ಪಪ್ಪಾಯಿ ಎಲೆ: ಇದು ಕೇವಲ ಎಲೆಯಲ್ಲ, ಆರೋಗ್ಯಕ್ಕೆ ದಿವ್ಯೌಷಧ
ಸಾಮಾನ್ಯವಾಗಿ ಪಪ್ಪಾಯಿಯನ್ನು ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಮತ್ತು ಇದು ಅತ್ಯಂತ ಪ್ರಿಯ ಹಣ್ಣುಗಳಲ್ಲಿ ಒಂದು. ಹಳದಿ-ಕಿತ್ತಳೆ ಬಣ್ಣದ ಹಣ್ಣು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ತುಂಬಾ ಸಹಕಾರಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಪಪ್ಪಾಯಿ ಗಿಡದ ಬಹುತೇಕ ಎಲ್ಲಾ ಭಾಗಗಳನ್ನು ಬಳಸಬಹುದು.
ಹಣ್ಣನ್ನು ಹೊರತುಪಡಿಸಿ, ಪಪ್ಪಾಯಿ ಗಿಡದ ಅತಿ ಹೆಚ್ಚು ಬಳಕೆಯಾದ ಭಾಗವೆಂದರೆ ಎಲೆ. ಪಪ್ಪಾಯಿ ಎಲೆಯ ರಸ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಬಳಸಲಾಗುವ ಅತ್ಯಂತ ದೇಸಿ ಪರಿಹಾರ. ಇದರ ವಿವಿಧ ಆರೋಗ್ಯ ಲಾಭಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಇದು ಅಪಾರ ಜನಪ್ರಿಯತೆ ಗಳಿಸಿದೆ. ಇದರಲ್ಲಿ ಪಾಪೈನ್ ಮತ್ತು ಚಿಮೊಪಾಪೈನ್ ನಂತಹ ಕಿಣ್ವಗಳು ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇತರ ಜೀರ್ಣಾಂಗಗಳ ಅಸ್ವಸ್ಥತೆಗಳನ್ನು ತಡೆಯುತ್ತದೆ. ಇದರಲ್ಲಿರುವ ಅಲ್ಕಾಲಾಯ್ಡ್ ಸಂಯುಕ್ತ, ತಲೆ ಮತ್ತು ಬೊಕ್ಕತಲೆಗಳ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿರುತ್ತದೆ. ಈ ಎಲೆಗಳಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಬಿ ಅಧಿಕ ಪ್ರಮಾಣದಲ್ಲಿದೆ.
ಜೀರ್ಣಾಂಗಗಳ ಆರೋಗ್ಯ
ಪಪ್ಪಾಯಿ ಎಲೆಯ ಚಹಾವನ್ನು ಗ್ಯಾಸ್, ಉಬ್ಬಸ ಮತ್ತು ಎದೆಯುರಿಯಂತಹ ಜೀರ್ಣಕ್ರಿಯೆ ಸಮಸ್ಯೆ ನಿವಾರಿಸಲೂ ಬಳಸಲಾಗುತ್ತದೆ. ಪಪ್ಪಾಯಿ ಎಲೆಯಲ್ಲಿ ನಾರಿನಂಶವಿದ್ದು, ಇದು ಜೀರ್ಣಾಂಗಗಳ ಆರೋಗ್ಯವನ್ನು ಕಾಪಾಡುತ್ತದೆ. ಇದು ದೊಡ್ಡ ಪ್ರೋಟೀನ್ ಅನ್ನು ಸಣ್ಣದಾಗಿ ವಿಭಜಿಸಿ, ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆ, ಎದೆಯುರಿ, ಕಿರಿಕಿರಿಯ ಕರುಳಿನ ಲಕ್ಷಣಗಳನ್ನು ನಿವಾರಿಸುವಲ್ಲಿ ಇದು ಸಹಾಯ ಮಾಡುತ್ತದೆ.ಆದರೆ ಈ ಸಂಶೋಧನೆಗಳು ಕೇವಲ ವರದಿಗಳಿಗೆ ಮಾತ್ರ ಸೀಮಿತವಾಗಿರುತ್ತವೆ ಮತ್ತು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂಬ ಗ್ಯಾರಂಟಿ ಇಲ್ಲ. ಆದರೆ, ಪ್ರಯತ್ನದಿಂದ ಯಾವುದೇ ತೊಂದರೆ ಇಲ್ಲ.
ಪಪ್ಪಾಯಿ ಎಲೆಯ ರಸದ ಏಳು ಆರೋಗ್ಯಕಾರಿ ಪ್ರಯೋಜನಗಳು ಮತ್ತು ಇದನ್ನು ತಯಾರಿಸುವ ಸರಿಯಾದ ವಿಧಾನ ಇಲ್ಲಿದೆ...
ಡೆಂಗ್ಯೂ ಲಕ್ಷಣಗಳಿಗೆ ಚಿಕಿತ್ಸೆ
ಪಪ್ಪಾಯಿ ಎಲೆಯ ರಸವನ್ನು ಡೆಂಗ್ಯೂ ಜ್ವರದ ಲಕ್ಷಣಗಳನ್ನು ನಿವಾರಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಡೆಂಗ್ಯೂ ಜ್ವರದ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಆಯಾಸ, ತಲೆನೋವು, ವಾಕರಿಕೆ, ಚರ್ಮದ ದದ್ದುಗಳು ಮತ್ತು ವಾಂತಿ. ಕೆಲವು ತೀವ್ರ ಪ್ರಕರಣಗಳಲ್ಲಿ, ಇದು ಪ್ಲೇಟ್ಲೆಟ್ ಮಟ್ಟಗಳನ್ನು ಕಡಿಮೆ ಮಾಡಬಹುದು, ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು ಮತ್ತು ಚಿಕಿತ್ಸೆಯನ್ನು ಪಡೆಯದಿದ್ದರೆ ಸಂಭಾವ್ಯವಾಗಿ ಮಾರಣಾಂತಿಕವಾಗಬಹುದು.
ಕೂದಲಿನ ಬೆಳವಣಿಗೆ
ಪಪ್ಪಾಯಿ ಎಲೆಯ ರಸವನ್ನು ತಲೆಗೆ ಹಚ್ಚಿ, ತಲೆಗೂದಲು ಮತ್ತು ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ, ಅದನ್ನು ಸಾಬೀತು ಪಡಿಸುವ ಸಾಕ್ಷ್ಯಗಳು ಬಹಳ ಕಡಿಮೆ. ಅಧ್ಯಯನಗಳ ಪ್ರಕಾರ ದೇಹದಲ್ಲಿ ಉತ್ಕರ್ಷಣ ನಿರೋಧಕ ಒತ್ತಡ ಅಧಿಕವಾಗಿರುವ ಕಾರಣ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ ಉತ್ಕರ್ಷಣ ನಿರೋಧಕ ಭರಿತ ಆಹಾರ ಸೇವನೆಯು ಒತ್ತಡವನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ಹಣ್ಣಿನ ರಸದಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿದ್ದು, ಇದು ಮಲಸ್ಸೆಜಿಯಾ ಎಂಬ ಶಿಲೀಂಧ್ರವನ್ನು ನಿಯಂತ್ರಿಸುವಲ್ಲಿ ಸಹಕಾರಿ.
ಪ್ರಸ್ತುತ ಡೆಂಗ್ಯೂಗೆ ಯಾವುದೇ ಚಿಕಿತ್ಸೆ ಇಲ್ಲ ಮತ್ತು ಪಪ್ಪಾಯಿ ಎಲೆಯ ರಸವು ಅತ್ಯಂತ ಸಾಮಾನ್ಯವಾಗಿ ಬಳಸಲ್ಪಡುವ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ನೂರಾರು ಜನರನ್ನು ಒಳಗೊಂಡ ಮೂರು ಅಧ್ಯಯನಗಳು ಪಪ್ಪಾಯಿ ಎಲೆಯ ಸಾರವು ರಕ್ತದ ಪ್ಲೇಟ್‌ಲೆಟ್ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕಂಡುಕೊಂಡಿತು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸುವುದು
ಪಪ್ಪಾಯಿ ಎಲೆಯ ರಸವನ್ನು ಮಧುಮೇಹದ ಚಿಕಿತ್ಸೆಗೆ ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ ಮತ್ತು ತನ್ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಸುಧಾರಿಸುತ್ತದೆ. ಪಪ್ಪಾಯಿ ಎಲೆಯ ಸಾರವು ಉತ್ಕರ್ಷಣ ನಿರೋಧಕಗಳು ಮತ್ತು ರಕ್ತದಲ್ಲಿನ ಸಕ್ಕರೆ-ಕಡಿಮೆ ಮಾಡುವ ಪರಿಣಾಮಗಳನ್ನು ಹೊಂದಿದೆ ಎಂದು ಇಲಿಗಳ ಮೇಲೆ ನಡೆಸಿದ ಅಧ್ಯಯನಗಳು ಕಂಡುಕೊಂಡಿವೆ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳಿಗೆ ಹಾನಿ ಮತ್ತು ಅಕಾಲಿಕ ಮರಣದಿಂದ ರಕ್ಷಿಸುವ ಮೂಲಕ ಇದು ಸಹಾಯ ಮಾಡುತ್ತದೆ. ಆದರೆ ಈ ಬಗ್ಗೆ ಮಾನವರ ಮೇಲೆ ಯಾವುದೇ ಸಂಶೋಧನೆಗಳು ಆಗಿಲ್ಲ.
ಆರೋಗ್ಯಕರ ಚರ್ಮ
ಪಪ್ಪಾಯಿ ಎಲೆಯನ್ನು ಮೃದು ಮತ್ತು ಸ್ವಚ್ಛ ಚರ್ಮಕ್ಕಾಗಿ ಚರ್ಮದ ಮೇಲೆ ಹಚ್ಚಲಾಗುತ್ತದೆ. ಇದರಲ್ಲಿ ಪ್ಯಾಪೇನ್ ಎಂಬ ಪ್ರೋಟೀನ್ ಕರಗಿಸುವ ಕಿಣ್ವಇದ್ದು, ಇದು ಎಕ್ಸ್ ಫೋಲಿಯಂಟ್‌ನಂತೆ ಕೆಲಸ ಮಾಡುತ್ತದೆ ಮತ್ತು ಇದರಿಂದ ಧೂಳು ಮತ್ತು ಸತ್ತ ಚರ್ಮ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಇದು ದೇಹದಲ್ಲಿನ ಕೂದಲು ಮತ್ತು ಮೊಡವೆಗಳ ನಿವಾರಣೆಗೂ ನೆರವಾಗುತ್ತದೆ.
ಉರಿಯೂತ ಶಮನಕಾರಿ
ಪಪ್ಪಾಯಿ ಎಲೆಯ ರಸವನ್ನು ಸ್ನಾಯು ನೋವುಗಳು ಮತ್ತು ಕೀಲು ನೋವು ಸೇರಿ ಹಲವಾರು ಆಂತರಿಕ ಮತ್ತು ಬಾಹ್ಯ ಉರಿಯೂತದ ಪರಿಸ್ಥಿತಿಗಳನ್ನು ಸುಧಾರಿಲು ಬಳಸಲಾಗುತ್ತದೆ. ಪಪ್ಪಾಯಿ ಎಲೆಯ ಸಾರವು ಸಂಧಿವಾತದಿಂದ ಇಲಿಗಳ ಪಾದಗಳಲ್ಲಿ ಉರಿಯೂತ ಮತ್ತು ಊತವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಒಂದು ಅಧ್ಯಯನವು ಕಂಡುಕೊಂಡಿದೆ.
ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ
ಕೆಲವು ಬಗೆಯ ಕ್ಯಾನ್ಸರ್ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಪಪ್ಪಾಯ ಎಲೆಯನ್ನು ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಆದರೆ ಇದನ್ನು ದೃಢಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಅಧ್ಯಯನಗಳಲ್ಲಿ ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸಬಲ್ಲ ಪ್ರಬಲ ಸಾಮರ್ಥ್ಯವನ್ನು ತೋರಿಸಿದೆ. ಆದರೆ ಈ ಸಂಶೋಧನೆಗಳನ್ನು ಮಾನವ ಅಥವಾ ಪ್ರಾಣಿಗಳ ಮೇಲಿನ ಅಧ್ಯಯನಗಳು ಪುನರಾವರ್ತಿಸಿಲ್ಲ.
ಪಪ್ಪಾಯಿ ಎಲೆಯ ರಸ ತಯಾರಿಸುವುದು ಹೇಗೆ?
ಈ ಜ್ಯೂಸ್ ತಯಾರಿಸಲು ಸ್ವಲ್ಪ ತಾಜಾ ಪಪ್ಪಾಯಿ ಎಲೆಗಳು ಮತ್ತು ನೀರು ಬೇಕು. ಕಾಂಡ ಸಮೇತ ಎಲೆಗಳನ್ನು ಕತ್ತರಿಸಿ. ಸ್ವಲ್ಪ ನೀರು ಹಾಕಿ ಬ್ಲೆಂಡರ್‌ಗೆ ಹಾಕಿ. ಅದನ್ನು ಬ್ಲೆಂಡ್ ಮಾಡಿದರೆ ರಸ ರೆಡಿ. ಡೆಂಗ್ಯೂ ರೋಗದ ಲಕ್ಷಣಗಳನ್ನು ಗುಣಪಡಿಸಲು ದಿನದಲ್ಲಿ ಮೂರು ಭಾಗಗಳಲ್ಲಿ 100 ಮಿಲಿ ಪಪ್ಪಾಯಿ ಎಲೆಯ ರಸವನ್ನು ಬಳಸಬಹುದು. ಜ್ಯೂಸ್ ನ ರುಚಿಯನ್ನು ಹೆಚ್ಚಿಸಲು ಸ್ವಲ್ಪ ಉಪ್ಪು ಅಥವಾ ಸಕ್ಕರೆಯನ್ನು ಸೇರಿಸಿಕೊಳ್ಳಬಹುದು.