MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Fact Check: ಒಂದು ಪೆಗ್ ಡ್ರಿಂಕ್ಸ್ ಹೃದಯಕ್ಕೆ ಒಳ್ಳೇದಾ? ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿ ಸತ್ಯ!

Fact Check: ಒಂದು ಪೆಗ್ ಡ್ರಿಂಕ್ಸ್ ಹೃದಯಕ್ಕೆ ಒಳ್ಳೇದಾ? ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿ ಸತ್ಯ!

Alcohol heart health myth Kannada: ಅಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸುವುದು ಆರೋಗ್ಯಕ್ಕೆ, ವಿಶೇಷವಾಗಿ ಹೃದಯಕ್ಕೆ ಒಳ್ಳೆಯದು ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ.  ಒತ್ತಡ ಕಡಿಮೆ ಮಾಡಿಕೊಳ್ಳುವ ನೆಪದಲ್ಲಿ ದಿನಕ್ಕೊಂದು ಗ್ಲಾಸ್ ಆಲ್ಕೋಹಾಲ್ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ.   

2 Min read
Author : Ashwini HR
Published : Jul 08 2026, 05:26 PM IST
Share this Photo Gallery
  • FB
  • TW
  • Linkdin
  • Whatsapp
15
ಸಂಶೋಧಕರಿಂದ ಎಚ್ಚರ
Image Credit : Asianet News

ಸಂಶೋಧಕರಿಂದ ಎಚ್ಚರ

ಸಂಶೋಧಕರಿಂದ ಎಚ್ಚರ
ಸ್ವಲ್ಪ ಮದ್ಯಪಾನ ಹೃದಯದ ಆರೋಗ್ಯಕ್ಕೆ ಹಿತಕಾರಿ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯವಿಲ್ಲ ಎಂದು ಇತ್ತೀಚಿನ ಅಧ್ಯಯನವೊಂದು ಸ್ಪಷ್ಟಪಡಿಸಿದೆ. ದಿನಕ್ಕೆ ಕೇವಲ ಒಂದು ಸಣ್ಣ ಪೆಗ್ ಮದ್ಯ ಸೇವಿಸಿದರೂ ಸಹ ರಕ್ತದೊತ್ತಡ (BP) ಹೆಚ್ಚಾಗುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ದೀರ್ಘಕಾಲದ ಈ ಅಭ್ಯಾಸವು ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ನಂತಹ ಪ್ರಾಣಾಪಾಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
'ಹೈಪರ್‌ಟೆನ್ಷನ್ ಜರ್ನಲ್'ನಲ್ಲಿ ಪ್ರಕಟ
Image Credit : Getty

'ಹೈಪರ್‌ಟೆನ್ಷನ್ ಜರ್ನಲ್'ನಲ್ಲಿ ಪ್ರಕಟ

'ಹೈಪರ್‌ಟೆನ್ಷನ್ ಜರ್ನಲ್'ನಲ್ಲಿ ಪ್ರಕಟ
ಈ ಸಂಶೋಧನೆಯ ವಿವರಗಳನ್ನು ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ 'ಹೈಪರ್‌ಟೆನ್ಷನ್ ಜರ್ನಲ್'ನಲ್ಲಿ ಪ್ರಕಟಿಸಲಾಗಿದೆ. ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಸುಮಾರು 19,548 ವ್ಯಕ್ತಿಗಳ ಆರೋಗ್ಯ ಮಾಹಿತಿಯನ್ನು ಹಲವು ವರ್ಷಗಳ ಕಾಲ ವಿಶ್ಲೇಷಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

Related Articles

Related image1
ನಿಮ್ಮ ಇಮ್ಯೂನಿಟಿ ಕಡಿಮೆ ಆಗೋಕೆ ಹಳೆಯ ದಿಂಬೇ ಕಾರಣವಿರಬಹುದು! ಎಚ್ಚರಿಕೆ ಕೊಟ್ರು ಡಾಕ್ಟರ್
Related image2
ಇಡ್ಲಿ ದೋಸೆ ಒಂದೇ ಹಿಟ್ಟಿನಿಂದ ತಯಾರಿಸಿದರೂ ಆರೋಗ್ಯಕ್ಕೆ ಯಾವುದು ಹೆಚ್ಚು ಒಳ್ಳೆಯದು?
35
ಅಧ್ಯಯನದಲ್ಲಿ ತಿಳಿದುಬಂದ ಪ್ರಮುಖ ಅಂಶಗಳು
Image Credit : Freepik

ಅಧ್ಯಯನದಲ್ಲಿ ತಿಳಿದುಬಂದ ಪ್ರಮುಖ ಅಂಶಗಳು

ಅಧ್ಯಯನದಲ್ಲಿ ತಿಳಿದುಬಂದ ಪ್ರಮುಖ ಅಂಶಗಳು
ಮದ್ಯದ ಪ್ರಮಾಣ ಹೆಚ್ಚಾದಂತೆ ಬಿಪಿ ಹೆಚ್ಚಳ: ಮದ್ಯ ಸೇವನೆಯ ಪ್ರಮಾಣ ಹೆಚ್ಚಾದಂತೆ 'ಸಿಸ್ಟೋಲಿಕ್' ರಕ್ತದೊತ್ತಡವೂ (BP ಯ ಮೇಲಿನ ಸಂಖ್ಯೆ) ಕ್ರಮೇಣ ಹೆಚ್ಚಾಗುತ್ತದೆ ಎಂದು ಸಂಶೋಧಕರು ಗುರುತಿಸಿದ್ದಾರೆ.

ಕಡಿಮೆ ತೆಗೆದುಕೊಂಡರೂ ಡೇಂಜರ್: ದಿನಕ್ಕೆ ಕೇವಲ ಒಂದು ಸಣ್ಣ ಡ್ರಿಂಕ್ ಸೇವಿಸುವವರಲ್ಲೂ ರಕ್ತದೊತ್ತಡ ಹೆಚ್ಚಾಗುತ್ತದೆ. ಈ ಏರಿಕೆ ಆರಂಭದಲ್ಲಿ ಸಣ್ಣದಾಗಿ ಕಂಡರೂ, ವರ್ಷಗಳ ಕಾಲ ಈ ಅಭ್ಯಾಸ ಮುಂದುವರಿದರೆ ರಕ್ತನಾಳಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಲಿಂಗ ವ್ಯತ್ಯಾಸ: ಪುರುಷರಲ್ಲಿ ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ಎರಡೂ ಬಿಪಿ ಹೆಚ್ಚಾಗುವುದು ಕಂಡುಬಂದಿದೆ. ಮಹಿಳೆಯರಲ್ಲಿ ಡಯಾಸ್ಟೋಲಿಕ್ ಬಿಪಿ ಹೆಚ್ಚಳ ಅಷ್ಟಾಗಿ ಸ್ಪಷ್ಟವಾಗಿಲ್ಲದಿದ್ದರೂ, ಒಟ್ಟಾರೆ ರಕ್ತದೊತ್ತಡದ ಅಪಾಯ ಮಾತ್ರ ಇರುತ್ತದೆ. "ಸ್ವಲ್ಪ ಕುಡಿದರೆ ಲಾಭ" ಎಂಬುದು ಕೇವಲ ಭ್ರಮೆ!

45
ಕಿಡ್ನಿ ಸಮಸ್ಯೆಯೂ ಬರುತ್ತೆ
Image Credit : Getty

ಕಿಡ್ನಿ ಸಮಸ್ಯೆಯೂ ಬರುತ್ತೆ

ಕಿಡ್ನಿ ಸಮಸ್ಯೆಯೂ ಬರುತ್ತೆ
ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ಮಾರ್ಕೊ ವಿನ್ಸೆಟಿ ಅವರ ಪ್ರಕಾರ, "ಮದ್ಯ ಸೇವಿಸದವರಿಗಿಂತ ಸ್ವಲ್ಪ ಕುಡಿಯುವವರಲ್ಲಿ ಯಾವುದೇ ವಿಶೇಷ ಆರೋಗ್ಯ ಪ್ರಯೋಜನಗಳು ಕಂಡುಬಂದಿಲ್ಲ. ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದೇ ಉತ್ತಮ ಮಾರ್ಗ."

ಬ್ರಿಟನ್‌ನ ನ್ಯಾಷನಲ್ ಹೆಲ್ತ್ ಸರ್ವೀಸ್ (NHS) ಪ್ರಕಾರ, ಸಾಮಾನ್ಯವಾಗಿ 140/90 mmHg ಗಿಂತ ಹೆಚ್ಚಿನ ರಕ್ತದೊತ್ತಡವಿದ್ದರೆ ಅದನ್ನು ಅಧಿಕ ರಕ್ತದೊತ್ತಡ (High BP) ಎಂದು ಪರಿಗಣಿಸಲಾಗುತ್ತದೆ. ಇದು ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು. 

55
ಹೃದಯದ ಆರೋಗ್ಯಕ್ಕಾಗಿ ಹೀಗೆ ಮಾಡಿ
Image Credit : Getty

ಹೃದಯದ ಆರೋಗ್ಯಕ್ಕಾಗಿ ಹೀಗೆ ಮಾಡಿ

ಹೃದಯದ ಆರೋಗ್ಯಕ್ಕಾಗಿ ಹೀಗೆ ಮಾಡಿ
*ಮದ್ಯಪಾನವನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಬಿಡಿ.
*ಧೂಮಪಾನದಿಂದ ದೂರವಿರಿ.
*ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ.
*ಹಣ್ಣು, ತರಕಾರಿ ಮತ್ತು ಕಡಿಮೆ ಉಪ್ಪು ಇರುವ ಸಮತೋಲಿತ ಆಹಾರ ಸೇವಿಸಿ.
*ತೂಕ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.
*ಮಧುಮೇಹ ಅಥವಾ ಬಿಪಿ ಇರುವವರು ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ.
*ಆರೋಗ್ಯಕರ ಜೀವನಶೈಲಿ ಮತ್ತು ದುಶ್ಚಟಗಳಿಂದ ದೂರವಿರುವುದು ಹೃದಯದ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಹೃದ್ರೋಗ ತಜ್ಞರು ಸಲಹೆ ನೀಡುತ್ತಾರೆ. 

ಗಮನಿಸಿ: ಈ ಲೇಖನವು ಅಂತರಾಷ್ಟ್ರೀಯ ಅಧ್ಯಯನದ ಆಧಾರದ ಮೇಲೆ ಕೇವಲ ಸಾಮಾನ್ಯ ಮಾಹಿತಿಗಾಗಿ ನೀಡಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯಕರ ಆಹಾರಗಳು
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
Smart Phone: ಮಲಗುವ 1 ಗಂಟೆ ಮೊದಲು ನಿಮ್ಮ ಮೊಬೈಲ್ ಪಕ್ಕಕ್ಕಿಡಿ; ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ನೋಡಿ!
Recommended image2
Science of Anger: ಕೋಪ ಯಾಕೆ ಬರುತ್ತೆ? ಮನಸ್ಸು, ದೇಹ, ಭಾವನೆಗಳ ನಡುವೆ ಏನಾಗುತ್ತೆ ಗೊತ್ತಾ?
Recommended image3
Sneezing Facts: ಸೀನು ಯಾಕೆ ಬರುತ್ತೆ? ಇದರ ಹಿಂದಿನ ಸೀಕ್ರೆಟ್ 99% ಜನರಿಗೆ ಗೊತ್ತೇ ಇಲ್ಲ!
Related Stories
Recommended image1
ನಿಮ್ಮ ಇಮ್ಯೂನಿಟಿ ಕಡಿಮೆ ಆಗೋಕೆ ಹಳೆಯ ದಿಂಬೇ ಕಾರಣವಿರಬಹುದು! ಎಚ್ಚರಿಕೆ ಕೊಟ್ರು ಡಾಕ್ಟರ್
Recommended image2
ಇಡ್ಲಿ ದೋಸೆ ಒಂದೇ ಹಿಟ್ಟಿನಿಂದ ತಯಾರಿಸಿದರೂ ಆರೋಗ್ಯಕ್ಕೆ ಯಾವುದು ಹೆಚ್ಚು ಒಳ್ಳೆಯದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved