಾನ್ಯ ಮೆಟ್ಟಿಲು ಹತುವಾಗಲು ನಡೆಯುವಾಗಲೂ ತೊಂದರೆ ಖಂಡಿತ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಮೆಟ್ಟಿಲು ಹತ್ತುವಾಗ ಉಸಿರಾಟದ ತೀವ್ರ ತೊಂದರೆಯೇ?
ಆಫೀಸ್, ಅಪಾರ್ಟ್‌ಮೆಂಟ್, ಬೆಟ್ಟದ ಮೇಲಿನ ಮಂದಿರಕ್ಕೆ ಹೋಗುವಾಗ ಮೆಟ್ಟಿಲುಗಳನ್ನು ಹತ್ತುವುದು ಇಳಿಯುತ್ತೇವೆ. ಮೆಟ್ಟಿಲು ಹತ್ತುವಾಗ ಏದುಸಿರು ಅಂದರೆ ಉಸಿರಾಟ ಹೆಚ್ಚಾಗುವುದು ಸಾಮಾನ್ಯ, ಇದು ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಹತ್ತುವುದರಿಂದ ಉಸಿರಾಟ ಹೆಚ್ಚುತ್ತದೆ. ಆದರೆ ಮೆಟ್ಟಿಲು ಸಣ್ಣಪುಟ್ಟ ಮೆಟ್ಟಿಲು ಹತ್ತುವಾಗಲೂ ಉಸಿರಾಟದ ತೀವ್ರ ತೊಂದರೆ ಅನುಭವಿಸಿದರೆ, ಕಣ್ಣು ಮಂಜಾದಂತಾದರೆ ಇದು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬಾರದು. ಹೆಚ್ಚಿನ ಜನರು ಇದು ಫಿಟ್ನೆಸ್ ಕೊರತೆಯಿಂದ ಎಂದು ಭಾವಿಸುತ್ತಾರೆ, ಇದು ತಪ್ಪು ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
ಮೆಟ್ಟಿಲು ಹತ್ತುವಾಗ ತೀವ್ರ ಉಸಿರಾಟ ಸಮಸ್ಯೆಗೆ ಕಾರಣವೇನು?
ಹೃದಯದ ಕಾಯಿಲೆಯು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಹೃದಯವು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹಕ್ಕೆ ಆಮ್ಲಜನಕವನ್ನು ತಲುಪಿಸಲು ಅದು ಹೆಣಗಾಡುತ್ತದೆ. ಈ ಪರಿಸ್ಥಿತಿಯಲ್ಲಿ ಸಾಮಾನ್ಯ ನಡೆದಾಟವೂ ಉಸಿರಾಟ ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೆ ಉಸಿರಾಟದ ತೊಂದರೆಗೆ ಆಸ್ತಮಾ ಕೂಡ ಒಂದು ಸಾಮಾನ್ಯ ಕಾರಣ. ರಕ್ತಹೀನತೆಯಿಂದಲೂ ಈ ಸಮಸ್ಯೆ ಬರಬಹುದು. ಅಧಿಕ ತೂಕ ಹೊಂದಿರುವುದು ಅಥವಾ ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಸಹ ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಈ ಸಮಸ್ಯೆ ಪದೇಪದೆ ಮರುಕಳಿಸಿದರೆ ಸ್ವಲ್ಪ ಕೆಲಸ ಮಾಡಿದ್ರೂ, ನಡೆದ್ರೂ, ಒಂದೆರಡು ಮೆಟ್ಟಿಲು ಹತ್ತಿದ್ರೂ ನಿಮಗೆ ಉಸಿರಾಟದ ತೊಂದರೆ ಉಂಟಾದರೆ, ಎದೆ ನೋವು, ತಲೆತಿರುಗುವಿಕೆ ಅನುಭವವಾದರೆ ಅಥವಾ ವಿಶ್ರಾಂತಿ ಪಡೆದ ನಂತರವೂ ನಿಮ್ಮ ಉಸಿರಾಟ ಸಾಮಾನ್ಯ ಸ್ಥಿತಿಗೆ ಮರಳದಿದ್ದರೆ. ನೀವು ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಯ ಬಗ್ಗೆ ಚರ್ಚಿಸಬೇಕು. ನಿಮ್ಮ ವೈದ್ಯರು ಔಷಧಿಗಳನ್ನು ಸಹ ಶಿಫಾರಸು ಮಾಡಬಹುದು.
ಈ ಸಮಸ್ಯೆಯನ್ನು ತಪ್ಪಿಸುವುದು ಹೇಗೆ?
ಇದನ್ನು ತಪ್ಪಿಸಲು ಸುಲಭ ವಿಧಾನವೆಂದರೆ, ನೀವು ಪ್ರತಿದಿನ ಲಘು ವ್ಯಾಯಾಮ, ಮುಂಜಾನೆ ಅಥವಾ ಸಂಜೆ ನಡಿಗೆ ಅಭ್ಯಾಸ ಮಾಡಬೇಕು. ಇದು ಒಂದು ದಿನ, ವಾರದ ಅಭ್ಯಾಸವಾಗದೆ ಜೀವನದ ಭಾಗವಾಗಬೇಕು. ಇದರೊಂದಿಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು. ನಿಮಗೆ ಈಗಾಗಲೇ ಹೃದಯ ಅಥವಾ ಶ್ವಾಸಕೋಶದ ಕಾಯಿಲೆ ಇದ್ದರೆ, ನಿಮ್ಮ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಅಂದಹಾಗೆ ಉಸಿರಾಟದ ತೊಂದರೆ ಎಂದರೆ ಗಂಭೀರ ಕಾಯಿಲೆಯೇ ಇರಬೇಕು ಎಂದಲ್ಲ, ಆದರೆ ನಿರ್ಲಕ್ಷ್ಯ ಮಾಡಬಾರದು..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

