ಚಳಿಗಾಲದಲ್ಲಿ ಮಲಬದ್ಧತೆಯೇ?, ಈ ಮನೆಮದ್ದು ಮಾಡಿ ಒಂದೇ ಬಾರಿಗೆ ಹೊಟ್ಟೆಯನ್ನ ಸ್ವಚ್ಛಗೊಳಿಸುತ್ತೆ!
Winter Constipation Remedies: ಶೀತದ ವಾತಾವರಣವಿದ್ದಾಗ ಕಡಿಮೆ ನೀರು ಕುಡಿಯುವುದರಿಂದಲೂ ನಮ್ಮ ಹೊಟ್ಟೆ ಸ್ವಚ್ಛವಾಗಲ್ಲ. ಆದರೆ ಚಿಂತಿಸಬೇಡಿ, ನಿಮ್ಮ ಹೊಟ್ಟೆ ಕ್ಲೀನ್ ಮಾಡಲು ಸಹಾಯ ಮಾಡುವ ಕೆಲವು ಮನೆಮದ್ದನ್ನು ಇಲ್ಲಿ ಹಂಚಿಕೊಂಡಿದ್ದೇವೆ.

ಹೊಟ್ಟೆಯನ್ನ ಸರಿಪಡಿಸುವ ಮನೆಮದ್ದು
ಚಳಿಗಾಲವು ಆಹಾರ ಪ್ರಿಯರಿಗೆ ಅತ್ಯುತ್ತಮವಾದ ಸಮಯವಾದರೂ ನಿಮ್ಮ ಹೊಟ್ಟೆಗೆ ಸ್ವಲ್ಪ ಸಮಸ್ಯೆಯಾಗಬಹುದು. ಏಕೆಂದರೆ ಈ ಸಮಯದಲ್ಲಿ ಡೀಪ್ ಫ್ರೈ ಆಹಾರ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಕೊನೆಗೆ ಬೆಳಗ್ಗೆ ಶೌಚಾಲಯದಲ್ಲಿ ಗಂಟೆಗಟ್ಟಲೆ ಕಳೆಯಬೇಕಾಗುತ್ತದೆ. ಅಯ್ಯೋ..ಹಾಗಾದರೆ ನಾವು ಕರಿದ ಪದಾರ್ಥವನ್ನ ಮುಟ್ಟಬಾರದಾ? ಎಂದು ಆಹಾರ ಪ್ರಿಯರು ಪ್ರಶ್ನಿಸಬೇಡಿ. ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದೂ ನಿಮ್ಮ ಹೊಟ್ಟೆಯನ್ನು ಶುದ್ಧೀಕರಿಸದಿರಲು ಸಹಾಯ ಮಾಡಿದರೂ ಇಂದು ನಾವು ಮಲಬದ್ಧತೆಯಿಂದ ಪರಿಹಾರ ಸಿಗಲು ಸಹಾಯ ಮಾಡುವ ಹೊಟ್ಟೆಯನ್ನು ಸರಿಪಡಿಸುವ ಮನೆಮದ್ದುಗಳನ್ನ ಶೇರ್ ಮಾಡಿದ್ದೇವೆ.
ಚಳಿಗಾಲದಲ್ಲಿ ಮಲಬದ್ಧತೆ ಏಕೆ ಬರುತ್ತದೆ?
ಮೊದಲು ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಶೀತದಲ್ಲಿ ನಮಗೆ ಕಡಿಮೆ ಬಾಯಾರಿಕೆಯಾಗುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ದೇಹವು ನಿರ್ಜಲೀಕರಣಗೊಂಡಾಗ ಕರುಳುಗಳು ಒಣಗಲು ಪ್ರಾರಂಭಿಸುತ್ತವೆ ಮತ್ತು ನಾವು ಮಲವಿಸರ್ಜನೆ ಮಾಡಲು ಪ್ರಯಾಸಪಡಬೇಕಾಗುತ್ತದೆ. ಇದಲ್ಲದೆ ನಮ್ಮ ಚಟುವಟಿಕೆಯೂ ಕಡಿಮೆಯಾಗುತ್ತದೆ. ಏಕೆಂದರೆ ನಮಗೆ ಕಂಬಳಿಯಿಂದ ಹೊರಬರಲು ಇಷ್ಟವಿಲ್ಲ.
ಹೊಟ್ಟೆಯನ್ನು ಸ್ವಚ್ಛಗೊಳಿಸಲು ಪರಿಹಾರಗಳಿವು
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು
ಬೆಳಗ್ಗೆ ಎದ್ದ ಕೂಡಲೇ ಎರಡು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಅದಕ್ಕೆ ಅರ್ಧ ನಿಂಬೆಹಣ್ಣು ಮತ್ತು ಒಂದು ಚಿಟಿಕೆ ಕಪ್ಪು ಉಪ್ಪು ಸೇರಿಸುವುದರಿಂದ ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಂಬೆ ಮತ್ತು ಕಪ್ಪು ಉಪ್ಪು ಕರುಳನ್ನು ತ್ವರಿತವಾಗಿ ಶುದ್ಧಗೊಳಿಸುತ್ತದೆ.
ತ್ರಿಫಲ ಅಥವಾ ಒಣದ್ರಾಕ್ಷಿ
ನಿಮಗೆ ದೀರ್ಘಕಾಲದ ಮಲಬದ್ಧತೆ ಇದ್ದರೆ ಮಲಗುವ ಮುನ್ನ ಒಂದು ಚಮಚ ತ್ರಿಫಲ ಪುಡಿಯನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಿ. ತ್ರಿಫಲ ಇಷ್ಟವಾಗದಿದ್ದರೆ, 5-6 ಒಣದ್ರಾಕ್ಷಿಗಳನ್ನು (ಬೀಜಗಳನ್ನು ತೆಗೆದು) ಹಾಲಿನಲ್ಲಿ ಕುದಿಸಿ. ನಂತರ ದ್ರಾಕ್ಷಿ ತಿಂದು ಹಾಲು ಕುಡಿಯಿರಿ. ಮರುದಿನ ಬೆಳಗ್ಗೆ ನಿಮ್ಮ ಹೊಟ್ಟೆ ನೀರಿನಂತೆ ಶುದ್ಧವಾಗಿರುತ್ತದೆ.
ಈ ವಿಷಯಗಳನ್ನು ಸಹ ಗಮನಿಸಿ
*ಬಾಯಾರಿಕೆ ಆಗದಿದ್ದರೂ ದಿನವಿಡೀ ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ.
*ನಿಮ್ಮ ಆಹಾರದಲ್ಲಿ ಸಲಾಡ್ ಮತ್ತು ಫೈಬರ್ ಭರಿತ ಆಹಾರಗಳನ್ನು ಸೇರಿಸಿಕೊಳ್ಳಿ.
*ಆಹಾರವು ಜೀರ್ಣವಾಗಲು ಹಗಲಿನಲ್ಲಿ ಸ್ವಲ್ಪ ನಡೆಯಲು ಮರೆಯಬೇಡಿ.
ಈ ಸಣ್ಣ ಬದಲಾವಣೆಗಳು ಮತ್ತು ಮನೆಮದ್ದುಗಳು ನಿಮ್ಮ ಚಳಿಗಾಲವನ್ನು ಆರಾಮದಾಯಕವಾಗಿಸುತ್ತದೆ. ಹಾಗಾದರೆ ನಾಳೆ ಬೆಳಗ್ಗೆ ಅವುಗಳನ್ನು ಪ್ರಯತ್ನಿಸಿ ಮತ್ತು ವ್ಯತ್ಯಾಸವನ್ನು ನೀವೇ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

