ಚಿಕನ್ ಸ್ಕಿನ್ ತಿನ್ನೋದು ನಿಜಕ್ಕೂ ಡೇಂಜರಾ, ತಿಂದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ?
Health risks of chicken skin: ಮಾಂಸಹಾರಿಗಳಿಗೆ ಚಿಕನ್ ಅಂದ್ರೆ ಪ್ರಾಣ. ಅದರಲ್ಲೂ ಸ್ಕಿನ್ ಲೆಸ್ ಚಿಕನ್ ಇಷ್ಟಪಡುವವರೇ ಹೆಚ್ಚು. ಆದರೆ ಚಿಕನ್ ಸ್ಕಿನ್ ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂಬ ಅರಿವು ಇಲ್ಲ. ಆದರೆ ಚಿಕನ್ ಸ್ಕಿನ್ ಸೇವನೆಯಿಂದ ಕೆಲವು ಕಾಯಿಲೆ ಬರುವ ಸಾಧ್ಯತೆ ಹೆಚ್ಚು.

ಪದೇ ಪದೇ ತಿನ್ನುವ ಅಭ್ಯಾಸವಿದೆಯಾ?
ಈ ಸಮಸ್ಯೆ ಇರುವವರು ತಿನ್ಲೇಬಾರ್ದು
ಚಿಕನ್ ಸ್ಕಿನ್ ತಿನ್ನುವುದರಿಂದ ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚು. ಇದರಲ್ಲಿರುವ ಅಧಿಕ ಕೊಬ್ಬು ರಕ್ತದಲ್ಲಿ ಸೇರಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೊತೆಗೆ, ರಕ್ತದೊತ್ತಡವೂ (ಬಿಪಿ) ಹೆಚ್ಚಾಗುತ್ತದೆ. ಈಗಾಗಲೇ ಹೃದಯ ಸಮಸ್ಯೆ ಅಥವಾ ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವವರು ಚಿಕನ್ ಸ್ಕಿನ್ ತಿನ್ನಲೇಬಾರದು.
ತಿನ್ನದಿದ್ದರೇನೇ ಬೆಸ್ಟ್
ಚಿಕನ್ ಸ್ಕಿನ್‌ನಲ್ಲಿ ಕ್ಯಾಲೋರಿಗಳು ಹೆಚ್ಚಾಗಿರುತ್ತವೆ. ಇದರಿಂದಾಗಿ ಬೇಗನೆ ತೂಕ ಹೆಚ್ಚಾಗುತ್ತದೆ. ಇನ್ನು ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಸಿಗುವ ಫ್ರೈಡ್ ಚಿಕನ್‌ನಲ್ಲಿರುವ ಸ್ಕಿನ್, ಎಣ್ಣೆಯನ್ನು ಹೆಚ್ಚು ಹೀರಿಕೊಳ್ಳುತ್ತದೆ. ಆಗ ಅದನ್ನು ತಿಂದಾಗ, ದುಪ್ಪಟ್ಟು ಕ್ಯಾಲೋರಿಗಳು ದೇಹ ಸೇರುತ್ತವೆ. ಇದು ಬೊಜ್ಜಿಗೆ ಕಾರಣವಾಗುತ್ತದೆ. ಅಧಿಕ ತೂಕದಿಂದ ಮಧುಮೇಹ, ಥೈರಾಯ್ಡ್, ಕೀಲುನೋವಿನಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಸಾಧ್ಯವಾದಷ್ಟು ಚಿಕನ್ ಸ್ಕಿನ್ ತಿನ್ನದಿರುವುದೇ ಉತ್ತಮ.
ಎರಡು-ಮೂರು ತಿಂಗಳಿಗೊಮ್ಮೆ...
ಹಾಗಂತ ಚಿಕನ್ ಸ್ಕಿನ್ ಸಂಪೂರ್ಣವಾಗಿ ನಿಷೇಧಿತ ಆಹಾರವೇನಲ್ಲ. ಆಗೊಮ್ಮೆ ಈಗೊಮ್ಮೆ ಗ್ರಿಲ್ ಅಥವಾ ಬೇಕ್ ಮಾಡಿದ ಚಿಕನ್ ಸ್ಕಿನ್ ತಿಂದರೆ ಪರವಾಗಿಲ್ಲ. ಆದರೆ ಪ್ರತಿವಾರ ತಿನ್ನುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ. ಎರಡು-ಮೂರು ತಿಂಗಳಿಗೊಮ್ಮೆ ತಿಂದರೆ ದೊಡ್ಡ ಸಮಸ್ಯೆಯಾಗದು. ಆದರೆ, ಮಕ್ಕಳು, ವೃದ್ಧರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಚಿಕನ್ ಸ್ಕಿನ್ ಕೊಡುವುದು ಅಷ್ಟೊಂದು ಒಳ್ಳೆಯದಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

