ಹೈ-ಬಿಪಿ ಇದೆಯೇ?, ಪ್ರತಿದಿನ ಇದನ್ನು ಸೇವಿಸಿ ಎಂದ ನ್ಯೂಟ್ರಿಶನಿಸ್ಟ್
ಒಂದು ವೇಳೆ ಹೈ-ಬಿಪಿ ನಿಯಂತ್ರಿಸದಿದ್ದರೆ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಸಮಸ್ಯೆಗಳಂತಹ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗಬಹುದು.

ಇಂದಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಅಧಿಕ ರಕ್ತದೊತ್ತಡ ಅಥವಾ ಹೈಪರ್‌ಟೆನ್ಷನ್ ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು 40 ವರ್ಷದ ನಂತರ ಇದಕ್ಕೆ ಗುರಿಯಾಗುತ್ತಾರೆ. ಒಂದು ವೇಳೆ ಅವರು ಇದನ್ನು ನಿಯಂತ್ರಿಸದಿದ್ದರೆ, ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಸಮಸ್ಯೆಗಳಂತಹ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗಬಹುದು. ಆದ್ದರಿಂದ ಅದರ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.
ನಿಮ್ಮ ಸುತ್ತಮುತ್ತಲಿನ ಯಾರಿಗಾದರೂ ಅಥವಾ ನಿಮ್ಮ ಹೆತ್ತವರಿಗೂ ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಇದ್ದರೆ ಈ ಲೇಖನ ಖಂಡಿತ ನಿಮಗೆ ಸಹಕಾರಿಯಾಗಬಹುದು. ಇತ್ತೀಚೆಗೆ ಪ್ರಸಿದ್ಧ ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಬಿಪಿಯನ್ನು ನಿಯಂತ್ರಿಸಲು ತುಂಬಾ ಸುಲಭವಾದ ಮಾರ್ಗವನ್ನು ಹೇಳಿದ್ದು, ಅದೇನೆಂದು ತಿಳಿಯೋಣ ಬನ್ನಿ..
ದೀಪ್ಶಿಖಾ ಜೈನ್ ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೋದಲ್ಲಿ ನಿಮ್ಮ ಪೋಷಕರಿಗೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಅಧಿಕ ರಕ್ತದೊತ್ತಡ ಇದ್ದರೆ ನೀವು ಅವರಿಗೆ ಪ್ರತಿದಿನ ಡಾರ್ಕ್ ಚಾಕೊಲೇಟ್ ತಿನ್ನಿಸಬಹುದು ಎಂದು ವಿವರಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ಡಾರ್ಕ್ ಚಾಕೊಲೇಟ್ ಏಕೆ ಉಪಯುಕ್ತ?
ಡಾರ್ಕ್ ಚಾಕೊಲೇಟ್‌ನಲ್ಲಿ ಫ್ಲೇವನಾಲ್ಸ್ (Flavanols)ಎಂಬ ಅಂಶಗಳು ಕಂಡುಬರುತ್ತವೆ. ಇವು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ರಕ್ತನಾಳಗಳು ವಿಶ್ರಾಂತಿ ಪಡೆದಾಗ, ರಕ್ತದ ಹರಿವು ಸರಾಗವಾಗುತ್ತದೆ ಮತ್ತು ಕ್ರಮೇಣ ರಕ್ತದೊತ್ತಡ ಸಾಮಾನ್ಯವಾಗಲು ಪ್ರಾರಂಭಿಸುತ್ತದೆ.
ಇದಲ್ಲದೆ, ಡಾರ್ಕ್ ಚಾಕೊಲೇಟ್ ಮನಸ್ಥಿತಿಯನ್ನು ಸುಧಾರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡ ನಿಯಂತ್ರಣಕ್ಕೂ ಮುಖ್ಯವಾಗಿದೆ.
ಈ ವಿಷಯಗಳು ಗಮನದಲ್ಲಿರಲಿ…
*ಪೌಷ್ಟಿಕತಜ್ಞರು ಯಾವಾಗಲೂ 70% ಕೋಕೋ ಹೊಂದಿರುವ ಡಾರ್ಕ್ ಚಾಕೊಲೇಟ್ ಅನ್ನು ಆಯ್ಕೆ ಮಾಡಲು ಶಿಫಾರಸು ಮಾಡುತ್ತಾರೆ. ಹಾಗೆಯೇ ಚಾಕೊಲೇಟ್‌ನಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರಬೇಕು.
*ಮಿಲ್ಕ್ ಚಾಕೊಲೇಟ್ ಅಥವಾ ತುಂಬಾ ಸಿಹಿಯಾದ ಚಾಕೊಲೇಟ್‌ಗಳನ್ನು ತಪ್ಪಿಸಿ. ಏಕೆಂದರೆ ಅವುಗಳಲ್ಲಿ ಹೆಚ್ಚು ಸಕ್ಕರೆ ಮತ್ತು ಕೊಬ್ಬು ಇರುತ್ತದೆ.
ಯಾರು ಎಷ್ಟು ತಿನ್ನಬೇಕು?
ಪೌಷ್ಟಿಕತಜ್ಞರು ಹೇಳುವಂತೆ ಬಿಪಿ ನಿಯಂತ್ರಿಸಲು ದಿನಕ್ಕೆ 1-2 ಸಣ್ಣ ತುಂಡುಗಳು (ಸುಮಾರು 20-25 ಗ್ರಾಂ) ಸಾಕು. ಹೆಚ್ಚು ತಿನ್ನುವುದರಿಂದ ತೂಕ ಮತ್ತು ಸಕ್ಕರೆ ಮಟ್ಟ ಹೆಚ್ಚಾಗಬಹುದು. ಇದು ರಕ್ತದೊತ್ತಡಕ್ಕೆ ಒಳ್ಳೆಯದಲ್ಲ.