ಟೊಮೆಟೊ ಸಿಪ್ಪೆ ಎಸೆಯಬೇಡಿ… ಹೀಗೂ ಬಳಸಿ ನೋಡಿ
ಟೊಮೆಟೊವನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದು ನಮ್ಮ ಅಡುಗೆಗೆ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ಸಲಾಡ್ ಗಳಿಂದ ಹಿಡಿದು ಚಟ್ನಿಗಳು, ತರಕಾರಿಗಳವರೆಗೆ ಎಲ್ಲದರಲ್ಲೂ ಟೊಮ್ಯಾಟೊ ಬಳಸಲಾಗುತ್ತದೆ. ಈ ಟೈಮ್ ನಲ್ಲಿ ನೀವು ಟೋಮ್ಯಾಟೊ ಸಿಪ್ಪೆ ಎಸೆಯುತ್ತೀರಾ?
ಟೊಮೆಟೊವನ್ನು ಕುದಿಸಿದ ನಂತರ, ಹುರಿದ ನಂತರ ಅಥವಾ ತುರಿದ ನಂತರ, ಅದರ ಸಿಪ್ಪೆಯನ್ನು ಉಳಿಸಲಾಗುತ್ತದೆ. ಬಳಿಕ ಅದನ್ನು ನಾವು ವೇಸ್ಟ್ ಎಂದು ಎಸೆಯುತ್ತೇವೆ. ಆದರೆ ನೀವು ಕಸವಾಗಿ ಎಸೆಯುವ ಟೋಮ್ಯಾಟೊ ನಮ್ಮ ದೈನಂದಿನ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಹೌದು ಇಂದು, ಟೊಮೆಟೊ(Tomato) ಪೀಲ್ ನ ಪ್ರಯೋಜನ ಏನು, ಅದನ್ನು ಹೇಗೆ ಬಳಸಬೇಕು ಅನ್ನೋದನ್ನು ತಿಳಿಸುತ್ತೇವೆ…
ಟೊಮೆಟೊ ಸಿಪ್ಪೆಯಲ್ಲಿರುವ ಪೋಷಕಾಂಶಗಳು
ಟೊಮೆಟೊ ಸಿಪ್ಪೆಯು(Tomato peel) ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾರೋಟಿನಾಯ್ಡ್ ಅಂಶಗಳಿದ್ದು ಆರೋಗ್ಯಕ್ಕೆ ಉತ್ತಮವಾಗಿವೆ. ಅಲ್ಲದೇ ಇದರಲ್ಲಿರುವ ಫ್ಲೇವನಾಲ್ಗಳು ಟೊಮೆಟೊ ಹಣ್ಣುಗಳಿಗಿಂತ ಟೊಮೆಟೊ ಸಿಪ್ಪೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಚರ್ಮಕ್ಕೆ (Skin) ಉತ್ತಮ
ಟೊಮೆಟೊ ಸಿಪ್ಪೆಗಳು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಚರ್ಮದ ರಂಧ್ರಗಳು ಮತ್ತು ಬ್ಲಾಕ್ ಹೆಡ್ ಗಳನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ, ಟೊಮೆಟೊ ಸಿಪ್ಪೆಗಳನ್ನು ಒಣಗಿಸಿ, ನಂತರ ಅದರ ಪುಡಿ ತಯಾರಿಸಿ, ಅದನ್ನು ರೋಸ್ ವಾಟರ್ ಅಥವಾ ಸಾಮಾನ್ಯ ನೀರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಮುಖ ಎಷ್ಟು ಕ್ಲೀನ್ ಆಗಿರುತ್ತೆ ನೀವೆ ನೋಡಿ.
ಆಯ್ಲಿ ಸ್ಕಿನ್(Oily skin)
ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಟೊಮೆಟೊ ಸಿಪ್ಪೆಗಳು ನಿಮ್ಮ ಚರ್ಮದ ಎಣ್ಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಟೊಮೆಟೊ ಸಿಪ್ಪೆಗಳನ್ನು ಮುಖದ ಮೇಲೆ ಚೆನ್ನಾಗಿ ಉಜ್ಜಿ ಮತ್ತು 10-15 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ, ಇದು ನಿಮ್ಮ ಮುಖವನ್ನು ಎಣ್ಣೆ ಮುಕ್ತವಾಗಿ ಕಾಣುವಂತೆ ಮಾಡುತ್ತದೆ.
ಸಾಸ್ ಮತ್ತು ಸೂಪ್ ಗಳಲ್ಲಿ(Soup) ಬಳಸಿ
ಟೊಮೇಟೊ ಸೂಪ್, ಟೊಮೆಟೊ ಸಾಸ್ ಗಳನ್ನು ತಯಾರಿಸಲು ನೀವು ಟೊಮೆಟೊ ಸಿಪ್ಪೆಗಳನ್ನು ಸಹ ಬಳಸಬಹುದು. ಇದಕ್ಕಾಗಿ, ಟೊಮೆಟೊ ಸಿಪ್ಪೆಗಳನ್ನು ಒಣಗಿಸಿ, ನಂತರ ಶುಂಠಿ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಪೇಸ್ಟ್ ತಯಾರಿಸಿ. ಈಗ ನೀವು ಈ ಪೇಸ್ಟ್ ಅನ್ನು ಸೂಪ್, ಸಾಸ್ ಅಥವಾ ಪಿಜ್ಜಾ ಸಾಸ್ ಆಗಿ ಬಳಸಬಹುದು.
ಟೊಮೆಟೊ ಪುಡಿ(Tomato powder) ಮಾಡಿ
ಮಾರುಕಟ್ಟೆಯಲ್ಲಿ ನೀವು ಟೊಮೆಟೊ ಪುಡಿ ಕೊಂಡರೆ ಅದು ತುಂಬಾನೆ ದುಬಾರಿಯಾಗಿರುತ್ತೇ…ಅದಕ್ಕಾಗಿ, ನೀವು ಅದನ್ನು ಟೊಮೆಟೊ ಸಿಪ್ಪೆಗಳಿಂದ ಮನೆಯಲ್ಲಿಯೇ ತಯಾರಿಸಬಹುದು. ಈ ಟೊಮೆಟೊ ಪುಡಿಯು ಏನನ್ನಾದರೂ ಮ್ಯಾರಿನೇಟ್ ಮಾಡಲು ಅಥವಾ ಸಲಾಡ್ ಗೆ ರುಚಿ ಹೆಚ್ಚಿಸುವ ಕೆಲಸ ಮಾಡುತ್ತೆ, ಇದಕ್ಕಾಗಿ, ಟೊಮೆಟೊ ಸಿಪ್ಪೆಗಳನ್ನು ಒಣಗಿಸಿ ಮತ್ತು ಪುಡಿ ಮಾಡಿ. ಈಗ ನೀವು ಈ ಟೊಮೆಟೊ ಪುಡಿಯನ್ನು ಗ್ರೇವಿಯನ್ನು ದಪ್ಪಗೊಳಿಸಲು ಸಹ ಬಳಸಬಹುದು.
ಶುಚಿಗೊಳಿಸಲು
ತುಕ್ಕು ಹಿಡಿದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀವು ಟೊಮೆಟೊ ಸಿಪ್ಪೆಗಳನ್ನು ಬಳಸಬಹುದು. ಇದಕ್ಕಾಗಿ, ಟೊಮೆಟೊ ಸಿಪ್ಪೆಗಳನ್ನು ಕೊಳಕು ಅಥವಾ ಕಲೆಯಾದ ಸ್ಥಳದ ಮೇಲೆ ಉಜ್ಜಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ನೀವು ಬಯಸಿದರೆ, ನೀವು ಅದಕ್ಕೆ ಸ್ವಲ್ಪ ಅಡುಗೆ ಸೋಡಾ(Soda) ಸಹ ಸೇರಿಸಬಹುದು. ಇದು ತುಕ್ಕು ಗುರುತುಗಳು ಮತ್ತು ಸಿಂಕ್ ಮೇಲಿನ ಕಪ್ಪು ಚುಕ್ಕೆಗಳವರೆಗೆ ಎಲ್ಲವನ್ನೂ ನಿವಾರಿಸುತ್ತೆ.