ನೆಲ್ಲಿಕಾಯಿ ಅತಿಯಾಗಿ ತಿಂದರೆ ಈ ಆರೋಗ್ಯ ಸಮಸ್ಯೆಗಳು ಬರ್ತವೆ!
Side effects of eating too much amla: ಚರ್ಮ, ಕೂದಲಿನ ಆರೋಗ್ಯ ಸುಧಾರಿಸಲು ಮತ್ತು ಉತ್ತಮ ಜೀರ್ಣಕ್ರಿಯೆಗಾಗಿ ನಾವು ನೆಲ್ಲಿಕಾಯಿ ತಿನ್ನುತ್ತೇವೆ. ಇದರಲ್ಲಿ ಸಾಕಷ್ಟು ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳಿವೆ. ಆದರೆ ನೆಲ್ಲಿಕಾಯಿಯನ್ನು ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಕಡಿಮೆ ರಕ್ತದೊತ್ತಡ ಇರುವವರಿಗೆ
ನೆಲ್ಲಿಕಾಯಿ ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಆದರೆ ಇದನ್ನು ಅತಿಯಾಗಿ ಸೇವಿಸುವುದು ಕಡಿಮೆ ರಕ್ತದೊತ್ತಡ ಇರುವವರಿಗೆ ಹಾನಿಕಾರಕ.
ಕಡಿಮೆ ಸಕ್ಕರೆ ಮಟ್ಟ ಇರುವವರು
ಮಧುಮೇಹಿಗಳು ನೆಲ್ಲಿಕಾಯಿ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಕಡಿಮೆ ಸಕ್ಕರೆ ಮಟ್ಟ ಇರುವವರು ನೆಲ್ಲಿಕಾಯಿಯನ್ನು ಅತಿಯಾಗಿ ತಿನ್ನಬಾರದು.
ಅಸಿಡಿಟಿ ಉಂಟಾಗುತ್ತದೆ
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಸಿಡಿಟಿ ಅಂಶ ಹೆಚ್ಚಿರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ನಿಮಗೆ ಅಸಿಡಿಟಿ ಹೆಚ್ಚಾಗಬಹುದು.
ಮಲಬದ್ಧತೆ ಉಂಟಾಗುತ್ತದೆ
ನೆಲ್ಲಿಕಾಯಿಯಲ್ಲಿ ಫೈಬರ್ ಅಂಶ ಅಧಿಕವಾಗಿದೆ. ಇದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ, ಆದರೆ ಅತಿಯಾದ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು.
ಹೃದ್ರೋಗಿಗಳು ತಿನ್ನಬಾರದು
ಹೃದ್ರೋಗ ಇರುವವರು ನೆಲ್ಲಿಕಾಯಿ ತಿನ್ನುವುದನ್ನು ತಪ್ಪಿಸಬೇಕು. ಇದರಿಂದ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಹೆಚ್ಚು.
ನಿರ್ಜಲೀಕರಣ ಉಂಟಾಗುತ್ತದೆ
ನೆಲ್ಲಿಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗಬಹುದು. ಗರ್ಭಿಣಿಯರು ನೆಲ್ಲಿಕಾಯಿ ತಿನ್ನುವಾಗ ವಿಶೇಷ ಕಾಳಜಿ ವಹಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

