MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಲಿಪ್​ಸ್ಟಿಕ್​ ತುಟಿಗೆ ಮುತ್ತಿಕ್ಕಿದರೆ ಕ್ಯಾನ್ಸರ್- ಮುತ್ತು ಪಡೆವ ಪುರುಷರಿಗೂ ಡೇಂಜರ್​; ಕ್ಯಾನ್ಸರ್​ ತಜ್ಞರ ಮಾತು ಕೇಳಿ

ಲಿಪ್​ಸ್ಟಿಕ್​ ತುಟಿಗೆ ಮುತ್ತಿಕ್ಕಿದರೆ ಕ್ಯಾನ್ಸರ್- ಮುತ್ತು ಪಡೆವ ಪುರುಷರಿಗೂ ಡೇಂಜರ್​; ಕ್ಯಾನ್ಸರ್​ ತಜ್ಞರ ಮಾತು ಕೇಳಿ

ಲಿಪ್‌ಸ್ಟಿಕ್ ಮಾರುಕಟ್ಟೆ ದೊಡ್ಡದಾಗಿ ಬೆಳೆಯುತ್ತಿದ್ದರೂ, ಅದರ ದೈನಂದಿನ ಬಳಕೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಲಿಪ್‌ಸ್ಟಿಕ್‌ನಲ್ಲಿರುವ ಕ್ಯಾಡ್ಮಿಯಂನಂತಹ ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

2 Min read
Author : Suchethana D
Published : Jun 19 2026, 12:45 PM IST
Share this Photo Gallery
  • FB
  • TW
  • Linkdin
  • Whatsapp
16
ಕೃತಕ ಸೌಂದರ್ಯದ ಹಂಬಲ
Image Credit : pinterest

ಕೃತಕ ಸೌಂದರ್ಯದ ಹಂಬಲ

ಹವಳದಂಥ ತುಟಿ ಎಂದು ಮಹಿಳೆಯರನ್ನು ವರ್ಣನೆ ಮಾಡುವಾಗ ಹೇಳುವುದು ಇದೆ. ಚಿಕ್ಕ ಮಕ್ಕಳ ಗುಲಾಬಿಯ ತುಟಿಗಳನ್ನು ನೋಡಿದಾಗ ಈ ಮಾತು ಅನ್ವಯ ಆಗುವುದು ನಿಜವೇ. ಆದರೆ ದೊಡ್ಡವರಾಗುತ್ತಿದ್ದಂತೆಯೇ ಕೃತಕ ಬಣ್ಣಗಳ ಮೊರೆ ಹೋಗುವುದು ಈಗಂತೂ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಎಷ್ಟೋ ಮಹಿಳೆಯರು ಊಟ ಬೇಕಾದರೂ ಬಿಟ್ಟಾರು, ಲಿಪ್​ಸ್ಟಿಕ್​ ಬಿಡಲೊಲ್ಲರು ಎನ್ನುವ ಸ್ಥಿತಿ ಇದೆ. ಸಿನಿಮಾ ತಾರೆಯರಿಂದ ಪ್ರೇರೇಪಿತರಾಗುವುದು ಒಂದೆಡೆಯಾದರೆ, ವಯಸ್ಸಾದಂತೆಲ್ಲಾ ಚಿಕ್ಕವರಾಗಿ ಕಾಣಿಸುವ ಹಂಬದಲ್ಲಿ ಕೃತಕ ಬಣ್ಣಗಳ ಮೊರೆ ಇಡುತ್ತಿದ್ದಾರೆ. ಅದರಲ್ಲಿಯೂ ಸೌಂದರ್ಯದ ಮಾತು ಬಂದಾಗ ಲಿಪ್​ಸ್ಟಿಕ್ ಕೊಡುಗೆ ಅಪಾರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
17.49 ಬಿಲಿಯನ್ ಡಾಲರ್​ ವಹಿವಾಟು
Image Credit : Pinterest

17.49 ಬಿಲಿಯನ್ ಡಾಲರ್​ ವಹಿವಾಟು

ಇದೇ ಕಾರಣಕ್ಕೆ ​2024 ರಲ್ಲಿ ಜಾಗತಿಕ ಲಿಪ್​ಸ್ಟಿಕ್​ ಮಾರುಕಟ್ಟೆ ಗಾತ್ರವು 17.49 ಬಿಲಿಯನ್ ಡಾಲರ್​ ಆಗಿತ್ತು ಮತ್ತು 2025 ರಿಂದ 2030 ರವರೆಗೆ 4.7% ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಇನ್ನು ಭಾರತದ ವಿಷಯಕ್ಕೆ ಬರುವುದಾದರೆ, 2024 ರ ಹಣಕಾಸು ವರ್ಷದಲ್ಲಿ 629.42 ಮಿಲಿಯನ್ ಡಾಲರ್ ಆಗಿದ್ದು, 2032 ರ ವೇಳೆಗೆ 1305.69 ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಈ ಪರಿಯಲ್ಲಿ ಲಿಪ್​ಸ್ಟಿಕ್​ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಆದರೆ ದಿನವೂ ಲಿಪ್​ಸ್ಟಿಕ್​ ಹಚ್ಚುವುದರಿಂದ ಹಲವು ಸಮಸ್ಯೆಗಳು ಇವೆ ಎನ್ನುವುದು ಲಿಪ್​ಸ್ಟಿಕ್​ ಹಚ್ಚುವುದು ಆರಂಭವಾದ ದಿನದಿಂದಲೂ ಕೇಳುತ್ತಲೇ ಬಂದಿದ್ದೇವೆ. ಆದರೆ ಈಚೆಗೆ ಶಾಕಿಂಗ್​ ವರದಿಯೊಂದು ಬಿಡುಗಡೆಯಾಗಿತ್ತು. ಈಗ ಎಲ್ಲಿ ನೋಡಿದರೂ ಕ್ಯಾನ್ಸರ್​ ಕ್ಯಾನ್ಸರ್​. ಈ ಕ್ಯಾನ್ಸರ್​ಗೆ ಲಿಪ್​ಸ್ಟಿಕ್​ ಕೊಡುಗೆಯೂ ಇದೆ ಎಂದು ವರದಿ ಹೇಳಿತ್ತು. ಇದೀಗ ಅದೇ ಮಾತನ್ನು ಹೇಳುತ್ತಿದ್ದಾರೆ ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಡಾ. ಸಿ.ಎ. ಕಿಶೋರ್. ಅಪರೂಪದಲ್ಲಿ ಅಪರೂಪವಾಗಿದ್ದ ಕ್ಯಾನ್ಸರ್​ ಈ ಪರಿಯಲ್ಲಿ ಬೆಳೆಯುತ್ತಿರುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಈ ಲಿಪ್​ಸ್ಟಿಕ್​ ಕೂಡ ಒಂದು ಎನ್ನುತ್ತಾರೆ ಅವರು.

Related Articles

Related image1
3 ದಶಕದಲ್ಲಿಯೇ ಕಂಡರಿಯದ ನೇರಳೆ ಹಣ್ಣಿನ ರಾಶಿ: ಭೀಕರ ಬರಗಾಲದ ಮುನ್ಸೂಚನೆ? ವಿಜ್ಞಾನಿಗಳು ಹೇಳೋದೇನು
Related image2
ಶಾಲಾ ಆಡಳಿತಗಳಿಗೆ ತಲೆನೋವಾದ ಲಿಪ್​ಸ್ಟಿಕ್ಸ್​: ಸ್ಕೂಲ್​ ಕ್ಯಾಂಪಸ್​ಗಳಲ್ಲಿ ಬ್ಯಾನ್ ಮಾಡಿದ ಸರ್ಕಾರ
36
ಶ್ವಾಸಕೋಶದ ಕ್ಯಾನ್ಸರ್
Image Credit : Social Media

ಶ್ವಾಸಕೋಶದ ಕ್ಯಾನ್ಸರ್

bolgereganapati ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಡಾ.ಕಿಶೋರ್​ ಅವರು ಲಿಪ್​ಸ್ಟಿಕ್​ ಹಚ್ಚುವ ಹೆಣ್ಣುಮಕ್ಕಳು ಮಾತ್ರವಲ್ಲದೇ, ಅವರಿಂದ ಮುತ್ತು ಪಡೆದ ಪುರುಷರಿಗೂ ಕ್ಯಾನ್ಸರ್​ ಎನ್ನುವ ಮಹಾಮಾರಿ ಹೇಗೆ ಬರುತ್ತದೆ ಎನ್ನುವ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಲಿಪ್​ಸ್ಟಿಕ್​ನಲ್ಲಿ ಕ್ಯಾಡ್ಮಿಯಂನಂತಹ ಲೋಹದ ಅಂಶ ಇರುತ್ತದೆ. ಕ್ಯಾಡ್ಮಿಯಮ್ ಎಂಬುದು ಶ್ವಾಸಕೋಶದ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಹಾನಿಗೆ ಸಂಬಂಧಿಸಿದ ಕ್ಯಾನ್ಸರ್ ಕಾರಕವಾಗಿದೆ. ಲಿಪ್​ಸ್ಟಿಕ್​ ಹಚ್ಚಿದ ಸಂದರ್ಭದಲ್ಲಿ, ಉಸಿರಾಟವಾಡುವಾಗ ಅಥವಾ ಬಣ್ಣ ಬಳಿದುಕೊಂಡ ತುಟಿಯಿಂದಲೇ ಏನಾದರೂ ತಿನ್ನುವಾಗ ಅದು ಹೊಟ್ಟೆಗೆ ಹೋದ ಸಂದರ್ಭದಲ್ಲಿ, ಈ ಅಂಶ ಕ್ಯಾನ್ಸರ್​ಗೆ ತಿರುಗಬಹುದು ಎಂಬ ಅಂಶವನ್ನು ಅವರು ಹೇಳಿದ್ದಾರೆ.

46
ಅಧ್ಯಯನ ಹೇಳಿದ್ದೇನು?
Image Credit : ChatGPT

ಅಧ್ಯಯನ ಹೇಳಿದ್ದೇನು?

ಕೆಲವು ಲಿಪ್‌ಸ್ಟಿಕ್‌ಗಳಲ್ಲಿ ಕಂಡುಬರುವ ಕ್ಯಾಡ್ಮಿಯಂನ ಸಾಂದ್ರತೆಯು ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ, ಆದರೆ ದಿನನಿತ್ಯವೂ ಸ್ವಲ್ಪ ಸ್ವಲ್ಪ ವಿಷ ಹೊಟ್ಟೆಗೆ ಹೋದರೆ ಅದೇ ದೊಡ್ಡದಾಗುತ್ತದೆ ಎಂದು ಅಧ್ಯಯನದಲ್ಲಿ ಕೂಡ ವಿವರಿಸಲಾಗಿದೆ.

56
ಉಸಿರಾಟದ ತೊಂದರೆಗಳು ಮತ್ತು ಕಣ್ಣಿನ ಸೋಂಕು
Image Credit : instagram

ಉಸಿರಾಟದ ತೊಂದರೆಗಳು ಮತ್ತು ಕಣ್ಣಿನ ಸೋಂಕು

ಇನ್ನು ಕೆಲವರಿಗೆ ಲಿಪ್​ಸ್ಟಿಕ್​ ಅಲರ್ಜಿಯಾಗುವುದು ಉಂಟು. ಸೂರ್ಯನ ವಿಕಿರಣ ಲಿಪ್​​ಸ್ಟಿಕ್​ ಮೇಲೆ ಬಿದ್ದಾಗ ತುಟಿಗಳ ನೈಸರ್ಗಿಕ ಬಣ್ಣ ನಾಶಪಡಿಸುತ್ತದೆ. ಪಿಗ್ಮೆಂಟೇಶನ್ ತುಟಿಗಳ ನೈಸರ್ಗಿಕ ಬಣ್ಣವನ್ನು ಕಪ್ಪಾಗಿಸುತ್ತದೆ. ಇದಲ್ಲದೇ, ಲಿಪ್​ಸ್ಟಿಕ್​ನಲ್ಲಿ ಇರುವ ಪ್ರಿಸರ್ವೇಟರ್​ಗಳಿಂದ ಉಸಿರಾಟದ ತೊಂದರೆಗಳು ಮತ್ತು ಕಣ್ಣಿನ ಸೋಂಕುಗಳು ಸೇರಿದಂತೆ ಅನೇಕ ಸಮಸ್ಯೆ ಉಂಟಾಗುತ್ತದೆ ಎನ್ನುವುದು ಇದಾಗಲೇ ಸಾಬೀತಾಗಿದೆ.

66
ಚರ್ಮದ ಕ್ಯಾನ್ಸರ್​
Image Credit : pinterest

ಚರ್ಮದ ಕ್ಯಾನ್ಸರ್​

ಚರ್ಮದ ಕ್ಯಾನ್ಸರ್​ ಕೂಡ ಬರುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಹೇಳಿದ್ದೂ ಇವೆ. ಆದ್ದರಿಂದ ತಜ್ಞರು ಹೇಳುವಂತೆ, ಪ್ರತಿದಿನ ಲಿಪ್‌ಸ್ಟಿಕ್ ಅನ್ನು ಅನ್ವಯಿಸುವ ಸಮಯವನ್ನು ಕಡಿಮೆ ಮಾಡಿ. ವಿಶ್ವಾಸಾರ್ಹ ಬ್ರ್ಯಾಂಡ್‌ಗಳನ್ನು ಆರಿಸಿ, ಸುರಕ್ಷತಾ ಮಾನದಂಡಗಳನ್ನು ಪಾಲಿಸುವ ಪ್ರತಿಷ್ಠಿತ ತಯಾರಕರಿಂದ ಲಿಪ್‌ಸ್ಟಿಕ್‌ಗಳನ್ನು ಆರಿಸಿಕೊಳ್ಳಿ, ಉತ್ಪನ್ನ ಆಯ್ಕೆಗಳು ಮತ್ತು ಬಳಕೆಯ ಅಭ್ಯಾಸಗಳ ಬಗ್ಗೆ ಜಾಗರೂಕರಾಗಿರುವುದರಿಂದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು. ಇವೆಲ್ಲವುಗಳ ಹೊರತಾಗಿಯೂ ಅತಿಯಾದರೆ ಅಮೃತವೂ ವಿಷ ಎನ್ನುವುದು ನೆನಪಿರಬೇಕಷ್ಟೇ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆರೋಗ್ಯ ಸಮಸ್ಯೆಗಳು
ಆರೋಗ್ಯ
ಫ್ಯಾಷನ್
ವೈದ್ಯರು

Latest Videos
Recommended Stories
Recommended image1
Samantha Shocking Story: ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ: "ನನಗೆ ತಿನ್ನಲು ಇಷ್ಟವಿಲ್ಲ ಅಂತಲ್ಲ, ತಿನ್ನಲು ಆಗುತ್ತಿಲ್ಲ'...!
Recommended image2
ಫ್ಯಾಟಿ ಲಿವರ್ ಇದೆಯಾ? ಹಾಗಿದ್ರೆ ನಿಮ್ಮ ಡಯಟ್‌ನಲ್ಲಿ ಈ ಬದಲಾವಣೆಗಳನ್ನು ಖಂಡಿತ ಮಾಡಿ
Recommended image3
ಫ್ರಿಜ್’ನಲ್ಲಿಟ್ಟ ಈ ಆಹಾರಗಳನ್ನು ಮತ್ತೆ ಬಿಸಿ ಮಾಡಿ ಸೇವಿಸುವ ತಪ್ಪು ಮಾಡ್ಬೇಡಿ!
Related Stories
Recommended image1
3 ದಶಕದಲ್ಲಿಯೇ ಕಂಡರಿಯದ ನೇರಳೆ ಹಣ್ಣಿನ ರಾಶಿ: ಭೀಕರ ಬರಗಾಲದ ಮುನ್ಸೂಚನೆ? ವಿಜ್ಞಾನಿಗಳು ಹೇಳೋದೇನು
Recommended image2
ಶಾಲಾ ಆಡಳಿತಗಳಿಗೆ ತಲೆನೋವಾದ ಲಿಪ್​ಸ್ಟಿಕ್ಸ್​: ಸ್ಕೂಲ್​ ಕ್ಯಾಂಪಸ್​ಗಳಲ್ಲಿ ಬ್ಯಾನ್ ಮಾಡಿದ ಸರ್ಕಾರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved