MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಚೀನಾದಿಂದ ಮತ್ತೊಂದು ಆಘಾತಕಾರಿ ಆರೋಗ್ಯ ಸಮಸ್ಯೆ.. ಪ್ರಾಣಕ್ಕೆ ಸಂಚಕಾರ ತರುತ್ತಿದೆ ಈ ಹೊಸ ಟ್ರೆಂಡ್..!

ಚೀನಾದಿಂದ ಮತ್ತೊಂದು ಆಘಾತಕಾರಿ ಆರೋಗ್ಯ ಸಮಸ್ಯೆ.. ಪ್ರಾಣಕ್ಕೆ ಸಂಚಕಾರ ತರುತ್ತಿದೆ ಈ ಹೊಸ ಟ್ರೆಂಡ್..!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರತಿಯೊಂದು ವಿಷಯವನ್ನೂ ಕಣ್ಣು ಮುಚ್ಚಿ ನಂಬಿದರೆ ಏನಾಗುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆಯುತ್ತಿರುವ ಈ ಘಟನೆಗಳೇ ಸಾಕ್ಷಿ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಸುಳ್ಳು ಭರವಸೆಗೆ ಮರುಳಾಗಿ ಜನರು ಈಗ ಆಸ್ಪತ್ರೆ ಪಾಲಾಗುತ್ತಿದ್ದಾರೆ!

2 Min read
Author : Ganesh Mabla Gowda
Published : Jul 25 2026, 09:43 AM IST
Share this Photo Gallery
  • FB
  • TW
  • Linkdin
  • Whatsapp
15
ಏನಿದು ಆಘಾತಕಾರಿ ಟ್ರೆಂಡ್?
Image Credit : pexels

ಏನಿದು ಆಘಾತಕಾರಿ ಟ್ರೆಂಡ್?

ಕೊರೊನಾ ಎಂಬ ಮಹಾಮಾರಿಯನ್ನು ಹಬ್ಬಿಸಿ ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂಡಿದ್ದ ಅದೇ ಚೀನಾದಿಂದ ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದೆ. ಯಾವುದೋ ವೈರಸ್ ರೂಪದಲ್ಲಲ್ಲ, ಬದಲಾಗಿ ವಿಚಿತ್ರ ಮತ್ತು ಪ್ರಾಣಾಪಾಯಕಾರಿ 'ಡಯಟ್' ಟ್ರೆಂಡ್ ಮೂಲಕ ಚೀನಿಯರು ಈಗ ಸುದ್ದಿಯಲ್ಲಿದ್ದಾರೆ. ತೂಕ ಇಳಿಸಿಕೊಳ್ಳುವ ಭರದಲ್ಲಿ ಅಲ್ಲಿನ ಜನರು ಮಾಡುತ್ತಿರುವ ಈ ಕೆಲಸ ಕೇಳಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!

ಏನಿದು ಆಘಾತಕಾರಿ ಟ್ರೆಂಡ್?

ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ವಿಲಕ್ಷಣ ಟ್ರೆಂಡ್ ವೈರಲ್ ಆಗಿದೆ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಆಸೆಗೆ ಬಿದ್ದು ಜನರು ಶುಗರ್-ಫ್ರೀ ಟೀ ಮತ್ತು ಗ್ಲಿಸರಿನ್ ಎನಿಮಾ (Glycerin Enema) ದ್ರವವನ್ನು ಮಿಶ್ರಣ ಮಾಡಿ ಕುಡಿಯುತ್ತಿದ್ದಾರೆ. ಹೌದು, ಮಲಬದ್ಧತೆ ಸಮಸ್ಯೆಗೆ ಕೇವಲ ಶೌಚದ ದ್ವಾರದ ಮೂಲಕ ಬಾಹ್ಯವಾಗಿ ಬಳಸಬೇಕಾದ 'ಎನಿಮಾ' ಔಷಧವನ್ನು ಜನರು ಚಹಾದಲ್ಲಿ ಬೆರೆಸಿ ಕುಡಿಯುತ್ತಿದ್ದಾರೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸಂಕಷ್ಟಕ್ಕೆ ಸಿಲುಕಿದ ಇನ್ಫ್ಲುಯೆನ್ಸರ್‌ಗಳು
Image Credit : pexels

ಸಂಕಷ್ಟಕ್ಕೆ ಸಿಲುಕಿದ ಇನ್ಫ್ಲುಯೆನ್ಸರ್‌ಗಳು

ಚೀನಾದ ಇನ್ಫ್ಲುಯೆನ್ಸರ್‌ಗಳು ಗ್ಲಿಸರಿನ್ ಎನಿಮಾ ಬಾಟಲಿಯನ್ನು ಟೀ ಒಳಗೆ ಸುರಿದು ಕುಡಿಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಕುಡಿದರೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ, ಇದರಿಂದ ದೇಹದ ತೂಕ ತಕ್ಷಣ ಇಳಿಯುತ್ತದೆ ಎಂಬುದು ಇವರ ವಾದ. ಈ ಹುಚ್ಚಾಟ ಈಗ ಅನೇಕರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕ (ICU) ತಲುಪುವಂತೆ ಮಾಡಿದೆ.

Related Articles

Related image1
ಜಿಂಬಾಬ್ವೆ ವಿರುದ್ಧ ಸೂರ್ಯವಂಶಿ ಅರ್ಧ ಶತಕ ಬಾರಿಸಿದ್ರೂ ಟೀಕೆಗೆ ಒಳಗಾದ ಗಂಭೀರ್.. ಕಾರಣ ಬೇರೆಯದ್ದೇ ಇದೆ!
Related image2
ಗೂಗಲ್ ಸರ್ಚ್‌ vs AI : ನಮ್ಮ ಅಗತ್ಯಗಳಿಗೆ ಯಾವುದು ಬೆಸ್ಟ್? ಅಧಿಕೃತ ಮಾಹಿತಿ ಸಿಗೋದು ಎಲ್ಲಿ?
35
ಬೆಚ್ಚಿಬೀಳಿಸುವ ಮಹಿಳೆಯ ಅನುಭವ
Image Credit : pexels

ಬೆಚ್ಚಿಬೀಳಿಸುವ ಮಹಿಳೆಯ ಅನುಭವ

ಸೋಶಿಯಲ್ ಮೀಡಿಯಾ ನೋಡಿ ಈ ಪ್ರಯೋಗ ಮಾಡಿದ 'ಮಾ' ಎಂಬ ಮಹಿಳೆಯ ಕಥೆ ಈಗ ಭೀತಿ ಹುಟ್ಟಿಸಿದೆ. ಇದನ್ನು ಕುಡಿದ 30 ನಿಮಿಷದಲ್ಲೇ ನನ್ನ ಸ್ಥಿತಿ ಹದಗೆಟ್ಟಿತು. ವಾಂತಿ ಮತ್ತು ಭೇದಿ ಶುರುವಾಯಿತು. ರಾತ್ರಿಯಿಡೀ ಪ್ರತಿ ಗಂಟೆಗೊಮ್ಮೆ ಶೌಚಾಲಯಕ್ಕೆ ಓಡಬೇಕಾಯಿತು. ಸ್ವಲ್ಪವೂ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇಂತಹ ಹತ್ತಾರು ಪ್ರಕರಣಗಳು ಚೀನಾದ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿವೆ.

45
ವೈದ್ಯರ ಎಚ್ಚರಿಕೆ ಏನು?
Image Credit : pexels

ವೈದ್ಯರ ಎಚ್ಚರಿಕೆ ಏನು?

ಈ ವಿಲಕ್ಷಣ ಟ್ರೆಂಡ್‌ನಿಂದಾಗಿ ಚೀನಾದ ಹೆನಾನ್ ಪ್ರಾಂತ್ಯದ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ವೈದ್ಯರ ಪ್ರಕಾರ ಈ ಕೆಳಗಿನ ಅಪಾಯಗಳು ಸಂಭವಿಸಬಹುದು.

  • ನಿರ್ಜಲೀಕರಣ (Dehydration): ಇದು ದೇಹದ ಕೊಬ್ಬನ್ನು ಕರಗಿಸುವುದಿಲ್ಲ, ಬದಲಾಗಿ ದೇಹದಲ್ಲಿರುವ ನೀರನ್ನು ಹೊರಹಾಕುತ್ತದೆ. ಇದರಿಂದ ತೂಕ ಇಳಿದಂತೆ ಭಾಸವಾದರೂ, ನೀರು ಕುಡಿದ ತಕ್ಷಣ ತೂಕ ಮತ್ತೆ ಮೊದಲಿನಂತಾಗುತ್ತದೆ.
  • ಜೀರ್ಣಾಂಗಕ್ಕೆ ಹಾನಿ: ಗ್ಲಿಸರಿನ್ ಎನಿಮಾವನ್ನು ಕುಡಿಯುವುದರಿಂದ ಕರುಳಿನ ಪದರಕ್ಕೆ ಹಾನಿಯಾಗುತ್ತದೆ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ತಪ್ಪುತ್ತದೆ.
  • ತೀವ್ರ ಅಡ್ಡಪರಿಣಾಮ: ಸಕ್ಕರೆ ರಹಿತ ಚಹಾದಲ್ಲಿರುವ 'ಥಿಯೋಫಿಲಿನ್' ಮತ್ತು 'ಟ್ಯಾನಿಕ್ ಆಸಿಡ್' ಜೊತೆಗೆ ಎನಿಮಾ ಸೇರಿದಾಗ ಜೀರ್ಣಾಂಗ ವ್ಯವಸ್ಥೆಯ ಮೇಲೆ ವಿಪರೀತ ಒತ್ತಡ ಬೀಳುತ್ತದೆ.
55
ಹಿಂದೆಯೂ ಚೀನಾ ಇಂತದ್ದೇ ಕೆಲಸ ಮಾಡಿತ್ತು!
Image Credit : pexels

ಹಿಂದೆಯೂ ಚೀನಾ ಇಂತದ್ದೇ ಕೆಲಸ ಮಾಡಿತ್ತು!

ಚೀನಾದಲ್ಲಿ ಇಂತಹ ವಿಚಿತ್ರ ಡಯಟ್ ಟ್ರೆಂಡ್ ಹೊಸದೇನಲ್ಲ. ಈ ಹಿಂದೆ 25 ವರ್ಷದ ಯುವತಿಯೊಬ್ಬಳು ವಾರಕ್ಕೆ ಒಂದು ದಿನ ಬೇಕಾಬಿಟ್ಟಿ ತಿಂದು, ಉಳಿದ 6 ದಿನ ಉಪವಾಸ ಮಾಡುವ 'ಡಯಟ್' ಪಾಲಿಸಿ ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್ (Pancreatitis) ಎಂಬ ಗಂಭೀರ ಕಾಯಿಲೆಗೆ ತುತ್ತಾಗಿದ್ದಳು.

ವಿಶ್ವಕ್ಕೆ ಮಾರಕ ವೈರಸ್‌ಗಳನ್ನು ನೀಡಿದ ಇತಿಹಾಸವಿರುವ ಚೀನಾದಲ್ಲಿ ಈಗ ಇಂತಹ ಹುಚ್ಚು ಸಾಹಸಗಳು ಸಂಚಲನ ಮೂಡಿಸುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಶಾರ್ಟ್‌ಕಟ್ ವಿಧಾನಗಳನ್ನು ನಂಬಿ ನಿಮ್ಮ ಪ್ರಾಣವನ್ನು ನೀವೇ ಸಂಕಷ್ಟಕ್ಕೆ ದೂಡಬೇಡಿ. ತೂಕ ಇಳಿಸಲು ವೈದ್ಯರ ಸಲಹೆ ಮತ್ತು ಆರೋಗ್ಯಕರ ಜೀವನಶೈಲಿ ಮಾತ್ರ ಏಕೈಕ ದಾರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಆರೋಗ್ಯ ಸಮಸ್ಯೆಗಳು
ಆರೋಗ್ಯ
ತೂಕ ಇಳಿಕೆ
ಔಷಧಗಳು
ಚೀನಾ

Latest Videos
Recommended Stories
Recommended image1
ಮಳೆಗಾಲದಲ್ಲಿ ಗಂಟಲು ನೋವು ಕಾಡ್ತಿದ್ರೆ ಈ ಮನೆ ಮದ್ದು ಬೆಸ್ಟ್
Recommended image2
ವ್ಯಾಟ್ಸಾಪ್, ಇನ್‌ಸ್ಟಾ ಪದೇ ಪದೆ ಚೆಕ್ ಮಾಡ್ತೀರಾ? ಕೇವಲ ಅಡಿಕ್ಷನ್ ಅಲ್ಲ ಮನೋ ತಜ್ಞರು ಹೇಳ್ತಾರೆ ಕೇಳಿ
Recommended image3
ಹಗಲಿನಲ್ಲಿ ಅಮೃತದಂತಿರುವ ಈ ಆಹಾರ ರಾತ್ರಿ ಸೇವಿಸಿದರೆ ಇಂತಹ ಸಮಸ್ಯೆ ನಿಮಗೂ ಬರಬಹುದು!
Related Stories
Recommended image1
ಜಿಂಬಾಬ್ವೆ ವಿರುದ್ಧ ಸೂರ್ಯವಂಶಿ ಅರ್ಧ ಶತಕ ಬಾರಿಸಿದ್ರೂ ಟೀಕೆಗೆ ಒಳಗಾದ ಗಂಭೀರ್.. ಕಾರಣ ಬೇರೆಯದ್ದೇ ಇದೆ!
Recommended image2
ಗೂಗಲ್ ಸರ್ಚ್‌ vs AI : ನಮ್ಮ ಅಗತ್ಯಗಳಿಗೆ ಯಾವುದು ಬೆಸ್ಟ್? ಅಧಿಕೃತ ಮಾಹಿತಿ ಸಿಗೋದು ಎಲ್ಲಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved