ಬೇಸಿಗೆ ಬರಲಿ, ಚಳಿ ಇರಲಿ, ನಿಮ್ಮ Skin Care Routine ಹೀಗೆಯೇ ಇರಲಿ

ಚರ್ಮ ಗ್ಲೋ ಆಗಬೇಕು ಎನ್ನೋದು ಎಲ್ಲರ ಆಶಯ. ಮನಸ್ಸಿಗೂ ಚರ್ಮದ ಆರೋಗ್ಯಕ್ಕೂ ನೇರ ಸಂಬಂಧ ಇರೋದು ಹೌದಾದರೂ, ತ್ವಚೆ ಫಳ ಫಳ ಅಂತ ಹೊಳೆಯಲು ಒಂದಿಷ್ಟು ಸಿಂಪಲ್ ಮನೆ ಮದ್ದು ಹೆಲ್ಪ್ ಮಾಡುತ್ತೆ. ಇಲ್ಲಿವೆ ಆ ಟಿಪ್ಸ್. 

The Best Skin Care Routine for all seasons

ಚಳಿ ಮುಗಿದು, ಬೇಸಿಗೆ ಕಾಲಿಡುತ್ತಿದ್ದಂತೆ ಹೊಸ ವಾತಾರವಣಕ್ಕೆ ಚರ್ಮ ಒಗ್ಗಿ ಕೊಳ್ಳಬೇಕು.  ಕೆಲವರಂತೂ ವಿಪರೀತ ಬೆವರುತ್ತಾರೆ (Sweat). ಇದರಿಂದ ಮತ್ತಷ್ಟು ಕಿರಿಕಿರಿ ಅನುಭವಿಸಬೇಕು. ಕಾಲ ಯಾವುದೇ ಇರಲಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರಬೇಕು. ಅದರಲ್ಲಿ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸುವುದರಿಂದ ಕಾಪಾಡಿಕೊಳ್ಳಬಹುದು. ಇಲ್ಲಿವೆ ತ್ವಚಾ ಆರೋಗ್ಯಕ್ಕೆ ಸಿಂಪಲ್ ಮದ್ದು. 

1. ಕೊಬ್ಬರಿ ಎಣ್ಣೆ (Coconut Oil)
ಅಡುಗೆಗೆ (Cooking) ಬಳಸುವ ಕೊಬ್ಬರಿ ಎಣ್ಣೆಯಲ್ಲಿ ತಲೆಗೆ ಹಚ್ಚಿಕೊಳ್ಳುವ ಎಣ್ಣೆಗಿಂತಲೂ ಸತ್ವ ಹೆಚ್ಚು. ಅದರಲ್ಲಿಯೂ ನಾವೇ ಖುದ್ದು ಮಿಲ್‌ ಮಾಡಿದ ಕೊಬ್ಬರಿ ಎಣ್ಣೆ ಬಳಸಿದರೆ ಮತ್ತಷ್ಟು ಪರಿಣಾಮಕಾರಿ. ರಾತ್ರಿ ಕೈ ಕಾಲು ತೊಳೆದು ಕೈ ಕಾಲು, ಮುಖಕ್ಕೆಲ್ಲ ಕೊಬ್ಬರಿ ಎಣ್ಣೆ ಸವರಿ ಹಚ್ಚಿ ಮಲಗಬೇಕು. ಬೆಳಗ್ಗೆ ಎದ್ದಾಗ ಚರ್ಮದ ಆರ್ಧತೆ  ಅಚ್ಚರಿ ತರಿಸುವುದರಲ್ಲಿ ಅನುಮಾನವೇ ಇಲ್ಲ. ಟೈಮ್‌ ಇದ್ದಾಗ ಮೈ ಕೈಗೆಲ್ಲ ಕೊಬ್ಬರಿ ಎಣ್ಣೆ ಮಸಾಜ್‌ ಮಾಡಿಕೊಳ್ಳುವುದೂ ಒಳ್ಳೆಯ ಅಭ್ಯಾಸ. ಸ್ವಲ್ಪ ಬಿಸಿ ಮಾಡಿ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡಿಕೊಕಂಡರೆ ಚರ್ಮಕ್ಕೆ ಮಾತ್ರವಲ್ಲ, ಮೈ ಕೈ ನೋವೂ ಮಾಯವಾಗುತ್ತೆ. ಅಭ್ಯಂಜನ ಯಾವತ್ತೂ ಮೈ ಮನಸ್ಸು ಫ್ರೆಶ್‌ ಆಗಿಡುತ್ತೆ.

 2. ತೆಂಗಿನ ಹಾಲು (Coconut Milk)
ವರ್ಜಿನ್ ಆಯಿಲ್ ಎಂದು ಕರೆಯಿಸಿಕೊಳ್ಳುವ ಇದು ತುಸು ದುಬಾರಿ. ಆದರೆ, ಇದರ ಉಪಯೋಗಗಳು ಮಾತ್ರ ಅಷ್ಟಿಷ್ಟಲ್ಲ. ಆದರೂ ಕೊಳ್ಳೋದು ಕಷ್ಟವಾದರೆ ತೆಂಗಿನ ಕಾಯಿ ತುರಿದು, ಅರೆದು ರಸ ತೆಗೆದು ಮುಖಕ್ಕೆ ಹಚ್ಚಬಹುದು. ಇದಕ್ಕೆ ಜೇನುತುಪ್ಪ ಬೆರೆಸಿದರೆ ಮತ್ತಷ್ಟೂ ಪರಿಣಾಮಕಾರಿ. ಮುಖದ ಶುಷ್ಕತೆ ತೊಲಗಿ, ಮುಖ ಫಳ ಫಳ ಹೊಳೆಯೋದರಲ್ಲಿ ಅನುಮಾನವೇ ಇಲ್ಲ. ಚರ್ಮದಲ್ಲಿ ನವೆಯಾಗುವ ಜಾಗಕ್ಕೂ ಲೇಪಿಸಬಹುದು. 

Summer Tips : ಸೊಳ್ಳೆ ನಿಮ್ಮನೆ ಕಡೆ ತಿರುಗಿಯೂ ನೋಡ್ಬಾರದು ಅಂದ್ರೆ ಹೀಗೆ ಮಾಡಿ

3. ಅಲೊವೆರಾ (Aloe vera)
ಒಣ ತ್ವಚೆಗೆ ಮಾತ್ರ ಇದು ಮದ್ದಲ್ಲ. ಕಲೆಗಳಿಗೂ ರಾಮಬಾಣ. ಕೈ ಕಾಲಲ್ಲಿ ಗಾಯದ ಕಲೆ ಇದ್ದರೆ ಅಲೊವೆರಾ ಹಚ್ಚಿನೋಡಿ. ಕಲೆ ಮಾಯವಾಗದಿದ್ದರೆ ನಮ್ಮನ್ನು ಕೇಳಿ. ನಿಮ್ಮ ಆಯಿಂಟ್‌ಮೆಂಟ್‌ಗಿಂತ ಹೆಚ್ಚು ಪರಿಣಾಮಕಾರಿ. ಅದರಲ್ಲೂ ಸುಟ್ಟ ಗಾಯಕ್ಕೆ ಹೇಳಿ ಮಾಡಿಸಿದ ಔಷಧಿ. ಇದು ತಲೆಯ ಶುಷ್ಕತೆಯನ್ನೂ ಸುಲಭವಾಗಿ ನಿವಾರಿಸಬಲ್ಲದು. ಮುಖ ಹೊಳೆಯುವಂತೆ ಮಾಡುತ್ತೆ. ಸಾಧ್ಯವಾದರೆ ಖಾಲಿ ಹೊಟ್ಟೆಗೆ ಅಲೊವೆರಾದ ತಿರುಳಿನ ರಸ ಕುಡಿಯಿರಿ. ಹೊಟ್ಟೆಯೂ ತಂಪಾಗುತ್ತೆ.

4. ಕಡಲೆ ಹಿಟ್ಟು
ಹೆಚ್ಚಿನ ಸೋಪುಗಳು ದೇಹವನ್ನು ಒಣಗಿಸುತ್ತದೆ. ಮುಖದ ಕಾಂತಿ ಕುಂದಿಸುತ್ತದೆ. ಸ್ವಲ್ಪ ದಿನ ಸೋಪ್‌ ಬದಲು ಕಡಲೆ ಹಿಟ್ಟು ಬಳಸಿ. ಸ್ನಾನ ಬಳಿಕ ನೋಡಿದರೆ ನಿಮಗೆ ಚರ್ಮ ಸಾಫ್ಟ್‌ ಆಗಿರೋದು ಅನುಭವಕ್ಕೆ ಬಂದೇ ಬರುತ್ತೆ. ನಿತ್ಯ ಮುಖವನ್ನು ಒಳ್ಳೆಯ ಕ್ವಾಲಿಟಿ ಕಡಲೆ ಹಿಟ್ಟಿನಲ್ಲೇ ತೊಳೆಯೋದು ಬೆಸ್ಟ್‌. ಕಡಲೆಹಿಟ್ಟಿಗೆ ಕೊಂಚ ಸೂಗೇಪುಡಿ ಸೇರಿದರೆ ಉತ್ತಮ ಸ್ಕ್ರಬ್‌ನಂತೆ ವರ್ತಿಸುತ್ತದೆ. ಇದೇ ಕಡಲೆಹಿಟ್ಟಿಗೆ ಮೊಸರು, ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಮುಖ ದೀಪದಂತೆ ಹೊಳೆಯುತ್ತದೆ.

Super Photo: ಈ ಚಿತ್ರದಲ್ಲಿ ಅಡಗಿರುವ ಪಕ್ಷಿ ಗುರುತಿಸಿ... ಅದ್ಭುತ ಪೋಟೋ!

ಯಂಗ್ ಆಗಿ ಕಾಣಲು ಹೀಗ್ ಮಾಡಿ
5. ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ. ನೀರಿನ ತಾಪ ಹೆಚ್ಚಾದಷ್ಟೂ ನಿಮ್ಮ ಚರ್ಮ ಒಣಗಿದಂತೆ ಕಾಣಿಸುತ್ತದೆ. ತಣ್ಣೀರು ನಿಮ್ಮ ದೇಹದ ತೈಲಾಂಶವನ್ನು ಹಾಗೇ ಉಳಿಸಿಕೊಂಡು ಕೊಳೆ ತೊಳೆಯುತ್ತೆ. ಹದ ಬಿಸಿ ನೀರಿಗೆ ಸ್ವಲ್ಪ ರೋಸ್‌ ವಾಟರ್‌ (Rose Water) ಹಾಕಿದ್ರೆ ಹಿತವಾದ ಸ್ನಾನ. ಮೈಗೂ ಹಾಯೆನಿಸುವ ಫೀಲ್‌.

Latest Videos
Follow Us:
Download App:
  • android
  • ios