MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಆ್ಯಸಿಡಿಟಿ, ಗ್ಯಾಸ್ಟ್ರಿಕ್​ ಸಮಸ್ಯೆ ಇದ್ದೋರು ಬಿಸಿನೀರಲ್ಲಿ ನಿಂಬು ಹಿಂಡಿ ಕುಡಿಯುತ್ತಿದ್ದರೆ ಕೂಡಲೇ ನಿಲ್ಲಿಸಿ!

ಆ್ಯಸಿಡಿಟಿ, ಗ್ಯಾಸ್ಟ್ರಿಕ್​ ಸಮಸ್ಯೆ ಇದ್ದೋರು ಬಿಸಿನೀರಲ್ಲಿ ನಿಂಬು ಹಿಂಡಿ ಕುಡಿಯುತ್ತಿದ್ದರೆ ಕೂಡಲೇ ನಿಲ್ಲಿಸಿ!

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಬಿಸಿನೀರಿನಲ್ಲಿ ಲಿಂಬೆ ರಸ ಸೇವನೆಯು ಎಲ್ಲರಿಗೂ ಸೂಕ್ತವಲ್ಲ. ಆಯುರ್ವೇದ ವೈದ್ಯರ ಪ್ರಕಾರ, ಆ್ಯಸಿಡಿಟಿ, ಗ್ಯಾಸ್ಟ್ರಿಕ್, ಮತ್ತು ಮೂಳೆ ನೋವಿನ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ದೇಹದ ಉಷ್ಣತೆ ಹೆಚ್ಚಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು.

2 Min read
Author : Suchethana D
Published : Mar 10 2026, 06:19 PM IST
Share this Photo Gallery
  • FB
  • TW
  • Linkdin
  • Whatsapp
16
ಸೋಷಿಯಲ್​​ ಮೀಡಿಯಾ ವೈದ್ಯರು!
Image Credit : ChatGPT

ಸೋಷಿಯಲ್​​ ಮೀಡಿಯಾ ವೈದ್ಯರು!

ಈಗ ಸೋಷಿಯಲ್​ ಮೀಡಿಯಾ ಹೆಚ್ಚಿದಂತೆ ವೈದ್ಯರಾಗ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಹಾಗೆ ಮಾಡಿ, ಹೀಗೆ ಮಾಡಿ ಎಂದು ವಿಡಿಯೋ ಮಾಡುವುದು, ಯಾರೋ ಮಾಡಿದ ವಿಡಿಯೋ ಸಕತ್​ ಕ್ಲಿಕ್​ ಆಯಿತು ಎಂದಾಕ್ಷಣ, ಅದನ್ನೇ ಉಲ್ಟಾ ಪಲ್ಟಾ ಮಾಡಿ ತಾವು ವಿಡಿಯೋ ಮಾಡುವುದು, ಇದರಿಂದ ಕ್ಲಿಕ್ಸ್, ಲೈಕ್ಸ್​ ಪಡೆಯುವುದು ಹೆಚ್ಚಾಗುತ್ತಿದೆ. ಆದರೆ ದುರದೃಷ್ಟ ಎಂದರೆ ಆರೋಗ್ಯದ ವಿಷಯದಲ್ಲಿಯೂ ಈ ರೀತಿಯ ಇಲ್ಲಸಲ್ಲದ ವಿಡಿಯೋ ಮಾಡಿ ಹಾಕುತ್ತಿರುವ ಕಾರಣ, ಅದನ್ನು ನಂಬಿದರೆ ಅನಾರೋಗ್ಯ ಕಾಡುವುದು ಕಟ್ಟಿಟ್ಟದ್ದೇ.

26
ಕ್ಲಿಕ್ಸ್​ಗಾಗಿ ವಿಡಿಯೋ
Image Credit : Getty

ಕ್ಲಿಕ್ಸ್​ಗಾಗಿ ವಿಡಿಯೋ

ಅದರಲ್ಲಿ ಒಂದು, ವೇಟ್​ ಲಾಸ್​ ಮಾಡಲು, ಆರೋಗ್ಯ ವೃದ್ಧಿಗೆ ಪ್ರತಿನಿತ್ಯವೂ ಬೆಳಿಗ್ಗೆ ಬಿಸಿನೀರಿನಲ್ಲಿ ಲಿಂಬೆ ಹಣ್ಣನ್ನು ಹಿಂಡಿ ಕುಡಿಯಿರಿ ಎನ್ನುವುದು. ನೀವಂತೂ ಹಲವಾರು ಈ ವಿಡಿಯೋಗಳನ್ನು ನೋಡಿರಬಹುದು. ಇದು ಒಂದು ಮಟ್ಟಿಗೆ ನಿಜವಾದರೂ, ಕೆಲವೊಂದು ದೋಷ ಇರುವವರು, ಕೆಲವೊಂದು ಸಮಸ್ಯೆ ಇರುವವರು ಹೀಗೇನಾದ್ರೂ ಮಾಡುತ್ತಿದ್ದರೆ ಅದರಿಂದ ಭಾರಿ ಅಪಾಯ ತಂದುಕೊಳ್ಳುವುದು ಗ್ಯಾರೆಂಟಿ.

Related Articles

Related image1
ಎಲ್ಲಾ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ವಿಟಮಿನ್​ B 12 ಸಮಸ್ಯೆ: ಆಯುರ್ವೇದ ವೈದ್ಯೆಯಿಂದ ಸಿಂಪಲ್​ ಮನೆಮದ್ದು
Related image2
ವಯಸ್ಸಾದರೂ ಮುಖ ನಳನಳಿಸಬೇಕಾ? ಸಿಂಪಲ್​ ಹೋಮ್ ರೆಮಿಡಿ ಹೇಳಿದ ಡಾ.ಗೌರಿಯಮ್ಮ- ವಿಡಿಯೋ ಇಲ್ಲಿದೆ
36
ಡಾ.ವರುಣ್​ ಶರ್ಮಾ ಎಚ್ಚರಿಕೆ
Image Credit : Youtube

ಡಾ.ವರುಣ್​ ಶರ್ಮಾ ಎಚ್ಚರಿಕೆ

ಈ ಬಗ್ಗೆ ಆಯುರ್ವೇದ ವೈದ್ಯರಾಗಿರುವ ಡಾ.ವರುಣ್​ ಶರ್ಮಾ ಎಚ್ಚರಿಕೆ ನೀಡಿದ್ದಾರೆ. ಈಗಿನವರಲ್ಲಿ ಹೆಚ್ಚಿನವರಿಗೆ ಆ್ಯಸಿಡಿಟಿ ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆ ಸರ್ವೆ ಸಾಮಾನ್ಯವಾಗಿದೆ. ನಿಂಬೆ ಹಣ್ಣು ಉಷ್ಣ ಪ್ರಕೃತಿಯದ್ದು. ಆದ್ದರಿಂದ ಇದನ್ನು ಬಿಸಿ ನೀರಿನಲ್ಲಿ ಹಾಕಿ ಈ ಸಮಸ್ಯೆ ಇರುವವರು ಕುಡಿದರೆ ದೇಹದಲ್ಲಿನ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸಿ ಅದು ದೇಹಕ್ಕೆ ಹಾನಿ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

46
ಕಫ ಮತ್ತು ಪಿತ್ತ ದೋಷದಲ್ಲಿ ಹೆಚ್ಚಳ
Image Credit : Getty

ಕಫ ಮತ್ತು ಪಿತ್ತ ದೋಷದಲ್ಲಿ ಹೆಚ್ಚಳ

ಕಫ ಮತ್ತು ಪಿತ್ತ ದೋಷದಿಂದ ಬಳಲುತ್ತಿರುವವರು ಈ ಬಿಸಿನೀರಿನ ಲಿಂಬೆ ರಸವನ್ನು ದಿನನಿತ್ಯ ಸೇವನೆ ಮಾಡುತ್ತಾ ಬಂದರೆ ಅದು ಆರೋಗ್ಯದ ಬದಲು ಅನಾರೋಗ್ಯವನ್ನು ಹೆಚ್ಚಿಸುತ್ತಾ ಬರುತ್ತದೆ. ಇದರಿಂದ ಇನ್ನಿಲ್ಲದ ಸಮಸ್ಯೆ ಎದುರಾಗುತ್ತದೆ ಎನ್ನುತ್ತಾರೆ ಡಾ.ವರುಣ್​ ಶರ್ಮಾ.

56
ಅನಾರೋಗ್ಯ ಬಾಧೆ
Image Credit : Youtube

ಅನಾರೋಗ್ಯ ಬಾಧೆ

ಆ್ಯಸಿಡಿಟಿ ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆ ಇದ್ದವರನ್ನು ಇದನ್ನು ತೆಗೆದುಕೊಂಡರೆ ದೇಹದಲ್ಲಿ ಪಿತ್ತ ಮತ್ತು ವಾತಗಳು ಸಮತೋಲನ ಕಳೆದುಕೊಳ್ಳುತ್ತದೆ. ಇದರಿಂದ ಕ್ರಮೇಣ ದೇಹದಲ್ಲಿ ಅನಾರೋಗ್ಯ ಬಾಧೆ ಕಾಡುತ್ತದೆ ಎನ್ನುತ್ತಾರೆ ಅವರು.

66
ಮೂಳೆಗಳ ನೋವು ಇರುವವರಿಗೂ ವ್ಯರ್ಜ್ಯ
Image Credit : Getty

ಮೂಳೆಗಳ ನೋವು ಇರುವವರಿಗೂ ವ್ಯರ್ಜ್ಯ

ಅಷ್ಟೇ ಅಲ್ಲದೇ ಕೈಕಾಲು, ಮೂಳೆಗಳ ನೋವು ಇರುವವರು ಕೂಡ ಬಿಸಿ ನೀರಿನಲ್ಲಿ ಲಿಂಬೆಹಣ್ಣಿನ ಸೇವನೆ ಮಾಡಬಾರದು. ಇದು ಕೂಡ ಅದೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅದರ ಬದಲು ನೆಲ್ಲಿಕಾಯಿ ಜ್ಯೂಸ್​ ಕುಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನೀರು
ಆರೋಗ್ಯ ಸಮಸ್ಯೆಗಳು
ಆರೋಗ್ಯ
ಮನೆ
ವೈದ್ಯರು

Latest Videos
Recommended Stories
Recommended image1
ನಾಳೆ ಶೀತಲಾಷ್ಟಮಿ: ಚಿಕ್ಕ ಆಚರಣೆಯಿಂದ ಬಹುದೊಡ್ಡ ಲಾಭ; ಸರ್ವ ರೋಗ ವಾಸಿಗಿದು ಶುಭ ದಿನ
Recommended image2
ಕರ್ನಾಟಕ ಸರ್ಕಾರಿ ವೈದ್ಯರ ಬೇಡಿಕೆಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ, ಸಂಧಾನ ಸಭೆ ಯಶಸ್ವಿ, ಒಪಿಡಿ ಸೇವೆ ಬಂದ್?
Recommended image3
Peach Fruit: ಪೀಚ್ ಹಣ್ಣು ಸೂಪರ್ ಗುರು! ಆರೋಗ್ಯದ ಕಣಜವಿದು
Related Stories
Recommended image1
ಎಲ್ಲಾ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ವಿಟಮಿನ್​ B 12 ಸಮಸ್ಯೆ: ಆಯುರ್ವೇದ ವೈದ್ಯೆಯಿಂದ ಸಿಂಪಲ್​ ಮನೆಮದ್ದು
Recommended image2
ವಯಸ್ಸಾದರೂ ಮುಖ ನಳನಳಿಸಬೇಕಾ? ಸಿಂಪಲ್​ ಹೋಮ್ ರೆಮಿಡಿ ಹೇಳಿದ ಡಾ.ಗೌರಿಯಮ್ಮ- ವಿಡಿಯೋ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved