Premature ಮಗುವಿನ ಪಾಲನೆ ಹೀಗಿರಲಿ
ಇತ್ತೀಚಿನ ದಿನಗಳಲ್ಲಿ ಪ್ರಿ ಮೆಚ್ಯೂರ್ ಶಿಶುಗಳು ಕಾಮನ್ ಆಗಿವೆ. ಮಗುವು ಸಾಮಾನ್ಯವಾಗಿ ಗರ್ಭಧಾರಣೆಯ 9 ತಿಂಗಳ ನಂತರ ಜನಿಸುತ್ತದೆ. ಆದರೆ ಅಕಾಲಿಕವಾಗಿ ಜನಿಸಿದ ಮಕ್ಕಳನ್ನು ಪ್ರಿ ಮೆಚ್ಯೂರ್ ಶಿಶು ಎಂದು ಕರೆಯಲಾಗುತ್ತದೆ. ಪ್ರಿ ಮೆಚ್ಯೂರ್ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಲು ವೈದ್ಯರು ಕರೆ ನೀಡುತ್ತಾರೆ. ನಿಮ್ಮ ಮನೆಯಲ್ಲಿ ಪ್ರಿ ಮೆಚ್ಯೂರ್ ಮಗು ಜನಿಸಿದರೆ, ಮಗುವನ್ನು ನೋಡಿಕೊಳ್ಳಲು ಈ ವಿಷಯಗಳನ್ನು ನೆನಪಿನಲ್ಲಿಡಿ.
ಯಾವಾಗಲೂ ಪ್ರಿ ಮೆಚ್ಯೂರ್(Premature) ಮಗುವಿಗೆ ಸ್ತನ್ಯಪಾನ ಮಾಡಿಸಿ. ಅನೇಕ ಜನರು ಹಸುವಿನ ಹಾಲನ್ನು ಮಗುವಿಗೆ ಕುಡಿಸುತ್ತಾರೆ. ಮರೆತು ಕೂಡ ಈ ತಪ್ಪು ಮಾಡಬೇಡಿ. ತಾಯಿಯ ಹಾಲನ್ನು ಕನಿಷ್ಠ 6 ತಿಂಗಳವರೆಗೆ ಕೊಡಿ. ಅದರ ನಂತರ ಮಾತ್ರ ಹಸುವಿನ ಹಾಲು ಕೊಡಬಹುದು.
ವೈದ್ಯರ ಪ್ರಕಾರ, ಪ್ರಿ ಮೆಚ್ಯೂರ್ ಮಗುವಿಗೆ ದಿನಕ್ಕೆ ಕನಿಷ್ಠ 8 ಅಥವಾ 10 ಬಾರಿ ಹಾಲುಣಿಸಬೇಕು(Breast feeding). ನೆನಪಿನಲ್ಲಿಡಬೇಕಾದ ಒಂದು ವಿಷ್ಯ ಎಂದರೆ ಎರಡು ಬಾರಿ ಹಾಲುಣಿಸುವ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಬೇಕು. ಅದೇ ಸಮಯದಲ್ಲಿ, 4 ಗಂಟೆಗಳಿಗಿಂತ ಹೆಚ್ಚು ಅಂತರ ಇರಬಾರದು.
ಮಗುವಿನ ಆರೋಗ್ಯವನ್ನು ಮಾನಿಟರ್(Monitor) ಮಾಡುತ್ತಿರಿ. ಅದರ ಬೆಳವಣಿಗೆ ಬಗ್ಗೆ ಗಮನ ಹರಿಸಿ. ಪ್ರಿ ಮೆಚ್ಯೂರ್ ಮಗು ಸರಿಯಾಗಿ ಬೆಳೆದಿಲ್ಲ ಎಂದು ನಿಮಗೆ ಅನಿಸಬಹುದು ಅದಕ್ಕಾಗಿ ಸರಿಯಾಗಿ ಮಗುವನ್ನು ಪರೀಕ್ಷಿಸಿ
ಮಗುವಿನ ಕೇಳುವ (Hearing)ಮತ್ತು ನೋಡುವ ಸಾಮರ್ಥ್ಯದಲ್ಲಿ ವ್ಯತ್ಯಾಸವಿರಬಹುದು. ಇದಕ್ಕಾಗಿ, ನಿಯಮಿತ ಇಂಟರ್ವಲ್ ನಲ್ಲಿ ವೈದ್ಯರನ್ನು ಸಂಪರ್ಕಿಸಿ. ಮಗುವನ್ನು ಪೂರ್ತಿಯಾಗಿ ಟೆಸ್ಟ್ ಮಾಡಿಸಿ. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ಮಗುವಿನ ಉತ್ತಮ ಬೆಳವಣಿಗೆಗೆ ಸಹಾಯವಾಗುತ್ತೆ.
ಆರೋಗ್ಯ ತಜ್ಞರ ಪ್ರಕಾರ, ಪ್ರಿ ಮೆಚ್ಯೂರ್ ಶಿಶುವು ಸಾಕಷ್ಟು ನಿದ್ರೆ ಮಾಡುವಂತೆ ಗಮನಹರಿಸಿ. ಇದಕ್ಕಾಗಿ, ಮನೆಯ ವಾತಾವರಣವನ್ನು ಶಾಂತವಾಗಿರಿಸಿ. ಹೆಚ್ಚು ಸದ್ದು ಮಾಡಬೇಡಿ. ಇದು ಮಗುವಿನ ನಿದ್ರೆಗೆ(Sleep) ಡಿಸ್ಟರ್ಬೆನ್ಸ್ ತರಬಹುದು.
ಅದೇ ಸಮಯದಲ್ಲಿ, ಯಾವಾಗಲೂ ಮಗುವನ್ನು ಬೆನ್ನಿನ ಮೇಲೆ ಮಲಗಿಸಿ. ಪ್ರಿ ಮೆಚ್ಯೂರ್ ಮಗುವನ್ನು ಯಾವತ್ತೂ ತಲೆದಿಂಬಿನಲ್ಲಿ(Pillow) ಮಲಗಿಸಬೇಡಿ. ಮಗುವಿಗೆ ಯಾವಾಗ ಹಸಿವಾಗುತ್ತದೆ, ಯಾವಾಗ ಮಲಗುತ್ತದೆ? ಈ ಎಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸಿ.
ಮಗುವನ್ನು ಎಂದಿಗೂ ಒಂಟಿಯಾಗಿ(Alone) ಬಿಡಬೇಡಿ. ಮಗುವಿನೊಂದಿಗೆ ಬೇರೆ ಕೆಲಸ ಗಳನ್ನೂ ಮಾಡಿ. ಯಾಕೆಂದರೆ ಪುಟಾಣಿ ಮಕ್ಕಳಿಗೆ ಯಾವುದೇ ಸಂದರ್ಭದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ಮಗುವಿನ ಜೊತೆಗೆ ಯಾರಾದರೂ ಒಬ್ಬರು ಇರುವಂತೆ ನೋಡಿಕೊಳ್ಳಬೇಕು.
ಮಗುವಿಗೆ ಸ್ನಾನ (Bath)ಮಾಡಲು ಬಯಸಿದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಅಲ್ಲದೇ ಸ್ನಾನ ಮಾಡುವಾಗ ಹೆಚ್ಚಿನ ಗಮನ ಹರಿಸಿ. ಯಾಕೆಂದರೆ ಅಕಾಲಿಕ ಮಕ್ಕಳ ತ್ವಚೆ ತುಂಬಾನೆ ನಾಜೂಕಾಗಿರುತ್ತದೆ. ಆದುದರಿಂದ ಸ್ನಾನ ಮಾಡಿಸುವಾಗ ಹೆಚ್ಚಿನ ಗಮನ ಹರಿಸೋದು ತುಂಬಾನೆ ಮುಖ್ಯ.
ಆರೋಗ್ಯ ತಜ್ಞರ ಪ್ರಕಾರ, ಪ್ರಿಮೆಚ್ಯೂರ್ ಮಗುವಿನ ರೋಗನಿರೋಧಕ ಶಕ್ತಿ(Immunity power) ತುಂಬಾ ದುರ್ಬಲವಾಗಿರುತ್ತೆ. ಆದುದರಿಂದ ಮಗುವನ್ನು ಹೊರಗಿನ ಪರಿಸರದಿಂದ ದೂರವಿಡಿ. ಇಲ್ಲವಾದರೆ ಮಗುವಿಗೆ ಹೆಚ್ಚಿನ ಸಮಸ್ಯೆಗಳು ಉಂಟಾಗೋ ಸಾಧ್ಯತೆ ಇರುತ್ತದೆ. ಈ ಬಗ್ಗೆ ಗಮನ ಇರಲಿ.