ಗೂಗಲ್ ಸರ್ಚ್ vs AI : ನಮ್ಮ ಅಗತ್ಯಗಳಿಗೆ ಯಾವುದು ಬೆಸ್ಟ್? ಅಧಿಕೃತ ಮಾಹಿತಿ ಸಿಗೋದು ಎಲ್ಲಿ?
ನೂರಾರು ಲಿಂಕ್‌ಗಳನ್ನು ಹುಡುಕುವ ಬದಲು ನೇರವಾಗಿ ಉತ್ತರ ನೀಡುವ ಎಐ ಕಡೆಗೆ ಜನರು ಒಲವು ತೋರುತ್ತಿದ್ದಾರೆ. ಹಾಗಾದರೆ ಗೂಗುಲ್‌ಗಿಂತ ಎಐ ಶ್ರೇಷ್ಠವೇ? ನಮ್ಮ ಕೆಲಸಗಳಿಗೆ ಯಾವುದು ಸೂಕ್ತ? ತಿಳಿಯೋಣ ಬನ್ನಿ.

ನಮ್ಮ ಕೆಲಸಗಳಿಗೆ ಯಾವುದು ಸೂಕ್ತ?
ಬೆಂಗಳೂರು: ನಮಗೆ ಯಾವುದೇ ಸಣ್ಣ ಅನುಮಾನ ಬಂದರೂ ಮೊದಲು ನೆನಪಾಗುವುದೇ 'ಗೂಗುಲ್' (Google). ಗೂಗಲ್ ಮಾಡು ಎನ್ನುವುದು ಇಂದು ನಮ್ಮ ಜೀವನದ ಒಂದು ಭಾಗವೇ ಆಗಿಹೋಗಿದೆ. ಆದರೆ ಈಗ ಕಾಲ ಬದಲಾಗುತ್ತಿದೆ. ಚಾಟ್ ಜಿಪಿಟಿ (ChatGPT), ಪರ್ಪ್ಲೆಕ್ಸಿಟಿ (Perplexity) ನಂತಹ ಎಐ (Artificial Intelligence) ಸರ್ಚ್ ಟೂಲ್‌ಗಳು ಬಂದ ಮೇಲೆ ನಮ್ಮ ಸರ್ಚಿಂಗ್ ಅನುಭವವೇ ಸಂಪೂರ್ಣವಾಗಿ ಬದಲಾಗುತ್ತಿದೆ. ನೂರಾರು ಲಿಂಕ್‌ಗಳನ್ನು ಹುಡುಕುವ ಬದಲು ನೇರವಾಗಿ ಉತ್ತರ ನೀಡುವ ಎಐ ಕಡೆಗೆ ಜನರು ಒಲವು ತೋರುತ್ತಿದ್ದಾರೆ. ಹಾಗಾದರೆ ಗೂಗುಲ್‌ಗಿಂತ ಎಐ ಶ್ರೇಷ್ಠವೇ? ನಮ್ಮ ಕೆಲಸಗಳಿಗೆ ಯಾವುದು ಸೂಕ್ತ? ತಿಳಿಯೋಣ ಬನ್ನಿ.
ಎಐ (AI) ಸರ್ಚ್: ಕ್ಷಣಾರ್ಧದಲ್ಲಿ ನೇರ ಉತ್ತರ!
ಸಾಮಾನ್ಯ ಸರ್ಚ್ ಇಂಜಿನ್‌ಗಳಿಗಿಂತ ಭಿನ್ನವಾಗಿ ಎಐ ಟೂಲ್‌ಗಳು ನೀವು ಕೇಳಿದ ಪ್ರಶ್ನೆಗೆ ನೂರಾರು ವೆಬ್‌ಸೈಟ್ ಲಿಂಕ್‌ಗಳನ್ನು ತೋರಿಸುವುದಿಲ್ಲ. ಬದಲಿಗೆ, ಆ ಎಲ್ಲಾ ಮಾಹಿತಿಯನ್ನು ಓದಿ, ಅದರ ಸಾರಾಂಶವನ್ನು (Summary) ನೇರವಾಗಿ ನಿಮಗೆ ನೀಡುತ್ತವೆ. ನಿಮ್ಮ ಸಮಯ ಉಳಿತಾಯವಾಗುತ್ತದೆ. ಯಾವುದಾದರೂ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ಹೊಸ ಐಡಿಯಾಗಳನ್ನು ಹುಡುಕಲು ಅಥವಾ ಕೋಡಿಂಗ್‌ನಲ್ಲಿನ ತಪ್ಪುಗಳನ್ನು ಸರಿಪಡಿಸಲು ಎಐ ಅತ್ಯುತ್ತಮ. ಸಾಫ್ಟ್‌ವೇರ್ ಡೆವಲಪರ್‌ಗಳು ಮತ್ತು ವಿದ್ಯಾರ್ಥಿಗಳಿಗೆ ಇದು ವರದಾನವಾಗಿದೆ.
ಗೂಗುಲ್ ಸರ್ಚ್: ನಂಬಿಕೆ ಮತ್ತು ನಿಖರತೆಯ ತಾಣ!
ಎಐ ಎಷ್ಟೇ ಮುಂದುವರಿದಿದ್ದರೂ, ಇಂದಿಗೂ ಕೆಲವು ವಿಚಾರಗಳಲ್ಲಿ ಗೂಗುಲ್ ಸರ್ಚ್‌ಗೆ ಸಾಟಿಯಿಲ್ಲ. ತಾಜಾ ಸುದ್ದಿಗಳು, ಸರ್ಕಾರಿ ಆದೇಶಗಳು, ಸ್ಥಳೀಯ ಮಾಹಿತಿ ಅಥವಾ ಅಧಿಕೃತ ಸಂಶೋಧನಾ ಪ್ರಬಂಧಗಳಿಗಾಗಿ (Research Papers) ನಾವಿಂದಿಗೂ ಗೂಗುಲ್ ಅನ್ನೇ ನೆಚ್ಚಿಕೊಳ್ಳಬೇಕು. ಗೂಗುಲ್‌ನಲ್ಲಿ ಮಾಹಿತಿಯ ಮೂಲ (Source) ಯಾವುದು ಎಂಬುದು ನಮಗೆ ತಿಳಿಯುತ್ತದೆ. ಇದರಿಂದ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬಹುದು. ಆನ್‌ಲೈನ್ ಶಾಪಿಂಗ್ ಮಾಡುವಾಗ ಬೆಲೆಗಳ ತುಲನೆ ಮಾಡಲು ಮತ್ತು ಬಳಕೆದಾರರ ನೈಜ ರಿವ್ಯೂಗಳನ್ನು ಓದಲು ಗೂಗುಲ್ ಇಂದಿಗೂ ನಂಬರ್ 1.
ಯಾವುದು ಬೆಸ್ಟ್? ಯಾವಾಗ ಯಾವುದನ್ನು ಬಳಸಬೇಕು?
- ಎಐ ಬಳಸಿ: ಕ್ರಿಯೇಟಿವ್ ಕೆಲಸಗಳಿಗಾಗಿ, ಇಮೇಲ್ ಬರೆಯಲು, ದೊಡ್ಡ ಲೇಖನದ ಸಾರಾಂಶ ಪಡೆಯಲು ಮತ್ತು ಸರಳ ವಿವರಣೆ ಬೇಕಿದ್ದಾಗ ಎಐ ಬಳಸಿ.
- ಗೂಗುಲ್ ಬಳಸಿ: ಇತ್ತೀಚಿನ ಸುದ್ದಿಗಳು (Live News), ನಂಬಲರ್ಹ ಮಾಹಿತಿ ಬೇಕಿದ್ದಾಗ, ಅಧಿಕೃತ ವೆಬ್‌ಸೈಟ್‌ಗಳಿಗಾಗಿ ಮತ್ತು ಶಾಪಿಂಗ್ ರಿವ್ಯೂಗಳಿಗಾಗಿ ಗೂಗುಲ್ ಬಳಸಿ.
ಕೇವಲ ಒಂದರ ಮೇಲೆಯೇ ಅವಲಂಬಿತವಾಗುವುದು ಸರಿಯಲ್ಲ. ಯಾವುದಾದರೂ ಹೊಸ ವಿಷಯದ ಬಗ್ಗೆ ಕಲಿಯಲು ಎಐ ಬಳಸಿದರೆ, ಆ ಮಾಹಿತಿ ಎಷ್ಟು ನಿಜ ಎಂಬುದನ್ನು ಖಚಿತಪಡಿಸಿಕೊಳ್ಳಲು ಗೂಗುಲ್‌ನಲ್ಲಿನ ಮೂಲ ವೆಬ್‌ಸೈಟ್‌ಗಳನ್ನು ನೋಡುವುದು ಬುದ್ಧಿವಂತಿಕೆ. ಒಟ್ಟಿನಲ್ಲಿ ಎಐ ನಮ್ಮ ಸಮಯವನ್ನು ಉಳಿಸಿದರೆ, ಗೂಗುಲ್ ನಮಗೆ ಆಳವಾದ ಮತ್ತು ಅಧಿಕೃತ ಮಾಹಿತಿ ನೀಡುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಬಳಸುವುದು ಇಂದಿನ ತಂತ್ರಜ್ಞಾನ ಯುಗದ ಸ್ಮಾರ್ಟ್ ಫಾರ್ಮುಲಾ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

