Asianet Suvarna News Asianet Suvarna News

Health Tips : ಬೆಳಗ್ಗೆ ಹೊಟ್ಟೆ ಸರಿಯಾಗಿ ಕ್ಲೀನ್ ಆಗ್ತಿಲ್ವಾ ? ಹೀಗೆ ಮಾಡಿ

ಮೂತ್ರ ವಿಸರ್ಜನೆ ಹಾಗೂ ಮಲ ವಿಸರ್ಜನೆ ಬಹಳ ಮುಖ್ಯ. ಸರಿಯಾಗಿ ಮಲ ವಿಸರ್ಜನೆಯಾಗಿಲ್ಲವೆಂದ್ರೆ ಹೊಟ್ಟೆ ನೋವು, ಗ್ಯಾಸ್ ಸೇರಿದಂತೆ ಅನೇಕ ಸಮಸ್ಯೆ ಶುರುವಾಗುತ್ತದೆ. ಬೆಳಿಗ್ಗೆ ಎಷ್ಟೇ ಪ್ರಯತ್ನಿಸಿದ್ರೂ ಕೆಲವರಿಗೆ ಮಲ ವಿಸರ್ಜನೆಯಾಗೋದಿಲ್ಲ. ಅಂಥವರಿಗೆ ಇಲ್ಲಿದೆ ಟ್ರಿಪ್ಸ್. 
 

What To Do If You Feel Constipated In Morning
Author
First Published Oct 15, 2022, 5:06 PM IST

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿದು ಶೌಚಾಲಯಕ್ಕೆ ಹೋಗುವ ಅಭ್ಯಾಸ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ಹೊಟ್ಟೆ ಕ್ಲೀನ್ ಆದ್ರೆ ದೇಹ, ಮನಸ್ಸು ಎರಡೂ ದಿನವಿಡಿ ಫ್ರೆಶ್ ಆಗಿರುತ್ತದೆ. ಆದ್ರೆ ಬೆಳಿಗ್ಗೆ ಮನಸ್ಥಿತಿ  ಹಾಳುಮಾಡುವ ದೊಡ್ಡ ಸಮಸ್ಯೆ ಅಂದ್ರೆ ಮಲಬದ್ಧತೆ. ಸರಿಯಾಗಿ ಹೊಟ್ಟೆ ಕ್ಲೀನ್ ಆಗಿಲ್ಲವೆಂದ್ರೆ ಅನೇಕ ಸಮಸ್ಯೆ ಶುರುವಾಗುತ್ತದೆ. ಇಡೀ ದಿನ ಇದ್ರಿಂದ ಹಾಳಾಗುತ್ತದೆ. ಕೆಲವರಿಗೆ ಅಪರೂಪಕ್ಕೆ ಮಲಬದ್ಧತೆ ಸಮಸ್ಯೆ ಕಾಡಿದ್ರೆ ಮತ್ತೆ ಕೆಲವರು ಪ್ರತಿ ದಿನ ಈ ಸಮಸ್ಯೆ ಎದುರಿಸುತ್ತಾರೆ. ಮಲಬದ್ಧತೆ ಬಹಳ ತೊಂದರೆ ನೀಡುವ ರೋಗ ಅಂದ್ರೆ ತಪ್ಪಾಗಲಾರದು. ಮಲಬದ್ಧತೆಗೆ ಆಯುರ್ವೇದದಲ್ಲಿ ಔಷಧಿಯಿದೆ. ದಿನ ಬೆಳಿಗ್ಗೆ ಹೊಟ್ಟೆ ಕ್ಲೀನ್ ಆಗ್ಬೇಕು, ಮಲವಿಸರ್ಜನೆ ಸರಿಯಾಗಿ ಆಗ್ಲೇಕು ಎನ್ನುವವರು ಕೆಲ ಟಿಪ್ಸ್ ಫಾಲೋ ಮಾಡ್ಬೇಕು. ಇದ್ರಿಂದ ನಿಮ್ಮ ಹೊಟ್ಟೆ ಬೆಳಿಗ್ಗೆಯೇ ಸ್ವಚ್ಛವಾಗೋದ್ರಿಂದ ನೀವು ಇಡೀ ದಿನವನ್ನು ಆರಾಮವಾಗಿ ಕಳೆಯಬಹುದು. 

ವೈದ್ಯ (Doctor) ರ ಪ್ರಕಾರ ಮಲಬದ್ಧತೆ (Constipation) ಗೆ ಕಾರಣವೇನು ಗೊತ್ತಾ? : ಮಲಬದ್ಧತೆಗೆ ಮುಖ್ಯ ಕಾರಣ ಆಹಾರ (Food). ನಾವು ಸರಿಯಾಗಿ ಆಹಾರ ಸೇವನೆ ಮಾಡದಿರುವುದು ಕೂಡ ಇದಕ್ಕೆ ಕಾರಣವಾಗುತ್ತದೆ. ಸೂಕ್ತ ಪ್ರಮಾಣದಲ್ಲಿ ನೀರು ಸೇವನೆ ಮಾಡದಿರುವುದು ಕೂಡ ಮಲಬದ್ಧತೆಗೆ ದಾರಿಯಾಗುತ್ತದೆ. ಅತಿಯಾದ ಒಣ, ಶೀತ, ಮಸಾಲೆಯುಕ್ತ ಅಥವಾ ಫ್ರೈ ಆಹಾರ ಸೇವನೆ ಮಾಡುವುದ್ರಿಂದಲೂ ಸಮಸ್ಯೆ ಕಾಡಬಹುದು. ಕಡಿಮೆ ಫೈಬರ್ ಆಹಾರ, ಸೂಕ್ತ ನಿದ್ರೆ ಕೊರತೆ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಆರೋಗ್ಯಕರ ಜೀವನಶೈಲಿ ಹೊಂದಿಲ್ಲದೆ ಹೋದ್ರೆ ನೀವು ಮಲಬದ್ಧತೆಗೆ ಒಳಗಾಗ್ತೀರಿ.  

ಬೆಂಬಿಡದೆ ಕಾಡೋ ಬೆನ್ನು ನೋವು Cardiac Arrest ಸೂಚನೆನಾ ?

ಮನೆಯಲ್ಲೇ ಇದೆ ಇದಕ್ಕೆ ಮದ್ದು :  

ಒಣದ್ರಾಕ್ಷಿ ಬಳಸಿ : ಕಪ್ಪು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ನಂತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಒಣಗಿದ ಹಣ್ಣನ್ನು ನೆನೆಸಿದರೆ, ಅದು ವಾತ ದೋಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ (Digestion). ಒಣ ದ್ರಾಕ್ಷಿ ಫೈಬರ್ ನಲ್ಲಿ ಸಮೃದ್ಧವಾಗಿದೆ. ಅದು ಮಲಬದ್ಧತೆ ಕಡಿಮೆ ಮಾಡಲು ನೆರವಾಗುತ್ತದೆ.  

ಮೆಂತ್ಯ ಬೀಜ ನೆನೆಸಿಟ್ಟು ಸೇವನೆ ಮಾಡಿ : ಒಣ ದ್ರಾಕ್ಷಿ ಬದಲು ರಾತ್ರಿಯಿಡಿ ಮೆಂತ್ಯ ಬೀಜಗಳು ನೆನೆಸಿಟ್ಟು ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು. ಇದು ಕೂಡ ಮಲಬದ್ಧತೆಗೆ (Constipation) ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯವನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಇದನ್ನು ತಿನ್ನಿ. ಮೆಂತ್ಯ ಬೀಜದ ಬದಲು ನೀವು ಮೆಂತ್ಯ ಪುಡಿಯನ್ನು ಕೂಡ ಬಳಕೆ ಮಾಡಬಹುದು. ರಾತ್ರಿ ಮೆಂತ್ಯದ ಪುಡಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವನೆ ಮಾಡಬಹುದು. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಮೆಂತ್ಯ ಪುಡಿ ಹಾಕಿ ಕುಡಿಯಿರಿ. ವಾತ ಮತ್ತು ಕಫದ ದೋಷವನ್ನು ಇದು ಕಡಿಮೆ ಮಾಡುತ್ತದೆ. 

ಔಷಧಿಯಾಗಿ ನೆಲ್ಲಿಕಾಯಿ : ಮಲಬದ್ಧತೆ ಸಮಸ್ಯೆ ಇದ್ದರೆ ನೀವು ನೆಲ್ಲಿಕಾಯಿ ರಸವನ್ನು ನೀವು ಸೇವನೆ ಮಾಡಬಹುದು. ಇದು  ಇದು ಮಲಬದ್ಧತೆಗೆ ಮಾತ್ರವಲ್ಲದೆ ಕೂದಲು ಉದುರುವಿಕೆ, ತೂಕ ನಷ್ಟ (Weight loss) ಇತ್ಯಾದಿ ಇತರ ಸಮಸ್ಯೆಗಳಿಗೂ ನೆರವಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ನೀವು ಸೇವನೆ ಮಾಡಬೇಕು.    

ಮಲಬದ್ಧತೆಗೆ ಆಕಳ ಹಾಲು : ಮಲಬದ್ಧತೆ ಸಮಸ್ಯೆ ನಿಮಗಿದ್ದರೆ ಹಸುವಿನ ಹಾಲು (Milk) ನಿಮಗೆ ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತದೆ. ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಇಂದು ಒಳ್ಳೆಯದು. ಗರ್ಭಿಣಿ (Pregnant)ಯರಿಗೂ ಇದು ಒಳ್ಳೆಯದು. ರಾತ್ರಿ ಮಲಗುವ ಮುನ್ನ ಉಗುರುಬೆಚ್ಚಗಿನ ಹಸುವಿನ ಹಾಲನ್ನು ಕುಡಿದರೆ ಮಲಬದ್ಧತೆ ಕಡಿಮೆಯಾಗುತ್ತದೆ.   

ತೆಳ್ಳಗೆ ಬಳುಕೋ ಸುಂದರಿಯಾಗಬೇಕಾ ? ಬೆಳಗ್ಗೆ, ರಾತ್ರಿ ಏನು ತಿನ್ಬೇಕು ತಿಳ್ಕೊಳ್ಳಿ

ಹಸುವಿನ ತುಪ್ಪ ಬಳಸಿ ನೋಡಿ : ಚಯಾಪಚಯವನ್ನು ಸುಧಾರಿಸಲು ಹಸುವಿನ ತುಪ್ಪ (Ghee) ನೆರವಾಗಿತ್ತದೆ.  ಹಸುವಿನ ತುಪ್ಪದಲ್ಲಿ ವಿಟಮಿನ್-ಎ, ವಿಟಮಿನ್-ಡಿ, ವಿಟಮಿನ್-ಇ, ವಿಟಮಿನ್-ಕೆ ಮುಂತಾದ ಕೊಬ್ಬಿನಲ್ಲಿ ಕರಗುವ ವಿಟಮಿನ್  ಇದ್ದು, ಇದು ಕರುಳಿನ ಆರೋಗ್ಯ ಸುಧಾರಿಸುತ್ತದೆ.  
 

Follow Us:
Download App:
  • android
  • ios