ಬೆಳಗ್ಗೆ ಎದ್ದ ತಕ್ಷಣ, ಅಥವಾ ಏನೋ ಮಾತನಾಡುತ್ತಿರುವಾಗ ಫೋನ್ ಚೆಕ್ ಮಾಡುವುದು, ವ್ಯಾಟ್ಸಾಪ್, ಎಫ್‌ಬಿ, ಇನ್‌ಸ್ಟಾ ಚೆಕ್ ಮಾಡುತ್ತೀರಾ? ಈ ಕುರಿತು ಮಾನಸಿಕ ತಜ್ಞರು ಮಹತ್ವದ ಸೂಚನೆ ಹಾಗೂ ಸಲಹೆ ನೀಡಿದ್ದಾರೆ.
ಬೆಳಗ್ಗೆ ಎದ್ದ ತಕ್ಷಣ ಒಂದು ಸಾರಿ ಮೊಬೈಲ್ ಚೆಕ್ ಮಾಡಿ ಬಳಿಕ ಇತರ ಕೆಲಸ ಆರಂಭಗೊಳ್ಳುತ್ತದೆ. ಇದು ಬಹುತೇಕರ ಸಾಮಾನ್ಯ ದಿನಚರಿ. ಇನ್ನು ಮಾತನಾಡುತ್ತಿರುವಾಗ ಮೊಬೈಲ್ ಚೆಕ್ ಮಾಡುವುದು, ಪ್ರಮುಖವಾಗಿ ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಇತರ ತಾಣಗಳನ್ನು ಚೆಕ್ ಮಾಡುತ್ತಾರೆ. ಹಲವರು ಸುಲಭವಾಗಿ ಎಡಿಕ್ಷನ್ ಆಗಿದೆ ಎನ್ನುತ್ತಾರೆ. ಆದರೆ ಮನೋ ತಜ್ಞರು ಇದರ ಹಿಂದಿನ ಅಸಲಿ ರಹಸ್ಯ ಹೇಳಿದ್ದಾರೆ.
ಪದೇ ಪದೇ ಫೋನ್ ನೋಡುವುದು, ಯಾವುದೇ ಮಸೇಜ್ ಬರದಿದ್ದರೂ ಚೆಕ್ ಮಾಡುವುದು ಅಭ್ಯಾಸವಾಗಿರುತ್ತದೆ. ಸ್ಮಾರ್ಟ್‌ಫೋನ್ ಅಡಿಕ್ಷನ್ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ ಇದರ ಹಿಂದೆ ಸೈಕೋಲಜಿ ಇದೆ. ಮಾನಸಿಕ ತಜ್ಞರು ಈ ಕುರಿತು ವಿವರವಾಗಿ ತಿಳಿಸಿದ್ದಾರೆ. ಕೇವಲ ಎಡಿಕ್ಷನ್ ಮಾತ್ಪವಲ್ಲ, ಇದು ಮೆದುಳು ಸನ್ನವೇಶಕ್ಕೆ ಸ್ಪಂದಿಸುವ ರೀತಿಯೂ ಆಗಿದೆ.
ರಾತ್ರಿ ನಡೆಯುವ ಅಪ್‌ಡೇಟ್
ರಾತ್ರಿ ನೀವು ಮಲಗಿದ್ದರೂ ಜಗತ್ತು ನಡೆಯುತ್ತಿರುತ್ತದೆ. ಮಲಗಿದಾಗ ಯಾರಾದರು ಮೆಸೇಜ್ ಕಳುಹಿಸಿದ್ದರೆ, ಇನ್‌ಸ್ಟಾಗ್ರಾಂ ಪೋಸ್ಟ್, ಫೇಸ್‌ಬುಕ್ ಅಪ್‌ಡೇಟ್ ಹೀಗೆ ರಾತ್ರಿ ಎನೆಲ್ಲಾ ಬೆಳವಣಿಗೆ ಆಗಿದೆಯೋ ಅದರ ಮಾಹಿತಿ ಪಡೆಯಲು ಮೆದಳು ಬಯಸುತ್ತದೆ. ಇದಕ್ಕೆ ಕೆಲ ಕಾರಣವಿದೆ. ಪಮುಖವಾಗಿ ಬೆಳಗ್ಗೆ ಅತೀ ಹೆಚ್ಚು ಬಾರಿ ಮೊಬೈಲ್ ನೋಡುವ ಕಾರಣ ಮೆದಳು ಫೀಡ್ ಮಾಡಿಕೊಂಡಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ರಾತ್ತಿ ಮಲಗಿದಾಗ ನಡೆದ ಅಪ್‌ಡೇಟ್‌ಗಾಗಿ ಮೆದಳು ತಡಕಾಡುತ್ತದೆ. ಇತ್ತ ಮನಸ್ಸು ಮೊಬೈಲ್ ಮೆಸೇಜ್, ಪೋಸ್ಟ್‌ಗಳ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿರುವ ಕಾರಣ ತಕ್ಷವೇ ಕೈ ಮೊಬೈಲ್‌ಗೆ ಹೋಗುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ.
ಹ್ಯಾಬಿಟ್ ಲೂಪ್ ಥಿಯರಿ ಪ್ರಕಾರ ಒಂದು ವಸ್ತು, ಒಂದು ವಿಷಯ ಅಥವಾ ಇತರೆ ಯಾವುದೇ ವಿಚಾರಗಳನ್ನ ಪದೇ ಪದೇ ಮಾತನಾಡಿದರೆ, ಯೋಚನೆ ಮಾಡಿದರೆ , ಪುನಾರವರ್ತನೆಯಾದರೆ ಅದು ಮೆದುಳಿಗೆ ಫೀಡ್ ಆಗಲಿದೆ. ಇದನ್ನು ಮೆದಳು ಪದೇ ಪದೇ ನೆನಪಿಸುತ್ತದೆ. ಮನಸ್ಸನ್ನು ನಿಯಂತ್ರಿಸುವ ಶಕ್ತಿ ಇದ್ದರೆ ಮೊಬೈಲ್‌ನಿಂದ ದೂರ ಇರಬಹುದು. ಆದರೆ ಮೆದಳು ಸೂಚಿಸಿದ ಬೆನ್ನಲ್ಲೇ ಮನಸ್ಸು ನಮ್ಮನ್ನು ಪ್ರೇರಿಪಿಸುತ್ತದೆ. ಈ ವೇಳೆ ಕೈ ಮೊಬೈಲ್‌ಗೆ ಹೋಗಲಿದೆ ಎಂದು ತಜ್ಞರು ಹೇಳುತ್ತಾರೆ.
ಜಗತ್ತಿನೊಂದಿಗೆ ಮತ್ತೆ ಕನೆಕ್ಟ್
ರಾತ್ರಿ ಮಲಗಿದ ಬಳಿಕ ಬೆಳಗ್ಗೆ ಎದ್ದಾಗ ಮಲಗಿದ ಗಂಟೆಯಿಂದ ಎದ್ದ ಗಂಟೆ ವರೆಗೆ ನಮ್ಮ ಮೆದುಳು ಜಗತ್ತಿನ ಜೊತೆ ಸಂಪರ್ಕ ಕಡಿದುಕೊಂಡಿರುತ್ತದೆ. ಹೀಗಾಗಿ ಬೆಳಗ್ಗೆ ಎದ್ದಾಗ ಸಂಪರ್ಕ ಸಾಧಿಸಲು ಮೆದಳು, ಮನಸ್ಸು ಬಯಸುತ್ತದೆ. ಹೀಗಾಗಿ ಮೊಬೈಲ್ ಅಗತ್ಯವಾಗುತ್ತದೆ ಎಂದು ಮಾಸನಿಕ ತಜ್ಞರು ಹೇಳಿದ್ದಾರೆ.


