home remedies : ಮಳೆಗಾಲದಲ್ಲಿ ಅನಾರೋಗ್ಯ ಕಾಡೋದು ಹೆಚ್ಚು. ಗಂಟಲು ನೋವು ಇದ್ರಲ್ಲಿ ಒಂದು. ನಿಮಗೂ ಮಾತನಾಡಲಾಗ್ತಿಲ್ಲ, ಧ್ವನಿ ಬಿದ್ದಿದೆ, ಗಂಟಲು ನೋಯ್ತಿದೆ ಅಂದ್ರೆ ಈ ಮನೆ ಮದ್ದನ್ನು ಟ್ರೈ ಮಾಡಿ.

ಹವಾಮಾನ ಬದಲಾದಂತೆ ಆರೋಗ್ಯದಲ್ಲಿ ಏರುಪೇರು ಶುರುವಾಗುತ್ತೆ. ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಕಾಣಿಸಿಕೊಳ್ಳುತ್ತೆ. ಮಳೆಗಾಲದಲ್ಲಿ ಗಂಟಲು ನೋವು ಸಾಮಾನ್ಯ ಸಮಸ್ಯೆಯಾಗಿದೆ. ಆದ್ರೆ ನೋವು ಸಹಿಸೋದು ಕಷ್ಟ. ಮಾತನಾಡುವಾಗ ಮಾತ್ರವಲ್ಲ ಆಹಾರ ಸೇವನೆ ಮಾಡುವಾಗ್ಲೂ ಯಮಯಾತನೆ ಅನುಭವಿಸಬೇಕು. ನಿಮಗೂ ಗಂಟಲು ನೋವು ಕಾಡ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.

ಗಂಟಲು ನೋವಿಗೆ ಮನೆ ಮದ್ದು 

ಆಚಾರ್ಯ ಬಾಲಕೃಷ್ಣ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗಂಟಲು ನೋವಿಗೆ ಪರಿಹಾರ ಸೂಚಿಸಿದ್ದಾರೆ. ನೀವು ಯಾವುದೇ ಔಷಧಿ ಇಲ್ದೆ ಮನೆಯಲ್ಲಿಯೇ ಇದನ್ನು ಮಾಡ್ಬಹುದು.

https://kannada.asianetnews.com/gallery/health-life/kannada-health-tips-and-baby-food-tips-cow-or-buffalo-which-milk-is-best-for-your-children-s-health-mrq-kt7m3lf

ಮನೆ ಮದ್ದಿಗೆ ಅಗತ್ಯ ಇರುವ ಪದಾರ್ಥ : ಉಪ್ಪು, ಶುಂಠಿ ರಸ, ನಿಂಬೆ ರಸ ಮತ್ತು ನೀರು.

ಮಾಡುವ ವಿಧಾನ : ನೀವು ಮೊದಲು, ಅರ್ಧ ಕಪ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಶುಂಠಿ ರಸ ಮತ್ತು ನಿಂಬೆ ರಸವನ್ನು ಸೇರಿಸಿ. ಒಂದು ಚಿಟಿಕೆ ಉಪ್ಪು ಸೇರಿಸಿ. ನಂತ್ರ ಚೆನ್ನಾಗಿ ಮಿಕ್ಸ್ ಮಾಡಿ. ನಿಧಾನವಾಗಿ ಇದನ್ನು ಕುಡಿಯಿರಿ. ನಿಯಮಿತವಾಗಿ ನೀವು ಇದನ್ನು ಕುಡಿಯುತ್ತ ಬಂದಲ್ಲಿ ಗಂಟಲು ನೋವು ಮತ್ತು ಊತ ಕಡಿಮೆಯಾಗುತ್ತದೆ.

https://kannada.asianetnews.com/food/health-tips-tea-and-biscuits-side-effects-on-gut-health-and-digestion-sat/articleshow-q21egvv

ಇತರೆ ಮನೆ ಮದ್ದು

ಗಂಟಲು ನೋವಿಗೆ ನೀವು ಜೇನುತುಪ್ಪ ಬಳಸಬಹುದು. ಇದು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು, ಇದು ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಸೇವನೆ ಮಾಡಿ. ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಕೂಡ ಒಂದು ಪರಿಹಾರವಾಗಿದೆ. ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಉಪ್ಪು ನೀರಿನಂತೆ, ಅಡಿಗೆ ಸೋಡಾದಿಂದ ಗಾರ್ಗ್ಲಿಂಗ್ ಮಾಡಬಹುದು. ಬೆಳ್ಳುಳ್ಳಿಯ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ನೋಯುತ್ತಿರುವ ಗಂಟಲಿಗೆ ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿಯನ್ನು ಅಗಿಯುವುದು ಅಥವಾ ಬಿಸಿ ನೀರಿಗೆ ಸೇರಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ನೀವು ಯಾವುದೇ ಮನೆ ಮದ್ದು ಸೇವನೆ ಮಾಡಿದ್ರೂ ಗಂಟಲಿಗೆ ವಿಶ್ರಾಂತಿ ನೀಡುವುದು ಬಹಳ ಮುಖ್ಯ.