ಡೆಂಗ್ಯೂ ಸಮಸ್ಯೆಗೆ ಪಪ್ಪಾಯಿ ಎಲೆಯ ರಸ ರಾಮಬಾಣ
ಪಪ್ಪಾಯಿ ತಿನ್ನುವುದರಿಂದ ಜೀರ್ಣಕ್ರಿಯೆ (Digestion) ಆರೋಗ್ಯಕರವಾಗಿರಬಲ್ಲದು ಜೊತೆಗೆ ಹೊಟ್ಟೆಯ ಸಮಸ್ಯೆಯಿಂದ ಮುಕ್ತರಾಗಬಹುದು. ಪಪ್ಪಾಯಿ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಕಂಡು ಬರುವ ಹಣ್ಣು. ಪಪ್ಪಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿದ ಎರಡನ್ನೂ ತಿನ್ನುತ್ತಾರೆ. ಅಷ್ಟೇ ಅಲ್ಲ, ಪಪ್ಪಾಯಿ ಬೀಜ ಮತ್ತು ಎಲೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಬಹುದು. ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ, ಡಿ ಮತ್ತು ಇ ಮತ್ತು ಆಂಟಿಆಕ್ಸಿಡೆಂಟ್ ಗಳು, ಫಾಲೆವೊನಾಯ್ಡ್ ಗಳು, ಕ್ಯಾರೋಟಿನ್ ನಂತಹ ಪ್ರಮುಖ ಅಂಶಗಳು ಒಳಗೊಂಡಿವೆ. ಪಪ್ಪಾಯಿ ಎಲೆಗಳಲ್ಲಿ ಪೋಷಕಾಂಶಗಳು (Nutrients) ಸಮೃದ್ಧವಾಗಿದೆ ಎಂದು ಪರಿಗಣಿಸಲಾಗಿದೆ.
ಪಪ್ಪಾಯಿ ಎಲೆಗಳಲ್ಲಿ ಔಷಧೀಯ ಗುಣಗಳೂ (medicinal power)ಸಮೃದ್ಧವೆಂದು ಪರಿಗಣಿಸಲಾಗಿದೆ. ಪಪ್ಪಾಯಿ ಎಲೆಗಳನ್ನು ಡೆಂಗ್ಯೂ (Dengue) ಆಗಿದ್ದಾಗ ಸಾಮಾನ್ಯವಾಗಿ ಬಳಸಲಾಗುತ್ತದೆ. ವಾಸ್ತವವಾಗಿ ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಪ್ಲೇಟ್ಲೆಟ್ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ದೇಹಕ್ಕೆ ಯಾವ ಯಾವ ಪ್ರಯೋಜನಗಳು ಬರಬಹುದು ಎಂಬುದನ್ನು ತಿಳಿಯಿರಿ.
ಪಪ್ಪಾಯಿ ಎಲೆಗಳಲ್ಲಿ ಕಂಡುಬರುವ ಕಿಣ್ವಗಳು ಆಹಾರದ ತ್ವರಿತ ಜೀರ್ಣಕವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ. (Healthy stomach)
ಡೆಂಗ್ಯೂಗೆ ಸಹಾಯಕ
ಡೆಂಗ್ಯೂ ಬಂದಾಗ ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ರಸ ಡೆಂಗ್ಯೂ (Dengue) ವಿರುದ್ಧ ಹೋರಾಡಲು ನೆರವಾಗುತ್ತದೆ. ಜ್ವರ ಮತ್ತು ದೇಹದಲ್ಲಿ ಪ್ಲೇಟ್ ಲೆಟ್ ಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.
ಆರೋಗ್ಯಕರ ಜೀರ್ಣಕ್ರಿಯೆ (Digestion) :
ಪಪ್ಪಾಯಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಪಪ್ಪಾಯಿ ಮಾತ್ರವಲ್ಲದೆ ಅದರ ಎಲೆಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿಯೂ ಸಹಕಾರಿ. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಬಹುದು.
ಪಿರಿಯಡ್ಸ್ ನೋವಿನಲ್ಲಿ ಪರಿಹಾರ (periods pain)
ಮಹಿಳೆಯರಲ್ಲಿ ಹೆಚ್ಚಾಗಿ ಹೊಟ್ಟೆ ಸೆಳೆತ ಮತ್ತು ಋತುಚಕ್ರದ ಸಮಯದಲ್ಲಿ ನೋವಿನ ಸಮಸ್ಯೆಗಳು ಉಂಟಾಗುತ್ತದೆ. ಋತುಚಕ್ರದ ಈ ನೋವಿನಿಂದ ಮುಕ್ತಿ ಪಡೆಯಲು ಪಪ್ಪಾಯಿ ಎಲೆಯ ರಸವನ್ನು ತಯಾರಿಸಿ ಕುಡಿಯಬಹುದು.
ರೋಗನಿರೋಧಕಶಕ್ತಿ ಹೆಚ್ಚುತ್ತೆ (immunity power)
ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಪಪ್ಪಾಯಿ ಎಲೆಯ ರಸವು ವೈರಲ್ ಇನ್ಫಿನೇಶನ್ ನಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿ ಬಿಳಿ ರಕ್ತದ ಕಲೆ ಮತ್ತು ಪ್ಲೇಟ್ಲೆಟ್ ಗಳು ಹೆಚ್ಚಾಗಲು ನೆರವಾಗುತ್ತದೆ.
ಕಬ್ಬಿಣದ ಕೊರತೆ ನಿವಾರಣೆ (Iron deficiency)
ಪಪ್ಪಾಯಿ ಎಲೆ ರಸವನ್ನು ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನಿವಾರಿಸಬಹುದು. ವಾಸ್ತವವಾಗಿ, ಇದು ರಕ್ತದ ಪ್ಲೇಟ್ ಲೆಟ್ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮಗೆ ಕಬ್ಬಿಣದ ಕೊರತೆಯಿದ್ದರೆ ನೀವು ಪಪ್ಪಾಯಿ ಎಲೆಯ ರಸವನ್ನು ಸೇವಿಸಬಹುದು.