Asianet Suvarna News Asianet Suvarna News

Immunity ಕಡಿಮೆ ಆಗಿರೋದನ್ನು ಹೀಗೆ ತಿಳ್ಕೊಳಿ

ಯಾವುದೇ ವೈರಸ್‌, ಫಂಗಸ್‌, ಬ್ಯಾಕ್ಟೀರಿಯಾ ದಾಳಿಯಿಂದ ನಮ್ಮನ್ನು ರಕ್ಷಿಸುವಲ್ಲಿ ರೋಗ ನಿರೋಧಕ ಶಕ್ತಿಯ ಪಾತ್ರ ಪ್ರಮುಖವಾಗಿದೆ. ರೋಗ ನಿರೋಧಕ ಶಕ್ತಿ ಸದೃಢವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಆದರೆ, ಹಲವಾರು ಕಾರಣಗಳಿಂದ ಇಮ್ಯೂನಿಟಿ ಕುಗ್ಗುತ್ತದೆ. ಆಗ ದೇಹ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಅವುಗಳನ್ನು ಗುರುತಿಸಿಕೊಳ್ಳುವುದು ಅಗತ್ಯ.
 

Here are the signs of low immune system
Author
Bangalore, First Published Jan 27, 2022, 10:00 AM IST

ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸಿಕೊಳ್ಳುವ ಅಗತ್ಯದ ಕುರಿತು ಸಾಕಷ್ಟು ಕೇಳಿದ್ದೇವೆ. ವಿಶೇಷವಾಗಿ, ಕಳೆದೆರಡು ವರ್ಷಗಳಿಂದ ರೋಗ ನಿರೋಧಕ ಶಕ್ತಿಯ ಕುರಿತಾಗಿಯೇ ಅದೆಷ್ಟು ಮಾತುಕತೆ ನಡೆಸಿದ್ದೇವೋ ಗೊತ್ತಿಲ್ಲ. ಎಲ್ಲರೂ ನೀಡುವ ಸಲಹೆಯೆಂದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಇಮ್ಯೂನಿಟಿ ವೀಕ್‌ (Weak) ಆಗಲು ಬಿಡಬೇಡಿ ಎಂದೇ. ಆದರೆ, ಕೆಲವೊಮ್ಮೆ ನಮ್ಮ ಗಮನಕ್ಕೆ ಬಾರದೆ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತಿರುತ್ತದೆ. ಅದಕ್ಕೆ ಕಾರಣಗಳು ಹಲವು.
ಇಮ್ಯೂನಿಟಿ ದುರ್ಬಲವಾದರೆ ವೈರಸ್‌ (Virus), ಫಂಗಸ್‌ (Fungus), ಬ್ಯಾಕ್ಟೀರಿಯಾ (Bacteria)ಗಳ ದಾಳಿಗೆ ನಮ್ಮ ದೇಹ (Body) ಸುಲಭವಾಗಿ ತುತ್ತಾಗುತ್ತದೆ.

ರೋಗನಿರೋಧಕ ಶಕ್ತಿಯು ಬಿಳಿ ರಕ್ತಕಣ (White Blood Cells), ಲಿಂಫ್‌ ನೋಡ್ಸ್‌ ಹಾಗೂ ಆಂಟಿಬಾಡಿ(Antibody)ಗಳಿಂದ ರೂಪುಗೊಳ್ಳುತ್ತದೆ. ಇವುಗಳೇ ದೇಹವನ್ನು ಬಾಹ್ಯ ದಾಳಿಯಿಂದ ರಕ್ಷಿಸುತ್ತವೆ. ದೇಹಕ್ಕೆ ವೈರಸ್‌ ಪ್ರವೇಶಿಸಿದರೆ ಅದರ ಮೇಲೆ ಪ್ರತಿರಕ್ಷಕ ಕೋಶಗಳು ಅಂದರೆ, ರೋಗ ನಿರೋಧಕ ಕೋಶಗಳು ದಾಳಿ ನಡೆಸಿ ಅದನ್ನು ನಿಷ್ಕ್ರಿಯಗೊಳಿಸುತ್ತವೆ. ಹೀಗಾಗಿ, ರೋಗ ನಿರೋಧಕ ಶಕ್ತಿ ಅಮೂಲ್ಯವಾಗಿದೆ.

Lip Care: ಚೆಲುವೆಯ ಅಂದದ ಮೊಗಕೆ ತುಟಿಯೂ ಭೂಷಣ

ಕೆಲವೊಮ್ಮೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಆಗ ಕೆಲವು ಲಕ್ಷಣಗಳು ಗೋಚರವಾಗುತ್ತವೆ. ಆ ಸಮಯದಲ್ಲಿ ಎಚ್ಚರಿಕೆ ತೆಗೆದುಕೊಂಡರೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಬಹುದು. ಇಮ್ಯೂನಿಟಿ ಕಡಿಮೆಯಾದಾಗ ಏನಾಗುತ್ತೆ ನೋಡಿಕೊಳ್ಳಿ.

•      ನಿರಂತರವಾಗಿ ಸುಸ್ತೆನಿಸುವುದು (Fatigue): ರಾತ್ರಿ ಸುಮಾರು ೭-೮ ಗಂಟೆ ನಿದ್ರೆ ಮಾಡಿ ಎದ್ದಾಗ ದೇಹದಲ್ಲಿ ಲವಲವಿಕೆ ಇರುವುದು ಸಹಜ. ಆದರೆ, ನಿದ್ರೆ ಮಾಡಿ ಎದ್ದಾಗಲೂ ಸುಸ್ತೆನಿಸುತ್ತಿದ್ದರೆ ಅದು ರೋಗ ನಿರೋಧಕ ಶಕ್ತಿ ಕುಗ್ಗಿರುವ ಲಕ್ಷಣ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆಯೋ ಅವರು ರಾತ್ರಿ ನಿದ್ರೆ ಮಾಡಿ ಎದ್ದ ಬಳಿಕವೂ ಸುಸ್ತನ್ನು ಅನುಭವಿಸುತ್ತಾರೆ. ದೇಹವನ್ನು ದಂಡಿಸುವಂತಹ ಯಾವುದೇ ಕೆಲಸ ಮಾಡಿರದಿದ್ದರೂ ಸುಸ್ತಾಗುತ್ತದೆ. ಅವರಲ್ಲಿ ಲವಲವಿಕೆಯೇ ಇರುವುದಿಲ್ಲ. ಯಾವುದೇ ಕೆಲಸ ಮಾಡುವುದಿದ್ದರೂ ಅದನ್ನು ಬಲವಂತದಿಂದ ಎಂಬಂತೆ ಮಾಡುತ್ತಾರೆ. ಇದಕ್ಕೆ ಪರಿಹಾರವೆಂದರೆ, ವ್ಯಾಯಾಮ ಮತ್ತು ಯೋಗ. ಯೋಗಾಸನಗಳಿಂದ ಕ್ರಮೇಣ ದೇಹದ ಇಮ್ಯೂನಿಟಿ ಹೆಚ್ಚುತ್ತದೆ. ಯೋಗ ಹಾಗೂ ವ್ಯಾಯಾಮಗಳಿಂದ ದೇಹದ ಎನರ್ಜಿ (Energy) ಸುಧಾರಿಸುತ್ತದೆ. ಸುಸ್ತನ್ನು ಕಡಿಮೆ ಮಾಡಿ ದೇಹಕ್ಕೆ ಉತ್ಸಾಹ ತುಂಬುತ್ತದೆ.

Gehraiyaan promotions: ದೀಪಿಕಾ ಧರಿಸಿದ ಮಿನಿ ಬ್ಲೇಜರ್‌ ಡ್ರೆಸ್‌ ಬೆಲೆಗೆ iMac ಕೊಳ್ಬೋದು

•      ದೀರ್ಘ ಸಮಯದವರೆಗೆ ನೆಗಡಿ (Cold) ಇರುವುದು: ಬಹಳ ಕಾಲದಿಂದಲೂ ನೆಗಡಿ, ಶೀತ, ಕೆಮ್ಮಿರುವುದು ರೋಗ ನಿರೋಧಕ ಶಕ್ತಿ ಕುಂದಿರುವುದರ ಪ್ರತೀಕ. ಸಾಮಾನ್ಯರಿಗೆ ವರ್ಷದಲ್ಲಿ ೨-೩ ಬಾರಿ ನೆಗಡಿಯಾಗುವುದು ಸಾಮಾನ್ಯ. ಆದರೆ, ಅದು ಎಷ್ಟು ಸಮಯದವರೆಗೆ ಇರುತ್ತದೆ ಎನ್ನುವುದನ್ನು ಗಮನಿಸಬೇಕು. ಶೀತವಾದಾಗ ಆಂಟಿಬಾಡಿ ಹೆಚ್ಚಾಗಲು ಹಾಗೂ ಕೀಟಾಣುವಿನ ವಿರುದ್ಧ ಹೋರಾಟ ನಡೆಸಲು ರೋಗ ನಿರೋಧಕ ಶಕ್ತಿ ಹೆಚ್ಚಾಗಲು ೩-೪ ದಿನಗಳ ಕಾಲ ಬೇಕಾಗುತ್ತದೆ. ಹೀಗಾಗಿ, ಸಾಮಾನ್ಯವಾಗಿ ನೆಗಡಿ ೬-೭ ದಿನಗಳ ಕಾಲ ಇರುತ್ತದೆ. ಆದರೆ, ಅದಕ್ಕೂ ಹೆಚ್ಚಿನ ಸಮಯವಿದ್ದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ಅರಿತುಕೊಳ್ಳಬೇಕು.

     ಸದಾಕಾಲ ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಯಾಗುವುದು (Stomack Problem) : ರೋಗ ನಿರೋಧಕ ಶಕ್ತಿ ಕುಗ್ಗಿದ್ದರೆ ನಿರಂತರವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತದೆ. ಹೊಟ್ಟೆ ಸರಿಯಾಗಿಲ್ಲ ಎಂದರೆ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತಿಲ್ಲ ಎಂದರ್ಥ. ಏಕೆಂದರೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ನಮ್ಮ ಕರುಳಿನಲ್ಲಿರುತ್ತವೆ. ದೀರ್ಘಕಾಲ ಹೊಟ್ಟೆಯುರಿ, ಉಬ್ಬರ, ಗ್ಯಾಸ್ಟ್ರಿಕ್‌, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿದ್ದರೆ ಎಚ್ಚೆತ್ತುಕೊಳ್ಳಬೇಕು.

•      ಅತಿಯಾದ ಉದ್ವೇಗ (Stress and Anxiety): ಎಲ್ಲರೂ ಸಹಜವಾಗಿ ಒಂದಿಷ್ಟು ಕೆಲಸ ಕಾರ್ಯಗಳ ಬಗ್ಗೆ ಉದ್ವೇಗ ಹೊಂದಿರುತ್ತೇವೆ. ಆದರೆ, ಎಲ್ಲದರ ಬಗೆಗೂ ಅತಿಯಾದ ಉದ್ವೇಗ ಉಂಟಾದರೆ ಅದು ರೋಗ ನಿರೋಧಕ ಶಕ್ತಿ ಕುಗ್ಗಿರುವುದನ್ನು ತೋರಿಸುತ್ತದೆ ಎಂದರೆ ಅಚ್ಚರಿಯಾಗಬಹುದು. ಯಾರು ಹೆಚ್ಚು ಒತ್ತಡ ಮಾಡಿಕೊಳ್ಳುತ್ತಾರೋ ಅವರಿಗೆ ಇಮ್ಯೂನಿಟಿ ಕಡಿಮೆ ಇರುತ್ತದೆ. ಒತ್ತಡಿಂದಾಗಿ ಬಿಳಿ ರಕ್ತಕಣ ಮತ್ತು ಲಿಂಫೋಸೈಟ್ಸ್‌ ಸಂಖ್ಯೆ ಇಳಿಕೆಯಾಗುತ್ತದೆ. ಹೀಗಾಗಿ, ದೀರ್ಘ ಸಮಯ ಹೆಚ್ಚು ಒತ್ತಡ, ಉದ್ವೇಗ ಇದ್ದರೆ ಅದರಿಂದ ಸಮಸ್ಯೆಯಾಗುತ್ತದೆ.

Follow Us:
Download App:
  • android
  • ios